ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ಇತ್ತೀಚೆಗೆ ಪ್ರಕೃತಿಯು ತುಸು ಜಾಸ್ತಿ ಎನಿಸುವಷ್ಟು ಮುನಿಸನ್ನು ಮಾನವನ ಮೇಲೆ ತೋರಿಸುತ್ತಿದೆ. ಒಂದೆಡೆ ಕರೋನಾ ವೈರಸ್‌ನಿಂದ ಇಡೀ ಜಗತ್ತು ತತ್ತರಿಸುತ್ತಿದ್ದರೆ, ಮತ್ತೊಂದೆಡೆ ಚಂಡಮಾರುತಗಳು ಜನಜೀವನವನ್ನು ಅಲ್ಲೋಲ ಕಲ್ಲೋಲ ಮಾಡಿವೆ.

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ಇದರ ಜೊತೆಗೆ ಮರುಭೂಮಿ ಮಿಡತೆಗಳು ಉತ್ತರ ಭಾರತದ ಕೃಷಿ ಭೂಮಿಯ ಮೇಲೆ ದಾಳಿ ಮಾಡುತ್ತಿವೆ. ಇತ್ತೀಚೆಗೆ, ಅಂಫಾನ್ ಚಂಡಮಾರುತವು ಪಶ್ಚಿಮ ಬಂಗಾಳ, ಓಡಿಶಾ ಸೇರಿದಂತೆ ಹಲವು ರಾಜ್ಯಗಳನ್ನು ಅಪ್ಪಳಿಸಿತ್ತು. ಈ ಚಂಡಮಾರುತದಿಂದ ಸಾವಿರಾರು ಮರಗಳು ಧರೆಗುರುಳಿದರೆ, ಸಾವಿರಾರು ಮಂದಿ ನಿರಾಶ್ರಿತರಾಗಬೇಕಾಯಿತು. ಇಷ್ಟಕ್ಕೆ ಸುಮ್ಮನಾಗದ ಪ್ರಕೃತಿ ನಿಸರ್ಗ ಚಂಡಮಾರುತದ ರೂಪದಲ್ಲಿ ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳಿಗೆ ಅಪ್ಪಳಿಸಿದೆ.

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ಚಂಡಮಾರುತವು ಈಗಷ್ಟೇ ಶುರುವಾಗಿರುವುದರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನರನ್ನು ಸುರಕ್ಷಿತವಾಗಿಡಲು ಕ್ರಮಗಳನ್ನು ಕೈಗೊಳ್ಳುತ್ತಿವೆ. ಚಂಡಮಾರುತವು ತೀರಕ್ಕೆ ಅಪ್ಪಳಿಸುವ ಸಂದರ್ಭದಲ್ಲಿ ಮನೆಯಲ್ಲಿಯೇ ಉಳಿಯುವಂತೆ ಜನರಿಗೆ ಸೂಚಿಸಲಾಗಿದೆ.

MOSTREAD: ಕರೋನಾ ವೈರಸ್ ಎಫೆಕ್ಟ್: ಭಾರೀ ಪ್ರಮಾಣದಲ್ಲಿ ಕುಸಿದ ಇಂಧನ ಮಾರಾಟ

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ತುರ್ತು ಕಾರಣಗಳಿಂದಾಗಿ ಹೊರಹೋಗಬೇಕಾದರೆ ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ. ಈ ಸಂದರ್ಭದಲ್ಲಿ, ಮುಂಬೈ ಪುರಸಭೆಯು ಕಾರು ಮಾಲೀಕರಿಗೆ ಕಾರುಗಳಲ್ಲಿ ಸುತ್ತಿಗೆಗಳನ್ನು ಕೊಂಡೊಯ್ಯುವಂತೆ ಹೇಳಿದೆ. ಜನರು ತಮ್ಮ ಸುರಕ್ಷತೆಯನ್ನು ಸುತ್ತಿಗೆಗಳನ್ನು ಜೊತೆಯಲ್ಲಿ ಒಯ್ಯುವಂತೆ ಸೂಚಿಸಲಾಗಿದೆ.

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ಮುಂಬೈ ಪುರಸಭೆ ಈ ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟರ್ ಪೇಜ್‌ನಲ್ಲಿ ಪ್ರಕಟಿಸಿದೆ. ಯಾವ ಕಾರಣಕ್ಕೆ ಮುಂಬೈ ಪುರಸಭೆ ಕಾರಿನಲ್ಲಿ ಸುತ್ತಿಗೆಯನ್ನು ಕೊಂಡೊಯ್ಯುವಂತೆ ಸಲಹೆ ನೀಡಿದೆ ಎಂಬ ಪ್ರಶ್ನೆ ಮೂಡುವುದು ಸಹಜ. ಚಂಡಮಾರುತವು ಅಪ್ಪಳಿಸಿದಾಗ ಯಾವುದೇ ಅನಿರೀಕ್ಷಿತ ಘಟನೆಗಳು ಸಂಭವಿಸಬಹುದು.

MOSTREAD: ರಾಷ್ಟ್ರೀಯ ಹೆದ್ದಾರಿ ನಿರ್ಮಾಣದಲ್ಲಿ ಹೊಸ ದಾಖಲೆ ಬರೆದ ಕೇಂದ್ರ ಸರ್ಕಾರ

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ಚಂಡಮಾರುತದಿಂದಾಗಿ ಪ್ರವಾಹ ಪರಿಸ್ಥಿತಿ ಉದ್ಭವಿಸುತ್ತದೆ. ಜೊತೆಗೆ ಮರಗಳು ಧರೆಗುರುಳುತ್ತವೆ. ಇಂತಹ ಪರಿಸ್ಥಿತಿಯಲ್ಲಿ ಸಿಕ್ಕಿಬಿದ್ದಾಗ ಸುತ್ತಿಗೆ ಜೊತೆಯಲ್ಲಿದ್ದರೆ ಕಾರಿನ ವಿಂಡೋಗಳನ್ನು ಒಡೆದು ಹೊರಬರಲು ಅನುಕೂಲವಾಗುತ್ತದೆ. ಈ ಕಾರಣಕ್ಕೆ ಮುಂಬೈ ಪುರಸಭೆ ಇಂತಹ ಪ್ರಕಟನೆಯನ್ನು ಹೊರಡಿಸಿದೆ.

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ಈ ಹಿಂದೆ, ಸಾಮಾಜಿಕ ಜಾಲತಾಣದ ಮೂಲಕ ಜನರನ್ನು ಮನೆಯಲ್ಲಿಯೇ ಇರುವಂತೆ ಸೂಚಿಸಲಾಗಿತ್ತು. ಮುಂಬೈನಂತಹ ಮಹಾನಗರದಲ್ಲಿ ಜನರು ಮನೆಯಲ್ಲಿಯೇ ಇರುವುದು ಸಾಧ್ಯವಿಲ್ಲ ಎಂಬುದನ್ನು ಮನಗಂಡ ಪುರಸಭೆಯು ಸುತ್ತಿಗೆಯನ್ನು ಜೊತೆಯಲ್ಲಿ ಒಯ್ಯುವಂತೆ ಸೂಚಿಸಿದೆ.

MOSTREAD: ನಟ ವಿಕ್ರಮ್‌ಗಾಗಿ ತಯಾರಾಯ್ತು ವಿಶೇಷ ಕಾರವ್ಯಾನ್

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ಸುತ್ತಿಗೆಗಳನ್ನು ಕಾರಿನಲ್ಲಿ ಸುರಕ್ಷಿತ ಸ್ಥಳದಲ್ಲಿ, ತಕ್ಷಣಕ್ಕೆ ಕೈಗೆ ಸಿಗುವಂತಹ ಸ್ಥಳದಲ್ಲಿ ಇಡಬೇಕು ಎಂದೂ ಮುಂಬೈ ಪುರಸಭೆ ಹೇಳಿದೆ. ಪ್ರತಿ ವರ್ಷ ಮಳೆಗಾಲದಲ್ಲಿ ಮುಂಬೈ ಹೆಚ್ಚಿನ ಹಾನಿಯನ್ನು ಅನುಭವಿಸುತ್ತಿದೆ. ಈ ಹಿಂದಿನ ಘಟನೆಗಳಿಂದ ಎಚ್ಚೆತ್ತಿರುವ ಮುಂಬೈ ಪುರಸಭೆ ಕಾರಿನಲ್ಲಿ ಸುರಕ್ಷತಾ ಸಾಧನಗಳನ್ನು ಒಯ್ಯುವಂತೆ ಸೂಚಿಸಿದೆ.

ನಿಸರ್ಗ ಚಂಡಮಾರುತ ಎಫೆಕ್ಟ್: ಕಾರುಗಳಲ್ಲಿ ಸುತ್ತಿಗೆ ಕಡ್ಡಾಯಗೊಳಿಸಿದ ಪುರಸಭೆ

ನೀರು ಕಾರಿನೊಳಗೆ ಪ್ರವೇಶಿಸಿದಾಗ ಎಲೆಕ್ಟ್ರಾನಿಕ್ ಅಪಘಾತಕ್ಕೀಡಾಗುವ ಸಾಧ್ಯತೆಗಳಿರುತ್ತವೆ. ಇಂತಹ ಸಂದರ್ಭಗಳಲ್ಲಿ ಕಾರನ್ನು ಸ್ಟಾರ್ಟ್ ಮಾಡುವುದಕ್ಕೆ ಅಥವಾ ಡೋರ್‌ಗಳನ್ನು ತೆರೆಯುವುದಕ್ಕೆ ಕಷ್ಟವಾಗುತ್ತದೆ. ಕಾರಿನಲ್ಲಿ ಸುತ್ತಿಗೆಯಂತಹ ವಸ್ತುಗಳಿದ್ದರೆ ಡೋರ್‌ಗಳನ್ನು ಒಡೆದು ಹೊರ ಬರಲು ಅನುಕೂಲವಾಗುತ್ತದೆ.

Most Read Articles

Kannada
English summary
Mumbai city municipal authorities requests motorists to keep hammer in cars. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X