ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ಬೋಯಿಂಗ್ ತನ್ನ 737 ಮ್ಯಾಕ್ಸ್ ಸರಣಿಯ ಅತಿದೊಡ್ಡ ವಿಮಾನವನ್ನು ವಿನ್ಯಾಸಗೊಳಿಸಿದೆ ಎಂದು ವರದಿಯಾಗಿದೆ. ಕಂಪನಿಯು ಹೊಸ ವಿಮಾನಕ್ಕೆ ಬೋಯಿಂಗ್ 737-10 ಎಂದು ಹೆಸರಿಟ್ಟಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ವಿಮಾನವು ಈಗ ತನ್ನ ಮೊದಲ ಯಾನವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ವಿಮಾನವು ವಾಷಿಂಗ್ಟನ್‌ನ ರೆಂಟನ್ ಫೀಲ್ಡ್‌ನಿಂದ ಬೆಳಿಗ್ಗೆ 10.07ಕ್ಕೆ ಹೊರಟು ಮಧ್ಯಾಹ್ನ 12.38ಕ್ಕೆ ಸಿಯಾಟಲ್‌ಗೆ ಬಂದಿಳಿಯಿತು. ಈ ವಿಮಾನವು ಹಾರಾಟ ನಡೆಸುತ್ತಿರುವುದು ಇದೇ ಮೊದಲು. ಈ ಕಾರಣಕ್ಕೆ ಬೋಯಿಂಗ್ ಈ ಹಾರಾಟವನ್ನು ಆಚರಿಸುತ್ತಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ಈ ವಿಮಾನವನ್ನು ಮುಖ್ಯ ಪೈಲಟ್ ಕ್ಯಾಪ್ಟನ್ ಜೆನ್ನಿಫರ್ ಹೆಂಡರ್ಸನ್ ಚಾಲನೆ ಮಾಡಿದರು. ಇದೊಂದು ಸುಂದರ ಘಟನೆಯಾಗಿದೆ. ಬೋಯಿಂಗ್ 737-10 ಎಲ್ಲಾ ರೀತಿಯಲ್ಲೂ ಉತ್ತಮ ಪ್ರದರ್ಶನ ನೀಡಿತು ಎಂದು ಅವರು ವಿಮಾನ ಚಾಲನೆ ನಂತರ ಹೇಳಿದರು.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ವಿಮಾನಕ್ಕೆ ಸೇರಿಸಲಾದ ಹೊಸ ತಂತ್ರಜ್ಞಾನಗಳು ವಿಮಾನವನ್ನು ನಿಯಂತ್ರಿಸಲು ಹಾಗೂ ಉತ್ತಮ ನಿಯಂತ್ರಣವನ್ನು ಒದಗಿಸಲು ನೆರವಾಗುತ್ತಿವೆ ಎಂದು ಅವರುಹೇಳಿದರು. ಬೋಯಿಂಗ್ 737-10, 230 ಸೀಟುಗಳನ್ನು ಹೊಂದಿರುವ ಅತಿದೊಡ್ಡ ವಿಮಾನವಾಗಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ಈ ವಿಮಾನವನ್ನು ಈಗ ಬಳಕೆಯಲ್ಲಿರುವ 177ರಿಂದ 220 ಸೀಟುಗಳನ್ನು ಹೊಂದಿರುವ 737-9 ವಿಮಾನ ಹಾಗೂ 185 ರಿಂದ 240 ಸೀಟುಗಳನ್ನು ಹೊಂದಿರುವ ಎ 1851 ನಿಯೋ ನಡುವೆ ಹೊಂದಿಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ಈ ಹೊಸ ವಿಮಾನವು ಜೆಟ್‌ಗಳಂತೆಯೇ 3,300 ನಾಟಿಕಲ್ ಮೈಲುಗಳಷ್ಟು (ಗಂಟೆಗೆ 6,100 ಕಿಮೀ) ವೇಗದಲ್ಲಿ ಚಲಿಸಬಲ್ಲದು. 737-10 ವಿಮಾನವನ್ನು ಇಂಧನ ಆರ್ಥಿಕತೆ, ಕಡಿಮೆ ಮಾಲಿನ್ಯ ಹೊರಸೂಸುವಿಕೆ ಹಾಗೂ ಶಬ್ದ ಮಾನ್ಯತೆ ಸಾಮರ್ಥ್ಯಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ಈ ಹೊಸ ದೈತ್ಯ ವಿಮಾನವು ಈಗ ಬಳಕೆಯಲ್ಲಿರುವ ವಿಮಾನಕ್ಕಿಂತ 14%ನಷ್ಟು ಕಡಿಮೆ ಮಾಸ್ ಹಾಗೂ 50%ನಷ್ಟು ಕಡಿಮೆ ಸೌಂಡ್ ಮಾಸ್ ಅನ್ನು ಹೊರಸೂಸುತ್ತದೆ. ಈ ವಿಮಾನವು ಇನ್ನೂ ಹಲವಾರು ಪರೀಕ್ಷೆಗಳಿಗೆ ಒಳಪಡಬೇಕಾಗಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ಈಗ ಮೊದಲ ಹಂತದ ಪರೀಕ್ಷೆಗೆ ಒಳಪಟ್ಟಿದೆ. ಬೋಯಿಂಗ್ 737-10 ವಿಮಾನವು 2023ರಿಂದ ಸೇವೆಗೆ ಸಿದ್ದವಾಗುವ ನಿರೀಕ್ಷೆಗಳಿವೆ. ಕಂಪನಿಯು ಈ ಬಗ್ಗೆ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ಈ ಬಗ್ಗೆ ಮಾತನಾಡಿರುವ ಕಂಪನಿಯ ಅಧ್ಯಕ್ಷ ಹಾಗೂ ಸಿಇಒ ಸ್ಟಾನ್ ಡೀಲ್, ನಮ್ಮ ತಂಡವು ವಿಶ್ವದ ಅತ್ಯುತ್ತಮ ಗುಣಮಟ್ಟದ ಮತ್ತು ವಿಶ್ವಾಸಾರ್ಹ ವಿಮಾನವನ್ನು ವಿನ್ಯಾಸಗೊಳಿಸಲು ಬದ್ಧವಾಗಿದೆ.

ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ ಬೋಯಿಂಗ್ 737-10 ವಿಮಾನ

ವಿಮಾನವು ಹೆಚ್ಚು ವಿಶಾಲವಾಗಿದ್ದು, ಹೆಚ್ಚು ಇಂಧನ ದಕ್ಷತೆ ಹಾಗೂ ಸಹ ಪ್ರಯಾಣಿಕರಿಗೆ ಅನಾನುಕೂಲವಾಗದಂತೆ ವಿನ್ಯಾಸಗೊಳಿಸಲಾಗಿದೆ ಎಂದು ಹೇಳಿದರು. ಈ ವಿಮಾನವು ಅತ್ಯುತ್ತಮ ವಿಮಾನವಾಗುವ ನಿರೀಕ್ಷೆಗಳಿವೆ.

Most Read Articles

Kannada
English summary
New Boeing 737-10 plane successfully completes first flight. Read in Kannada.
Story first published: Tuesday, June 22, 2021, 13:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X