ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಆಟೋ ಚಾಲಕ

ಕೇಂದ್ರ ಸರ್ಕಾರವು ಲಿಂಗ ತಾರತಮ್ಯವನ್ನು ತಡೆಯಲು ಹಾಗೂ ಹೆಣ್ಣು ಮಕ್ಕಳಿಗೆ ಹೆಚ್ಚಿನ ಶಿಕ್ಷಣ ನೀಡುವ ಸಲುವಾಗಿ ಬೇಟಿ ಬಚಾವೋ ಬೇಟಿ ಪಡಾವೋ ಎಂಬ ಅಭಿಯಾನಕ್ಕೆ ಚಾಲನೆ ನೀಡಿದೆ.

ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಆಟೋ ಚಾಲಕ

ದೇಶದ ಆರ್ಥಿಕ ರಾಜಧಾನಿಯಾದ ಮುಂಬಯಿಯಲ್ಲಿ ಆಟೋ ರಿಕ್ಷಾ ಚಾಲಕರೊಬ್ಬರು ತಮ್ಮ ಮೊಮ್ಮಗಳಿಗೆ ಶಿಕ್ಷಣ ಕೊಡಿಸುವ ಸಲುವಾಗಿ ದಿಟ್ಟ ನಿರ್ಧಾರವನ್ನು ಕೈಗೊಂಡಿದ್ದಾರೆ. ದೇಸರಾಜ್ ಎಂಬ ಆಟೋ ಚಾಲಕ ತಮ್ಮ ಮೊಮ್ಮಗಳಿಗೆ ಶಿಕ್ಷಣ ಕೊಡಿಸುವ ಸಲುವಾಗಿ ತಮ್ಮ ಮನೆಯನ್ನು ಮಾರಾಟ ಮಾಡಿದ್ದಾರೆ. ಸಾರ್ವಜನಿಕರು ಈ ಆಟೋ ರಿಕ್ಷಾ ಚಾಲಕನ ನೆರವಿಗೆ ಧಾವಿಸಿ 24 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ.

ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಆಟೋ ಚಾಲಕ

ಹ್ಯೂಮನ್ ಆಫ್ ಬಾಂಬೆ ದೇಸರಾಜ್ ಅವರ ಕಥೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗ, ಅವರ ಕಥೆ ವೈರಲ್ ಆಗಿದೆ. ದೇಸರಾಜ್ ಅವರ ಪುತ್ರ ಸಾವನ್ನಪ್ಪಿದ ನಂತರ ಅವರ ಸೊಸೆ ಹಾಗೂ ನಾಲ್ಕು ಮೊಮ್ಮಕ್ಕಳ ಜವಾಬ್ದಾರಿ ಅವರ ಹೆಗಲೆರಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಆಟೋ ಚಾಲಕ

ಅವರ ಪುತ್ರನ ಶವಸಂಸ್ಕಾರದ ನಂತರ, 9ನೇ ತರಗತಿಯಲ್ಲಿದ್ದ ಅವರ ಮೊಮ್ಮಗಳು ಅಜ್ಜ, ನಾನು ಶಾಲೆಯನ್ನು ಬಿಡಬೇಕೇ ಅಥವಾ ಓದನ್ನು ಮುಂದುವರೆಸಬೇಕೇ ಎಂದು ದೇಸರಾಜ್ ಅವರನ್ನು ಕೇಳಿದ್ದಾಳೆ. ಈ ವೇಳೆ ಅವರು ತಮ್ಮ ಮೊಮ್ಮಗಳಿಗೆ ನಿನಗೆ ಎಷ್ಟು ಸಾಧ್ಯವೋ ಅಷ್ಟು ಓದು ಎಂದು ಹೇಳಿದ್ದಾರೆ.

ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಆಟೋ ಚಾಲಕ

ಏಳು ಸದಸ್ಯರ ಕುಟುಂಬ ನಿರ್ವಹಣೆಗಾಗಿ ಅವರು ಹೆಚ್ಚು ಕಾಲ ದುಡಿಯಲು ಶುರು ಮಾಡಿದರು. ಆದರೆ ಅವರ ಗಳಿಕೆಯ ಬಹುಪಾಲು ಮೊಮ್ಮಗಳ ಶಾಲಾ ಶುಲ್ಕ ಹಾಗೂ ಆಕೆಯ ಲೇಖನ ಸಾಮಗ್ರಿಗಳಿಗೆ ಖರ್ಚಾಗುತ್ತಿತ್ತು.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಆಟೋ ಚಾಲಕ

ಅವರ ಮೊಮ್ಮಗಳು 12ನೇ ತರಗತಿಯ ಪರೀಕ್ಷೆಯಲ್ಲಿ 80% ಅಂಕಗಳನ್ನು ಪಡೆದಿದ್ದಾಳೆ. ನಂತರ ಆಕೆ ಹೆಚ್ಚಿನ ಅಧ್ಯಯನಕ್ಕಾಗಿ ದೆಹಲಿಗೆ ಹೋಗಲು ಬಯಸಿದಳು. ತನ್ನ ಕನಸಿನ ಬಗ್ಗೆ ತನ್ನ ತಾತನಿಗೆ ಹೇಳಿದ್ದಾಳೆ.

ಬೇರೆ ನಗರದಲ್ಲಿ ಮೊಮ್ಮಗಳಿಗೆ ಶಿಕ್ಷಣ ನೀಡುವುದು ನನ್ನಿಂದ ಸಾಧ್ಯವಿರಲಿಲ್ಲ. ಆದರೆ ನಾನು ಅವಳ ಕನಸನ್ನು ಎಷ್ಟೇ ಬೆಲೆ ತೆತ್ತಾದರೂ ಸರಿ ನನಸು ಮಾಡಬೇಕಾಗಿತ್ತು ಎಂದು ದೇಸರಾಜ್ ಹೇಳಿದರು. ತಮ್ಮ ಮೊಮ್ಮಗಳ ಶಿಕ್ಷಣಕ್ಕಾಗಿ ದೇಸರಾಜ್ ತಮ್ಮ ಮನೆಯನ್ನು ಮಾರಾಟ ಮಾಡಿದರು.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಮೊಮ್ಮಗಳ ಶಿಕ್ಷಣಕ್ಕಾಗಿ ಮನೆ ಮಾರಾಟ ಮಾಡಿದ ಆಟೋ ಚಾಲಕ

ಫೇಸ್ಬುಕ್ ಬಳಕೆದಾರರಾದ ಗುಂಜನ್ ರಟ್ಟಿ ಆಟೋ ಚಾಲಕರಾದ ದೇಸರಾಜ್ ರವರಿಗಾಗಿ ನಿಧಿಸಂಗ್ರಹವನ್ನು ಆರಂಭಿಸಿದರು. ನಿಧಿಸಂಗ್ರಹಣೆಯಲ್ಲಿ 20 ಲಕ್ಷ ರೂಪಾಯಿ ಸಂಗ್ರಹಿಸುವ ಗುರಿಯನ್ನಿಟ್ಟು ಕೊಳ್ಳಲಾಗಿತ್ತು. ಇತ್ತೀಚೆಗೆ ಹ್ಯೂಮನ್ಸ್ ಆಫ್ ಬಾಂಬೆ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ದೇಸರಾಜ್ ರೂ.24 ಲಕ್ಷಗಳ ಚೆಕ್ ಪಡೆಯುತ್ತಿರುವುದನ್ನು ಕಾಣಬಹುದು.

Most Read Articles

Kannada
English summary
Mumbai auto driver sells his house to give education to his granddaughter. Read in Kannada.
Story first published: Wednesday, February 24, 2021, 19:38 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X