ಬೆಂಗಳೂರಿನ ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಇದೇ ತಿಂಗಳೂ 18 ರಿಂದ ನಮ್ಮ ಮೆಟ್ರೋ ಸಂಚಾರ ಬೆಂಗಳೂರಿನ ನಾಲ್ಕು ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುತ್ತಿದ್ದು, ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಸಿರು ನಿಶಾನೆ ತೊರಲಿದ್ದಾರೆ.

By Praveen

ಇದೇ ತಿಂಗಳೂ 18 ರಿಂದ ನಮ್ಮ ಮೆಟ್ರೋ ಸಂಚಾರ ಬೆಂಗಳೂರಿನ ನಾಲ್ಕು ದಿಕ್ಕುಗಳಿಗೂ ಸಂಪರ್ಕ ಕಲ್ಪಿಸುತ್ತಿದ್ದು, ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಸಿರು ನಿಶಾನೆ ತೊರಲಿದ್ದಾರೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಈ ಮೂಲಕ ಮೊದಲ ಹಂತದ 42 ಕಿ.ಮಿ ಉದ್ದದ ಮೊಟ್ರೋ ಕಾಮಗಾರಿ ಪೂರ್ಣಗೊಳ್ಳಲಿದ್ದು, ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ನಡುವಿನ 12 ಕಿಮಿ ಉದ್ದದ ಮೆಟ್ರೋ ಮಾರ್ಗ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಕೊಂಚ ರಿಲೀಫ್ ದೊರೆಯಲಿದೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ನಿತ್ಯ 5-6 ಲಕ್ಷ ಜನ ಪ್ರಯಾಣಿಕರ ನೀರಿಕ್ಷೆ

ಜೂ.18ರಿಂದ ಉತ್ತರ ಮತ್ತು ದಕ್ಷಿಣ ಕಾರಿಡಾರ್ ಸಂಚಾರಕ್ಕೆ ಮುಕ್ತವಾಗಲಿದ್ದು, ಮೊದಲ ಹಂತದ ಮೆಟ್ರೋ ಮಾರ್ಗದಲ್ಲಿ ದಿನನಿತ್ಯ 5 ರಿಂದ 6 ಲಕ್ಷ ಜನ ಪ್ರಯಾಣ ಮಾಡುವ ನೀರಿಕ್ಷೆಯಿದೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

6 ನಿಮಿಷಕ್ಕೊಂದು ಮೆಟ್ರೋ ಲಭ್ಯ

ಮೊದಲ ಹಂತದ ಮೆಟ್ರೋ ಪೂರ್ಣ ಪ್ರಮಾಣದಲ್ಲಿ ತೆರೆದುಕೊಂಡ ನಂತರ ಸಂಚಾರ ದಟ್ಟಣೆ ಹೆಚ್ಚಲಿದ್ದು, ಪ್ರಯಾಣಕ್ಕೆ ಅನುಕೂಲರವಾಗುವ ನಿಟ್ಟಿನಲ್ಲಿ 8 ನಿಮಿಷದ ಬದಲಾಗಿ 6 ನಿಮಿಷಕ್ಕೊಂದು ಮೆಟ್ರೋ ಸಂಚಾರ ಲಭ್ಯವಾಗಲಿದೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಸಿಆರ್‌ಎಸ್‌ನಿಂದ ಸುರಕ್ಷಾ ಪ್ರಮಾಣ ಪತ್ರ

ಇನ್ನು ಹೊಸ ಮೆಟ್ರೋ ಮಾರ್ಗಗಳ ಸುರಕ್ಷೆತೆ ಬಗ್ಗೆ ಪರಿಶೀಲನೆ ನಡೆಸಿದ್ದ ರೈಲ್ವೇ ಸುರಕ್ಷಾ ಆಯುಕ್ತರು, ಪ್ರತಿ ಗಂಟೆಗೆ 60 ಕಿಮಿ ವೇಗದಲ್ಲಿ ಮೆಟ್ರೋ ಸಂಚಾರಕ್ಕೆ ಗ್ರೀನ್ ಸಿಗ್ನಲ್ ನೀಡಿದ್ದಾರೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಸದ್ಯ ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನಲ್ಲೂ ಪ್ರತಿ ಗಂಟೆಗೆ 60 ಕಿ.ಮಿ ವೇಗದಲ್ಲಿ ಮೆಟ್ರೋ ಸಂಚಾರಕ್ಕೆ ಅವಕಾಶವಿದ್ದು, ಸಂಪಿಗೆ ರಸ್ತೆಯಿಂದ ಹೊರಡುವ ಮೆಟ್ರೋ ಕೇವಲ 20ರಿಂದ 25 ನಿಮಿಷಲ್ಲಿ ಯಲಚೇನಹಳ್ಳಿ ತಲುಪಲಿದೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಇನ್ನು ಬೆಳಗ್ಗೆ 6ರಿಂದಲೇ ಮೆಟ್ರೋ ಸೇವೆಗಳು ಲಭ್ಯವಿರಲಿದ್ದು, ರಾತ್ರಿ 11 ಗಂಟೆಯ ತನಕ ಮೆಟ್ರೋ ಸಂಚಾರ ಮಾಡಬಹುದಾಗಿದೆ. ಇದರಿಂದ ಈ ಭಾಗದಲ್ಲಿ ಉಂಟಾಗುತ್ತಿದ್ದ ಸಂಚಾರ ದಟ್ಟಣೆ ತಗ್ಗುವ ನಿರೀಕ್ಷೆಯಿದೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಹೆಚ್ಚಿದ ಯೋಜನಾ ವೆಚ್ಚ

2006ರಲ್ಲಿ ಮೆಟ್ರೋ ಮೊದಲ ಹಂತದ ಕಾಮಗಾರಿಗಾಗಿ 8,154 ಕೋಟಿ ನಿಗದಿಯಾಗಿತ್ತು. ಆದ್ರೆ ಮಾರ್ಗ ವಿಸ್ತರಣೆ ಮತ್ತು ಉಕ್ಕು, ಸಿಮೆಂಟ್ ಬೆಲೆ ಹೆಚ್ಚಳ ಹಿನ್ನೆಲೆ ಯೋಜನಾ ವೆಚ್ಚ 13, 742 ಕೋಟಿಗೆ ತಲುಪಿದೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಎಂಆರ್‌ಸಿಎಲ್ ಬದಲಾದ ಪರಿಸ್ಥಿತಿಯಲ್ಲಿ ವಿಸ್ತರಣೆಯಾದ ಮೆಟ್ರೋ ಮಾರ್ಗ ಮತ್ತು ಬೆಲೆ ಹೆಚ್ಚಳ ಹಿನ್ನೆಲೆ ಯೋಜನಾ ವೆಚ್ಚ ಅಧಿಕವಾಗಿದೆ ಎಂದಿದ್ದಾರೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಇದಲ್ಲದೇ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಮೆಟ್ರೋ ಸೇವೆ ನೀಡಲು ಮುಂದಾಗಿರುವ ಬಿಎಂಆರ್‌ಸಿಎಲ್, ಪೂರ್ವ ಮತ್ತು ಪಶ್ಚಿಮ ಕಾರಿಡಾರ್‌ನಲ್ಲಿ 3 ನಿಮಿಷಕ್ಕೊಂದು ಮೆಟ್ರೋ ಹಾಗೂ ಉತ್ತರ ಮತ್ತು ದಕ್ಷಿಣ ಕಾರಿಡಾರ್‌ನಲ್ಲಿ 4 ನಿಮಿಷಕ್ಕೊಂದು ಮೆಟ್ರೋ ಸೇವೆ ಆರಂಭಿಸುವ ಬಗ್ಗೆ ಸುಳಿವು ನೀಡಿದ್ದಾರೆ.

ನಾಲ್ಕು ದಿಕ್ಕುಗಳಿಗೂ ಮೆಟ್ರೋ- ಸಂಪಿಗೆ ರಸ್ತೆ ಟು ಯಲಚೇನಹಳ್ಳಿ ಮಾರ್ಗಕ್ಕೆ ಕ್ಷಣಗಣನೆ

ಈ ಮೂಲಕ ರಾಜಧಾನಿಯ ನಾಲ್ಕು ದಿಕ್ಕಗಳಿಗೂ ಮೆಟ್ರೋ ಸಂಚಾರ ಲಭ್ಯವಾಗಲಿದ್ದು, ಈಗಲಾದ್ರೂ ಬೆಂಗಳೂರಿನ ಜನತೆಗೆ ತಲೆನೋವಾಗಿ ಪರಿಣಮಿಸಿರುವ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುವುದೇ ಕಾಯ್ದು ನೋಡಬೇಕಾಗಿದೆ.

Most Read Articles

Kannada
Read more on ಮೆಟ್ರೋ metro
English summary
Read in Kannada about Bangalore Metro’s Green Line Stations Ready for Operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X