ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಸಾಮಾಜಿಕ ಜಾಲತಾಣಗಳು ವೇಗವಾಗಿ ಬೆಳೆಯುತ್ತಿವೆ. ಅನೇಕ ಬಾರಿ ಸರ್ಕಾರದ ಅಧಿಕಾರಿಗಳು ಸಹ ಕಾನೂನು ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳಲು ಸಾಮಾಜಿಕ ಜಾಲತಾಣಗಳನ್ನು ಅವಲಂಬಿಸುತ್ತಿದ್ದಾರೆ.

ಮುಂಬೈನ ನಿವಾಸಿಯೊಬ್ಬರು ಮುಂಬೈನ ರಸ್ತೆಯಲ್ಲಿ ಅಪಾಯಕಾರಿ ಸ್ಟಂಟ್ ಮಾಡುತ್ತಿದ್ದ ಯುವಕರ ವೀಡಿಯೊವನ್ನು ಟ್ವೀಟರ್‍‍ನಲ್ಲಿ ಶೇರ್ ಮಾಡಿದ ನಂತರ ಮುಂಬೈ ಪೊಲೀಸರು, ಈ ಘಟನೆಯಲ್ಲಿ ಭಾಗಿಯಾಗಿದ್ದ ಮೂವರು ಯುವಕರನ್ನು ಬಂಧಿಸಿದ್ದಾರೆ. ಮುಂಬೈ ಪೊಲೀಸರು ತಮ್ಮ ಅಧಿಕೃತ ಟ್ವೀಟರ್ ಖಾತೆಯಲ್ಲಿ ಶೇರ್ ಮಾಡಿರುವ ವೀಡಿಯೊದಲ್ಲಿರುವ ಯುವಕರು ಸಿನಿಮಾದ ದೃಶ್ಯವನ್ನು ಅನುಕರಣೆ ಮಾಡುತ್ತಿರುವುದನ್ನು ಕಾಣಬಹುದು.

ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಅನೇಕ ಬಾಲಿವುಡ್ ಸಿನಿಮಾಗಳಲ್ಲಿ ನಟರು ಚಲಿಸುತ್ತಿರುವ ಕಾರಿನ ವಿಂಡೊಗಳ ಮೇಲೆ ಕುಳಿತು ಕೊಳ್ಳುವುದನ್ನು ನೋಡಿದ್ದೇವೆ. ನಟರು ಈ ರೀತಿಯ ದೃಶ್ಯಗಳಲ್ಲಿ ನಟಿಸುವಾಗ ಹಲವಾರು ಮುಂಜಾಗರೂಕಾ ಕ್ರಮಗಳನ್ನು ತೆಗೆದುಕೊಂಡಿರಲಾಗುತ್ತದೆ.

ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಆದರೆ ಈ ರೀತಿಯ ದೃಶ್ಯಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಮಾಡುವುದು, ಅಪಾಯಕಾರಿ ಮಾತ್ರವಲ್ಲದೇ, ಕಾನೂನು ಬಾಹಿರ ಸಹ ಆಗಿದೆ. ಈ ವೀಡಿಯೊದಲ್ಲಿ ಇಬ್ಬರು ಯುವಕರು ಚಲಿಸುತ್ತಿರುವ ಕಾರಿನ ವಿಂಡೋಗಳ ಮೇಲೆ ಕುಳಿತಿದ್ದಾರೆ.

ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಯುವಕರು ಕೈನಲ್ಲಿ ಬಾಟಲ್‍‍ಗಳನ್ನು ಸಹ ಹಿಡಿದುಕೊಂಡಿದ್ದಾರೆ, ಆದರೆ ಬಾಟಲಿನಲ್ಲಿ ಏನಿತ್ತು ಎಂಬುದು ಸ್ಪಷ್ಟವಾಗಿಲ್ಲ. ಈ ಕಾರಿನ ಹಿಂದೆ ಬರುತ್ತಿದ್ದವರು ಈ ವೀಡಿಯೊವನ್ನು ಚಿತ್ರಿಸಿದ್ದು, ಈಗ ವೈರಲ್ ಆಗಿದೆ. ಬಂಧಿಸಿರುವ ಮೂವರನ್ನು 20 ವರ್ಷದ ಮೊಹಮ್ಮದ್ ಸುಲ್ತಾನ್ ಶೇಖ್, 20 ವರ್ಷದ ಸ್ಮಿರ್ ಸಾಹಿಬೋಲೆ ಹಾಗೂ 19 ವರ್ಷದ ಅನಾಸ್ ಶೇಖ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಎರಡನೇ ವರ್ಷದ ವಾಣಿಜ್ಯ ವಿಭಾಗದಲ್ಲಿ ಓದುತ್ತಿದ್ದಾರೆ.

ಖಾರ್ ಪೊಲೀಸರು ಈ ಯುವಕರನ್ನು ಈ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ ಬಂಧಿಸಿದ್ದಾರೆ. ಪೊಲೀಸರ ಪ್ರಕಾರ, ಈ ಯುವಕರು ಶುಕ್ರವಾರ ತಡ ರಾತ್ರಿ ಗೊವಂಡಿಯಿಂದ ಬಾಂದ್ರಾ ಕಡೆಗೆ ಹೋಗುತ್ತಿದ್ದರು. ಬಾಂದ್ರಾದಲ್ಲಿರುವ ಕಾರ್ಟರ್ ರೋಡ್‍‍ಗೆ ಬಂದ ನಂತರ ಇಬ್ಬರು ಯುವಕರು ಹ್ಯುಂಡೈ ಅಸೆಂಟ್ ಸೆಡಾನ್ ಕಾರಿನಿಂದ ಹೊರಬಂದು ವಿಂಡೋ ಮೇಲೆ ಕುಳಿತಿದ್ದಾರೆ.

ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಈ ವೀಡಿಯೊದಲ್ಲಿ ಕಾರಿನ ರಿಜಿಸ್ಟ್ರೇಷನ್ ಸ್ಪಷ್ಟವಾಗಿ ಕಾಣಿಸಿರುವ ಕಾರಣ, ಪೊಲೀಸರು ಈ ಮೂವರು ಯುವಕರನ್ನು ಪತ್ತೆ ಮಾಡಿ ಗೊವಂಡಿಯಲ್ಲಿ ಬಂಧಿಸಿದ್ದಾರೆ. ಅವರ ವಿರುದ್ಧ ಐಪಿಸಿ ಸೆಕ್ಷನ್ 279, 336 ಹಾಗೂ ಮೋಟಾರ್ ವೆಹಿಕಲ್ ಕಾಯ್ದೆ 184ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಮೂವರೂ ಸದ್ಯಕ್ಕೆ ಜಾಮೀನಿನ ಮೇಲೆ ಹೊರಬಂದಿದ್ದಾರೆ.

MOST READ: ಟ್ಯೂಬ್‍‍ಲೆಸ್ ಟಯರ್ ಟ್ರೆಂಡ್ ಮುಗಿತು, ಇನ್ನು ಏರ್‍‍ಲೆಸ್ ಟಯರ್ ಸದ್ದು ಶುರು

ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಸಾಮಾಜಿಕ ಜಾಲತಾಣದಲ್ಲಿರುವ ವೀಡಿಯೊಗಳನ್ನು ನೋಡಿ, ಮುಂಬೈ ಪೊಲೀಸರು ಆರೋಪಿಗಳನ್ನು ಬಂಧಿಸುತ್ತಿರುವುದು ಇದು ಮೊದಲ ಸಲವೇನಲ್ಲ. ಬಾಲಿವುಡ್ ನಟ ವರುಣ್ ಧವನ್‍‍ರವರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ನಂತರ, ಅವರ ಮೇಲೆಯೂ ಪ್ರಕರಣ ದಾಖಲಿಸಲಾಗಿತ್ತು.

MOST READ: ಮ್ಯಾನುವಲ್ ಕಾರ್ ಡ್ರೈವಿಂಗ್ ಮಾಡದಿದ್ರೆ ಲೈಸೆನ್ಸ್ ಸಿಗೋದಿಲ್ಲ

ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಮುಂಬೈ ಪೊಲೀಸರು ಅನೇಕ ಸ್ಥಳಗಳಲ್ಲಿ ಸಿಸಿಟಿವಿಗಳನ್ನು ಅಳವಡಿಸಿದ್ದು, ವಾಹನಗಳ ಚಲನವಲನ ಹಾಗೂ ಕಾನೂನು ಉಲ್ಲಂಘನೆಯ ಫೂಟೇಜ್‍‍ಗಳನ್ನು ಪರಿಶೀಲಿಸುತ್ತಲೇ ಇರುತ್ತಾರೆ. ಈ ರೀತಿಯ ಪ್ರಕರಣಗಳಲ್ಲಿ ಪೊಲೀಸರು ಕಾನೂನು ಉಲ್ಲಂಘನೆ ಮಾಡುವವರಿಗೆ ನೋಟಿಸ್ ಕಳುಹಿಸುತ್ತಾರೆ ಅಥವಾ ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಿ ಅಂತಹ ವಾಹನಗಳನ್ನು ನಿಲ್ಲಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸುತ್ತಾರೆ.

MOST READ: ಈ ಹುಚ್ಚು ಸಾಹಸಕ್ಕೆ ಬಹುದೊಡ್ಡ ಸಲಾಂ..!

ಫಿಲ್ಮಿ ಸ್ಟೈಲ್‍‍ನಲ್ಲಿ ಸ್ಟಂಟ್ ಮಾಡಲು ಹೋದ ವಿದ್ಯಾರ್ಥಿಗಳು ಅಂದರ್

ಈ ರೀತಿಯ ಸಾಹಸಗಳನ್ನು ಮಾಡುವುದು ಯುವಕರಿಗೆ ರೋಮಾಂಚನವನ್ನುಂಟು ಮಾಡಬಹುದು. ಆದರೆ ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿ ಮಾಡುವುದರಿಂದ ಅಮಾಯಕ ಜನರ ಪ್ರಾಣ ಹಾನಿಯಾಗುತ್ತದೆ. ಚಲಿಸುತ್ತಿರುವ ಕಾರಿನಿಂದ ವಿಂಡೊ ಮೇಲೆ ಕುಳಿತಿರುವ ಯುವಕನೇ ಕೆಳಗೆ ಬಿದ್ದು ಪ್ರಾಣ ಕಳೆದುಕೊಳ್ಳಬಹುದು. ಈ ರೀತಿಯ ಪ್ರಕರಣಗಳಿಂದ ಸಾರ್ವಜನಿಕರಿಗೆ ವಿನಾಕಾರಣ ಕಿರುಕುಳ ನೀಡಿದಂತಾಗುತ್ತದೆ. ಈ ರೀತಿಯ ದೃಶ್ಯಗಳನ್ನು ತೆರೆಯ ಮೇಲೆ ಮಾತ್ರ ನೋಡಿ ಆನಂದಿಸಿದರೆ ಉತ್ತಮ. ಅನುಕರಿಸಲೇಬೇಕೆಂದರೆ ಯಾರಾದರೂ ಪರಿಣಿತರ ಮಾರ್ಗದರ್ಶನದಲ್ಲಿ ಖಾಲಿ ಸ್ಥಳಗಳಲ್ಲಿ ಮಾಡುವುದು ಒಳ್ಳೆಯದು.

Most Read Articles

Kannada
English summary
Mumbai police arrest 3 youths for performing stunts on the public roads - Read in kannada
Story first published: Monday, June 10, 2019, 18:59 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X