150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಮುಂಬೈ ಪೊಲೀಸರು 151 ಹೊಸ ಬಿಎಸ್-4 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಎಲ್ಲಾ ಕಾರುಗಳು ಬಿಎಸ್ -4 ಎಂಜಿನ್ ಹೊಂದಿವೆ. ಈ ಕಾರಣಕ್ಕಾಗಿಯೇ ಪೊಲೀಸರು ಈ ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ವಿಪರಿತವಾಗಿ ಏರಿಕೆಯಾಗುತ್ತಿರುವ ವಾಯುಮಾಲಿನ್ಯಕ್ಕೆ ಕಡಿವಾಣ ಹಾಕುವ ಸಲುವಾಗಿ ಕಳೆದ ವರ್ಷ ದೇಶಾದ್ಯಂತ ಹೊಸ ಬಿಎಸ್ 6 ಮಾಲಿನ್ಯ ನಿಯಮಗಳನ್ನು ಜಾರಿಗೊಳಿಸಲಾಯಿತು. ಈ ಹಿನ್ನೆಲೆಯಲ್ಲಿ ಎಲ್ಲಾ ವಾಹನ ತಯಾರಕ ಕಂಪನಿಗಳಿಗೆ ಕಡ್ಡಾಯವಾಗಿ ಬಿಎಸ್ 6 ವಾಹನಗಳನ್ನು ಉತ್ಪಾದಿಸಲು ಸೂಚನೆ ನೀಡಲಾಯಿತು.

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಈಗ ದೇಶದೆಲ್ಲೆಡೆ ಬಿಎಸ್ 4 ವಾಹನಗಳ ಮಾರಾಟವನ್ನು ನಿಷೇಧಿಸಲಾಗಿದೆ. ಮುಂಬೈ ನಗರ ಪೊಲೀಸರು ಬಿಎಸ್ 4 ಎಂಜಿನ್ ಹೊಂದಿದ್ದ ಹೊಸ 151 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ.

MOSTREAD: ಟ್ರ್ಯಾಕ್ಟರ್‌ಗಳ ಹಿಂಭಾಗದಲ್ಲಿ ದೊಡ್ಡ ಗಾತ್ರದ ಟಯರ್‌ಗಳಿರಲು ಕಾರಣಗಳಿವು

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಇದು ನಿಜಕ್ಕೂ ಜನರಲ್ಲಿ ಆಘಾತವನ್ನುಂಟು ಮಾಡಿದೆ. ವಶಪಡಿಸಿಕೊಂಡ ಹೊಸ ವಾಹನಗಳ ಮೌಲ್ಯ ಸುಮಾರು ರೂ.7.15 ಕೋಟಿಗಳಾಗಿದೆ. ಈ ವಾಹನಗಳನ್ನು ಮಾರಾಟ ಮಾಡಲು ಯತ್ನಿಸಿದ 9 ಜನರನ್ನು ಪೊಲೀಸರು ಬಂಧಿಸಿದ್ದಾರೆ.

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು 2020ರ ಮಾರ್ಚ್ 31 ಕೊನೆಯ ದಿನವಾಗಿತ್ತು. 2020ರ ಏಪ್ರಿಲ್ 1ರಿಂದ ಬಿಎಸ್ 6 ವಾಹನಗಳನ್ನು ಮಾತ್ರ ಮಾರಾಟ ಮಾಡಲು ಹಾಗೂ ನೋಂದಾಯಿಸಲು ವಾಹನ ತಯಾರಕ ಕಂಪನಿಗಳಿಗೆ ಸೂಚನೆ ನೀಡಲಾಗಿತ್ತು.

MOSTREAD: ಚಿಕ್ಕ ಜಾಗದಲ್ಲಿ ದೊಡ್ಡ ಕಾರನ್ನು ಪಾರ್ಕ್ ಮಾಡಿದ ಅಪ್ರತಿಮ ಚಾಲಕನನ್ನು ಸನ್ಮಾನಿಸಿದ ಟೊಯೊಟಾ ಡೀಲರ್

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಈಗ ವಾಹನ ತಯಾರಕ ಕಂಪನಿಗಳು ಬಿಎಸ್ 6 ನಿಯಮಗಳಿಗೆ ತಕ್ಕಂತೆ ಹೊಸ ವಾಹನಗಳನ್ನು ಬಿಡುಗಡೆಗೊಳಿಸುತ್ತಿವೆ. ಈಗ ಎಲ್ಲಾ ಕಂಪನಿಗಳು ಬಿಎಸ್ 6 ಎಂಜಿನ್ ಹೊಂದಿರುವ ವಾಹನಗಳನ್ನು ಮಾತ್ರ ಮಾರಾಟ ಮಾಡುತ್ತಿವೆ.

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಆದರೆ ಮುಂಬೈನ 9 ಸದಸ್ಯರ ತಂಡವೊಂದು ಬಿಎಸ್ 4 ವಾಹನಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಈ ತಂಡವು ಬಿಎಸ್ 4 ವಾಹನಗಳ ನಕಲಿ ದಾಖಲೆಗಳನ್ನು ತಯಾರಿಸಿ ದೇಶದ ವಿವಿಧ ಭಾಗಗಳಲ್ಲಿ ಮಾರಾಟ ಮಾಡಿದೆ.

MOSTREAD: ಲಾಕ್‌ಡೌನ್ ನಿಂದ ಕೆಲಸ ಕಳೆದುಕೊಂಡವ ಇಂದು ವಿಶ್ವ ವಿಖ್ಯಾತ ವ್ಯಕ್ತಿ

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಈ ತಂಡದ ಸದಸ್ಯರು ಕರ್ನಾಟಕ, ದೆಹಲಿ, ಹರಿಯಾಣ, ಗುಜರಾತ್, ರಾಜಸ್ಥಾನ, ತೆಲಂಗಾಣ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ ಹಾಗೂ ಪಂಜಾಬ್‌ ರಾಜ್ಯಗಳ ವಿವಿಧ ಜಿಲ್ಲೆಗಳಲ್ಲಿ ಈ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಿದ್ದಾರೆ.

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಮಾರಾಟದಲ್ಲಿರುವ ಹೊಸ ಕಾರುಗಳಿಗಿಂತ ಕಡಿಮೆ ಬೆಲೆಗೆ ಬಿಎಸ್ 4ಗಳನ್ನು ಮಾರಾಟ ಮಾಡಲಾಗಿದೆ. ಬಂಧಿತರ ವಿರುದ್ಧ ಐಪಿಸಿ ಸೆಕ್ಷನ್ 420 ಹಾಗೂ 465ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಮುಂಬೈ ಪೊಲೀಸ್ ಆಯುಕ್ತ ಪಿಪಿನ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಪೊಲೀಸರು ಕಾರುಗಳನ್ನು ವಶಕ್ಕೆ ಪಡೆದಿರುವುದು ಮಾತ್ರವಲ್ಲದೆ ಅವುಗಳನ್ನು ಸಂಗ್ರಹಿಸಲು ಬಳಸಲಾಗಿದ್ದ ಗ್ಯಾರೇಜ್ ಹಾಗೂ ಮಾರಾಟ ಮಾಡಲು ಬಳಸುತ್ತಿದ್ದಕಚೇರಿಗೆ ಬೀಗ ಮುದ್ರೆ ಹಾಕಿದ್ದಾರೆ. ಈ ಹಗರಣವು ಮಹಾರಾಷ್ಟ್ರದ ರಾಯಗಡ್ ಪಟ್ಟಣದಲ್ಲಿ ಬೆಳಕಿಗೆ ಬಂದಿದೆ.

150ಕ್ಕೂ ಹೆಚ್ಚು ಹೊಸ ಬಿಎಸ್ 4 ಕಾರುಗಳನ್ನು ವಶಕ್ಕೆ ಪಡೆದ ಪೊಲೀಸರು

ಈ ತಂಡದ ಸದಸ್ಯರು ವಾಹನಗಳ ಚಾಸಿಸ್ ನಂಬರ್ ಬದಲಿಸಲು ಹೈದರಾಬಾದ್‌ನಲ್ಲಿ ಸಾಧನವೊಂದನ್ನು ಬಳಸುತ್ತಿದ್ದರು. ಇವುಗಳನ್ನು ಸಹ ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Mumbai police seizes more than 150 new BS 4 cars. Read in Kannada.
Story first published: Friday, March 5, 2021, 11:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X