ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ನಗರದ ರಸ್ತೆಗಳಲ್ಲಿ ಮಹಿಳಾ ಚಾಲಕಿಯರು ವಾಹನ ಚಲಾಯಿಸುವುದು ಈಗ ಸಾಮಾನ್ಯ ದೃಶ್ಯವಾಗಿದ್ದರೂ, ಭಾರೀ ವಾಹನಗಳನ್ನು ಮಹಿಳಾ ಚಾಲಕರು ಚಾಲನೆ ಮಾಡುವುದು ಇನ್ನೂ ಅಪರೂಪದ ದೃಶ್ಯವಾಗಿದೆ. ಕ್ಯಾಬ್‌ಗಳು ಸೇರಿದಂತೆ ವಾಣಿಜ್ಯ ವಾಹನಗಳನ್ನು ಚಾಲನೆ ಮಾಡುವ ಲೇಡಿ ಡ್ರೈವರ್‌ಗಳಿದ್ದಾರೆ. ಆದರೆ ಟ್ರಕ್‌ಗಳು ಹಾಗೂ ಬಸ್‌ಗಳಂತಹ ಭಾರೀ ವಾಹನಗಳನ್ನು ಚಾಲನೆ ಮಾಡುವುದು ಕಷ್ಟ. ಈ ಲೆಕ್ಕಾಚಾರಗಳನ್ನೆಲ್ಲಾ ತಲೆ ಕೆಳಗೆ ಮಾಡಿ ಮುಂಬೈ ಮೂಲದ ಮೆಕ್ಯಾನಿಕಲ್ ಎಂಜಿನಿಯರ್ ಪ್ರತೀಕ್ಷಾ ದಾಸ್‍‍ರವರು ಬಸ್ ಚಾಲಕರಾಗಿದ್ದಾರೆ.

ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

24 ವರ್ಷದ ಪ್ರತೀಕ್ಷಾ, ಇತ್ತೀಚೆಗಷ್ಟೇ ಮಹಾರಾಷ್ಟ್ರದ ಮಲಾದ್‌ನ ಠಾಕೂರ್ ಕಾಲೇಜಿನಿಂದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವಿ ಪಡೆದರು. ಬೃಹನ್ ಮುಂಬೈ ವಿದ್ಯುತ್ ಸರಬರಾಜು ಹಾಗೂ ಸಾರಿಗೆ (ಬೆಸ್ಟ್)ನ ಬಸ್ ಚಾಲಕಿಯಾಗಿ ಆಕೆಯನ್ನು ನೇಮಿಸಲಾಗಿದೆ. ಪ್ರತೀಕ್ಷಾ ಪಕ್ಕದ ಮನೆಯ ಹುಡುಗಿಯಂತೆ ಕಾಣುತ್ತಾರೆ. ಸ್ನೇಹಿತರೊಂದಿಗೆ ಸುತ್ತಾಡುವುದು, ಸಿನೆಮಾಗಳಿಗೆ ಹೋಗುವುದು, ಸಲೂನ್‌ಗೆ ಭೇಟಿ ನೀಡುವುದು ಸೇರಿದಂತೆ 24 ವರ್ಷ ವಯಸ್ಸಿನವರು ಮಾಡುವ ಎಲ್ಲಾ ಸಾಮಾನ್ಯ ಕೆಲಸಗಳನ್ನು ಮಾಡುತ್ತಾರೆ.

ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಆಕೆ ಮಾಡುವ ಅಸಾಮಾನ್ಯ ಕೆಲಸವೆಂದರೆ ಸದಾ ಟ್ರಾಫಿಕ್‍‍ನಿಂದ ತುಂಬಿರುವ ಮುಂಬೈನ ರಸ್ತೆಗಳಲ್ಲಿ ಕೆಂಪು ಬಣ್ಣದ ಆರು ಟನ್‍‍ಗಳಷ್ಟು ತೂಕದ ದೊಡ್ಡ ಬಸ್ ಅನ್ನು ಚಾಲನೆ ಮಾಡುವುದು. ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಪ್ರತೀಕ್ಷಾರವರು ಭಾರೀ ವಾಹನಗಳ ಬಗೆಗಿನ ತಮ್ಮ ಪ್ರೀತಿಯ ಬಗ್ಗೆ ಮಾತನಾಡಿದ್ದಾರೆ. ಕಳೆದ ಆರು ವರ್ಷಗಳಿಂದ ನಾನು ಭಾರೀ ವಾಹನಗಳನ್ನು ಚಾಲನೆ ಮಾಡಲು ಬಯಸುತ್ತಿದ್ದೆ ಎಂದು ಹೇಳಿದ್ದಾರೆ.

ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಮೋಟಾರ್ ಬೈಕುಗಳೊಂದಿಗೆ ತಮ್ಮ ಚಾಲನೆಯನ್ನು ಪ್ರಾರಂಭಿಸಿದ ಪ್ರತೀಕ್ಷಾ ನಂತರ ಕಾರು ಚಾಲನೆಯಲ್ಲಿ ಎಕ್ಸ್ ಪರ್ಟ್ ಆದರು. ಈಗ ಅವರು ಬಸ್ಸು ಹಾಗೂ ಟ್ರಕ್‌ಗಳನ್ನು ಸರಾಗವಾಗಿ ಚಲಾಯಿಸಬಲ್ಲರು. ಇದು ತನಗೆ ವಿಶಿಷ್ಟ ಅನುಭವವನ್ನು ನೀಡುತ್ತಿರುವುದಾಗಿ ತಿಳಿಸಿದ್ದಾರೆ. ಪ್ರತೀಕ್ಷಾರವರು ಚಿಕ್ಕ ವಯಸ್ಸಿನಲ್ಲಿಯೇ ಬೈಕ್ ಸವಾರಿ ಮಾಡಲು ಕಲಿತರು. ಮೊದಲ ಬಾರಿಗೆ ಆಕೆಯ ತಾಯಿಯ ಚಿಕ್ಕಪ್ಪನ ಬೈಕ್ ಅನ್ನು ಚಲಾಯಿಸಿದರು.

ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

8ನೇ ತರಗತಿಯಲ್ಲಿದ್ದಾಗ, ಆಕೆಯ ಕುಟುಂಬದವರೇ ಆಶ್ಚರ್ಯ ಪಡುವಂತೆ ಕೇವಲ ಎರಡು ದಿನಗಳಲ್ಲಿ ವೃತ್ತಿಪರರಂತೆ ಬೈಕ್ ಚಲಾಯಿಸಲು ಕಲಿತರು. ಆಕೆ ಹೇಗೆ ಬಸ್ ಡ್ರೈವರ್ ಆದರು ಎಂಬ ಪ್ರಶ್ನೆ ಕಾಡದೇ ಇರದು. ಪ್ರತೀಕ್ಷಾ ಎಂಜಿನಿಯರಿಂಗ್ ಕೋರ್ಸ್ ಮುಗಿಸಿದ ನಂತರ ಪ್ರದೇಶ ಸಾರಿಗೆ ಅಧಿಕಾರಿ (ಆರ್‌ಟಿಒ) ಆಗಲು ಬಯಸಿದ್ದರು. ಆರ್‌ಟಿಒ ಆಗಲು, ಭಾರೀ ವಾಹನ ಚಾಲನೆಯ ಲೈಸೆನ್ಸ್ ಪಡೆಯುವುದು ಕಡ್ಡಾಯ. ಈ ಕಾರಣಕ್ಕೆ ಆಕೆ ಭಾರೀ ವಾಹನಗಳನ್ನು ಚಲಾಯಿಸುವುದನ್ನು ಕಲಿತರು.

ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಹೋಂಡಾ ಸಿಟಿ ಮತ್ತು ಮಾರುತಿ ಸುಜುಕಿ ಸಿಯಾಜ್‌ಗೆ ಟಕ್ಕರ್ ನೀಡುತ್ತಿರುವ ಟೊಯೊಟಾ ಯಾರಿಸ್ ಖರೀದಿಗೆ ಈಗಲೇ ಟೆಸ್ಟ್ ಡ್ರೈವ್ ಮಾಡಿ..!

ಮುಂದೆ ನೀವು ಆರ್‌ಟಿಒ ಆಗಬೇಕೆಂಬ ನಿಮ್ಮ ಕನಸನ್ನು ಈಡೇರಿಸಿಕೊಳ್ಳುವಿರಾ ಎಂಬ ಪ್ರಶ್ನೆಗೆ ಆಕೆ ಉತ್ತರಿಸಿಲ್ಲ. ಈ ಡ್ರೈವರ್ ಕೆಲಸ, ಆಕೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಪುರುಷ ಪ್ರಾಬಲ್ಯದ ಈ ಕೆಲಸದಲ್ಲಿ ಆಕೆಯ ಸಹೋದ್ಯೋಗಿಗಳು, ಹೇ ಹುಡುಗಿ ಬಸ್ ಓಡಿಸೋಕೆ ಬರಲ್ವಾ ಎಂದೆಲ್ಲಾ ಮೂದಲಿಸುತ್ತಿದ್ದರು. ಇಷ್ಟು ದೊಡ್ಡ ವಾಹನವನ್ನು ಚಲಾಯಿಸಲು ಹಾಗೂ ನಿಯಂತ್ರಿಸಲು ಸಾಧ್ಯವೇ ಇಲ್ಲ ಎಂದು ಆಕೆಯ ಸಾಮರ್ಥ್ಯದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದರು.

ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಇದರ ಜೊತೆಗೆ ಆಕೆ ಚಾಲನೆ ಮಾಡುವ ಬಸ್ಸಿನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸಹ ಆಕೆ ಚಾಲನೆ ಮಾಡುವುದನ್ನು ಅನುಮಾನದಿಂದಲೇ ನೋಡುತ್ತಾರೆ. ಇಂತಹವುಗಳನ್ನು ಲೆಕ್ಕಿಸದೇ, ಅವುಗಳನ್ನೆಲ್ಲಾ ಸಂಪೂರ್ಣವಾಗಿ ನಿರ್ಲಕ್ಷಿಸಿ, ತನ್ನ ಡ್ರೈವಿಂಗ್ ಕೆಲಸದಲ್ಲಿ ಮಗ್ನರಾಗುತ್ತಾರೆ. ಆರಂಭದಲ್ಲಿ, ಬಸ್ ತಿರುಗಿಸುವಾಗ ಅಥವಾ ಲೇನ್‍‍ಗಳನ್ನು ಬದಲಿಸುವಾಗ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಆದರೆ ಕೆಲವು ದಿನಗಳಲ್ಲಿಯೇ ಡ್ರೈವಿಂಗ್ ಕೌಶಲ್ಯಗಳನ್ನು ಕರಗತ ಮಾಡಿಕೊಂಡು ಈಗ ಸರಾಗವಾಗಿ ಬಸ್ ಓಡಿಸುತ್ತಾರೆ.

ಈ ಮೆಕಾನಿಕಲ್ ಎಂಜಿನಿಯರ್ ಈಗ ಮುಂಬೈನ ಮೊದಲ ಮಹಿಳಾ ಚಾಲಕಿ

ಪ್ರತಿಕ್ಷಾರವರು ಬೈಕ್ ರೇಸರ್ ಸಹ ಆಗಿದ್ದು, ಏಷ್ಯಾ ರೋಡ್ ರೇಸಿಂಗ್ ಚಾಂಪಿಯನ್‌ಶಿಪ್ 2019ರಲ್ಲಿ ಭಾಗವಹಿಸಿದ್ದರು. ಹೋಂಡಾ ಹಾಗೂ ಟಿವಿಎಸ್‌ನಂತಹ ಕಂಪನಿಗಳ ಪ್ರಾಯೋಜಕತ್ವದಲ್ಲಿ ಹಲವಾರು ರೇಸ್‌ಗಳಲ್ಲಿ ಭಾಗವಹಿಸಿದ್ದಾರೆ. ಈ ಹಿಂದೆ, 2 ಬಾರಿ ಟಿವಿಎಸ್ ರೇಸಿಂಗ್ ಚಾಂಪಿಯನ್‌ಶಿಪ್ ಟ್ರೋಫಿಗಳನ್ನು ಗೆದ್ದಿದ್ದಾರೆ. ಸದ್ಯಕ್ಕೆ ಫಾಸ್ಟೆಸ್ಟ್ ಫೀಮೇಲ್ ಅಟ್ ಇಂಡಿಯಾ ಸ್ಪೀಡ್ ವೀಕ್ ಡ್ರ್ಯಾಗ್ ರೇಸ್‍‍ನ ವಿಜೇತರಾಗಿದ್ದಾರೆ.

Source: TOI

Most Read Articles

Kannada
English summary
24 year old mechanical engineer becomes Mumbai’s first woman bus driver! - Read in kannada
Story first published: Thursday, July 11, 2019, 18:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more