ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ತಾಂತ್ರಿಕ ತೊಂದರೆಯಿಂದಾಗಿ ಎನ್‍‍ಸಿಸಿಯ ಚಾರ್ಟರ್ ಟ್ರೈನಿಂಗ್ ವಿಮಾನವೊಂದನ್ನು ಹೆದ್ದಾರಿಯಲ್ಲೇ ತುರ್ತು ಲ್ಯಾಂಡಿಂಗ್ ಮಾಡಲಾಗಿದೆ. ವಿಮಾನ ಹೆದ್ದಾರಿಯಲ್ಲಿ ತುರ್ತು ಲ್ಯಾಂಡಿಂಗ್ ಮಾಡಿರುವ ಚಿತ್ರ ಸಖತ್ ವೈರಲ್ ಆಗಿದೆ.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಈ ಘಟನೆಯು ಗುರುವಾರ ಮಧ್ಯಾಹ್ನ ನಡೆದಿದೆ. ನ್ಯಾಷನಲ್ ಕ್ಯಾಡೆಟ್ ಕಾರ್ಪ್ಸ್ ಎನ್‍ಸಿಸಿಯ ಲಘು ತರಬೇತಿ ವಿಮಾನವೊಂದು ದೆಹಲಿಯ ಗಾಜಿಯಾಬಾದ್‍ನ ಸರ್ದಾರ್‍‍ಪುರ್ ಗ್ರಾಮದ ಸಮೀಪದ ಪೆರಿಫೆರಲ್ ಎಕ್ಸ್ ಪ್ರೆಸ್ ಹೈವೇ ಬಳಿ ತುರ್ತು ಭೂಸ್ಪರ್ಶ ಮಾಡಿದೆ. ಇದು ಸಿಂಗಲ್ ಎಂಜಿನ್ ಹೊಂದಿರುವ ಚಾರ್ಟರ್ ಟ್ರೈನಿಂಗ್ ವಿಮಾನವಾಗಿದೆ. ತಾಂತ್ರಿಕ ದೋಷದಿಂದ ಉತ್ತರ ಪ್ರದೇಶ ಮತ್ತು ಹರಿಯಾಣ ಪಟ್ಟಣಗಳ ನಡುವೆ ಇರುವ 135 ಕಿ.ಮೀ ಉದ್ದದ 6 ಪಥದ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ವಿಮಾನವನ್ನು ಲ್ಯಾಂಡಿಂಗ್ ಮಾಡಲಾಗಿದೆ.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಈ ಚಾರ್ಟರ್ ವಿಮಾನವು 2 ಸೀಟರ್ ಝೈನರ್ ಸಿ‍ಹೆಚ್ 701 ಸಿಂಗಲ್ ಎಂಜಿನ್ ಅನ್ನು ಹೊಂದಿದೆ. ಈ ವಿಮಾನದಲ್ಲಿ ತಾಂತ್ರಿಕ ದೋಷದಿಂದ ಎಕ್ಸ್‌ಪ್ರೆಸ್‌ವೇಯ ಎಡ-ಭಾಗದ ಲೇನ್‌ನಲ್ಲಿ ವಿಮಾನವನ್ನು ಲ್ಯಾಂಡ್ ಮಾಡುವಲ್ಲಿ ಪೈಲಟ್ ಯಶ್ವಸಿಯಾಗಿದ್ದಾರೆ.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಪೈಲಟ್‍ಗಳ ಪ್ರಕಾರ ವಿಮಾನದ ರೆಕ್ಕೆ ಮುರಿದ ಕಾರಣ ತುರ್ತಾಗಿ ಸುರಕ್ಷಿತವಾಗಿ ಲ್ಯಾಂಡ್ ಆಗಿದೆ ಎಂದು ಹೇಳಿದರು. ಆದರೆ ಅಲ್ಲಿಯ ಸ್ಥಳೀಯ ಪ್ರತ್ಯಕ್ಷ ದರ್ಶಿಗಳು ವಿಮಾನವು ಲ್ಯಾಂಡಿಂಗ್ ಮಾಡುವ ಮೊದಲು ಒಂದು ಭಾಗ ಅಪಾಯಕಾರಿಯಾಗಿತ್ತು ಎಂದು ಹೇಳಿದ್ದಾರೆ.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಗಮನಾರ್ಹ ವಿಷಯವೆಂದರೆ ವಿಮಾನ ಲ್ಯಾಂಡ್ ಆಗುವ ವೇಳೆಯಲ್ಲಿ ವಿಮಾನದ ಎಡ ಭಾಗದ ರೆಕ್ಕೆಗಳಿಗೆ ಹಾನಿಯಾಗಿದೆ. 2 ಸೀಟಿನ ವಿಮಾನದಲ್ಲಿ ಇಬ್ಬರು ಅನುಭವಿ ವಾಯುಪಡೆಯ ವೃತ್ತಿಪರರು ಇದ್ದರು. ಪೈಲಟ್ ಆಗಿ ಕಮಾಂಡರ್ ಮತ್ತು ಸಹ ಪೈಲಟ್ ಆಗಿ ಗ್ರೂಪ್ ಕ್ಯಾಪ್ಟನ್ ಇದ್ದರು.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಈ ವಿಮಾನವು ಗುರುವಾರ ಮಧ್ಯಾಹ್ನ 1 ಗಂಟೆಗೆ ವಿಮಾನವು ಹೊರಟಿತು ಮತ್ತು ದೆಹಲಿ ಹಿಂಡನ್ ವಾಯುನೆಲೆಯಲ್ಲಿ ಸುಮಾರು 1:45 ಅಥವಾ 2 ಗಂಟೆಗೆ ಲ್ಯಾಂಡ್ ಮಾಡಲು ನಿರ್ಧರಿಸಲಾಗಿತ್ತು. ತುರ್ತು ಲ್ಯಾಂಡಿಂಗ್ ಬಗ್ಗೆ ಭಾರತೀಯ ವಾಯುಪಡೆಯ ಅಧಿಕಾರಿಯೊಬ್ಬರು ಮಾತನಾಡಿ, ಎನ್‍‍ಸಿಸಿ ತನ್ನ ಕಡೆಟ್‍‍ಗಳಿಗೆ ವಿಮಾನ ಚಾಲನೆಯ ಬಗ್ಗೆ ಪ್ರಾಯೋಗಿಕ ತರಬೇತಿ ನೀಡಲು ಬಳಸುತ್ತಿದ್ದ 2 ಸೀಟಿನ ಸಿ‍ಹೆಚ್ 701 ವಿಮಾನವು ಗಾಳಿಯಲ್ಲಿ ಒಂದು ಬದಿಗೆ ತಿರುಗಲು ಪ್ರಾರಂಭಿಸಿತು. ಈ ಕಾರಣದಿಂದಾಗಿ ಪೈಲಟ್‍‍ಗಳು ಲ್ಯಾಂಡ್ ಮಾಡುವುದು ಅನಿವಾರ್ಯವಾಗಿತ್ತು.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಹೆದ್ದಾರಿಯಲ್ಲಿ ವಾಹನಗಳ ದಟ್ಟನೆಯ ನಡುವೆ ಒಂದು ಬದಿಯಲ್ಲಿ ಯಶಸ್ವಿಯಾಗಿ ಲ್ಯಾಂಡ್ ಮಾಡಿರುವುದು ಶ್ಲಾಘನೀಯ ಕಾರ್ಯವಾಗಿದೆ. ಆದರೆ ಸಣ್ಣ ಮಟ್ಟದ ಹಾನಿಯಾಗಿದೆ ಎಂದು ಹೇಳಿದರು. ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರ ಸುಗಮವಾಗಿದೆ, ಸಂಚಾರಕ್ಕೆ ಯಾವುದೇ ಅಡಚಣೆ ಉಂಟಾಗಿಲ್ಲ

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ವಿಮಾನಗಳು ಭಾರತೀಯ ಹೆದ್ದಾರಿ ಅಥವಾ ಎಕ್ಸ್‌ಪ್ರೆಸ್‌ವೇಗೆ ಇಳಿಯುವುದು ಇದೇ ಮೊದಲಲ್ಲ. ತುರ್ತು ಕಾರ್ಯಾಚರಣೆಯ ಸಂದರ್ಭದಲ್ಲಿ ಭಾರತೀಯ ವಾಯುಪಡೆಯು ತರಬೇತಿ ಕಸರತ್ತುಗಳ ಭಾಗವಾಗಿ ಆಗ್ರಾ-ಲಕ್ನೋ ಎಕ್ಸ್‌ಪ್ರೆಸ್ ಹೆದ್ದಾರಿಯಲ್ಲಿ ತನ್ನ ಫೈಟರ್ ಜೆಟ್‍‍ಗಳನ್ನು ಇಳಿಸಿದೆ. ಆದರೆ ಇದು ಎಕ್ಸ್‌ಪ್ರೆಸ್‌ವೇಯಲ್ಲಿ ಸಂಚಾರವನ್ನು ಸ್ಥಗಿತಗೊಳಿಸಿದ ಬಳಿಕ ಜೆಟ್‍‍ಗಳನ್ನು ಇಳಿಸಿರುವುದು ಆಗಿದೆ.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಈ ಈಸ್ಟರ್ನ್ ಪೆರಿಫೆರಲ್ ಎಕ್ಸ್‌ಪ್ರೆಸ್ ವೇ ದೇಶದ ಅತ್ಯುತ್ತಮ ರಸ್ತೆಗಳಲ್ಲಿ ಒಂದಾಗಿದೆ ಮತ್ತು ಈ ರಸ್ತೆ ಉತ್ತರ ಪ್ರದೇಶವನ್ನು ದೆಹಲಿಗೆ ಸಂಪರ್ಕಿಸುತ್ತದೆ. ಇದನ್ನು 2018 ರಲ್ಲಿ ನಿರ್ಮಿಸಲಾಗಿದೆ. ಈ ಘಟನೆಯ ಬಗ್ಗೆ ಎನ್‌ಸಿಸಿ ಕೂಡ ಯಾವುದೇ ಮಾಹಿತಿ ನೀಡಿಲ್ಲ ಮತ್ತು ಇದಕ್ಕೆ ಕಾರಣವನ್ನು ತಿಳಿಸಿಲ್ಲ. ಶೀಘ್ರದಲ್ಲೇ ಈ ಘಟನೆಯ ಬಗ್ಗೆ ಮಾಹಿತಿಯನ್ನು ನೀಡಬಹುದು.

ತಾಂತ್ರಿಕ ತೊಂದರೆಯಿಂದ ಹೆದ್ದಾರಿಯಲ್ಲೇ ಲ್ಯಾಂಡ್ ಆದ ವಿಮಾನ

ಪ್ರಸಿದ್ಧ ಎಕ್ಸ್‌ಪ್ರೆಸ್ ವೇಗಳನ್ನು ಉತ್ತಮ ಗುಣಮಟ್ಟದಲ್ಲಿ ನಿರ್ಮಿಸಲಾಗಿದೆ. ತುರ್ತು ಪರಿಸ್ಥಿತಿಯಲ್ಲಿ ವಾಯುಪಡೆಯ ವಿಮಾನಗಳು ಇಲ್ಲಿ ಲ್ಯಾಂಡ್ ಮಾಡಬಹುದಾಗಿದೆ. ಹಲವಾರು ಯೋಜಿತ ಯೋಜನೆಗಳ ಪ್ರಕಾರ ಈ ರಸ್ತೆಗಳನ್ನು ನಿರ್ಮಿಸಲಾಗಿದೆ.

Most Read Articles

Kannada
English summary
NCC Plane lands on Eastern Peripheral Expressway after emergency. Read in Kananda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X