ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

ದೇಶಾದ್ಯಂತ ರಸ್ತೆ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಹಲವಾರು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗಿದ್ದು, ಇದೀಗ ಎಕ್ಸ್‌ಪ್ರೆಸ್‌ವೇ ಹೆಚ್ಚುತ್ತಿರುವ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಮತ್ತಷ್ಟು ಹೊಸ ಸಂಚಾರಿ ನಿಯಮಗಳನ್ನು ಜಾರಿಗೆ ತರಲಾಗುತ್ತಿದೆ.

ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

ಮಹಾರಾಷ್ಟ್ರ ಹೈವೇ ಪೊಲೀಸರು ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇನಲ್ಲಿ ಅಗಸ್ಟ್ 1ರಿಂದ ಹೊಸ ಸಂಚಾರಿ ಜಾರಿಗೆ ಮುಂದಾಗಿದ್ದು, ನಿಗದಿತ ಪ್ರದೇಶಗಳಲ್ಲಿ ಅಧಿಕ ವೇಗದಲ್ಲಿ ಚಲಿಸುವ ವಾಹನಗಳಿಗೆ ದಂಡ ವಿಧಿಸಲು ಮುಂದಾಗಿದ್ದಾರೆ. ಘಾಟಿ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಪಘಾತ ಪ್ರಕರಣಗಳನ್ನು ತಗ್ಗಿಸಲು ಹೊಸ ಕ್ರಮ ಜಾರಿಗೆ ತರಲಾಗುತ್ತಿದ್ದು, ನಿಯಮ ಉಲ್ಲಂಘಿಸುವ ವಾಹನ ಚಾಲಕರಿಗೆ ರೂ. 1 ಸಾವಿರ ದಂಡವನ್ನು ನಿಗದಿಪಡಿಸಲಾಗಿದೆ.

ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇ ನಲ್ಲಿ ಸಂಚರಿಸುವ ಬಹುತೇಕ ವಾಹನಗಳು ಕನಿಷ್ಠ 80ರಿಂದ 120ಕಿ.ಮೀ ವೇಗದಲ್ಲಿ ಸಂಚಲಿಸುತ್ತಿದ್ದು, ಅತಿ ಹೆಚ್ಚು ಅಪಘಾತ ಪ್ರಕರಣಗಳಿಗೆ ಕಾರಣವಾಗಿರುವ ಉರ್ಸೆ ಮತ್ತು ಖಲಾಪುರ ನಡುವಿನ ಮಾರ್ಗದಲ್ಲಿ ಹೊಸ ಸಂಚಾರಿ ನಿಯಮವನ್ನು ಜಾರಿಗೆ ತರಲಾಗಿದೆ.

ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

ಉರ್ಸೆ ಮತ್ತು ಖಲಾಪುರ ನಡುವಿನ ಅಂತರ 50ಕಿ.ಮೀ ಗಳಾಗಿದ್ದು, ಈ ವಲಯದಲ್ಲಿ ಅತಿ ಹೆಚ್ಚು ಅಪಘಾತವಾಗುತ್ತಿರುವ ಹಿನ್ನಲೆಯಲ್ಲಿ ಕೆಲವು ಪ್ರಮುಖ ಬದಲಾವಣೆಗಳೊಂದಿಗೆ ಹೊಸ ಸಂಚಾರಿ ನಿಯಮಗಳನ್ನು ಜಾರಿಗೆ ತರಲಾಗಿದೆ.

ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

50 ಕಿ.ಮೀ ಅಂತರದ ಉರ್ಸೆ ಮತ್ತು ಖಲಾಪುರ ನಡುವಿನ ಮಾರ್ಗದಲ್ಲಿ 15 ಕಿ.ಮೀ ಘಾಟಿ ಪ್ರದೇಶವು ಹೆಚ್ಚು ಅಪಘಾತ ಸಂಭಿಸುವ ಪ್ರದೇಶವಾಗಿದ್ದು, ಘಾಟಿ ಪ್ರದೇಶವಿರುವ 15 ಕಿ.ಮೀ ಅಂತರದಲ್ಲಿ ಪ್ರತಿ ವಾಹನಗಳಿಗೂ ಗರಿಷ್ಠ 50 ಕಿ.ಮೀ ವೇಗವನ್ನು ನಿಗದಿ ಪಡಿಸಲಾಗಿದೆ.

MOST READ: ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

ಇನ್ನುಳಿದ 35 ಕಿ.ಮೀ ವ್ಯಾಪ್ತಿಯನ್ನು ಸಂಚರಿಸಲು ವಾಹನ ಸವಾರರು ಗರಿಷ್ಠ 100 ಕಿ.ಮೀ ವೇಗ ಪಡೆದುಕೊಳ್ಳಬಹುದಾಗಿದ್ದು, ಘಾಟಿ ಪ್ರದೇಶದಲ್ಲಿ ಸಂಚಾರಿ ನಿಯಮ ಉಲ್ಲಂಘಿಸುವ ವಾಹನ ಸವಾರರ ಮೇಲೆ ಕಣ್ಣೀಡಲು ರಡಾರ್ ಸ್ಪೀಡ್ ಸೈನ್ ಬೋರ್ಡ್‍‍ಗಳನ್ನು ಅಳವಡಿಸಲಾಗಿದೆ.

ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

ಯಾವುದೇ ಸಮಯದಲ್ಲಾದರೂ ಓವರ್ ಸ್ಪೀಡ್ ಕಂಡುಬಂದಲ್ಲಿ ಇ-ಚಲನ್ ಮೂಲಕ ದಂಡ ವಿಧಿಸಲಿದ್ದು, ಅಗಸ್ಟ್ 1ರಿಂದಲೇ ಹೊಸ ನಿಯಮವು ಕಡ್ಡಾಯವಾಗಿ ಜಾರಿಗೆ ಬರುತ್ತಿದೆ.

MOST READ: ಖರೀದಿಸಿದ ಕೆಲ ನಿಮಿಷಗಳಲ್ಲೇ ಅಪಘಾತಕ್ಕೀಡಾದ ಕೋಟಿ ಬೆಲೆಯ ಐಷಾರಾಮಿ ಕಾರು

ಅಗಸ್ಟ್ 1ರಿಂದ ಪುಣೆ-ಮುಂಬೈ ಎಕ್ಸ್‌ಪ್ರೆಸ್‌ವೇ ನಲ್ಲಿ ಹೊಸ ರೂಲ್ಸ್

ಇನ್ನು ಪುಣೆ-ಮುಂಬೈ ಎಕ್ಸ್‌ಪ್ರೆಸ್ ವೇ ಬರೋಬ್ಬರಿ 95ಕಿ.ಮೀ ಅಂತರವಿದ್ದು, ಈ ಮಾರ್ಗದಲ್ಲಿ ದಿನಂಪ್ರತಿ ಸಾವಿರಾರು ವಾಹನಗಳು ಚಲಿಸುತ್ತವೆ. ಆರು ಪಥಗಳ ಈ ಎಕ್ಸ್‌ಪ್ರೆಸ್ ವೇನಲ್ಲಿ ಸುಮಾರು 50 ಕಿ.ಮೀ ನಷ್ಟು ಅಪಘಾತ ವಲಯವಿದ್ದು, ಅಪಘಾತಗಳ ಸಂಖ್ಯೆ ತಗ್ಗಿಸಲು ಇದೀಗ ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತರಲಾಗುತ್ತಿದೆ.

Most Read Articles

Kannada
English summary
Mumbai Pune Expressway To Carry Rs 1,000 Fine For Overspeeding Starting 1 August. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X