Just In
Don't Miss!
- Movies
ಡಬ್ಬಿಂಗ್ ಸಿನಿಮಾಗಳ ಬಗ್ಗೆ ಹಿರಿಯ ನಟ ದೊಡ್ಡಣ್ಣ ಅಸಮಾಧಾನ
- News
ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ
- Sports
ಐಎಸ್ಎಲ್: ಜೆಮ್ಷೆಡ್ಪುರ ವಿರುದ್ಧ ಕ್ಲೀನ್ ಶೀಟ್ ಗುರಿಯಲ್ಲಿ ಕೇರಳ ಬ್ಲಾಸ್ಟರ್ಸ್
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Lifestyle
ನೀವು ಬಳಸಬಹುದಾದ ಡೈರಿ ಉತ್ಪನ್ನವಲ್ಲದ ಹಾಲುಗಳ ಬಗ್ಗೆ ಇಲ್ಲಿದೆ ಮಾಹಿತಿ
- Education
Republic Day Speech And Essay Ideas: ಗಣರಾಜ್ಯೋತ್ಸವ ಪ್ರಯುಕ್ತ ಭಾಷಣ ಮತ್ತು ಪ್ರಬಂಧ ಬರೆಯಲು ಇಲ್ಲಿದೆ ಮಾಹಿತಿ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮಗಳನ್ನು ಜಾರಿಗೆ ತಂದ ಕೇಂದ್ರ ಸರ್ಕಾರ
ಆಟೋ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳ ಸಂಖ್ಯೆಯು ಭಾರೀ ಪ್ರಮಾಣದಲ್ಲಿದ್ದು, ಕ್ಲಾಸಿಕ್ ಮತ್ತು ವಿಂಟೇಜ್ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಪ್ರತ್ಯೇಕ ಸಾರಿಗೆ ನಿಯಮಗಳನ್ನು ಹೊಂದಿದೆ.

ಕ್ಲಾಸಿಕ್ ಮತ್ತು ವಿಂಟೇಜ್ ವಾಹನ ನಿರ್ವಹಣೆಯನ್ನು ಸರಳಗೊಳಿಸುವುದಕ್ಕಾಗಿ ಇದೀಗ ಹೊಸ ನೋಂದಣಿ ನಿಯಮಗಳನ್ನು ಜಾರಿಗೆ ತಂದಿದ್ದು, ಹೊಸ ನಿಯಮದಡಿ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ನೋಂದಣಿಗೆ ಹಲವು ವಿವಿಧ ಹಂತದ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ನೋಂದಣಿಯ ವಿಧಾನದಲ್ಲಿ ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಪ್ರತ್ಯೇಕ ಪ್ರಮಾಣ ಪತ್ರವನ್ನು ನೀಡುತ್ತಿದೆ.

ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ಹೊಸ ಸಾರಿಗೆ ನಿಯಮದಡಿ ಪ್ರಮಾಣಿಕರಿಸಿದ್ದಲ್ಲಿ 10 ವರ್ಷಗಳ ಕಾಲ ಮಾನ್ಯವಾಗಿರಲಿದ್ದು, 10 ವರ್ಷಗಳ ನಂತರ ಮತ್ತೆ ನವೀಕರಿಸಬಹುದಾಗಿದೆ.

ಹೊಸ ಸಾರಿಗೆ ನಿಯಮದಡಿ ಪ್ರಮಾಣಪತ್ರ ಪಡೆಯಲು ಪ್ರತಿ ಕಾರಿಗೆ ರೂ. 20 ಸಾವಿರ ವೆಚ್ಚವಾಗಲಿದ್ದು, ಇದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 10 ವರ್ಷಗಳ ನಂತರ ನೋಂದಣಿಯನ್ನು ನವೀಕರಿಸಲು ಮಾಲೀಕರು ಹೆಚ್ಚುವರಿ ರೂ. 5 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಬದಲಾಗಲಿವೆ ವಿಂಟೇಜ್ ವಾಹನಗಳ ನಂಬರ್ ಪ್ಲೇಟ್
ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿಗೆ ಜಾರಿಗೆ ತರಲಾದ ಹೊಸ ಸಾರಿಗೆ ನಿಯಮಗಳ ಜೊತೆಗೆ ಹಳೆಯ ವಾಹನಗಳಿಗೆ ವಿಶೇಷವಾದ ನೋಂದಣಿ ಸಂಖ್ಯೆಯನ್ನು ವಿತರಿಸಲಾಗುತ್ತಿದ್ದು, ಹೊಸ ಸಾರಿಗೆ ನಿಯಮದಡಿ ನೋಂದಣಿಯಾದ ವಾಹನಗಳ ಗುರುತಿಸಲು ಪ್ರತ್ಯೇಕ ನೋಂದಣಿ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಹೊಸ ಸ್ವರೂಪ ನೋಂದಣಿ ಸಂಖ್ಯೆಯು XX VA YY **** ಮಾದರಿಯಲ್ಲಿರಲಿದ್ದು, ಇದು ವಿಂಟೇಜ್ ವಾಹನ ಎಂಬುವುದು ಗುರುತಿಸಲು ಸಹಕಾರಿಯಾಗಲಿದೆ.

ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿಗೆ ನೀಡಲಾಗುವ ಹೊಸ ನೋಂದಣಿ ಸಂಖ್ಯೆಯಿಂದ ನಿಯಮ ಬಾಹಿರವಾಗಿ ಓಡಾವ ಹಳೆಯ ವಾಹನಗಳನ್ನು ನಿಯಂತ್ರಿಸಲು ಸಹಕಾರಿಯಾಗಿದ್ದು, ವಾಹನ ಉತ್ಪಾದನಾ ವರ್ಷ ಮತ್ತು ತಾಂತ್ರಿಕ ಅಂಶಗಳ ಆಧಾರದ ಮೇಲೆ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ಮಾನ್ಯ ಮಾಡಲಾಗುತ್ತದೆ.

ಇನ್ನು ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳು ಆಧುನಿಕ ವಾಹನಗಳ ಮಾದರಿಯಲ್ಲಿ ನಿರ್ದಿಷ್ಟ ಸಂಖ್ಯೆಯನ್ನು ಹೊಂದಿರುವುದಿಲ್ಲವಾದರೂ ಆಯಾ ರಾಜ್ಯಗಳಲ್ಲಿ ಸಾರಿಗೆ ನಿಯಮ ಅನುಸಾರವಾಗಿರುತ್ತದೆ. ಆದರೆ ಹೊಸ ನಿಯಮದಿಂದ ವಿಂಟೇಜ್ ವಾಹನಗಳಿಗೆ ಪ್ರತ್ಯೇಕವಾದ ನಂಬರ್ ಪ್ಲೇಟ್ ಸೂಚಿಸಲಿದೆ.

ಎಕ್ಸ್ಎಕ್ಸ್ ಎನ್ನುವುದು ಆಯಾ ರಾಜ್ಯಗಳನ್ನು ಪ್ರತಿನಿಧಿಸಲು ವಿಎ ಎನ್ನುವ ವಿಂಟೇಜ್ ಎಂದು ಪ್ರತಿನಿಧಿಸಲು ಮತ್ತು ವೈವೈ ಹಾಗೂ **** ಕೋಡ್ ನೆಮ್ ಅನ್ನು ವಾಹನಗಳಿಗೆ ಆಯಾ ರಾಜ್ಯಗಳ ನೋಂದಣಿ ಪ್ರಾಧಿಕಾರದ ಸಂಖ್ಯೆಯನ್ನು ಸೂಚಿಸಲಿದ್ದು, ಹೊಸ ನಂಬರ್ ಪ್ಲೇಟ್ಗಳ ಅಕ್ಷರಗಳನ್ನು ಹಸಿರು ಬಣ್ಣದೊಂದಿಗೆ ಸಮ್ಮಿಶ್ರಣಗೊಳಿಸಲಾಗುತ್ತಿದೆ.
MOST READ: ಪ್ರತಿ ಚಾರ್ಜ್ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್ಯುವಿ..!

ಹೊಸ ಸಾರಿಗೆ ನಿಯಮದಿಂದ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿಗೆ ಮತ್ತೊಂದು ಪ್ರಮುಖ ಲಾಭವೆಂದರೆ ವಿಂಟೇಜ್ ವಾಹನಗಳ ಮಾಲೀಕರು ಸುಲಭವಾದ ಸಾರಿಗೆ ನಿಯಮಗಳೊಂದಿಗೆ ಮರುಮಾರಾಟ ಮಾಡಲು ಮತ್ತು ಖರೀದಿಗೆ ಹೊಂದಿರುವ ಗ್ರಾಹಕರು ಸುಲಭವಾಗಿ ಮರುನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ಮಾರಾಟ ಮಾಡಿದ ಅಥವಾ ಖರೀದಿಸಿದ 90 ದಿನಗಳ ಒಳಗಾಗಿ ಖರೀದಿದಾರ ಅಥವಾ ಮಾರಾಟಗಾರನು ಆಯಾ ರಾಜ್ಯಗಳ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಿದ್ದು, ಮಾನ್ಯತೆಯನ್ನು ದೃಡಿಕರಿಸಲು ಮರುನೋಂದಣಿಯು ಅವಶ್ಯವಾಗಿರುತ್ತದೆ.
MOST READ: ಭಾರತದಲ್ಲಿ ಎರಡು ಹೊಸ ಎಸ್ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಇನ್ನು ಹೊಸ ಸಾರಿಗೆ ನಿಯಮದಿಂದ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿರುವ ಹಲವು ನಿರ್ಬಂಧಗಳು ಸಡಿಲಗೊಂಡಿದ್ದು, ವಾಹನ ಪ್ರದರ್ಶನ, ತಾಂತ್ರಿಕ ಸಂಶೋಧನೆ ಅಥವಾ ವಿಂಟೇಜ್ ವಾಹನಗಳ ರ್ಯಾಲಿಗಳಲ್ಲಿ ಭಾಗವಹಿಸಲು ಪ್ರತ್ಯೇಕವಾಗಿ ಭಾರತೀಯ ರಸ್ತೆಗಳಲ್ಲಿ ಓಡಲು ಅನುಮತಿಸಲಾಗುತ್ತಿದೆ.