ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ ಸಂಚಾರವು 2023 ರ ಹೊತ್ತಿಗೆ ಕಾರ್ಯಾರಂಭ ನಡೆಸಲಿದ್ದು, ಆಧುನಿಕ ತಂತ್ರಜ್ಞಾನದ ಬುಲೆಟ್ ಟ್ರೈನ್ ಗಳು ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಲಿವೆ.

By Praveen Sannamani

ದೇಶದ ಮೊಟ್ಟಮೊದಲ ಬುಲೆಟ್ ಟ್ರೈನ್ ಸಂಚಾರವು 2023 ರ ಹೊತ್ತಿಗೆ ಕಾರ್ಯಾರಂಭ ನಡೆಸಲಿದ್ದು, ಆಧುನಿಕ ತಂತ್ರಜ್ಞಾನದ ಬುಲೆಟ್ ಟ್ರೈನ್ ಗಳು ಭಾರತದ ಘನತೆಯನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿಸಲಿವೆ. ಈ ಮೂಲಕ ಸಾರಿಗೆ ವ್ಯವಸ್ಥೆಯಲ್ಲಿ ಹೊಸ ಭರವಸೆ ಹುಟ್ಟುಹಾಕಿರುವ ಬುಲೆಟ್ ಟ್ರೈನ್ ಯೋಜನೆಯು ಭಾರತಕ್ಕೆ ಆನೆಬಲಬಂದಂತಾಗಿದೆ.

ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

ಸುಮಾರು 1.1 ಲಕ್ಷ ಕೋಟಿ ಮೌಲ್ಯದ ಈ ಬುಲೆಟ್ ಟ್ರೈನ್ ಯೋಜನೆಯು ಭಾರತೀಯ ರೈಲ್ವೆ ಮತ್ತು ಜಪನೀಸ್ ಪರ್ಮ್ ಶಿಂಕನ್ಸೆನ್ ಟೆಕ್ನಾಲಜಿಯ ಜಂಟಿ ಸಹಭಾಗಿತ್ವದಲ್ಲಿ ನಡೆಯುತ್ತಿದ್ದು, 2023ರ ವೇಳೆಗೆ ಬುಲೆಟ್ ಟ್ರೈನ್ ಕಾರ್ಯಾರಂಭವಾಗಲಿದೆ. ಹೀಗಾಗಿ ಹೊಸ ಸಾರಿಗೆ ವ್ಯವಸ್ಥೆಯು ದೇಶದ ಜನತೆಯಲ್ಲಿ ಕುತೂಹಲ ಹುಟ್ಟುಹಾಕಿದ್ದು, ಇದೀಗ ಬುಲೆಟ್ ಟ್ರೈನ್‌ಗಳ ಪ್ರಯಾಣ ದರಗಳ ಕುರಿತು ಮಹತ್ವದ ಮಾಹಿತಿಯೊಂದು ಲಭ್ಯವಾಗಿದೆ.

ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

ಮೂಲಗಳ ಪ್ರಕಾರ ಮುಂಬೈ ಮತ್ತು ಅಹಮದಾಬಾದ್ ನಡುವೆ ಸಂಚರಿಸುವ ಬುಲೆಟ್ ಟ್ರೈನ್ ಪ್ರಯಾಣ ದರವು 250 ರೂ. ದಿಂದ 3 ಸಾವಿರ ರೂಪಾಯಿಗಳ ನಡುವೆ ಇರಲಿವೆ ಎನ್ನಲಾಗಿದೆ.

ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

ಈ ಬಗ್ಗೆ ನ್ಯಾಷನಲ್ ಹೈ ಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅಚಲ್ ಖರೆ ಅವರು ಮಾತನಾಡಿದ್ದು, ಪ್ರಯಾಣ ದರ 250ರಿಂದ 3 ಸಾವಿರ ರೂಪಾಯಿಗಳ ನಡುವೆ ಇರಲಿದೆ ಎಂದು ಹೇಳಿದ್ದಾರೆ.

ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

2 ಗಂಟೆಗಳಲ್ಲಿ ಮುಂಬೈ!

ಹೌದು, ಬುಲೆಟ್ ಟ್ರೈನ್‌ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚಾರ ಮಾಡಲಿದ್ದು, ಎರಡೂ ನಗರಗಳ ಮಧ್ಯೆ ಕೇವಲ 2 ಗಂಟೆಗಳಲ್ಲಿ ಸಂಚರಿಸಬಹುದಾಗಿದೆ. ಮುಂಬೈ-ಅಹಮದಾಬಾದ್ ಮಾರ್ಗ ಮಧ್ಯೆ ಒಟ್ಟು 10 ನಿಲ್ದಾಣಗಳನ್ನು ನಿರ್ಮಾಣ ಮಾಡಲು ಯೋಜಿಸಲಾಗಿದೆ.

ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

ಒಟ್ಟು 508 ಕಿ.ಮೀ.ಉದ್ದದ ದಾರಿಯಲ್ಲಿ ಶೇ.92 ರಷ್ಟು ಎಲೆವೇಟೆಡ್ ಮಾರ್ಗವಾಗಿದ್ದು, ಶೆ.6 ರಷ್ಟು ಸುರಂಗ ಮತ್ತು ಉಳಿದ ಹಾದಿ ನೆಲದ ಮೇಲಿರಲಿದೆ. ಈ ಟ್ರೈನು ಮಹಾರಾಷ್ಟ್ರದ ಥಾಣೆ ಮೂಲಕ ಅತ್ಯಂತ ಉದ್ದದ ಸುರಂಗ( 21 ಕಿ.ಮೀ) ಮಾರ್ಗದ ಮೂಲಕ ಹಾದುಹೋಗಲಿದೆ. ಇವುಗಳಲ್ಲಿ 7 ಕಿ.ಮೀ ಸಮುದ್ರದೊಳಗಿನ ಮಾರ್ಗವೂ ಸೇರಿದೆ.

ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

ಒಟ್ಟಿನಲ್ಲಿ ಬುಲೆಟ್ ರೈಲು ಯೋಜನೆಯು ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಇಷ್ಟು ದಿವಸ ಚೀನಾ, ಜಪಾನ್, ಯುರೋಪ್‌'ನ ಬುಲೆಟ್ ರೈಲುಗಳು, ಅವುಗಳ ವೇಗವನ್ನು ಬೆರಗುಗಣ್ಣಿನಿಂದ ನೋಡುತ್ತಿದ್ದ ಭಾರತೀಯರು ಇನ್ನು 5 ವರ್ಷಗಳಲ್ಲಿ ಸ್ವದೇಶಿ ಬುಲೆಟ್ ರೈಲಿನಲ್ಲಿ ಸಂಚರಿಸಿ ಆನಂದಪಡಬಹುದಾಗಿದೆ.

ವೇಗದ ಸವಾರಿಗೆ ಸಿದ್ದವಾಗುತ್ತಿರುವ ಬುಲೆಟ್ ಟ್ರೈನ್ ಪ್ರಯಾಣ ದರ ಎಷ್ಟು ಗೊತ್ತಾ?

ಡ್ರೈವ್‌ಸ್ಪಾರ್ಕ್ ಕನ್ನಡ ವಿಭಾಗದಲ್ಲಿನ ಟಾಪ್ ಸ್ಟೋರಿಗಳು:

ದುಬಾರಿ ಬೆಲೆ ಆಡಿ ಆರ್‌ಎಸ್5 ಸ್ಪೋರ್ಟ್ ಕೂಪೆ ಕಾರು ಖರೀದಿಸಿದ ವಿರಾಟ್ ಕೊಹ್ಲಿ..

ಹೆಲ್ಮೆಟ್ ವಿಚಾರವಾಗಿ ಮಾರಾಮಾರಿ- ಯುವಕನನ್ನು ಕಂಬಕ್ಕೆ ಕಟ್ಟಿ ಥಳಿಸಿದ ಪೊಲೀಸರು..

ವಾಹನ ಪ್ರಿಯರಿಗೆ ಸಿಹಿ ಸುದ್ಧಿ ನೀಡಿದ ಸಾರಿಗೆ ಇಲಾಖೆ..

ರೈಲಿನ ಕೊನೆಯ ಬೋಗಿಯ ಹಿಂದಿನ ಬರೆಯಲಾಗುವ 'X' ಚಿಹ್ನೆಯ ರಹಸ್ಯ ಏನು?

ವಾಹನಗಳ ನಂಬರ್‌ಪ್ಲೇಟ್ ಮೇಲೆ IND ಎಂದು ಏಕೆ ಬರೆಯುತ್ತಾರೆ ಗೊತ್ತೆ ?

Most Read Articles

Kannada
Read more on train off beat
English summary
Mumbai-Ahmedabad bullet train fares could start as low as Rs 250.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X