ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮಗಳನ್ನು ಜಾರಿಗೆ ತಂದ ಕೇಂದ್ರ ಸರ್ಕಾರ

ಆಟೋ ಉತ್ಪಾದನೆಯಲ್ಲಿ ಮುಂಚೂಣಿಯಲ್ಲಿರುವ ಭಾರತದಲ್ಲಿ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳ ಸಂಖ್ಯೆಯು ಭಾರೀ ಪ್ರಮಾಣದಲ್ಲಿದ್ದು, ಕ್ಲಾಸಿಕ್ ಮತ್ತು ವಿಂಟೇಜ್ ನಿರ್ವಹಣೆಗಾಗಿ ಕೇಂದ್ರ ಸರ್ಕಾರವು ಪ್ರತ್ಯೇಕ ಸಾರಿಗೆ ನಿಯಮಗಳನ್ನು ಹೊಂದಿದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಕ್ಲಾಸಿಕ್ ಮತ್ತು ವಿಂಟೇಜ್ ವಾಹನ ನಿರ್ವಹಣೆಯನ್ನು ಸರಳಗೊಳಿಸುವುದಕ್ಕಾಗಿ ಇದೀಗ ಹೊಸ ನೋಂದಣಿ ನಿಯಮಗಳನ್ನು ಜಾರಿಗೆ ತಂದಿದ್ದು, ಹೊಸ ನಿಯಮದಡಿ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ನೋಂದಣಿಗೆ ಹಲವು ವಿವಿಧ ಹಂತದ ಪರೀಕ್ಷೆಗಳನ್ನು ಕೈಗೊಳ್ಳಲಾಗುತ್ತಿದೆ. ಜೊತೆಗೆ ನೋಂದಣಿಯ ವಿಧಾನದಲ್ಲಿ ಕೆಲವು ಕಠಿಣ ಕ್ರಮಗಳನ್ನು ಜಾರಿಗೆ ತಂದಿರುವ ಕೇಂದ್ರ ಸರ್ಕಾರವು ಪ್ರತ್ಯೇಕ ಪ್ರಮಾಣ ಪತ್ರವನ್ನು ನೀಡುತ್ತಿದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ಹೊಸ ಸಾರಿಗೆ ನಿಯಮದಡಿ ಪ್ರಮಾಣಿಕರಿಸಿದ್ದಲ್ಲಿ 10 ವರ್ಷಗಳ ಕಾಲ ಮಾನ್ಯವಾಗಿರಲಿದ್ದು, 10 ವರ್ಷಗಳ ನಂತರ ಮತ್ತೆ ನವೀಕರಿಸಬಹುದಾಗಿದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಹೊಸ ಸಾರಿಗೆ ನಿಯಮದಡಿ ಪ್ರಮಾಣಪತ್ರ ಪಡೆಯಲು ಪ್ರತಿ ಕಾರಿಗೆ ರೂ. 20 ಸಾವಿರ ವೆಚ್ಚವಾಗಲಿದ್ದು, ಇದು 10 ವರ್ಷಗಳವರೆಗೆ ಮಾನ್ಯವಾಗಿರುತ್ತದೆ. 10 ವರ್ಷಗಳ ನಂತರ ನೋಂದಣಿಯನ್ನು ನವೀಕರಿಸಲು ಮಾಲೀಕರು ಹೆಚ್ಚುವರಿ ರೂ. 5 ಸಾವಿರ ಪಾವತಿ ಮಾಡಬೇಕಾಗುತ್ತದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಬದಲಾಗಲಿವೆ ವಿಂಟೇಜ್ ವಾಹನಗಳ ನಂಬರ್‌ ಪ್ಲೇಟ್

ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿಗೆ ಜಾರಿಗೆ ತರಲಾದ ಹೊಸ ಸಾರಿಗೆ ನಿಯಮಗಳ ಜೊತೆಗೆ ಹಳೆಯ ವಾಹನಗಳಿಗೆ ವಿಶೇಷವಾದ ನೋಂದಣಿ ಸಂಖ್ಯೆಯನ್ನು ವಿತರಿಸಲಾಗುತ್ತಿದ್ದು, ಹೊಸ ಸಾರಿಗೆ ನಿಯಮದಡಿ ನೋಂದಣಿಯಾದ ವಾಹನಗಳ ಗುರುತಿಸಲು ಪ್ರತ್ಯೇಕ ನೋಂದಣಿ ಸಂಖ್ಯೆಯನ್ನು ನಮೂದಿಸಲಾಗುತ್ತದೆ. ಹೊಸ ಸ್ವರೂಪ ನೋಂದಣಿ ಸಂಖ್ಯೆಯು XX VA YY **** ಮಾದರಿಯಲ್ಲಿರಲಿದ್ದು, ಇದು ವಿಂಟೇಜ್ ವಾಹನ ಎಂಬುವುದು ಗುರುತಿಸಲು ಸಹಕಾರಿಯಾಗಲಿದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿಗೆ ನೀಡಲಾಗುವ ಹೊಸ ನೋಂದಣಿ ಸಂಖ್ಯೆಯಿಂದ ನಿಯಮ ಬಾಹಿರವಾಗಿ ಓಡಾವ ಹಳೆಯ ವಾಹನಗಳನ್ನು ನಿಯಂತ್ರಿಸಲು ಸಹಕಾರಿಯಾಗಿದ್ದು, ವಾಹನ ಉತ್ಪಾದನಾ ವರ್ಷ ಮತ್ತು ತಾಂತ್ರಿಕ ಅಂಶಗಳ ಆಧಾರದ ಮೇಲೆ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ಮಾನ್ಯ ಮಾಡಲಾಗುತ್ತದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಇನ್ನು ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳು ಆಧುನಿಕ ವಾಹನಗಳ ಮಾದರಿಯಲ್ಲಿ ನಿರ್ದಿಷ್ಟ ಸಂಖ್ಯೆಯನ್ನು ಹೊಂದಿರುವುದಿಲ್ಲವಾದರೂ ಆಯಾ ರಾಜ್ಯಗಳಲ್ಲಿ ಸಾರಿಗೆ ನಿಯಮ ಅನುಸಾರವಾಗಿರುತ್ತದೆ. ಆದರೆ ಹೊಸ ನಿಯಮದಿಂದ ವಿಂಟೇಜ್ ವಾಹನಗಳಿಗೆ ಪ್ರತ್ಯೇಕವಾದ ನಂಬರ್ ಪ್ಲೇಟ್ ಸೂಚಿಸಲಿದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಎಕ್ಸ್ಎಕ್ಸ್ ಎನ್ನುವುದು ಆಯಾ ರಾಜ್ಯಗಳನ್ನು ಪ್ರತಿನಿಧಿಸಲು ವಿಎ ಎನ್ನುವ ವಿಂಟೇಜ್ ಎಂದು ಪ್ರತಿನಿಧಿಸಲು ಮತ್ತು ವೈವೈ ಹಾಗೂ **** ಕೋಡ್ ನೆಮ್ ಅನ್ನು ವಾಹನಗಳಿಗೆ ಆಯಾ ರಾಜ್ಯಗಳ ನೋಂದಣಿ ಪ್ರಾಧಿಕಾರದ ಸಂಖ್ಯೆಯನ್ನು ಸೂಚಿಸಲಿದ್ದು, ಹೊಸ ನಂಬರ್ ಪ್ಲೇಟ್‌ಗಳ ಅಕ್ಷರಗಳನ್ನು ಹಸಿರು ಬಣ್ಣದೊಂದಿಗೆ ಸಮ್ಮಿಶ್ರಣಗೊಳಿಸಲಾಗುತ್ತಿದೆ.

MOST READ: ಪ್ರತಿ ಚಾರ್ಜ್‌ಗೆ ಗರಿಷ್ಠ 509ಕಿ.ಮೀ ಮೈಲೇಜ್ ನೀಡಲಿದೆ ಸ್ಕೋಡಾ ಎನ್ಯಾಕ್ ಎಲೆಕ್ಟ್ರಿಕ್ ಎಸ್‌ಯುವಿ..!

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಹೊಸ ಸಾರಿಗೆ ನಿಯಮದಿಂದ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿಗೆ ಮತ್ತೊಂದು ಪ್ರಮುಖ ಲಾಭವೆಂದರೆ ವಿಂಟೇಜ್ ವಾಹನಗಳ ಮಾಲೀಕರು ಸುಲಭವಾದ ಸಾರಿಗೆ ನಿಯಮಗಳೊಂದಿಗೆ ಮರುಮಾರಾಟ ಮಾಡಲು ಮತ್ತು ಖರೀದಿಗೆ ಹೊಂದಿರುವ ಗ್ರಾಹಕರು ಸುಲಭವಾಗಿ ಮರುನೋಂದಣಿ ಮಾಡಿಕೊಳ್ಳಬಹುದಾಗಿದೆ.

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳನ್ನು ಮಾರಾಟ ಮಾಡಿದ ಅಥವಾ ಖರೀದಿಸಿದ 90 ದಿನಗಳ ಒಳಗಾಗಿ ಖರೀದಿದಾರ ಅಥವಾ ಮಾರಾಟಗಾರನು ಆಯಾ ರಾಜ್ಯಗಳ ಸಂಬಂಧಪಟ್ಟ ಸಾರಿಗೆ ಅಧಿಕಾರಿಗಳಿಗೆ ಕಡ್ಡಾಯವಾಗಿ ಮಾಹಿತಿ ನೀಡಬೇಕಿದ್ದು, ಮಾನ್ಯತೆಯನ್ನು ದೃಡಿಕರಿಸಲು ಮರುನೋಂದಣಿಯು ಅವಶ್ಯವಾಗಿರುತ್ತದೆ.

MOST READ: ಭಾರತದಲ್ಲಿ ಎರಡು ಹೊಸ ಎಸ್‌ಯುವಿ ಕಾರು ಮಾದರಿಗಳನ್ನು ಬಿಡುಗಡೆ ಮಾಡಲಿದೆ ಹ್ಯುಂಡೈ

ಕ್ಲಾಸಿಕ್ ಹಾಗೂ ವಿಂಟೇಜ್ ವಾಹನಗಳಿಗೆ ಪ್ರತ್ಯೇಕ ನೋಂದಣಿ ನಿಯಮ ಜಾರಿ

ಇನ್ನು ಹೊಸ ಸಾರಿಗೆ ನಿಯಮದಿಂದ ಕ್ಲಾಸಿಕ್ ಮತ್ತು ವಿಂಟೇಜ್ ವಾಹನಗಳಿರುವ ಹಲವು ನಿರ್ಬಂಧಗಳು ಸಡಿಲಗೊಂಡಿದ್ದು, ವಾಹನ ಪ್ರದರ್ಶನ, ತಾಂತ್ರಿಕ ಸಂಶೋಧನೆ ಅಥವಾ ವಿಂಟೇಜ್ ವಾಹನಗಳ ರ‍್ಯಾಲಿಗಳಲ್ಲಿ ಭಾಗವಹಿಸಲು ಪ್ರತ್ಯೇಕವಾಗಿ ಭಾರತೀಯ ರಸ್ತೆಗಳಲ್ಲಿ ಓಡಲು ಅನುಮತಿಸಲಾಗುತ್ತಿದೆ.

Most Read Articles

Kannada
English summary
New registration rules for vintage and classic vehicles in India. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X