ನಿಯಮ ಪಾಲಿಸದ ಪಾದಚಾರಿಗಳಿಗೆ ದಂಡ ವಿಧಿಸೋರು ಯಾರು?

ಭಾರತದ ಪಾದಚಾರಿಗಳು ಯಾವಾಗಲೂ ಜನಭರಿತ ರಸ್ತೆಗಳಲ್ಲಿ ಹೇಗೆಂದರೆ ಹಾಗೆ ರಸ್ತೆ ದಾಟುವುದನ್ನು ಕಾಣಬಹುದು. ಜನರು ನಿಧಾನವಾಗಿ ವಾಕ್ ಮಾಡಿಕೊಂಡು ಇಲ್ಲವೇ ಜೋರಾಗಿ ಓಡಿ ರಸ್ತೆಯನ್ನು ದಾಟುವುದನ್ನು ಕಾಣಬಹುದು.

ನಿಯಮ ಪಾಲಿಸದ ಪಾದಚಾರಿಗಳಿಗೆ ದಂಡ ವಿಧಿಸೋರು ಯಾರು?

ಬೇಕಾಬಿಟ್ಟಿಯಾಗಿ ರಸ್ತೆ ದಾಟುವಾಗ ಅಪಘಾತಗಳೂ ಸಹ ಸಂಭವಿಸುತ್ತಿವೆ. ಸಂಚಾರ ಪರಿಣಿತರ ಪ್ರಕಾರ ಜನರು ಅಡ್ಡಾದಿಡ್ಡಿಯಾಗಿ ರಸ್ತೆ ದಾಟುವುದು ಸಹ ಅಪಘಾತಗಳಿಗೆ ಕಾರಣವಾಗುತ್ತಿದೆ. ಕೆಲವು ವರದಿಗಳ ಪ್ರಕಾರ 20%ನಷ್ಟು ಅಪಘಾತಗಳು ಪಾದಚಾರಿಗಳ ನಿರ್ಲಕ್ಷತನದಿಂದ ಉಂಟಾಗುತ್ತಿವೆ.

ನಿಯಮ ಪಾಲಿಸದ ಪಾದಚಾರಿಗಳಿಗೆ ದಂಡ ವಿಧಿಸೋರು ಯಾರು?

2019ರಲ್ಲಿ ಜಾರಿಗೆ ತರಲಾಗಿರುವ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಬೇಜವಾಬ್ದಾರಿಯಿಂದ ರಸ್ತೆ ದಾಟುವ ಪಾದಚಾರಿಗಳ ವಿರುದ್ಧ ಕ್ರಮ ಕೈಗೊಳ್ಳಲು ಯಾವುದೇ ನಿಯಮಗಳಿಲ್ಲ. ಆದರೆ ಸಂಬಂಧಿಸಿದ ರಾಜ್ಯ ಸರ್ಕಾರಗಳು ಈ ಬಗ್ಗೆ ಹೊಸ ನಿಯಮಗಳನ್ನು ಜಾರಿಗೆ ತರಬಹುದು.

ನಿಯಮ ಪಾಲಿಸದ ಪಾದಚಾರಿಗಳಿಗೆ ದಂಡ ವಿಧಿಸೋರು ಯಾರು?

ಆದರೂ ಸಹ ಹಲವು ರಾಜ್ಯಗಳಲ್ಲಿ ಇವುಗಳಿಗೆ ಸಂಬಂಧಪಟ್ಟ ನಿಯಮಗಳನ್ನು ಜಾರಿಗೆ ತಂದಿಲ್ಲ. ಸಂಚಾರಿ ಪರಿಣಿತರ ಪ್ರಕಾರ 90%ನಷ್ಟು ಪಾದಚಾರಿಗಳು, ಪಾದಚಾರಿಗಳಿಗಾಗಿಯೇ ಮೀಸಲಾಗಿರುವ ಸೌಲಭ್ಯಗಳನ್ನು ಬಳಸಿಕೊಳ್ಳುತ್ತಿಲ್ಲ.

ನಿಯಮ ಪಾಲಿಸದ ಪಾದಚಾರಿಗಳಿಗೆ ದಂಡ ವಿಧಿಸೋರು ಯಾರು?

ಇದರ ಜೊತೆಗೆ ಪಾದಚಾರಿಗಳು, ಟ್ರಾಫಿಕ್ ಸಿಗ್ನಲ್ ಹಾಗೂ ಜೀಬ್ರಾ ಕ್ರಾಸಿಂಗ್‍‍ಗಳನ್ನು ಸಹ ಸರಿಯಾಗಿ ಬಳಸುವುದಿಲ್ಲ. ಪಾದಚಾರಿಗಳಿಗಾಗಿಯೇ ನಿರ್ಮಿಸಲಾಗಿರುವ ಫುಟ್‍‍ಪಾತ್‍ಗಳನ್ನು ಸಹ ಬಳಸಿಕೊಳ್ಳುತ್ತಿಲ್ಲ.

ನಿಯಮ ಪಾಲಿಸದ ಪಾದಚಾರಿಗಳಿಗೆ ದಂಡ ವಿಧಿಸೋರು ಯಾರು?

ಬಹಳಷ್ಟು ರಸ್ತೆಗಳಲ್ಲಿ ಸಿಗ್ನಲ್‍‍ಗಳು, ಜೀಬ್ರಾ ಕ್ರಾಸಿಂಗ್‍‍ಗಳು ದೂರವಿರುವ ಕಾರಣಕ್ಕೆ, ಪಾದಚಾರಿಗಳು ಹೆಚ್ಚು ವಾಹನಗಳು ಸಂಚರಿಸುವ ರಸ್ತೆಗಳಲ್ಲಿ ವಾಹನಗಳ ಮಧ್ಯದಲ್ಲಿಯೇ ರಸ್ತೆ ದಾಟುತ್ತಿದ್ದಾರೆ. ಇದರಿಂದ ವೇಗವಾಗಿ ಚಲಿಸುವ ವಾಹನಗಳಿಗೆ ಸಿಲುಕಿ ಅಪಘಾತಗಳಾಗುತ್ತಿವೆ.

ನಿಯಮ ಪಾಲಿಸದ ಪಾದಚಾರಿಗಳಿಗೆ ದಂಡ ವಿಧಿಸೋರು ಯಾರು?

ವರದಿಗಳ ಪ್ರಕಾರ ಮಹಿಳೆಯರು, ಮಕ್ಕಳು ಹಾಗೂ ವಯಸ್ಸಾದ ಪಾದಚಾರಿಗಳು ಹೆಚ್ಚು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಫುಟ್‍‍ಪಾತ್ ಅತಿಕ್ರಮಣ, ಸರಿಯಾದ ಸಿಗ್ನಲ್ ಲೈಟ್‍‍ಗಳಿಲ್ಲದೇ ಇರುವುದು ಹಾಗೂ ಜೀಬ್ರಾ ಕ್ರಾಸ್‍‍ಗಳಿಲ್ಲದಿರುವುದು ಇದಕ್ಕೆ ಮುಖ್ಯ ಕಾರಣವಾಗಿದೆ.

Most Read Articles

Kannada
English summary
New road safety rules doesnt include laws to reduce jaywalking in India. Read in Kannada.
Story first published: Monday, March 2, 2020, 15:27 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X