ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಮಾದಕ ವಸ್ತುವಿಗೆ ಸಂಬಂಧಪಟ್ಟಂತೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬಾಲಿವುಡ್ ತಾರೆಯರ ವಿಚಾರಣೆ ನಡೆಸುತ್ತಿದೆ. ಬಾಲಿವುಡ್ ತಾರೆಯರು ವಿಚಾರಣೆಗೆ ಹಾಜರಾಗುವ ವೇಳೆಯಲ್ಲಿ ಮಾಧ್ಯಮಗಳು ಭಾರಿ ಸಂಖ್ಯೆಯಲ್ಲಿ ಸ್ಥಳದಲ್ಲಿ ಬೀಡು ಬಿಟ್ಟಿರುತ್ತವೆ.

ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ವಿಚಾರಣೆ ಮುಗಿಸಿ ಹೊರಬರುವ ಬಹುತೇಕ ತಾರೆಯರು ಮಾಧ್ಯಮಗಳೊಂದಿಗೆ ಮಾತನಾಡುವುದಿಲ್ಲ. ಈ ಕಾರಣಕ್ಕೆ ಮಾಧ್ಯಮಗಳು ಬಾಲಿವುಡ್ ತಾರೆಯರ ಬೆನ್ನಟ್ಟಿ ಸಂದರ್ಶನ ಪಡೆಯಲು ಯತ್ನಿಸುವ ಹಲವಾರು ವೀಡಿಯೊಗಳು ವೈರಲ್ ಆಗಿವೆ. ಇವುಗಳಿಗೆ ಬ್ರೇಕ್ ಹಾಕಲು ನಿರ್ಧರಿಸಿರುವ ಮುಂಬೈ ಪೊಲೀಸರು ನಟ, ನಟಿಯರ ಬೆನ್ನಟ್ಟುವ ಯಾವುದೇ ಮಾಧ್ಯಮಗಳ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದೆಂದು ಹೇಳಿದ್ದಾರೆ.

ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಈ ರೀತಿಯ ಚಟುವಟಿಕೆಗಳ ಬಗ್ಗೆ ಪೊಲೀಸರು ನಿಗಾ ವಹಿಸಿದ್ದು, ಬಾಲಿವುಡ್ ತಾರೆಯರ ಬೆನ್ನಟ್ಟುವ ಮಾಧ್ಯಮ ವಾಹನಗಳನ್ನು ಗುರುತಿಸಲಾಗಿದೆ ಎಂದು ವಲಯ 1 ಡಿಸಿಪಿ ಸಂಗ್ರಾಮ್ ಸಿಂಗ್ ನಿಶಂದರ್ ಹೇಳಿದ್ದಾರೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಈ ವಾಹನಗಳು ರಿಯಾ ಚಕ್ರವರ್ತಿ, ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ಶ್ರದ್ಧಾ ಕಪೂರ್ ಹಾಗೂ ಇನ್ನಿತರರ ಕಾರುಗಳನ್ನು ಬೆನ್ನಟ್ಟಿರುವ ವೀಡಿಯೊಗಳು ವೈರಲ್ ಆಗಿವೆ. ನೇರಪ್ರಸಾರ ಮಾಡುವ ಭರದಲ್ಲಿ ಈ ವಾಹನಗಳ ಚಾಲಕರು ಕಾರುಗಳನ್ನು ವೇಗವಾಗಿ ಚಾಲನೆ ಮಾಡುತ್ತಿರುವ ವೀಡಿಯೊಗಳು ಸಹ ವೈರಲ್ ಆಗಿವೆ.

ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ವೇಗವಾಗಿ ಚಲಿಸುವ ಕಾರುಗಳ ಮೂಲಕವೇ ಪತ್ರಕರ್ತರು ಪ್ರಶ್ನೆಗಳನ್ನು ಕೇಳಲು ಮುಂದಾಗುತ್ತಿದ್ದಾರೆ. ಸಾರ್ವಜನಿಕ ರಸ್ತೆಗಳಲ್ಲಿ ಈ ರೀತಿ ವೇಗವಾಗಿ ವಾಹನ ಚಾಲನೆ ಮಾಡಿ ಬೆನ್ನಟ್ಟುವುದು ಕಾನೂನುಬಾಹಿರವಾಗಿದೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಈ ರೀತಿಯಾಗಿ ಕಾನೂನುಬಾಹಿರವಾಗಿ ಚಲಿಸುವ ವಾಹನಗಳಿಗೆ ಪೊಲೀಸರು ದಂಡ ವಿಧಿಸಬಹುದು. ಈಗ ಡಿಸಿಪಿರವರೇ ಈ ರೀತಿಯ ಕೃತ್ಯಗಳಲ್ಲಿ ತೊಡಗಿದರೆ ವಾಹನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿರುವುದರಿಂದ ಇನ್ನಾದರೂ ಅಪಾಯಕಾರಿ ಚಾಲನೆ ನಿಲ್ಲುವ ಸಾಧ್ಯತೆಗಳಿವೆ.

ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಎನ್‌ಸಿಬಿ ವಿಚಾರಣೆಗೆ ಹಾಜರಾಗಿದ್ದ ನಟಿ ದೀಪಿಕಾ ಪಡುಕೋಣೆರವರನ್ನು ಮಾಧ್ಯಮ ವಾಹನಗಳು ಬೆನ್ನಟ್ಟಿದ ನಂತರ ಸಂಗ್ರಾಮ್ ಸಿಂಗ್ ನಿಶಂದರ್ ಮಾಧ್ಯಮ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಹಲವಾರು ವಾಹನಗಳು ದೀಪಿಕಾ ಪಡುಕೋಣೆಯವರ ಕಾರನ್ನು ಹಲವು ದೂರದವರೆಗೆ ಹಿಂಬಾಲಿಸಿ ಅವರ ಸಂದರ್ಶನಕ್ಕೆ ಯತ್ನಿಸಿದವು. ಈ ರೀತಿ ವಾಹನಗಳು ನಟ, ನಟಿಯರ ವಾಹನಗಳನ್ನು ಬೆನ್ನಟ್ಟಿ ಹೋಗುವಾಗ ಸಾರ್ವಜನಿಕರಿಗೂ ತೊಂದರೆಯಾಗುವ ಸಾಧ್ಯತೆಗಳಿರುತ್ತವೆ.

ಚಿತ್ರ ತಾರೆಯರ ಕಾರು ಬೆನ್ನಟ್ಟುವ ಮಾಧ್ಯಮಗಳಿಗೆ ಬಿಸಿ ಮುಟ್ಟಿಸಿದ ಪೊಲೀಸರು

ಟಿವಿ ಚಾನೆಲ್ ಗಳು ಹೆಚ್ಚಿದಂತೆಲ್ಲಾ ಪೈಪೋಟಿಯೂ ಹೆಚ್ಚಿರುವುದರಿಂದ ಸುದ್ಧಿ ಮಾಧ್ಯಮಗಳು ಸಹ ಸಂದರ್ಶನವನ್ನು ತೆಗೆದುಕೊಳ್ಳಲು ಅಥವಾ ಪ್ರಶ್ನೆಗಳನ್ನು ಕೇಳಲು ಬೆನ್ನಟ್ಟಿ ಹೋಗುತ್ತಿವೆ.

Most Read Articles

Kannada
English summary
Mumbai police to seize media vehicles which chases actors for interview. Read in Kannada.
Story first published: Monday, September 28, 2020, 17:52 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X