ಕಾರಿನ ಟೈರ್ ಬದಲಿಸಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಸರಳ ಸಜ್ಜನಿಕೆಯ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ತಮ್ಮ ಆಡಳಿತ ವೈಖರಿ ಮತ್ತು ಸರಳ ವ್ಯಕ್ತಿತ್ವದ ಮೂಲಕ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇದೀಗ ತಮ್ಮ ಕಾರಿನ ಟೈರ್ ಬದಲಾಯಿಸಿಕೊಳ್ಳುವ ಮೂಲಕ ಮತ್ತೊಮ್ಮೆ ಸಾರ್ವಜನಿಕರ ಗಮನ ಸೆಳೆದಿದ್ದಾರೆ.

ಕಾರಿನ ಟೈರ್ ಬದಲಿಸಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ತಮ್ಮ ಕುಟುಂಬದ ಜೊತೆ ಹೊರ ಹೋಗಿದ್ದ ಸಂದರ್ಭದಲ್ಲಿ ಕಾರಿನ ಟೈರ್ ಪಂಚರ್ ಆಗಿತ್ತು. ಹೀಗಾಗಿ ತಾವೇ ಕಾರಿನ ಟೈರ್ ಕಳಚಿ ಬದಲಾಯಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ. ಆದರೆ ಕೆಲವರು ಇದು ರೋಹಿಣಿ ಸಿಂಧೂರಿಯೇ ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ.

ಕಾರಿನ ಟೈರ್ ಬದಲಿಸಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ‌ ಅವರು ತಮ್ಮ ಕಾರಿನ ಟೈರ್ ಕಳಚುವ ವೇಳೆ ಸಾರ್ವಜನಿಕರು ವೀಡಿಯೋ ಮಾಡಿದ್ದಾರೆ. ವೀಡಿಯೋದಲ್ಲಿ ಸಾರ್ವಜನಿಕರು ತಾವು ರೋಹಿಣಿ ಸಿಂಧೂರಿ ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಕಾರಿನ ಟೈರ್ ಬದಲಿಸಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಈ ವೇಳೆ ಯಾವುದೇ ಪ್ರತಿಕ್ರಿಯೆ ನೀಡದ ಅವರು, ನಕ್ಕು ಸುಮ್ಮನಾಗಿದ್ದಾರೆ. ಆದರೆ ಡಿಸಿ ರೋಹಿಣಿ‌ ಸಿಂಧೂರಿ, ಅವರು ಕಾರಿನ ಟೈಯರ್ ಬದಲಿಸುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ಸದ್ದು ಮಾಡಿದೆ.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಕಾರಿನ ಟೈರ್ ಬದಲಿಸಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಸರಳತೆ ಹಲವರು ಮೆಚ್ಚು ವ್ಯಕ್ತಪಡಿಸಿದ್ದಾರೆ. ವೀಡಿಯೋದಲ್ಲಿ ಕಾರಿನ ಸೈಡ್ ಪ್ರೊಫೈಲ್ ಮಾತ್ರ ಕಾಣಿಸುತ್ತದೆ. ಅದರಂತೆ ಇದು ಟೊಯೊಟಾ ಫಾರ್ಚೂನರ್ ಎಸ್‍ಯುವಿ ಎಂದು ನಿರೀಕ್ಷಿಸುತ್ತೇವೆ. ಟೊಯೊಟಾ ಫಾರ್ಚೂನರ್ ಬಾರಿ ಗಾತ್ರದ ಎಸ್‍ಯುವಿಯಾಗಿದೆ.

MOST READ: ಐಷಾರಾಮಿ ಬಿಎಂಡಬ್ಲ್ಯು ಎಕ್ಸ್7 ಕಾರು ಚಾಲನೆ ವೇಳೆ ಕಾಣಿಸಿಕೊಂಡ ಬಾಲಿವುಡ್ ಸ್ಟಾರ್

ಟೊಯೊಟಾ ಫಾರ್ಚೂನರ್ ಭಾರತದಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ. ಈ ಬೃಹತ್ ಆಕಾರದ ಎಸ್‍ಯುವಿಯ ಟೈರ್ ಬದಲಿಸಿ ಮೈಸೂರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಅಚ್ಚರಿ ಮೂಡಿಸಿದ್ದಾರೆ.

ಕಾರಿನ ಟೈರ್ ಬದಲಿಸಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಕೆಲವು ಉನ್ನತ ಅಧಿಕಾರಿಗಳು ತಮ್ಮ ವೈಯಕ್ತಿಕ ಕೆಲಸಗಳಿಗೂ ಅಧಿಕಾರಿಗಳನ್ನು ಬಳಿಸಿಕೊಂಡ ಉದಾಹರಣೆಗಳಿವೆ. ಆದರೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರು ಉನ್ನತ ಅಧಿಕಾರಿಯಾಗಿ ಯಾವುದೇ ರೀತಿ ಕೀಳರಿಮೆ ಅಥವಾ ಸಂಕೋಚವಿಲ್ಲದೆ ತಮ್ಮ ಕಾರಿನ ಟೈರ್ ಅನ್ನು ತಾವೇ ಬದಲಿಸಿದ್ದಾರೆ.

ಕಾರಿನ ಟೈರ್ ಬದಲಿಸಿ ಗಮನ ಸೆಳೆದ ಮೈಸೂರು ಡಿಸಿ ರೋಹಿಣಿ ಸಿಂಧೂರಿ

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಗೆ ಆನೇಕ ಕಡೆ ಕೆಲಸ ನಿರ್ವಹಿಸಿದ ಅನುಭವವಿದೆ. ಕಳೆದ ಕೆಲವು ತಿಂಗಳ ಹಿಂದಷ್ಟೇ ರೋಹಿಣಿ ಸಿಂಧೂರಿ ಮೈಸೂರಿಗೆ ವರ್ಗಾವಣೆಯಾಗಿದ್ದರು. ಕೊರೊನಾ ನಿಯಂತ್ರಿಸುವಲ್ಲಿಯೂ ರೋಹಿಣಿ ಸಿಂಧೂರಿ ಅವರು ಸಾಕಷ್ಟು ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ. ಇನ್ನು ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಪಾಠ ಮಾಡಿ ಅವರು ಗಮನ ಸೆಳೆದಿದ್ದರು.

Most Read Articles

Kannada
English summary
Mysuru DC Rohini Sindhuri Changing Car Tyre. Read In Kannada.
Story first published: Friday, February 26, 2021, 15:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X