ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಕಳೆದ ವರ್ಷ ಲಾಕ್‌ಡೌನ್‌ನಿಂದಾಗಿ ದೇಶಾದ್ಯಂತ ವಾಹನ ಸಂಚಾರ ಬಹುತೇಕ ಕಡಿಮೆಯಾಗಿತ್ತು. ಆದರೂ ರಸ್ತೆ ಅಪಘಾತದಲ್ಲಿ ಸುಮಾರು 1.20 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ, ಕಳೆದ ವರ್ಷ ಕೊರೋನಾ ಆತಂಕ, ಲಾಕ್ ಡೌನ್ ಹೊರತಾಗಿಯೂ ಪ್ರತಿದಿನ ಸರಾಸರಿ 328 ಜನರು ತಮ್ಮ ಜೀವವನ್ನು ಕಳೆದುಕೊಂಡಿದ್ದಾರೆ ಎಂದು ಕೇಂದ್ರ ಸರ್ಕಾರ ಮಾಹಿತಿ ನೀಡಿದೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ (NCRB) ನೀಡಿರುವ ವಾರ್ಷಿಕ ಕ್ರೈಮ್ ಇಂಡಿಯಾ ವರದಿ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ 3.92 ಲಕ್ಷ ಮಂದಿ ರಸ್ತೆ ಅಪಘಾತಕ್ಕೆ ಸಂಬಂಧಿಸಿದ ನಿರ್ಲಕ್ಷದಿಂದ ಸಾವನ್ನಪ್ಪಿರುವುದಾಗಿ ಬಹಿರಂಗಪಡಿಸಿದೆ. ಇದರಲ್ಲಿ ಕಳೆದ ವರ್ಷ 1.20 ಲಕ್ಷ ಮಂದಿಯ ಸಾವಿನ ಪ್ರಕರಣಗಳು ದಾಖಲಾಗಿದ್ದರೆ 2019ರಲ್ಲಿ 1.36 ಲಕ್ಷ ಮತ್ತು 2018ರಲ್ಲಿ 1.35 ಲಕ್ಷ ಸಾವಿನ ಪ್ರಕರಣಗಳು ದಾಖಲಾಗಿವೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಇನ್ನು 2018ರಿಂದ 1.35 ಲಕ್ಷ ಹಿಟ್ ಅಂಡ್ ರನ್ ಪ್ರಕರಣಗಳು ದೇಶದಲ್ಲಿ ದಾಖಲಾಗಿರುವುದಾಗಿ ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ NCRB ಮಾಹಿತಿ ನೀಡಿದೆ. 2020ರಲ್ಲಿ 41,196 ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ 47,028 ಮತ್ತು 2018 ರಲ್ಲಿ 47, 504 ಹಿಟ್ ಅಂಡ್ ರನ್ ಪ್ರಕರಣಗಳು ದಾಖಲಾಗಿದ್ದವು. ಕಳೆದ ವರ್ಷದಲ್ಲಿ ಪ್ರತಿದಿನ ಸರಾಸರಿ 112 ಹಿಟ್ ಅಂಡ್ ರನ್" ಪ್ರಕರಣಗಳು ದೇಶಾದ್ಯಂತ ವರದಿಯಾಗಿವೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಸಾರ್ವಜನಿಕ ರಸ್ತೆಯಲ್ಲಿ ವೇಗವಾಗಿ ಅಥವಾ ನಿರ್ಲಕ್ಷ್ಯದ ಚಾಲನೆಯಿಂದ ಕಳೆದ ವರ್ಷ 1.30 ಲಕ್ಷ ಹಾನಿ ಮಾಡಿದ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ 1.60 ಲಕ್ಷ, 2018ರಲ್ಲಿ 1.66 ಲಕ್ಷ ಇದೆ. ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಕರಣಗಳು 2020ರಲ್ಲಿ 85,920, 2019ರಲ್ಲಿ 1.12 ಲಕ್ಷ ಹಾಗೂ 2018ರಲ್ಲಿ 1.08 ಲಕ್ಷ ಇದೆ ಎಂದು ಮಾಹಿತಿ ನೀಡಿದೆ..

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಇನ್ನು ಕಳೆದ ವರ್ಷ ರೈಲು ಅಪಘಾತಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯದಿಂದ 52 ಸಾವಿನ ಪ್ರಕರಣಗಳು ದಾಖಲಾಗಿವೆ. 2019ರಲ್ಲಿ ಈ ಸಂಖ್ಯೆ 55 ಹಾಗೂ 2018ರಲ್ಲಿ 35 ಸಾವಿನ ಪ್ರಕರಣಗಳು ದಾಖಲಾಗಿವೆ ಎಂದು ಬಹಿರಂಗಪಡಿಸಿದ್ದಾರೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಕಳೆದ ವರ್ಷ ದೇಶದಲ್ಲಿ ವೈದ್ಯಕೀಯ ನಿರ್ಲಕ್ಷ್ಯದಿಂದ 133 ಮಂದಿ ಸಾವನ್ನಪ್ಪಿದ್ದಾರೆ ಪ್ರಕರಣಗಳು ದಾಖಲಾಗಿವೆ. 2019 ರಲ್ಲಿ 201 ಮತ್ತು 2018 ರಲ್ಲಿ 218 ಪ್ರಕರಣಗಳು ದಾಖಲಾಗಿವೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ಡೇಟಾ ಬಹಿರಂಗ ಪಡಿಸಿದೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

2020ರಲ್ಲಿ ನಾಗರಿಕ ಸಂಸ್ಥೆಗಳ ನಿರ್ಲಕ್ಷ್ಯದಿಂದ 51 ಸಾವುಗಳು ಸಂಭವಿಸಿದ್ದರೆ, 2019 ರಲ್ಲಿ 147 ಮತ್ತು 2018 ರಲ್ಲಿ 40 ಪ್ರಕರಣಗಳು ವರದಿಯಾಗಿವೆ. ತರ ನಿರ್ಲಕ್ಷ್ಯದಿಂದ ಸಾವುಗಳು 2019 ರಲ್ಲಿ 7,912 ಮತ್ತು 2018 ರಲ್ಲಿ 8,687 ರಷ್ಟಿದ್ದ 2020 ರಲ್ಲಿ 6,367 ಪ್ರಕರಣಗಳು ವರದಿಯಾಗಿವೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಇನ್ನು ಕರೋನಾ ಆತಂಕ, ಲಾಕ್ ಡೌನ್ ಕಾರಣದಿಂದ ಕಳೆದ ವರ್ಷ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರ ವಿರುದ್ಧದ ಅಪರಾಧ, ಕಳ್ಳತನ, ದರೋಡೆ ಪ್ರಕರಣಗಳ ಸಂಖ್ಯೆಯಲ್ಲಿ ಕಡಿಮೆಯಾಗಿರುವುದಾಗಿ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ ಮಾಹಿತಿ ನೀಡಿದೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಇನ್ನು ಕಳೆದ ವರ್ಷದಿಂದ ಜನರು ಸಾರ್ವಜನಿಕ ವಾಹನಗಳ ಬಳಕೆ ಮಾಡುವುದು ಕಡಿಮೆ ಮಾಡಿದ್ದಾರೆ. ಸ್ವಂತ ವಾಹನಗಳನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದಕ್ಕೆ ಉದಾಹರಣೆ, ಇತ್ತೀಚೆಗೆ ಗುಜರಾತ್ ರಾಜ್ಯದ ರಸ್ತೆಗಳಲ್ಲಿ ಸಂಚಾರ ದಟ್ಟಣೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಗುಜರಾತ್‌ನಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ ಎರಡಕ್ಕಿಂತ ಹೆಚ್ಚು ವಾಹನಗಳಿರುವುದೇ ಈ ಸಂಚಾರ ದಟ್ಟಣೆಗೆ ಪ್ರಮುಖ ಕಾರಣ. ಗುಜರಾತ್ ರಾಜ್ಯದಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ 2.25 ವಾಹನಗಳಿವೆ ಎಂದು ವರದಿಗಳಾಗಿದೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಈ ಪ್ರಮಾಣವು ಭಾರತದಲ್ಲಿ ಮೂರನೇ ಅತಿ ಹೆಚ್ಚು. ಇನ್ನು ಮೊದಲ ಎರಡು ಸ್ಥಾನದಲ್ಲಿರುವ ರಾಜ್ಯಗಳು ಯಾವುವು ಎಂಬ ಪ್ರಶ್ನೆ ಉದ್ಭವಿಸಬಹುದು. ಗೋವಾ ರಾಜ್ಯವು ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಗೋವಾದಲ್ಲಿ ಪ್ರತಿ ಕುಟುಂಬಕ್ಕೆ ಸರಾಸರಿ 4.41 ವಾಹನಗಳಿವೆ. ಈ ಪಟ್ಟಿಯಲ್ಲಿ ದೆಹಲಿ ರಾಜ್ಯವು ಎರಡನೇ ಸ್ಥಾನದಲ್ಲಿದೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಗುಜರಾತ್‌ನ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಸಾರಿಗೆಯ ಕೊರತೆಯಿಂದಾಗಿ ಹೆಚ್ಚಿನ ಸಂಖ್ಯೆಯ ವಾಹನಗಳಿವೆ .ಸಾರ್ವಜನಿಕ ಸಾರಿಗೆಯನ್ನು ಅವಲಂಬಿಸುವ ಬದಲು ಜನರು ತಮ್ಮ ಸ್ವಂತ ವಾಹನಗಳನ್ನು ಖರೀದಿಸುತ್ತಿದ್ದಾರೆ ಎಂಬುದು ಪರಿಣಿತರ ಅಭಿಪ್ರಾಯ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಇನ್ನು ಗುಜರಾತ್ ರಾಜ್ಯದಲ್ಲಿ ಪ್ರತಿ 1,000 ಜನರಿಗೆ ಸರಿ ಸುಮಾರು 436 ವಾಹನಗಳಿವೆ. ನೋಂದಾಯಿತ ವಾಹನಗಳ ಸಂಖ್ಯೆಯಲ್ಲಿ ಗುಜರಾತ್ ಭಾರತದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಈ ಪಟ್ಟಿಯಲ್ಲಿ ಮಹಾರಾಷ್ಟ್ರ ರಾಜ್ಯವು ಅಗ್ರಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ 3.95 ಕೋಟಿ ನೋಂದಾಯಿತ ವಾಹನಗಳಿವೆ. ಉತ್ತರ ಪ್ರದೇಶ ರಾಜ್ಯವು ಎರಡನೇ ಸ್ಥಾನದಲ್ಲಿದೆ. ಉತ್ತರ ಪ್ರದೇಶದಲ್ಲಿ 3.83 ಕೋಟಿ ನೋಂದಾಯಿತ ವಾಹನಗಳಿವೆ. ತಮಿಳುನಾಡು ಮೂರನೇ ಸ್ಥಾನದಲ್ಲಿದೆ. ತಮಿಳುನಾಡಿನಲ್ಲಿ 3.36 ಕೋಟಿ ನೋಂದಾಯಿತ ವಾಹನಗಳಿವೆ.

ಲಾಕ್‌ಡೌನ್‌ ನಡುವೆಯೂ ಕಳೆದ ವರ್ಷ ದೇಶದಲ್ಲಿ ರಸ್ತೆ ಅಪಘಾತದಲ್ಲಿ 1.20 ಲಕ್ಷ ಮಂದಿ ಸಾವು

ಕಳೆದ ವರ್ಷ ದೇಶದಲ್ಲಿ ಸಂಭವಿಸಿದ ರಸ್ತೆ ಅಪಘಾತದ ಪ್ರಮಾಣವೇ ಬೆಚ್ಚಿ ಬೀಳಿಸುವಂತಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿ ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುತ್ತಿದೆ. ಒಟ್ಟಿನಲ್ಲಿ ಜನರು ಕರೋನಾ ಆತಂಕದಿಂದ ಸಾರ್ವಜನಿಕ ವಾಹನಗಳಲ್ಲಿ ತೆರಳಲು ಹಿಂದೇಟು ಹಾಕುತ್ತಿದ್ದಾರೆ. ಆದರೆ ರಸ್ತೆ ಅಪಘಾತಗಳು ಹೆಚ್ಚಾಗುತಿದೆ. ಇದರಿಂದ ಜನರು ರಸ್ತೆ ನಿಯಮಗಳನ್ನು ಪಾಲಿಸಿ ನಿಯಮಿತ ವೇಗದಲ್ಲಿ ಹೆಚ್ಚಿನ ಜವಬ್ದಾರಿಯಿಂದ ವಾಹನವನ್ನು ಚಾಲನೆ ಮಾಡಬೇಕು.

Most Read Articles

Kannada
English summary
Ncrb revealed 2020 road accidents data here all details
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X