ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ರಸ್ತೆ ಅಪಘಾತಗಳಿಗೆ ಮುಖ್ಯ ಕಾರಣ. ಕೇಂದ್ರ ಸರ್ಕಾರವು ರಸ್ತೆ ಅಪಘಾತಗಳನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ. ಇದರಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯ ಜಾರಿಯೂ ಒಂದು.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು ನಿಯಮಗಳನ್ನು ಪಾಲಿಸುವಂತಾಗಲಿ ಎಂಬ ಕಾರಣಕ್ಕೆ ಕೇಂದ್ರ ಸರ್ಕಾರವು ನಿಯಮ ಉಲ್ಲಂಘಿಸಿದಾಗ ವಿಧಿಸಲಾಗುವ ದಂಡದ ಪ್ರಮಾಣವನ್ನು ಏರಿಕೆ ಮಾಡಿದೆ. ಈ ಏರಿಕೆಯು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ದಂಡದ ಪ್ರಮಾಣವು ವಿಪರೀತವಾಗಿ ಏರಿಕೆಯಾಗಿರುವ ಕಾರಣಕ್ಕೆ, ದಂಡಕ್ಕೆ ಹೆದರಿ ವಾಹನ ಸವಾರರು ಸಂಚಾರಿ ನಿಯಮಗಳನ್ನು ಪಾಲಿಸುತ್ತಿದ್ದಾರೆ. ಇನ್ಶೂರೆನ್ಸ್ ನವೀಕರಿಸಿಕೊಳ್ಳುತ್ತಿರುವವರ ಹಾಗೂ ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆಯುವವರ ಸಂಖ್ಯೆಯು ಹೆಚ್ಚಾಗುತ್ತಿದೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಪ್ರತಿದಿನ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಅರ್ಜಿ ಸಲ್ಲಿಸುವವರ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ. ಒಡಿಶಾ ರಾಜ್ಯದಲ್ಲಿ ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ನಂತರ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಡ್ರೈವಿಂಗ್ ಲೈಸೆನ್ಸ್ ವಿತರಿಸಲಾಗಿದೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಹೊಸ ಮೋಟಾರು ವಾಹನ ಕಾಯ್ದೆ ಜಾರಿಯಾದ ಸೆಪ್ಟೆಂಬರ್ 1ರಿಂದ ನವೆಂಬರ್ 30ರವರೆಗೆ ಒಡಿಶಾದಲ್ಲಿ 5.87 ಲಕ್ಷ ಡ್ರೈವಿಂಗ್ ಲೈಸೆನ್ಸ್ ವಿತರಿಸಲಾಗಿದೆ. ಈ ಲೈಸೆನ್ಸ್ ಗಳನ್ನು ಒಡಿಶಾದ್ಯಂತವಿರುವ ಆರ್‍‍ಟಿ‍ಒ ಕಚೇರಿಗಳಿಂದ ವಿತರಿಸಲಾಗಿದೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

2018ರ ಸೆಪ್ಟೆಂಬರ್ 1ರಿಂದ ನವೆಂಬರ್ 30ರ ವರೆಗಿನ ಅವಧಿಯಲ್ಲಿ 84 ಸಾವಿರ ಡ್ರೈವಿಂಗ್ ಲೈಸೆನ್ಸ್ ಗಳನ್ನು ವಿತರಿಸಲಾಗಿತ್ತು. ಹೊಸ ಮೋಟಾರು ವಾಹನ ಕಾಯ್ದೆಯಲ್ಲಿನ ದಂಡದ ಪ್ರಮಾಣಕ್ಕೆ ಹೆದರಿ ಕಳೆದ ವರ್ಷಕ್ಕಿಂತ 7 ಪಟ್ಟು ಹೆಚ್ಚು ಜನರು ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

2018ರಲ್ಲಿ ಜನವರಿ 1ರಿಂದ ಡಿಸೆಂಬರ್ 31ರ ವರೆಗಿನ ಅವಧಿಯಲ್ಲಿ 3.48 ಲಕ್ಷ ಜನರು ಡ್ರೈವಿಂಗ್ ಲೈಸೆನ್ಸ್ ಗಳನ್ನು ಪಡೆದಿದ್ದರು. ಆದರೆ ಈ ವರ್ಷ ಕೇವಲ ಮೂರು ತಿಂಗಳ ಅವಧಿಯಲ್ಲಿ 5.87 ಲಕ್ಷ ಜನರು ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದಾರೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಇದರಿಂದಾಗಿ ಕೇಂದ್ರ ಸರ್ಕಾರದ ಹೊಸ ಮೋಟಾರು ವಾಹನ ಕಾಯ್ದೆಯು ಯಶಸ್ವಿಯಾಗಿದೆ ಎಂದು ಹೇಳಬಹುದು. ಇದರ ಜೊತೆಗೆ ಭಾರತದ ಹಲವು ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಹೊಸ ಮೋಟಾರು ವಾಹನ ಕಾಯ್ದೆಯು ಜಾರಿಗೆ ಬಂದ ನಂತರ ಅಪಘಾತ ಪ್ರಮಾಣವು ಸಹ ಕಡಿಮೆಯಾಗಿದೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಕೇಂದ್ರದ ಸಾರಿಗೆ ಹಾಗೂ ಹೆದ್ದಾರಿ ಸಚಿರ ನಿತಿನ್ ಗಡ್ಕರಿರವರ ಶ್ರಮದಿಂದಾಗಿ ಹೊಸ ಮೋಟಾರು ವಾಹನ ಕಾಯ್ದೆಯು ಜಾರಿಗೆ ಬಂದಿದೆ. ಈ ಕಾಯ್ದೆಯು ಜಾರಿಗೆ ಬಂದ ನಂತರ ದೇಶಾದ್ಯಂತ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವ ವಾಹನ ಸವಾರರಿಗೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗಿದೆ.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಟ್ರಾಕ್ಟರ್ ಚಾಲಕನೊಬ್ಬ ಹಲವಾರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರೂ.59,000 ದಂಡ ವಿಧಿಸಲಾಗಿದೆ. ಇಷ್ಟೊಂದು ಪ್ರಮಾಣದ ದಂಡವನ್ನು ಹೊಸ ಕಾಯ್ದೆಯನ್ವಯ ವಿಧಿಸಲಾಗಿದೆ. ಈ ಘಟನೆ ಹರಿಯಾಣದ ಗುರುಗ್ರಾಮದಲ್ಲಿ ನಡೆದಿತ್ತು.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಪೊಲೀಸರಿಗೆ ಅಗೌರವ ತೋರಿರುವುದು, ಸಿಗ್ನಲ್ ಜಂಪ್ ಹಾಗೂ ವಾಹನದ ಲೈಟ್‍‍ನ ಉಲ್ಲಂಘನೆ ಸೇರಿದಂತೆ ಒಟ್ಟು 10 ನಿಯಮಗಳ ಉಲ್ಲಂಘನೆಗಾಗಿ ರೂ.59,000 ದಂಡ ವಿಧಿಸಲಾಗಿದೆ. ಗುರುಗ್ರಾಮ ಸಂಚಾರಿ ಪೊಲೀಸರು ದಂಡ ವಿಧಿಸಿ ಟ್ರಾಕ್ಟರ್ ಅನ್ನು ವಶಕ್ಕೆ ಪಡೆದಿದ್ದರು.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಇನ್ನೊಂದು ಪ್ರಕರಣದಲ್ಲಿ ದೆಹಲಿ ನಿವಾಸಿಯೊಬ್ಬರಿಗೆ ರೂ.23,000 ದಂಡ ವಿಧಿಸಲಾಗಿತ್ತು. ಆದರೆ ಅವರು ಸವಾರಿ ಮಾಡುತ್ತಿದ್ದ ಸ್ಕೂಟರಿನ ಬೆಲೆ ರೂ.15,000ಗಳಾಗಿತ್ತು. ಬೆಂಗಳೂರಿನಲ್ಲಿ ಕುಮಾರಸ್ವಾಮಿ ಲೇ‍ಔಟ್ ಸಂಚಾರಿ ಪೊಲೀಸರು, ಕುಡಿದು ಬೈಕ್ ಚಲಾಯಿಸುತ್ತಿದ್ದ ಬೈಕ್ ಸವಾರನಿಗೆ ವಿವಿಧ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರೂ.17,000 ದಂಡ ವಿಧಿಸಿದ್ದರು.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

1988ರ ಮೋಟಾರು ವಾಹನಗಳ ಕಾಯ್ದೆಗೆ ತಿದ್ದುಪಡಿ ತಂದು ಸಂಸತ್ತಿನಿಂದ ಅನುಮೋದನೆ ಪಡೆಯಲಾಗಿದೆ. ಅದರಂತೆ ಹೊಸ ಕಾಯ್ದೆಯು ಜಾರಿಗೆ ಬಂದು ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುತ್ತಿದೆ. ಈ ಮೊದಲು ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸಿದರೆ ರೂ.500 ದಂಡ ವಿಧಿಸಲಾಗುತ್ತಿತ್ತು.

ಹೊಸ ಮೋಟಾರು ಕಾಯ್ದೆ ಎಫೆಕ್ಟ್, ಡಿ‍ಎಲ್ ಪಡೆದವರ ಸಂಖ್ಯೆ ಎಷ್ಟು ಗೊತ್ತಾ?

ಈಗ ಹೊಸ ಕಾಯ್ದೆಯನ್ವಯ ರೂ.5,000 ದಂಡ ವಿಧಿಸಲಾಗುತ್ತದೆ. ಕುಡಿದು ವಾಹನ ಚಾಲನೆ ಮಾಡುವವರಿಗೆ ಈ ಮೊದಲು ರೂ.2,000 ದಂಡ ವಿಧಿಸಲಾಗುತ್ತಿತ್ತು. ಈಗ ರೂ.10,000 ದಂಡ ವಿಧಿಸಲಾಗುತ್ತದೆ. ಹೊಸ ಕಾಯ್ದೆಯನ್ವಯ ಹೆಚ್ಚಿನ ಪ್ರಮಾಣದ ದಂಡ ವಿಧಿಸಲಾಗುವ ನಿಯಮ ಉಲ್ಲಂಘನೆಯೆಂದರೆ ಅದು ಕುಡಿದು ವಾಹನ ಚಲಾಯಿಸುವುದು.

Most Read Articles

Kannada
English summary
More than 5.87 lakh driving licence issued in 3 months - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X