ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ನಂದಿ ಬೆಟ್ಟ ಅಥವಾ ನಂದಿ ಹಿಲ್ಸ್ ಬೆಂಗಳೂರಿನಲ್ಲಿ ಭೇಟಿ ನೀಡಬೇಕಾದ ಪಿಕ್‍‍ನಿಕ್ ಸ್ಪಾಟ್‍‍ಗಳಲ್ಲಿ ಒಂದು. ಪ್ರತಿ ವಾರಾಂತ್ಯದಲ್ಲೂ ಸಾವಿರಾರು ಜನರು ನಂದಿ ಬೆಟ್ಟಕ್ಕೆ ಭೇಟಿ ನೀಡಿ ಅಲ್ಲಿನಿಂದ ಸೂರ್ಯೋದಯವನ್ನು ನೋಡಿ ಕಣ್ತುಂಬಿ ಕೊಳ್ಳುತ್ತಾರೆ.

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಸಾವಿರಾರು ಜನ ಒಮ್ಮೆಲೆ ಭೇಟಿ ನೀಡುತ್ತಿರುವುದರಿಂದ ನಂದಿ ಬೆಟ್ಟಕ್ಕೆ ಸಾಗುತ್ತಿರುವ ದಾರಿಯಲ್ಲಿ ವಾಹನ ದಟ್ಟಣೆ ಉಂಟಾಗುತ್ತಿದೆ. ಪ್ರತಿ ವಾರವೂ ನಂದಿ ಬೆಟ್ಟದಲ್ಲಿ ಟ್ರಾಫಿಕ್ ಸಮಸ್ಯೆ ಉಂಟಾಗಿ ಜನ ಸಾಮಾನ್ಯರು ಪರದಾಡುವಂತಾಗಿದೆ.

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಅಂದ ಹಾಗೆ ನಂದಿ ಬೆಟ್ಟವನ್ನು ಕರ್ನಾಟಕ ಸರ್ಕಾರದ ತೋಟಗಾರಿಕೆ ಇಲಾಖೆಯು ನಿರ್ವಹಿಸುತ್ತದೆ. ವಿಪರೀತ ದಟ್ಟಣೆ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆಯು ನಂದಿ ಬೆಟ್ಟಕ್ಕೆ ಸಾಗುವ ಖಾಸಗಿ ವಾಹನಗಳನ್ನು ನಿಯಂತ್ರಿಸಲು ಬಯಸಿದೆ.

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಈ ನಿಟ್ಟಿನಲ್ಲಿ ತೋಟಗಾರಿಕೆ ಇಲಾಖೆಯು ಹಿಮಾವದ್ ಗೋಪಾಲಸ್ವಾಮಿ ಬೆಟ್ಟದಲ್ಲಿರುವ ಪದ್ದತಿಯನ್ನು ಜಾರಿಗೆ ತರಲು ಬಯಸಿದೆ. ಇದರಿಂದಾಗಿ ಇನ್ನು ಮುಂದೆ ನಂದಿ ಬೆಟ್ಟಕ್ಕೆ ಹೋಗಲು ಬಯಸುವ ಪ್ರವಾಸಿಗರು ತಮ್ಮ ವಾಹನಗಳನ್ನು ನಂದಿ ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್ ಮಾಡಬೇಕು.

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಅಲ್ಲಿಂದ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆ (ಕೆ‍ಎಸ್‍ಆರ್‍‍ಟಿ‍‍ಸಿ) ಬಸ್ಸುಗಳಲ್ಲಿ ನಂದಿ ಬೆಟ್ಟಕ್ಕೆ ತೆರಳಬೇಕಾಗುತ್ತದೆ. ಈ ಬಗ್ಗೆ ಮಾತನಾಡಿದ ತೋಟಗಾರಿಕೆ ಇಲಾಖೆಯ ಪಾರ್ಕ್ ಹಾಗೂ ಗಾರ್ಡನ್‍ ವಿಭಾಗದ ಜಂಟಿ ನಿರ್ದೇಶಕ ಡಾ.ಎಂ.ಜಗದೀಶ್‍‍ರವರು, ನಾವು ಇತ್ತೀಚಿಗೆ ಈ ಬಗ್ಗೆ ಸಭೆಯೊಂದನ್ನು ಕರೆದಿದ್ದೇವು.

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಈ ಸಭೆಯಲ್ಲಿ ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಚಿಕ್ಕಬಳ್ಳಾಪುರದ ಜಿಲ್ಲಾಧಿಕಾರಿಗಳು, ತೋಟಗಾರಿಕೆ ಇಲಾಖೆ ನಿರ್ದೇಶಕರು, ಕೆ‍ಎಸ್‍ಆರ್‍‍ಟಿ‍‍ಸಿ ಎಂಡಿ ಹಾಗೂ ನಂದಿ ಬೆಟ್ಟದ ವಿಶೇಷಾಧಿಕಾರಿಗಳಾದ ಶಿವಯೋಗಿ ಕಳಸದ್‍‍ರವರು ಭಾಗವಹಿಸಿದ್ದರು.

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ನಂದಿ ಬೆಟ್ಟದ ತಪ್ಪಲಿನಲ್ಲಿ ಪರ್ಯಾಯ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲು ಯೋಜನೆಯನ್ನು ರೂಪಿಸಿದ್ದಾರೆ. ಚಿಕ್ಕಬಳ್ಳಾಪುರದ ಜಿಲ್ಲಾಡಳಿತಕ್ಕೂ ಸೂಕ್ತ ಜಾಗ ಕಲ್ಪಿಸುವಂತೆ ಮನವಿ ಮಾಡಿಕೊಂಡಿದ್ದೇವೆ.

MOST READ: ಕೈಕೊಟ್ಟ ದುಬಾರಿ ಬೆಲೆಯ ಕಾರಿನ ಬ್ರೇಕ್..!

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಸೂಕ್ತ ಜಾಗ ದೊರಕಿದ ನಂತರ ವೀಕ್ ಎಂಡ್‍‍ನಲ್ಲಿ ಖಾಸಗಿ ವಾಹನಗಳು ನಂದಿ ಬೆಟ್ಟವನ್ನು ಪ್ರವೇಶಿಸದಂತೆ ಮಾಡಲಾಗುವುದು ಎಂದು ಹೇಳಿದರು. ವಾರದ ಬೇರೆ ದಿನಗಳಲ್ಲಿ ವಾಹನಗಳು ನಂದಿ ಬೆಟ್ಟವನ್ನು ಪ್ರವೇಶಿಸಿದರೂ ಯಾವುದೇ ತೊಂದರೆಯಿಲ್ಲ. ಆದರೆ ವೀಕ್ ಎಂಡ್‍‍ನಲ್ಲಿ ಮಾತ್ರ ಸಮಸ್ಯೆ ಉಂಟಾಗುತ್ತಿದೆ ಎಂದು ಹೇಳಿದರು.

MOST READ: ವಿಭಿನ್ನವಾಗಿ ಸ್ಕೂಟರ್ ಖರೀದಿಸಿದ ಗ್ರಾಹಕ - ಶೋರೂಂ ಸಿಬ್ಬಂದಿಗೆ ಸುಸ್ತೋ ಸುಸ್ತು..!

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಬೆಟ್ಟದ ಮೇಲಿರುವ ಗೊತ್ತುಪಡಿಸಿದ ಪಾರ್ಕಿಂಗ್ ಸ್ಥಳದಲ್ಲಿ ವಾಹನಗಳನ್ನು ಸುಲಭವಾಗಿ ನಿಲ್ಲಿಸಬಹುದು. ಆದರೆ ಭಾನುವಾರ, ಎರಡನೇ ಶನಿವಾರ, ನಾಲ್ಕನೇ ಶನಿವಾರಗಳಂದು ವಿಪರೀತ ದಟ್ಟಣೆ ಉಂಟಾಗುತ್ತಿದೆ. ಬೆಟ್ಟದ ಮೇಲಿರುವ ಪಾರ್ಕಿಂಗ್ ಸ್ಥಳದಲ್ಲಿ ಈ ಎಲ್ಲಾ ವಾಹನಗಳಿಗೂ ಪಾರ್ಕಿಂಗ್ ಸೌಲಭ್ಯವನ್ನು ಕಲ್ಪಿಸಲು ಸಾಧ್ಯವಾಗುತ್ತಿಲ್ಲ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ಇದರಿಂದಾಗಿ ನಂದಿ ಬೆಟ್ಟಕ್ಕೆ ಹೋಗುವ ವಾಹನಗಳನ್ನು ಪಾರ್ಕ್ ಹಾಗೂ ಗಾರ್ಡನ್‍‍ಗಳಲ್ಲಿ ಪಾರ್ಕಿಂಗ್ ಮಾಡಲಾಗುತ್ತಿದೆ. ನಾವು ಈ ವಾಹನಗಳನ್ನು ಉದ್ಯಾನವನಗಳಿಂದ ದೂರ ನಿಲ್ಲಿಸಲು ಬಯಸುತ್ತೇವೆ ಎಂದು ಅವರು ಹೇಳಿದರು.

ವೀಕ್ ಎಂಡ್‍‍ನಲ್ಲಿ ನಂದಿ ಹಿಲ್ಸ್ ಗೆ ಹೋಗುವ ಪ್ಲಾನ್ ಇದ್ರೆ ಇತ್ತ ಗಮನಿಸಿ..!

ತೋಟಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿಗಳಿಗೆ ಬೆಟ್ಟದ ತಪ್ಪಲಿನಲ್ಲಿ ಪಾರ್ಕಿಂಗ್‍‍ಗಾಗಿ ಸೂಕ್ತ ಸ್ಥಳವನ್ನು ಒದಗಿಸಲು ಸೂಚನೆ ನೀಡಿದ್ದಾರೆ. ಈ ಸ್ಥಳದಲ್ಲಿ ಸಾರ್ವಜನಿಕರು ತಮ್ಮ ವಾಹನಗಳನ್ನು ಪಾರ್ಕಿಂಗ್ ಮಾಡಬಹುದೆಂದು ಅವರು ಹೇಳಿದರು.

Most Read Articles

Kannada
English summary
Nandi hills private vehicles entry banned on weekends - Read in Kannada
Story first published: Saturday, November 16, 2019, 17:03 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X