ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ರೆಫ್ರಿಜರೇಟರ್‌ಗಳನ್ನು ಹೊಂದಿರುವ ಹೈಸ್ಪೀಡ್ ರೈಲಿನ ಪ್ರಯಾಣವಾಗಲಿ ಅಥವಾ ಸಾಮಾನ್ಯ ಸ್ಥಳೀಯ ಎಲೆಕ್ಟ್ರಿಕ್ ರೈಲಿನ ಪ್ರಯಾಣವಾಗಿರಲಿ ರೈಲು ಪ್ರಯಾಣವು ಯಾವಾಗಲೂ ಒಂದು ರೀತಿಯ ವಿಶಿಷ್ಟ ಅನುಭವವನ್ನು ನೀಡುತ್ತದೆ.

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ರೈಲು ಸೇವೆಯನ್ನು ಸುಧಾರಿಸುವ ನಿಟ್ಟಿನಲ್ಲಿ ರೈಲ್ವೆ ಇಲಾಖೆಯು ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇಂತಹ ಕ್ರಮಗಳ ಭಾಗವಾಗಿ ರೈಲ್ವೆ ಇಲಾಖೆಯು ಹೊಸ ಮಧ್ಯಮ ವೇಗದ ಡಬಲ್ ಡೆಕ್ಕರ್ ರೈಲನ್ನು ಪರಿಚಯಿಸಲು ತಯಾರಿ ನಡೆಸುತ್ತಿದೆ.

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ರೈಲ್ವೆ ಮಂಡಳಿಯ ಪ್ರಕಾರ, ಹೊಸ ಡಬಲ್ ಡೆಕ್ಕರ್ ರೈಲು ಗರಿಷ್ಠ 160 ಕಿ.ಮೀ ವೇಗದಲ್ಲಿ ಚಲಿಸಲಿದೆ. ಪ್ರತಿ ಕಂಪಾರ್ಟ್'ಮೆಂಟಿನಲ್ಲಿ ಮೇಲಿನ ಡೆಕ್‌ನಲ್ಲಿ ಕೂರುವ 50 ಜನರು ಸೇರಿದಂತೆ 120 ಪ್ರಯಾಣಿಕರು ಕುಳಿತುಕೊಳ್ಳಬಹುದು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ಈ ಹೊಸ ಡಬಲ್ ಡೆಕ್ಕರ್ ರೈಲುಗಳನ್ನು ಕಪುರ್ಥಾಲಾದಲ್ಲಿರುವ ರೈಲು ಕೋಚ್ ಫ್ಯಾಕ್ಟರಿಯಲ್ಲಿ ತಯಾರಿಸಲಾಗುತ್ತಿದೆ. ರೈಲ್ವೆ ಮಂಡಳಿಯ ಪ್ರಕಾರ, ಹೊಸ ಕಂಪಾರ್ಟ್'ಮೆಂಟಿನಲ್ಲಿ ಒಂದು ಬದಿಯಲ್ಲಿ 16 ಸೀಟುಗಳಿದ್ದರೆ, ಮತ್ತೊಂದು ಬದಿಯಲ್ಲಿ 6 ಸೀಟುಗಳಿರಲಿವೆ.

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ಈ ಬೋಗಿಗಳನ್ನು ವಾಣಿಜ್ಯ ಸೇವೆಗೆ ಸೇರಿಸುವ ಮೊದಲು ಹೆಚ್ಚಿನ ಪರೀಕ್ಷೆಗಳಿಗಾಗಿ ಲಕ್ನೋದಲ್ಲಿರುವ ರಿಸರ್ಚ್ ಅಂಡ್ ಡಿಸೈನ್ ಸಂಸ್ಥೆಗೆ ಕಳುಹಿಸಲಾಗುವುದು ಎಂದು ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ಸ್ವಲ್ಪ ಹೆಚ್ಚು ವಿಸ್ತಾರವಾಗಿರುವ ಈ ಹೊಸ ಡಬಲ್ ಡೆಕ್ಕರ್ ಬೋಗಿಗಳು ಜಿಪಿಎಸ್ ಆಧಾರಿತ ಪ್ರಯಾಣಿಕರ ಮಾಹಿತಿ ವ್ಯವಸ್ಥೆ, ವಾರ್ಡ್ ರೋಬ್, ಮೊಬೈಲ್ ಹಾಗೂ ಲ್ಯಾಪ್‌ಟಾಪ್ ಚಾರ್ಜಿಂಗ್ ಪಾಯಿಂಟ್, ಎಲ್ಇಡಿ ಗುಣಮಟ್ಟದ ಡಿಪಾರ್ಚರ್ ಹಾಗೂ ಅರೈವಲ್ ಬೋರ್ಡ್'ಗಳನ್ನು ಹೊಂದಿರಲಿವೆ.

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ಆಟೋಮ್ಯಾಟಿಕ್ ಡೋರುಗಳನ್ನು ಹೊಂದಿರುವ ಈ ಡಬಲ್ ಡೆಕ್ಕರ್ ಬೋಗಿಗಳೊಳಗೆ ಪ್ರವೇಶಿಸಿದಾಗ ನಮ್ಮ ಗಮನ ಸೆಳೆಯುವ ಸಂಗತಿಯೆಂದರೆ ಕ್ಯಾಂಟೀನ್. ಭಾರತದಲ್ಲಿ ಆರ್'ಸಿಎಫ್ ಮಾತ್ರ ಈ ರೀತಿಯ ಡಬಲ್ ಡೆಕ್ಕರ್ ರೈಲುಗಳನ್ನು ತಯಾರಿಸುವ ಏಕೈಕ ಘಟಕವಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ಈ ಘಟಕವು 1990ರಿಂದ ಎಸಿ ಇಲ್ಲದ ಐಸಿಎಫ್ ಆಕಾರದ ಡ್ಯುಯಲ್-ಪ್ಲಾಟ್‌ಫಾರಂ ಬೋಗಿಗಳನ್ನು ಉತ್ಪಾದಿಸುತ್ತಿದೆ. ಈ ಘಟಕವು 2010ರ ಮಾರ್ಚ್ ನಲ್ಲಿ 130 ಕಿ.ಮೀ ವೇಗದಲ್ಲಿ ಸಾಗುವ ಎಸಿ ಹೊಂದಿರುವ ಮೊದಲ ಡ್ಯುಯಲ್-ಬೋಗಿಗಳನ್ನು ಬಿಡುಗಡೆಗೊಳಿಸಿತು.

ಹೊಸ ಡಬಲ್ ಡೆಕ್ಕರ್ ರೈಲು ಸೇವೆ ನೀಡಲು ಮುಂದಾದ ರೈಲ್ವೆ ಇಲಾಖೆ

ನಂತರ ಈ ಘಟಕವು 2019ರ ಮಾರ್ಚ್ ತಿಂಗಳಿನಲ್ಲಿ ಉದಯ್ ಡಬಲ್ ಡೆಕ್ ಬೋಗಿಗಳನ್ನು ಹೆಚ್ಚುವರಿ ಫೀಚರ್'ಗಳೊಂದಿಗೆ ತಯಾರಿಸಿತು.

Most Read Articles

Kannada
English summary
New double decker trains to be introduced soon. Read in Kannada.
Story first published: Sunday, November 22, 2020, 10:55 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X