ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಪ್ರಪಂಚದಲ್ಲಿರುವ ದೊಡ್ಡ ಕಂಪನಿಗಳಲ್ಲಿ ಹಲವು ಕಂಪನಿಗಳು ಸಣ್ಣ ಪುಟ್ಟ ಗ್ಯಾರೇಜ್‍‍ಗಳಲ್ಲಿ ಶುರುವಾದವುಗಳಾಗಿವೆ. ದೈತ್ಯ ಕಾರ್ಪೋರೇಟ್ ಕಂಪನಿಗಳಾದ ಆಪಲ್, ಗೂಗಲ್ ಹಾಗೂ ಹೆಚ್‍‍ಪಿಯಂತಹ ಕಂಪನಿಗಳು ಸಣ್ಣ ಪುಟ್ಟ ಗ್ಯಾರೇಜ್‍‍ಗಳಲ್ಲಿ ಶುರುವಾಗಿ ಈಗ ಸಾವಿರಾರು ಕೋಟಿಗಳ ವ್ಯವಹಾರವನ್ನು ನಡೆಸುತ್ತಿವೆ.

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಈಗ ಮತ್ತೊಂದು ಗ್ಯಾರೇಜ್‍‍ನಲ್ಲಿ ಮೂರು ಜನ ಇಸ್ರೇಲಿಗರು ಚಿಕ್ಕ ಉದ್ಯಮವನ್ನು ನಡೆಸುತ್ತಿದ್ದಾರೆ. ಅಮೇರಿಕಾದ ಫ್ಲೋರಿಡಾದ ಮಿಯಾಮಿಯಲ್ಲಿರುವ ಗ್ಯಾರೇಜ್‍‍ನಲ್ಲಿ ಈ ಉದ್ಯಮವನ್ನು ನಡೆಸಲಾಗುತ್ತಿದೆ. ಈ ಮೂವರ ತಂಡವು ಹೊಸ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದೆ. ಈ ಮೂಲಕ ಗ್ಯಾರೇಜ್‍‍ನಲ್ಲಿ ಶುರುವಾದ ಸ್ಟಾರ್ಟ್ ಅಪ್ ಗುಂಪಿಗೆ ಸೇರಲು ಈ ಕಂಪನಿಯು ತಯಾರಾಗಿದೆ.

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಮೇಮಾನ್ ರಿಸರ್ಚ್, ಎಲ್ಎಲ್‍‍ಸಿ ಎಂದು ಕರೆಯಲಾಗುವ ಈ ಕಂಪನಿಯು 70% ನೀರು ಹಾಗೂ 30% ಎಥೆನಾಲ್ ಅಥವಾ ಇನ್ನಾವುದೇ ಆಲ್ಕೋಹಾಲ್ ಸಂಯೋಜನೆಯೊಂದಿಗೆ ಚಲಿಸುವ ಸಾಂಪ್ರದಾಯಿಕ ಪಿಸ್ಟನ್ ಎಂಜಿನ್ ಅನ್ನು ಅಭಿವೃದ್ಧಿಪಡಿಸಿದೆ.

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಇದಕ್ಕೆ ಯಾವುದೇ ಗ್ಯಾಸೋಲಿನ್ ಅಥವಾ ಡೀಸೆಲ್‍‍ನ ಅಗತ್ಯವಿಲ್ಲ. ಈ ಕ್ರಾಂತಿಕಾರಿ ವ್ಯವಸ್ಥೆಯನ್ನು ಬಳಸಿ, ಅಸ್ತಿತ್ವದಲ್ಲಿರುವ ಎಂಜಿನ್ ವಿನ್ಯಾಸಗಳನ್ನು ಅತ್ಯಾಧುನಿಕ ಮಾರ್ಪಾಡುಗಳೊಂದಿಗೆ ಸರಳಗೊಳಿಸಿಕೊಂಡು ಇಂಧನ ವೆಚ್ಚವನ್ನು 50%ನಷ್ಟು ಉಳಿಸಬಹುದಾಗಿದೆ.

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಈ ಎಂಜಿನ್ ಗ್ಯಾಸೋಲಿನ್ ಅಥವಾ ಡೀಸೆಲ್‍‍ಗಿಂತ ಕಡಿಮೆ ಮಾಲಿನ್ಯವನ್ನು ಹೊರಸೂಸಿ, ಗ್ಯಾಸೋಲಿನ್‍‍ಗಿಂತ 60% ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸುತ್ತದೆ. ಮೇಮಾನ್ ಇಲ್ಲಿಯವರೆಗೆ ಕಾರು, ಜನರೇಟರ್ ಹಾಗೂ ವಿವಿಧ ಎಂಜಿನ್ ಸೇರಿದಂತೆ ನಾಲ್ಕು ಆಪರೇಟಿಂಗ್ ಮೂಲಮಾದರಿಗಳನ್ನು ನಿರ್ಮಿಸಿದೆ.

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಕಂಪನಿಯು ತನ್ನ ಗ್ಯಾರೇಜ್ ಆಧಾರಿತ ಮೂಲವನ್ನು ಮೀರಿ, ಸಂಶೋಧನಾ ಪ್ರಯೋಗಾಲಯದ ಸೌಲಭ್ಯವಾಗಿ ಬೆಳೆದಿರುವ ಸ್ಟಾರ್ಟ್ ಅಪ್ ಕಂಪನಿಯಾಗಿದೆ. ಮೇಮಾನ್ ಪ್ರತಿಭಾವಂತ ಸಂಶೋಧಕ, ಎಂಜಿನಿಯರ್ ಹಾಗೂ ಮಾಸ್ಟರ್ ಮೆಕ್ಯಾನಿಕ್, 81 ವರ್ಷದ ಯೆಹುಡಾ ಶ್ಮುಯೆಲಿ ಅವರ ಕನಸಿನ ಕೂಸು.

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಇವರ ಈ ಯೋಜನೆಗೆ ಇವರ ಪುತ್ರರಾದ ಈಟನ್ ಹಾಗೂ ಡೊರೊನ್ ಅವರ ಜೊತೆಗೆ, ಜೋರ್ಡಾಚೆ ಎಂಟರ್‌ಪ್ರೈಸಸ್‌ನ ಸ್ಥಾಪಕ ಹಾಗೂ ಅಧ್ಯಕ್ಷ ಜೋ ನಕಾಶ್ ಸೇರಿದಂತೆ ಪ್ರಭಾವಶಾಲಿ ಕಾರ್ಯನಿರ್ವಾಹಕ ನಿರ್ವಹಣಾ ತಂಡದವರು ಕೈ ಜೋಡಿಸಿದ್ದಾರೆ.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಕಂಪನಿಯ ಅಧ್ಯಕ್ಷ ಹಾಗೂ ಇಸ್ರೇಲ್‌ನ ರಾಫೆಲ್ ಆರ್ಮಾಮೆಂಟ್ ಡೆವಲಪ್‍‍ಮೆಂಟ್ ಅಥಾರಿಟಿಯ ಮಾಜಿ ಅಧ್ಯಕ್ಷ ಹಾಗೂ ಸಿಇಒ ಯೆಡಿಡಿಯಾ ಯಾರಿ, ಅಧ್ಯಕ್ಷರ ಸಮ್ಮೇಳನದ ಸಿಇಒ ಹಾಗೂ ಕಾರ್ಯನಿರ್ವಾಹಕ ಉಪಾಧ್ಯಕ್ಷ ಮಾಲ್ಕಮ್ ಹೊಯೆನ್ಲೈನ್ ಹಾಗೂ ಇನ್ನಿತರ ಪ್ರಖ್ಯಾತ ವ್ಯಕ್ತಿಗಳು ಮೇಮಾನ್‍‍ಗೆ ಬೆಂಬಲ ನೀಡುತ್ತಿದಾರೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ಮೇಮಾನ್‌ನ ತಂತ್ರಜ್ಞಾನವು ಪ್ರಯಾಣಿಕರ ಕಾರು, ಟ್ರಕ್‌, ಲೋಕೋಮೋಟಿವ್‌ಗಳು ಹಾಗೂ ಹಡಗುಗಳವರೆಗೆ ಸಾರಿಗೆ ಜಗತ್ತಿನಲ್ಲಿ ಕ್ರಾಂತಿಯುಂಟುಮಾಡಲು ಸಹಕಾರಿಯಾಗಲಿದೆ. ಮೇಮಾನ್‌ ತಂತ್ರಜ್ಞಾನವು ಹಸಿರು ಹಾಗೂ ಪರಿಸರ ಸ್ನೇಹಿಯಾಗಿದೆ.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಡೀಸೆಲ್ ಹಾಗೂ ಗ್ಯಾಸೋಲಿನ್ ಎಂಜಿನ್‌ಗಳಂತಲ್ಲದೆ, ಮೇಮಾನ್‌ನ ತಂತ್ರಜ್ಞಾನವು ಎಲ್ಲಾ ಸಲ್ಫರ್ ಆಕ್ಸೈಡ್‌ ಹಾಗೂ ಸಾರಜನಕ ಆಕ್ಸೈಡ್‌ಗಳ ಹೊರಸೂಸುವಿಕೆಯನ್ನು ತೆಗೆದುಹಾಕಿ ವಾಯುಮಾಲಿನ್ಯವನ್ನು ಕಡಿಮೆ ಮಾಡುತ್ತದೆ.

ಪರ್ಯಾಯ ಇಂಧನವನ್ನು ಅಭಿವೃದ್ಧಿಪಡಿಸುವಾಗ ಎದುರಾಗುವ ಮುಖ್ಯ ಸವಾಲುಗಳಲ್ಲಿ ಒಂದು ಹೊಸ ಸಾಧನವನ್ನು ಉತ್ಪಾದಿಸಲು ಬೇಕಾಗಿರುವ ಮೂಲಸೌಕರ್ಯಗಳ ವೆಚ್ಚವು ಹೆಚ್ಚಿನ ಪ್ರಮಾಣದಲ್ಲಿರುತ್ತದೆ ಎಂದು ಈಟನ್ ವಿವರಿಸುತ್ತಾರೆ.

ನೀರು ಮತ್ತು ಆಲ್ಕೋಹಾಲ್‍‍ನಿಂದ ಚಲಿಸಲಿದೆ ಈ ಎಂಜಿನ್..!

ತಮ್ಮ ನೀರು ಹಾಗೂ ಎಥೆನಾಲ್ ಆಧಾರಿತ ಇಂಧನ ತಂತ್ರಜ್ಞಾನವನ್ನು ಪ್ರಯಾಣಿಕರ ಕಾರುಗಳಲ್ಲಿ ಅಳವಡಿಸುವುದಾಗಿ ಈಟನ್ ತಿಳಿಸಿದ್ದಾರೆ. ವಾಹನ ಉದ್ಯಮವು ಎಲೆಕ್ಟ್ರಿಕ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುತ್ತಿರುವುದರಿಂದ ಇದನ್ನು ಅಳವಡಿಸಲು ಸಾಕಷ್ಟು ಸಮಯ ಬೇಕಾಗುತ್ತದೆ ಎಂತು ಈಟನ್ ಹೇಳಿದ್ದಾರೆ.

Source: jpost

Most Read Articles

Kannada
English summary
ISRAELI DEVELOPS PISTON ENGINE THAT RUNS ON WATER, ALCOHOL - Read in Kannada
Story first published: Monday, October 28, 2019, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X