ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಸಂಚಾರಿ ನಿಯಮಗಳನ್ನು ಉಲ್ಲಂಘಿಸುವ ಪ್ರಕರಣಗಳು ವಿಪರೀತವಾಗಿ ಹೆಚ್ಚಾಗಿದ್ದ ಹಿನ್ನೆಲೆಯಲ್ಲಿ, ಈ ಪ್ರಕರಣಗಳಿಗೆ ಬ್ರೇಕ್ ಹಾಕುವ ಉದ್ದೇಶದಿಂದ ಕೇಂದ್ರ ಸರ್ಕಾರವು ದಂಡ ಪ್ರಮಾಣವನ್ನು ಗಣನೀಯವಾಗಿ ಏರಿಸಿ ಮೋಟಾರ್ ವಾಹನ ಕಾಯ್ದೆಗೆ ತಿದ್ದುಪಡಿ ತಂದಿತ್ತು.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಹೊಸ ಕಾಯ್ದೆಯು ಸೆಪ್ಟೆಂಬರ್ 1ರಿಂದ ಜಾರಿಗೆ ಬಂದಿದೆ. ಹೊಸ ನಿಯಮಗಳು ಜಾರಿಗೆ ಬಂದ ಒಂದು ದಿನದ ನಂತರ ಅಂದರೆ ಸೋಮವಾರ, ದೆಹಲಿ ಮೂಲದ ವ್ಯಕ್ತಿಯೊಬ್ಬರಿಗೆ ಗುರುಗ್ರಾಮದಲ್ಲಿ ರೂ.23,000ಗಳ ದಂಡ ವಿಧಿಸಲಾಗಿದೆ. ಗುರುಗ್ರಾಮ ಪೊಲೀಸರು ನಿಯಮಗಳನ್ನು ಉಲ್ಲಂಘಿಸಿದ ದಿನೇಶ್ ಮದನ್‍‍ರವರ ಹೋಂಡಾ ಆಕ್ಟಿವಾ ಸ್ಕೂಟರ್ ಅನ್ನು ವಶಕ್ಕೆ ಪಡೆದು, ಹೊಸ ಕಾಯ್ದೆಯನ್ವಯ ದಂಡ ವಿಧಿಸಿದ್ದಾರೆ.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಪೂರ್ವ ದೆಹಲಿಯ ಗೀತಾ ಕಾಲೋನಿಯ ನಿವಾಸಿಯಾದ ಮದನ್‍‍ರವರು ಡ್ರೈವಿಂಗ್ ಲೈಸೆನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಪೊಲ್ಯುಷನ್ ಸರ್ಟಿಫಿಕೇಟ್ ಸೇರಿದಂತೆ ಯಾವುದೇ ದಾಖಲೆಗಳಿಲ್ಲದೇ ಸ್ಕೂಟರ್ ಚಲಾಯಿಸುತ್ತಿದ್ದರು.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಇದರ ಜೊತೆಗೆ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಸಹ ಹೊಂದಿರಲಿಲ್ಲ. ಕಡೆ ಪಕ್ಷ ಹೆಲ್ಮೆಟ್ ಸಹ ಹೊಂದದೇ ಸ್ಕೂಟರ್ ಚಲಾಯಿಸುತ್ತಿದ್ದರು. ಸಂಚಾರಿ ಪೊಲೀಸರು ಸೋಮವಾರ ಮಧ್ಯಾಹ್ನ ಸುಮಾರು 1ಗಂಟೆಯ ಸಮಯದಲ್ಲಿ ಗುರುಗ್ರಾಮದಲ್ಲಿರುವ ನ್ಯಾಯಾಲಯದ ಬಳಿ ಮದನ್‍‍ರವರಿಗೆ ದಂಡ ವಿಧಿಸಿದ್ದಾರೆ. ಮೋಟಾರು ವಾಹನಗಳ ತಿದ್ದುಪಡಿ ಕಾಯ್ದೆಯು ಸೆಪ್ಟೆಂಬರ್1ರಿಂದ ಜಾರಿಗೆ ಬಂದಿದೆ.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಸಂಚಾರಿ ನಿಯಮಗಳು ಕಟ್ಟು ನಿಟ್ಟಾಗಿ ಪಾಲನೆಯಾಗುವಂತೆ ಮಾಡುವುದು ಈ ಕಾಯ್ದೆಯ ಉದ್ದೇಶವಾಗಿದೆ. ಈ ಕಾಯ್ದೆಯ ಪ್ರಕಾರ ಸೀಟ್ ಬೆಲ್ಟ್ ಇಲ್ಲದೇ ಕಾರುಗಳನ್ನು ಚಾಲನೆ ಮಾಡುವುದು, ಕುಡಿದು ವಾಹನ ಚಲಾಯಿಸುವುದು, ಸಿಗ್ನಲ್ ಜಂಪ್ ಮಾಡುವುದು, ಅತಿ ವೇಗದಲ್ಲಿ ವಾಹನ ಚಲಾಯಿಸುವುದು, ಇನ್ಶೂರೆನ್ಸ್ ಇಲ್ಲದೇ ವಾಹನ ಚಲಾಯಿಸುವುದು ಹಾಗೂ ವಾಹನಗಳಲ್ಲಿ ನಿಗದಿಪಡಿಸಿರುವುದಕ್ಕಿಂತ ಹೆಚ್ಚಿನ ಪ್ರಮಾಣದ ತೂಕವನ್ನು ಹೊಂದುವುದಕ್ಕೆ ಭಾರೀ ಪ್ರಮಾಣದ ದಂಡವನ್ನು ವಿಧಿಸಲಾಗುವುದು.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಕುಡಿದು ವಾಹನ ಚಾಲನೆ ಮಾಡಿದರೆ, ಆಂಬ್ಯುಲೆನ್ಸ್ ಹಾಗೂ ಫೈರ್ ಬ್ರಿಗೇಡ್ ವಾಹನಗಳಿಗೆ ದಾರಿ ಕೊಡದಿದ್ದರೆ ರೂ.10,000ಗಳ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುವುದು. ಇದರ ಜೊತೆಗೆ ಯಾವುದೇ ವ್ಯಕ್ತಿ ಆರ್‍‍ಸಿ ಅಥವಾ ಡ್ರೈವಿಂಗ್ ಲೈಸೆನ್ಸ್ ಇಲ್ಲದೇ ವಾಹನ ಚಲಾಯಿಸುತ್ತಿದ್ದರೆ, ರೂ.5,000ಗಳ ದಂಡ ವಿಧಿಸಲಾಗುವುದು.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಯಾವುದೇ ದ್ವಿ ಚಕ್ರ ವಾಹನ ಸವಾರನು ಹೆಲ್ಮೆಟ್ ಇಲ್ಲದೇ ವಾಹನ ಚಲಾಯಿಸುವಾಗ ಸಿಕ್ಕಿ ಬಿದ್ದರೇ ರೂ.1,000ಗಳ ದಂಡ ವಿಧಿಸುವುದರ ಜೊತೆಗೆ ಅಂತಹವರ ಡ್ರೈವಿಂಗ್ ಲೈಸೆನ್ಸ್ ಅನ್ನು ಮೂರು ತಿಂಗಳವರೆಗೆ ಅಮಾನತ್ತಿನಲ್ಲಿಡಲಾಗುವುದು. ಸೀಟ್ ಬೆಲ್ಟ್ ಧರಿಸದೇ ಕಾರುಗಳನ್ನು ಚಲಾಯಿಸಿದರೆ ರೂ.1,000 ದಂಡ ವಿಧಿಸಲಾಗುವುದು.

MOST READ: ಜೆ‍‍ಸಿ‍‍ಬಿ ಯಂತ್ರವು ಹಳದಿ ಬಣ್ಣದಲ್ಲೇ ಏಕಿರುತ್ತೆ?

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಮೊಬೈಲ್‍‍ನಲ್ಲಿ ಮಾತನಾಡುತ್ತಾ ವಾಹನ ಚಲಾಯಿಸಿದರೆ ರೂ.1,000 - ರೂ.5,000ದವರೆಗೆ ದಂಡ ವಿಧಿಸಲಾಗುವುದು. ಅತಿ ವೇಗವಾಗಿ ವಾಹನ ಚಲಾಯಿಸಿದರೆ ರೂ.1,000 ದಿಂದ ರೂ.2,000ಗಳವರೆಗೆ ದಂಡ ಬೀಳಲಿದೆ.

MOST READ: ಪೆಟ್ರೋಲ್ ಬಂಕ್‍‍ನಿಂದ ಹೊರಡುವ ಮುನ್ನ ಎಚ್ಚರ..!

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ದಿನೇಶ್ ಮದನ್‍‍ರವರಿಗೆ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಇಲ್ಲದ ಕಾರಣಕ್ಕೆ ರೂ.5,000, ಥರ್ಡ್ ಪಾರ್ಟಿ ಇನ್ಶೂರೆನ್ಸ್ ಇಲ್ಲದ ಕಾರಣಕ್ಕೆ ರೂ.2,000, ಮಾಲಿನ್ಯ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ರೂ.10,000 ಹಾಗೂ ಹೆಲ್ಮೆಟ್ ಧರಿಸದ ಕಾರಣಕ್ಕೆ ರೂ.1,000 ದಂಡ ವಿಧಿಸಲಾಗಿದೆ. ಒಟ್ಟಾರೆಯಾಗಿ ರೂ.23,000 ದಂಡ ವಿಧಿಸಿದ್ದಾರೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಈ ಬಗ್ಗೆ ಮಾತನಾಡಿರುವ ದಿನೇಶ್ ಮದನ್‍‍ರವರು, ನಾನು ಹೆಲ್ಮೆಟ್ ಹಾಕದೇ ಗಾಡಿ ಚಲಾಯಿಸುತ್ತಿದ್ದೆ. ನನ್ನನ್ನು ಟ್ರಾಫಿಕ್ ಪೊಲೀಸರು ತಡೆದು ನಿಲ್ಲಿಸಿದರು. ನನ್ನ ಬಳಿ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಸಹ ಇರಲಿಲ್ಲ. ಟ್ರಾಫಿಕ್ ಪೊಲೀಸರು ನನ್ನ ಸ್ಕೂಟರಿನ ಕೀಯನ್ನು ಕೇಳಿದರು. ನಾನು ಕೀ ಕೊಡಲು ನಿರಾಕರಿಸಿದೆ.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ತಕ್ಷಣವೇ ಪೊಲೀಸರು ರೂ.23,000ಗಳ ದಂಡ ವಿಧಿಸಿ ರಸೀದಿ ನೀಡಿದರು. ವಾಟ್ಸ್ ಅಪ್‍‍ನಲ್ಲಿದ್ದ ನನ್ನ ಸ್ಕೂಟರಿನ ರಿಜಿಸ್ಟ್ರೇಷನ್ ಸರ್ಟಿಫಿಕೇಟಿನ ಪ್ರತಿಯನ್ನು ತೋರಿಸುವಷ್ಟರಲ್ಲಿ ಪೊಲೀಸರು ದಂಡ ವಿಧಿಸಿದ್ದರು. ದಂಡವನ್ನು ಕಡಿಮೆ ಮಾಡಬೇಕೆಂದು ಮನವಿ ಮಾಡಿಕೊಳ್ಳುತ್ತೇನೆ.

ಸ್ಕೂಟರ್ ಬೆಲೆ 15,000, ದಂಡ ಬಿದ್ದಿದ್ದು 23,000..!

ಇನ್ನು ಮುಂದೆ ಸ್ಕೂಟರಿಗೆ ಸಂಬಂಧಪಟ್ಟ ಎಲ್ಲಾ ದಾಖಲೆಗಳನ್ನು ಜೊತೆಯಲ್ಲಿ ಕೊಂಡೊಯ್ಯುತ್ತೇನೆ ಎಂದು ಹೇಳಿದರು. ಅಂದ ಹಾಗೆ ದಿನೇಶ್ ಮದನ್‍‍ರವರ ಬಳಿಯಿರುವ ಈ ಸ್ಕೂಟಿಯನ್ನು ಅವರು ರೂ.15,000 ನೀಡಿ ಖರೀದಿಸಿದ್ದರು. ಆದರೆ ಈಗ ಸ್ಕೂಟರಿನ ಬೆಲೆಗಿಂತ ಹೆಚ್ಚಿನ ದಂಡವನ್ನು ಪಾವತಿಸಬೇಕಾಗಿದೆ.

Most Read Articles

Kannada
English summary
Delhi man pays Rs 23,000 challan, half the price of his vehicle - Read in kannada
Story first published: Wednesday, September 4, 2019, 14:42 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X