ಅಂಬಾನಿ ಭದ್ರತಾ ಪಡೆ ಮತ್ತಷ್ಟು ಶ್ರೀಮಂತ: ಐಷಾರಾಮಿ ಕಾರುಗಳದ್ದೆ ಹವಾ..

ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲಿ ಒಬ್ಬರಾದ ಮುಖೇಶ್ ಅಂಬಾನಿ, ತಮ್ಮ ಐಷಾರಾಮಿ ಜೀವನದ ಕುರಿತಂತೆ ಆಗಾಗ ಸುದ್ದಿಯಾಗುತ್ತಲೇ ಇರುತ್ತರೆ. ಭವ್ಯವಾದ ಮನೆ, ಐಷಾರಾಮಿ ಜೀವನ, ದುಬಾರಿ ಕಾರುಗಳನ್ನು ಹೊಂದಿರುವ ಬಗ್ಗೆ ಈ ಹಿಂದೆ ಹಲವು ಬಾರಿ ಸುದ್ದಿಯಾಗಿದ್ದರು.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಮನೆಯನ್ನೇ ಸ್ವರ್ಗದಂತೆ ನಿರ್ಮಿಸಿಕೊಂಡಿರುವ ಅಂಬಾನಿ ಏನೇ ಸೌಕರ್ಯ ಬೇಕೆಂದರೂ ಮನೆಯಲ್ಲೇ ಸಿಗುವಂತೆ ಡಿಸೈನ್ ಮಾಡಿಸಿಕೊಂಡಿದ್ದಾರೆ. ಮುಂಬೈನಲ್ಲಿರುವ ಅಂಬಾನಿ ಕುಟುಂಬದ ಮನೆಯಲ್ಲಿನ ಹಲವು ಫ್ಲೋರ್‌ಗಳು ವಿಶ್ವದ ನೂರಾರು ದುಬಾರಿ ಸ್ಪೋರ್ಟ್ಸ್ ಕಾರುಗಳು ಮತ್ತು SUV ಗಳಿಗೆ ನೆಲೆಯಾಗಿದೆ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಇವುಗಳಲ್ಲಿ ಕುಟುಂಬ ಸದಸ್ಯರು ಓಡಾಡುವುದು ಅತಿ ವಿರಳವಾದರೂ, ಕೆಲ ಆಯ್ಕೆ ಮಾಡಿಕೊಂಡ ಕಾರುಗಳಲ್ಲಿ ಹೆಚ್ಚಾಗಿ ಸಂಚರಿಸುತ್ತಾರೆ. ಕೇವಲ ತಮ್ಮ ಕಾರುಗಳನ್ನು ಪಾರ್ಕ್ ಮಾಡಲೆಂದೇ ಹಲವು ಫ್ಲೋರ್‌ಗಳನ್ನು ಡಿಸೈನ್ ಮಾಡಿಸಿಕೊಂಡಿದ್ದಾರೆ. ದೇಶದ ಅತ್ಯಂತ ಶ್ರೀಮಂತ ಕುಟುಂಬವಾಗಿರುವುದರಿಂದ ಇವರಿಗೆ ಭದ್ರತೆ ಕೂಡ ಹೆಚ್ಚಾಗಿ ನೀಡಬೇಕಾಗುತ್ತದೆ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಸದ್ಯ ಕುಟುಂಬ ಸದಸ್ಯರಿಗೆ Z Plus ಭದ್ರತೆಯನ್ನು ನೀಡಲಾಗುತ್ತಿದೆ. ಅಧಿಕಾರಿಗಳು ಅಂಬಾನಿ ಕುಟುಂಬಕ್ಕೆ ಝಡ್ ಪ್ಲಸ್ ಭದ್ರತೆ ನೀಡುವುದೇನೋ ಸರಿ, ಆದರೆ ಅವರು ಒದಗಿಸುವ ಬೆಂಗಾವಲು ವಾಹನಗಳು ಅಂಬಾನಿ ಕುಟುಂಬದ ದುಬಾರಿ ಕಾರುಗಳಿಗೆ ಭದ್ರತೆ ನೀಡುವಷ್ಟು ಶಕ್ತಿಯುತವಾಗಿಲ್ಲ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಹಾಗಾಗಿಯೇ ಅಂಬಾನಿ ಅವರು ಸಂಚರಿಸುವಾಗ ಬೆಂಗಾವಲು ಪಡೆ ಸಂಚರಿಸುವ ಕಾರುಗಳಿಗಾಗಿ ಹೆಚ್ಚು ಹೂಡಿಕೆ ಮಾಡಿದ್ದಾರೆ. ಈ ಕಾರುಗಳ ಬೆಲೆ ಬರೋಬ್ಬರಿ 10 ಕೋಟಿ ರೂ.ಗೂ ಹೆಚ್ಚು ಎಂದು ಹೇಳಲಾಗುತ್ತಿದೆ. ಬನ್ನಿ ಹಾಗಾದ್ರೆ ಅಂಬಾನಿ ಕುಟುಂಬಕ್ಕೆ ಭದ್ರತೆ ಒದಗಿಸುವ ಬೆಂಗಾವಲು ಪಡೆಯ ಕಾರುಗಳನ್ನು ಒಮ್ಮೆ ನೋಡೋಣ...

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಮರ್ಸಿಡಿಸ್-ಬೆಂಝ್ G63 AMG

ಬಿಳಿ ಬಣ್ಣದ Mercedes-Benz G63 SUV ಗಳು ಅಂಬಾನಿ ಕುಟುಂಬದ ಬೆಂಗಾವಲು ಪಡೆಗೆ ಇತ್ತೀಚಿನ ಸೇರ್ಪಡೆಯಾಗಿವೆ. ಕುಟುಂಬದೊಂದಿಗೆ ಎಷ್ಟು G63 ಗಳು ಇವೆ ಎಂಬುದರ ಬಗ್ಗೆ ನಿಖರವಾದ ಮಾಹಿತಿ ಇಲ್ಲದಿದ್ದರೂ, ಕೆಲವು ವೈರಲ್ ಆದ ವಿಡಿಯೋಗಳನ್ನು ನೋಡೊದಾಗ ಅವುಗಳಲ್ಲಿ ನಾಲ್ಕು ಇವೆ ಎಂದು ಖಚಿತಪಡಿಸಲಾಗಿದೆ. ಮರ್ಸಿಡಿಸ್-ಬೆಂಝ್ G63 AMG ಮಾದರಿಯು 3982 cc, V8 Biturbo ಪೆಟ್ರೋಲ್ ಎಂಜಿನ್‌ನೊಂದಿಗೆ ಬರುತ್ತದೆ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಇದು ಗರಿಷ್ಠ 576 Bhp ಮತ್ತು 850 Nm ಗರಿಷ್ಠ ಟಾರ್ಕ್ ಅನ್ನು ಹೊರಹಾಕುವ ಸಾಮರ್ಥ್ಯವನ್ನು ಹೊಂದಿದೆ. ಇದು G63 ಲಭ್ಯವಿರುವ ಅತ್ಯಂತ ಶಕ್ತಿಶಾಲಿ SUV ಗಳಲ್ಲಿ ಒಂದಾಗಿದೆ. ಇದು ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಆಫ್-ರೋಡಿಂಗ್ ಸಾಮರ್ಥ್ಯಗಳನ್ನು ಹೊಂದಿದೆ. G63 AMG ಗಳ ಹೊರತಾಗಿ, ಭದ್ರತಾ ಕಾರುಗಳು ಟೊಯೋಟಾ ವೆಲ್‌ಫೈರ್ ಅನ್ನು ಸಹ ಹೊಂದಿವೆ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್

ಲ್ಯಾಂಡ್ ರೋವರ್ ರೇಂಜ್ ರೋವರ್ ವೋಗ್ ಅಂಬಾನಿ ಅವರ ಭದ್ರತಾ ಕಾರುಗಳಲ್ಲಿ ಅತ್ಯಂತ ದುಬಾರಿ ವಾಹನವಾಗಿದೆ. ಈ ಮಾದರಿಗಳು ಕೆಲವೇ ಇವೆ, ಅಂಬಾನಿ ಬೆಂಗಾವಲು ಪಡೆ ಈಗಾಗಲೇ ಕೆಲವು ರೇಂಜ್ ರೋವರ್‌ಗಳನ್ನು ಹೊಂದಿದೆ. ಆದರೆ ಅವುಗಳನ್ನು ಗುರುತಿಸಲಾಗಿಲ್ಲ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಅವರು ಈ ಕಾರುಗಳನ್ನು ಸ್ಟ್ರೋಬ್ ಲೈಟ್‌ಗಳು ಮತ್ತು ಪೊಲೀಸ್ ಸ್ಟಿಕ್ಕರ್‌ಗಳೊಂದಿಗೆ ಸಾರ್ವಜನಿಕ ರಸ್ತೆಗಳಲ್ಲಿ ಅಧಿಕೃತ ವಾಹನಗಳಂತೆ ಪರಿವರ್ತಿಸಿದ್ದಾರೆ. ಈ ಕಾರುಗಳು ಅಂಬಾನಿ ನಿವಾಸವಾದ ಆಂಟಿಲಾ ಹೊರಗೆ ಕಾಯುತ್ತಿರುವಾಗ ಹಲವು ಬಾರಿ ಕಾಣಿಸಿಕೊಂಡಿವೆ. ಈ ರೇಂಜ್ ರೋವರ್‌ನ ನಿಖರವಾದ ಆವೃತ್ತಿ ಮತ್ತು ವಿಶೇಷತೆ ತಿಳಿದಿಲ್ಲವಾದರೂ, ಹೊಸದಕ್ಕೆ 2 ಕೋಟಿಯಿಂದ 3.5 ಕೋಟಿ ರೂಪಾಯಿಗಳವರೆಗೆ ವೆಚ್ಚವಾಗುತ್ತದೆ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್

ಅಂಬಾನಿ ಬೆಂಗಾವಲು ಪಡೆ ಲ್ಯಾಂಡ್ ರೋವರ್ ಡಿಸ್ಕವರಿ ಸ್ಪೋರ್ಟ್ SUV ಗಳನ್ನು ಸಹ ಬಳಸುತ್ತದೆ. ಈ ಸಮರ್ಥ ಎಸ್‌ಯುವಿಗಳನ್ನು ಪೊಲೀಸ್ ಸ್ಟಿಕ್ಕರ್‌ಗಳು ಮತ್ತು ಸ್ಟ್ರೋಬ್ ಲೈಟ್‌ಗಳಿಂದ ಗುರುತಿಸಲಾಗಿದೆ. ಬೆಂಗಾವಲು ಪಡೆಯಲ್ಲಿನ ಡಿಸ್ಕವರಿ ಸ್ಪೋರ್ಟ್ ಎಸ್‌ಯುವಿಗಳ ನಿಖರ ಸಂಖ್ಯೆ ತಿಳಿದಿಲ್ಲ. ಆದರೆ ಕನಿಷ್ಠ ಐದು ವಿಭಿನ್ನವಾದ ಮಾದರಿಗಳನ್ನು ಗುರುತಿಸಲಾಗಿದೆ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

BMW X5

ಅಂಬಾನಿ ಕುಟುಂಬದ ಭದ್ರತಾ ಪಡೆಗಳಿಗೆ ಸೇರ್ಪಡೆಗೊಂಡ ಮೊದಲ ಪ್ರೀಮಿಯಂ SUV ಗಳಲ್ಲಿ BMW X5ಗಳು ಕೂಡ ಇವೆ. X5 ಆಗಮನದ ಮೊದಲು, ಕುಟುಂಬಕ್ಕೆ Z+ ಕವರ್ ಒದಗಿಸಿದ CRPF ಸಿಬ್ಬಂದಿ ತಮ್ಮ ಸ್ವಂತ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದರು. ಆದರೆ ಕುಟುಂಬದ ವೇಗದ ವಾಹನಗಳೊಂದಿಗೆ ಪ್ರಯಾಣಿಸಲು ಸಾಧ್ಯವಾಗುತ್ತಿರಲಿಲ್ಲ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಇದನ್ನು ಮನಗಂಡ ಅಂಬಾನಿ ಹಲವಾರು BMW X5 XDrive30 ಅನ್ನು ಖರೀದಿಸಿದರು. ಅವುಗಳನ್ನು ಭದ್ರತಾ ಪಡೆಗಳಲ್ಲಿ ಬಳಸಲು ಪ್ರಾರಂಭಿಸಿದರು. X5 xDrive30 3.0-ಲೀಟರ್ ಆರು-ಸಿಲಿಂಡರ್ ಡೀಸೆಲ್ ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತದೆ. ಇದು ಗರಿಷ್ಠ 258 Bhp ಶಕ್ತಿಯನ್ನು ಮತ್ತು 560 Nm ನ ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

ತಮ್ಮ ಬೆಂಗಾವಲು ಪಡೆಯನ್ನೂ ಶ್ರೀಮಂತವಾಗಿಸಿದ ಅಂಬಾನಿ: ದುಬಾರಿ ಕಾರುಗಳಲ್ಲಿ ಭದ್ರತಾ ಪಡೆ

ಫೋರ್ಡ್ ಎಂಡೀವರ್

ಅಂಬಾನಿ ಬೆಂಗಾವಲು ಪಡೆ ಹಲವಾರು ಫೋರ್ಡ್ ಎಂಡೀವರ್ ಎಸ್‌ಯುವಿಗಳನ್ನು ಹೊಂದಿದೆ. ಬಿಳಿ ಬಣ್ಣದ ಗುರುತು ಪ್ರತಿಯೊಂದು ಅಂಬಾನಿ ಕುಟುಂಬದ ಬೆಂಗಾವಲು ವಾಹನದಲ್ಲಿ ಬಹುತೇಕ ವಾಹನಗಳಿಗೆ ಇರುತ್ತದೆ, ಹಾಗೆಯೇ ಎಂಡೀವರ್ ವಾಹನಗಳಿಗೂ ಇದೆ. ಅಂಬಾನಿ ಭದ್ರತಾ ವಿವರಗಳಲ್ಲಿನ ಎಂಡೀವರ್‌ಗಳು ಬೃಹತ್ 3.2-ಲೀಟರ್ ಡೀಸೆಲ್ ಎಂಜಿನ್‌ನಿಂದ ಚಾಲಿತವಾಗಿದ್ದು, ಇದು ಗರಿಷ್ಠ 197 Bhp ಶಕ್ತಿಯನ್ನು ಮತ್ತು 470 Nm ಗರಿಷ್ಠ ಟಾರ್ಕ್ ಅನ್ನು ಉತ್ಪಾದಿಸುತ್ತದೆ.

Most Read Articles

Kannada
English summary
Mukesh Ambani Security Guard Luxury Cars Benz BMW Land Rover
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X