ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಮಹೀಂದ್ರಾ ಕಂಪನಿಯು ತನ್ನ ಹೊಸ ಥಾರ್ ಎಸ್‌ಯುವಿಯನ್ನು ಶೀಘ್ರದಲ್ಲಿಯೇ ದೇಶಿಯ ಮಾರುಕಟ್ಟೆಯಲ್ಲಿ ಬಿಡುಗಡೆಗೊಳಿಸಲಿದೆ. ಈ ಎಸ್‌ಯುವಿಯ ಬಿಡುಗಡೆಯನ್ನು ಕಾರು ಉತ್ಸಾಹಿಗಳು ಎದುರು ನೋಡುತ್ತಿದ್ದಾರೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಸಿನಿಮಾ ನಟರು ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈ ಎಸ್‌ಯುವಿಯ ಬಿಡುಗಡೆಯ ಬಗ್ಗೆ ಉತ್ಸುಕರಾಗಿದ್ದಾರೆ. ಹೊಸ ಥಾರ್ ಎಸ್‌ಯುವಿಯು ದೇಶದೆಲ್ಲೆಡೆ ಹೈಪ್ ಸೃಷ್ಟಿಸಿದೆ. ಆಟೋಮೊಬೈಲ್ ಆಧಾರಿತ ಸುದ್ದಿ ಸಂಸ್ಥೆಗಳು ಸಹ ಹೊಸ ಥಾರ್ ಎಸ್‌ಯುವಿಯ ಬಗೆಗೆ ಹೆಚ್ಚು ಸುದ್ದಿಗಳನ್ನು ಪ್ರಕಟಿಸುತ್ತಿವೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಬೈಕ್ ವಿಥ್ ಗರ್ಲ್ ಎಂಬ ಯೂಟ್ಯೂಬ್ ಚಾನೆಲ್ ಆಂಕರ್, ತಮ್ಮ ಚಾನೆಲ್‌ಗಾಗಿ ಹೊಸ ಥಾರ್ ಎಸ್‌ಯುವಿಯ ಬಗ್ಗೆ ವಿವರಣೆ ನೀಡುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಸಾಗುತ್ತಿದ್ದ ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನು, ಥಾರ್ ಎಸ್‌ಯುವಿಯನ್ನು ನೋಡಿದ ತಕ್ಷಣ ತನ್ನ ಕಾರನ್ನು ನಿಲಿಸಿದ್ದಾನೆ.

MOST READ:ಒಂದು ವರ್ಷದಿಂದ ಚಲಿಸಿದರೂ ಇನ್ನೂ ಗುರಿ ಮುಟ್ಟದ ಟ್ರಕ್

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಕಾರಿನಿಂದ ಹೊರಬಂದ ಯುವಕ ಥಾರ್ ಎಸ್‌ಯುವಿಯನ್ನು ಬೆರಗಿನಿಂದ ನೋಡಿದ್ದಾನೆ. ಯುವಕನ ಈ ವರ್ತನೆಯು ಯೂಟ್ಯೂಬ್ ಚಾನೆಲ್‌ ಆಂಕರ್ ಸೇರಿದಂತೆ ಅಲ್ಲಿದ್ದ ಎಲ್ಲರಿಗೂ ಆಶ್ಚರ್ಯವನ್ನುಂಟು ಮಾಡಿದೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ವಿಶ್ವದ ಅತ್ಯಂತ ದುಬಾರಿ ಹಾಗೂ ಶಕ್ತಿಶಾಲಿ ಕಾರುಗಳಲ್ಲಿ ಒಂದಾದ ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನು ಥಾರ್ ಎಸ್‌ಯುವಿಯ ಬಗ್ಗೆ ಉತ್ಸಾಹ ತೋರಿದ್ದೆ ಇದಕ್ಕೆ ಕಾರಣ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಈ ವಿಷಯವನ್ನು ಆ ಆಂಕರ್ ತಮ್ಮ ಟ್ವಿಟರ್ ಖಾತೆಯ ಮೂಲಕ ಆನಂದ್ ಮಹೀಂದ್ರಾರವರಿಗೆ ತಿಳಿಸಿದ್ದಾರೆ. ಈ ವೀಡಿಯೊ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮಹೀಂದ್ರಾ ಥಾರ್, ಲ್ಯಾಂಬೊರ್ಗಿನಿ ಹುರಾಕನ್ ಮಾಲೀಕರನ್ನು ಮಾತ್ರವಲ್ಲದೆ ಕಾರು ಉತ್ಸಾಹಿಗಳನ್ನು ತನ್ನತ್ತ ಆಕರ್ಷಿಸುತ್ತಿದೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಈ ವೀಡಿಯೊವನ್ನು ಹೋಸ್ಟ್ ಮಾಡುತ್ತಿರುವ ಆಂಕರ್ ಕೂಡ ಹೊಸ ಮಹೀಂದ್ರಾ ಥಾರ್ ಬಗೆ ಆಕರ್ಷಿತರಾಗಿದ್ದಾರೆ. ವೀಡಿಯೊದಲ್ಲಿ ಈ ಬಗ್ಗೆ ಅವರು ಪದೇ ಪದೇ ಪ್ರಸ್ತಾಪಿಸುವುದನ್ನು ಕಾಣಬಹುದು.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಮಹೀಂದ್ರಾ ಕಂಪನಿಯು, ಹೊಸ ಥಾರ್ ಎಸ್‌ಯುವಿಯನ್ನು ಹಳೆಯ ಥಾರ್ ಗಿಂತ ವಿಭಿನ್ನವಾಗಿ ಅಭಿವೃದ್ಧಿಪಡಿಸಿದೆ. ಇದಕ್ಕಾಗಿ ಹೊಸ ಚಾಸಿಸ್ ಕಾನ್ಫಿಗರೇಷನ್ ಬಳಸಲಾಗಿದೆ. ಇದೇ ಕಾನ್ಫಿಗರೇಷನ್ ಅನ್ನು ಹೊಸ ತಲೆಮಾರಿನ ಸ್ಕಾರ್ಪಿಯೋದಲ್ಲಿ ಬಳಸಲಾಗುವುದು. ಈ ಕಾರುಗಳು ಆಧುನಿಕ ಲುಕ್ ಹೊಂದಿವೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ತನ್ನ ವಿಶಿಷ್ಟ ಫೀಚರ್ ಗಳಿಂದಾಗಿ ಹೊಸ ಥಾರ್ ಎಲ್ಲರನ್ನೂ ಆಕರ್ಷಿಸುತ್ತಿದೆ. ಹೊಸ ಥಾರ್ ನ ಬೆಲೆಯನ್ನು ಇನ್ನೂ ಬಹಿರಂಗಪಡಿಸಿಲ್ಲ. ಅಕ್ಟೋಬರ್ 2ರಂದು ಥಾರ್ ಎಸ್‌ಯುವಿಯ ಬೆಲೆಯನ್ನು ಪ್ರಕಟಿಸುವುದಾಗಿ ಮಹೀಂದ್ರಾ ಕಂಪನಿಯು ತಿಳಿಸಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಹೊಸ ಮಹೀಂದ್ರಾ ಥಾರ್ ಎಸ್‌ಯುವಿಯನ್ನು ಪೆಟ್ರೋಲ್ ಹಾಗೂ ಡೀಸೆಲ್ ಎಂಜಿನ್ ಗಳಲ್ಲಿ ಮಾರಾಟ ಮಾಡಲಾಗುವುದು. ಈ ಎರಡೂ ಎಂಜಿನ್ ಗಳು 4x4 ಟ್ರಾನ್ಸ್ ಮಿಷನ್ ಸಿಸ್ಟಂ ಹಾಗೂ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಯನ್ನು ಹೊಂದಿವೆ.

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕ ಮಾತ್ರವಲ್ಲದೆ ಹಳೆಯ ತಲೆಮಾರಿನ ಥಾರ್ ಹೊಂದಿರುವವರು ಸಹ ತಮ್ಮ ಕಾರುಗಳನ್ನು ನಿಲ್ಲಿಸಿ ಹೊಸ ಥಾರ್ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಲ್ಯಾಂಬೊರ್ಗಿನಿ ಹುರಾಕನ್ ಕಾರು ಮಾಲೀಕನಿಗೂ ಮೋಡಿ ಮಾಡಿದ ಹೊಸ ಥಾರ್

ಲ್ಯಾಂಬೊರ್ಗಿನಿ ಹುರಾಕನ್ ಕಾರಿನ ಮಾಲೀಕ ಹೊಸ ಥಾರ್ ಎಸ್‌ಯುವಿಯನ್ನು ಹಲವು ಕಾಲದವರೆಗೆ ಬೆರಗಿನಿಂದ ನೋಡಿ, ಆಂಕರ್ ಬಳಿ ಹೊಸ ಥಾರ್ ಬಗೆಗೆಸಂಬಂಧಿಸಿದ ಹಲವಾರು ಪ್ರಶ್ನೆಗಳನ್ನು ಕೇಳಿದ್ದಾನೆ.

Most Read Articles

Kannada
English summary
New Mahindra Thar attracts Lamborghini Huracan driver. Read in Kannada.
Story first published: Friday, September 18, 2020, 15:04 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X