ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ನಾವು ನೋಡಿರುವ ಪೈಕಿ ಹಲವಾರು ರಾಜಕಾರಣಿಗಳು ಅಧಿಕಾರ ತಮ್ಮ ಕೈಗೆ ಬಂದಾಕ್ಷಣ ವಿಲಾಸಿ ಜೀವನ ಶೈಲಿಯನ್ನು ಆರಂಭಿಸುತ್ತಾರೆ. ಐಷಾರಾಮಿ ಕಾರುಗಳಲ್ಲಿ ಸುತ್ತಾಡುವುದು ಅಂತಹವರ ಹವ್ಯಾಸವಾಗಿಬಿಡುತ್ತದೆ.

ಆದರೆ ಇವೆಲ್ಲದರಿಂದ ಭಿನ್ನವಾಗಿರುವ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ, ತಮ್ಮ ಅಧಿಕೃತ ಕಾರ್ಯಕ್ರಮಗಳಿಗಾಗಿ ಮಹೀಂದ್ರ ಸ್ಕಾರ್ಪಿಯೊ ಕಾರನ್ನು ಹೆಚ್ಚಾಗಿ ಬಳಕೆ ಮಾಡುತ್ತಾರೆ. ಇದು ದೇಶದ ಮಾರುಕಟ್ಟೆಯಲ್ಲಿ 7.48 ಲಕ್ಷ ರು.ಗಳಿಂದ ಆರಂಭವಾಗಿ ಟಾಪ್ ಎಂಡ್ ವೆರಿಯಂಟ್ 10.68 ಲಕ್ಷ ರು.ಗಳ ವರೆಗೆ ಲಭ್ಯವಿದೆ.

2014ರ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿ ಸಾಲಿನಲ್ಲಿರುವ ಮೋದಿ ಸರಳ ವ್ಯಕ್ತಿತ್ವವನ್ನು ಹೊಂದಿದ್ದಾರೆ. ಇದೇ ಕಾರಣಕ್ಕಾಗಿ ಸರಳ ಜೀವನವನ್ನು ಇಷ್ಟಪಡುತ್ತಾರೆ. ಸತತ ಮೂರು ಬಾರಿ ಮುಖ್ಯಮಂತ್ರಿಯಾಗುವ ಮೂಲಕ 'ಹ್ಯಾಟ್ರಿಕ್' ಸಾಧನೆ ಮಾಡಿರುವ ಮೋದಿ ಗುಜರಾತ್ ರಾಜ್ಯವನ್ನು ಅಭಿವೃದ್ಧಿ ಪಥದತ್ತ ಮುನ್ನಡೆಸಿದ್ದಾರೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಅಭಿವೃದ್ಧಿಯನ್ನೇ ಮೂಲಮಂತ್ರವಾಗಿರಿಸಿರುವ ಮೋದಿ, ಇತರ ರಾಜಕಾರಣಿಗಳಿಗಿಂತ ಭಿನ್ನವಾಗಿ ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಸ್ಕಾರ್ಪಿಯೊ ಕಾರನ್ನು ಇಷ್ಟಪಡುತ್ತಾರೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಈಗಾಗಲೇ ನಾವು ಉಲ್ಲೇಖಿಸಿರುವಂತೆಯೇ ವಿಲಾಸಿ ಜೀವನವನ್ನು ಮೋದಿ ವಿರೋಧಿಸುತ್ತಾರೆ. ಅವರ ಪ್ರಕಾರ ಕಡಿಮೆ ಖರ್ಚಿನಲ್ಲಿ ಕೆಲಸ ಆಗಿ ಹೋಗುವುದಾದರೆ ಅದಕ್ಕಾಗಿ ಹೆಚ್ಚು ದುಡ್ಡು ಖರ್ಚು ಮಾಡುವ ಅಗತ್ಯವಾದರೂ ಏನಿದೆ? ಇದೇ ಕಾರಣಕ್ಕಾಗಿ ಮಹೀಂದ್ರ ಸ್ಕಾರ್ಪಿಯೊದಲ್ಲಿ ಪಯಣಿಸುತ್ತಾರೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಪ್ರಸ್ತುತ ಬಹುತೇಕ ಎಲ್ಲ ಕಾರು ಸಂಸ್ಥೆಗಳು ಗುಜರಾತ್‌ನತ್ತ ಮುಖ ಮಾಡುತ್ತಿದ್ದು ಬೃಹತ್ ಹೂಡಿಕೆಯನ್ನು ಮಾಡುತ್ತಿದೆ. ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಉತ್ತಮ ಬೆಂಬಲ ಸಿಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಹಿಂದೊಮ್ಮೆ ಪಶ್ಚಿಮ ಬಂಗಾಳದ ಸಿಂಗೂರ್ ವಿವಾದದ ಕೇಂದ್ರ ಬಿಂದುವಾಗಿದ್ದರಿಂದ ಟಾಟಾ ಮೋಟಾರ್ಸ್ ನ್ಯಾನೋ ಘಟಕಕ್ಕೆ ಗುಜರಾತ್ ಅಭಯ ನೀಡಿತ್ತು. ಹಾಗಿದ್ದರೂ 2002ನೇ ಇಸವಿಯ ಗೋದ್ರಾ ಹಂತ್ಯಾಕಾಂಡವು ಮೋದಿ ಪಾಲಿಗೆ ಕಪ್ಪು ಚುಕ್ಕೆಯಾಗಿಯೇ ಉಳಿದಿದೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಮಹೀಂದ್ರ ಸ್ಕಾರ್ಪಿಯೊ ದೇಶದಲ್ಲಿ ಅತಿ ಹೆಚ್ಚು ಪ್ರಚಾರ ಗಿಟ್ಟಿಸಿಕೊಂಡಿರುವ ಎಸ್‌ಯುವಿ ಕಾರಾಗಿದೆ. ಇದು ಜಾಗತಿಕ ಮಟ್ಟದಲ್ಲಿ ಮಹೀಂದ್ರದಿಂದ ನಿರ್ಮಾಣವಾಗಿರುವ ಮೊದಲ ಎಸ್‌ಯುವಿ ವಾಹನವಾಗಿದೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಭಾರತ ಸೇರಿದಂತೆ ಅಂತರಾಷ್ಟ್ರೀಯ ಮಾರಾಟದಲ್ಲೂ ಸ್ಕಾರ್ಪಿಯೊ ಯಶ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಮಹೀಂದ್ರ ಆಂಡ್ ಮಹೀಂದ್ರ ಕಂಪನಿಯ ಇಂಟೆಗ್ರೇಟಡ್ ಡಿಸೈನ್ ಹಾಗೂ ಉತ್ಪಾದಕ ತಂಡವು (IDAM) ಸ್ಕಾರ್ಪಿಯೊ ವಿನ್ಯಾಸ ತಯಾರಿಸಿವೆ. ವರ್ಷದ ಕಾರು, ವರ್ಷದ ಎಸ್‌ಯುವಿ, ವರ್ಷದ ಅತ್ಯುತ್ತಮ ಕಾರು ಸೇರಿದಂತೆ ಅನೇಕ ಪ್ರಶಸ್ತಿಗಳನ್ನು ಸ್ಕಾರ್ಪಿಯೊ ಬಗಲಿಗೇರಿಸಿಕೊಂಡಿದೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

2002ನೇ ಇಸವಿಯಲ್ಲಿ ಮಹೀಂದ್ರ ಸ್ಕಾರ್ಪಿಯೊ ಮಾರುಕಟ್ಟೆಗೆ ಆಗಮಿಸಿತ್ತು. ಹಾಗೆಯೇ 2006ನೇ ಸಾಲಿನಲ್ಲಿ ಸ್ಕಾರ್ಪಿಯೊ ಅಪ್‌ಗ್ರೇಡ್ ವರ್ಷನ್ ಆಲ್ ನ್ಯೂ ಸ್ಕಾರ್ಪಿಯೊ ಬಿಡುಗೊಡೆಗೊಳಿಸಲಾಗಿತ್ತು. ದೇಶದ ಎಸ್‌ಯುವಿ ಉತ್ಸಾಹಿಗಳಿಗೆ ಮಹೀಂದ್ರದ ಸ್ಕಾರ್ಪಿಯೊ ಉತ್ತಮ ಆಫ್ ರೋಡಿಂಗ್ ಮನರಂಜನೆಯನ್ನು ನೀಡುತ್ತಿದೆ.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಹಾಗೆಯೇ 2007ರಲ್ಲಿ ಸ್ಕಾರ್ಪಿಯೊ ಪಿಕ್ ಅಪ್ ವರ್ಷನ್ ಹಾಗೂ 2008ರಲ್ಲಿ ಸ್ಕಾರ್ಪಿಯೊ 6 ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ಮಿಷನ್ ಗೇರ್ ವರ್ಷನ್ ರಸ್ತೆಗಿಳಿದಿದ್ದವು. 2009ರಲ್ಲಿ ಡ್ಯುಯಲ್ ಏರ್‌ಬ್ಯಾಗ್ ಎಬಿಎಸ್ ತಂತ್ರಜ್ಞಾನವು ಆಳವಡಿಸಲಾಗಿತ್ತು.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಮಹೀಂದ್ರದ ಎಲ್ಲ ಸ್ಕಾರ್ಪಿಯೊ ವೆರಿಯಂಟ್‌ಗಳು ಟು ವೀಲ್ ಡ್ರೈವ್ ಆಯ್ಕೆಯಲ್ಲಿ ಲಭ್ಯವಿದೆ. ಹಾಗಿದ್ದರೂ ವಿಎಲ್‌ಎಕ್ಸ್ ಹಾಗೂ ವಿಎಲ್‌ಎಕ್ಸ್ ಆಟೋಮ್ಯಾಟಿಕ್ ವೆರಿಯಂಟ್ 4 ವೀಲ್ ಡ್ರೈವ್‌ನಲ್ಲಿ ಲಭ್ಯವಿದೆ. 2012ರಲ್ಲಿ 4X4 ವರ್ಷನ್ ಸ್ಕಾರ್ಪಿಯೊ ಎಲ್‌ಎಕ್ಸ್ ವೆರಿಯಂಟ್ ಆಗಮನವಾಗಿತ್ತು.

ಮೋದಿ ಸರಳ ವ್ಯಕ್ತಿತ್ವ ಸಾರುತ್ತಿರುವ ಸ್ಕಾರ್ಪಿಯೊ ಪಯಣ

ಮಹೀಂದ್ರ ಸ್ಕಾರ್ಪಿಯೊ 2.2 ಲೀಟರ್, 4 ಸಿಲಿಂಡರ್ mHawk ಎಂಜಿನ್‌ನಿಂದ ನಿಯಂತ್ರಿಸಲ್ಪಡುತ್ತಿದೆ. ಇದು 120 ಬಿಎಚ್‌ಪಿ ಪವರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. ಇದರ ಯಶಸ್ಸಿನ ಬಳಿಕ 2.6 ಎಲ್ CRDe ಎಂಜಿನ್ ಆಯ್ಕೆ ಕೂಡಾ ಆಳವಡಿಸಲಾಗಿತ್ತು. ಇಂಟಿಯರ್ ಸೇರಿದಂತೆ ಎಕ್ಸ್‌ಟೀರಿಯರ್ ವಿನ್ಯಾಸ ಕೂಡಾ ಆಕರ್ಷಕವಾಗಿದೆ. ಈ 5 ಸೀಟಿನ ಕಾರು ಉತ್ತಮ ಲಗ್ಗೇಜ್ ಸ್ಪೇಸ್ ಹೊಂದಿದ್ದು ದೂರ ಪ್ರಯಾಣಕ್ಕೂ ಯೋಗ್ಯವಾಗಿದೆ. ಪ್ರಮುಖವಾಗಿಯೂ ದೇಶದ ಮಧ್ಯಮ ಕುಟುಂಬವೂ ಇಂದಿಗೂ ಸ್ಕಾರ್ಪಿಯೊವನ್ನು ಹೆಚ್ಚು ಆಶ್ರಯಿಸಿಕೊಂಡಿದೆ.

Most Read Articles

Kannada
English summary
Narendra Modi - The Gujarat Chief Minister is known for his powerful vibrancy. We take a corner side look at Narendra Modi's powerful vibrant Mahindra Scorpio.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X