ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಭಾರತದ ರಸ್ತೆಗಳಲ್ಲಿ ಚಿತ್ರ ವಿಚಿತ್ರ ಸಂಗತಿಗಳನ್ನು ಕಾಣಬಹುದು. ಭಾರತದ ರಸ್ತೆಗಳಲ್ಲಿ ಸಾಗುವ ಕಾರುಗಳ ಹಿಂಭಾಗದಲ್ಲಿ ಬಟ್ಟೆ, ಆಹಾರ, ಕೆಲವೊಮ್ಮೆ ಆಲಂಕಾರಿಕ ವಸ್ತುಗಳನ್ನು ಇಟ್ಟಿರುವುದನ್ನು ಕಾಣಬಹುದು.

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಸಾಮಾನ್ಯವಾಗಿ ತಳ್ಳುವ ಗಾಡಿಗಳಲ್ಲಿ, ಆಟೋ ರಿಕ್ಷಾಗಳಲ್ಲಿ ಇಲ್ಲವೇ ಗೂಡ್ಸ್ ಕ್ಯಾರಿಯರ್'ಗಳಲ್ಲಿ ತರಕಾರಿಗಳನ್ನು ಮಾರಾಟ ಮಾಡಲಾಗುತ್ತದೆ. ಆದರೆ ಮಹಾರಾಷ್ಟ್ರದ ವ್ಯಕ್ತಿಯೊಬ್ಬರು ಕಾರಿನಲ್ಲಿ ತರಕಾರಿಗಳನ್ನು ಮಾರುತ್ತಿದ್ದಾರೆ. ಆಶ್ಚರ್ಯಕರ ಸಂಗತಿಯೆಂದರೆ ಅವರು ತರಕಾರಿ ಮಾರಾಟ ಮಾಡಲು ಹೊಸ ಟೊಯೊಟಾ ಫಾರ್ಚೂನರ್ ಕಾರ್ ಅನ್ನು ಬಳಸಿದ್ದಾರೆ.

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಇವರು ತರಕಾರಿ ಮಾರಾಟ ಮಾಡುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವೀಡಿಯೊದಲ್ಲಿ ಅವರು ಹೊಸ ತಲೆಮಾರಿನ ಫಾರ್ಚೂನರ್‌ ಕಾರಿನಲ್ಲಿ ತರಕಾರಿ ಮಾರಾಟ ಮಾಡುತ್ತಿರುವುದನ್ನು ಕಾಣಬಹುದು.

MOST READ:ವಾಹನ ಖರೀದಿಸುವವರಿಗೆ, ಮಾರಾಟ ಮಾಡುವವರಿಗೆ ನೆರವಾಗುವ ಆರ್‌ಟಿಒ ಫಾರಂಗಳಿವು!

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಈ ಘಟನೆ ನಡೆದಿರುವ ನಿಖರವಾದ ಸ್ಥಳದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಆದರೆ ಈ ವೀಡಿಯೊದಲ್ಲಿ ಮರಾಠಿ ಮಾತನಾಡುತ್ತಿದ್ದಾರೆ. ಇದರಿಂದ ಈ ಘಟನೆ ಮಹಾರಾಷ್ಟ್ರದಲ್ಲಿ ನಡೆದಿರುವುದು ಖಚಿತ.

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ತರಕಾರಿ ಮಾರಾಟ ಮಾಡುತ್ತಿರುವ ವ್ಯಕ್ತಿ ಹೊಸ ತಲೆಮಾರಿನ ಟೊಯೊಟಾ ಫಾರ್ಚೂನರ್‌ ಕಾರಿನ ಬೂಟ್‌ನಲ್ಲಿ ವಿವಿಧ ತರಕಾರಿಗಳನ್ನು ಇಟ್ಟಿರುವುದನ್ನು ವೀಡಿಯೊದಲ್ಲಿ ಕಾಣಬಹುದು.

MOST READ:ಎಲೆಕ್ಟ್ರಿಕ್ ದ್ವಿಚಕ್ರ ವಾಹನ ಖರೀದಿಗೂ ಮುನ್ನ ಪರಿಶೀಲಿಸಬೇಕಾದ ಸಂಗತಿಗಳಿವು

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ತರಕಾರಿಗಳನ್ನು ಖರೀದಿಸಲು ಇಬ್ಬರು ನಿಂತಿರುವುದನ್ನು ಕಾಣಬಹುದು. ತರಕಾರಿಗಳನ್ನು ತೂಕ ಹಾಕಲು ಫಾರ್ಚೂನರ್‌ ಕಾರಿನ ಬೂಟ್‌ನಲ್ಲಿ ಡಿಜಿಟಲ್ ಸ್ಕೇಲ್ ಇಡಲಾಗಿದೆ. ಈ ಟೊಯೊಟಾ ಫಾರ್ಚೂನರ್ ಕಾರಿನ ಮಾಲೀಕರ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಈ ಕಾರಿನ ಮಾಲೀಕರು ಕಾರನ್ನು ತರಕಾರಿ ಮಾರಾಟ ಮಾಡುವವರಿಗೆ ನೀಡಿರುವ ಸಾಧ್ಯತೆಗಳಿವೆ. ಭಾರತದ ರಸ್ತೆಗಳಲ್ಲಿ ಕಾರುಗಳನ್ನು ತಾತ್ಕಾಲಿಕ ಅಂಗಡಿಗಳಾಗಿ ಬಳಸಿ ತರಕಾರಿ ಹಾಗೂ ಹಣ್ಣುಗಳನ್ನು ಮಾರಾಟ ಮಾಡಲಾಗುತ್ತದೆ.

MOST READ:10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಆದರೆ ತರಕಾರಿ ಮಾರಾಟ ಮಾಡಲು ಹೊಸ ತಲೆಮಾರಿನ ಟೊಯೊಟಾ ಫಾರ್ಚೂನರ್ ಕಾರ್ ಅನ್ನು ಬಳಸಿರುವುದು ನಿಜಕ್ಕೂ ಅಚ್ಚರಿಯ ಸಂಗತಿಯಾಗಿದೆ.ತಾತ್ಕಾಲಿಕವಾಗಿ ತರಕಾರಿ ಮಾರಾಟ ಮಾಡಲು ಯಾವುದೇ ರೀತಿಯ ಪರವಾನಗಿ ಪಡೆಯುವ ಅಗತ್ಯವಿಲ್ಲ.

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಈ ವಾಹನಗಳಿಂದ ಎಲ್ಲಿ ಬೇಕಾದರೂ ತರಕಾರಿಗಳನ್ನು ಮಾರಾಟ ಮಾಡಬಹುದು. ಈ ವೀಡಿಯೊವನ್ನು ರೆಕಾರ್ಡ್ ಮಾಡುವ ವ್ಯಕ್ತಿಯು ತರಕಾರಿ ಮಾರಾಟ ಮಾಡುವ ವ್ಯಕ್ತಿಯೊಂದಿಗೆ ಮಾತನಾಡುತ್ತಾ ಕಾರು ಯಾರಿಗೆ ಸೇರಿದ್ದು ಎಂದು ಕೇಳುತ್ತಾನೆ.

MOST READ:ವರ್ಷಗಳ ಕಾಲ ಉಪ್ಪು ನೀರಿನಲ್ಲಿದ್ದರೂ ಹಡಗುಗಳ ಆಂಕರ್‌ಗಳಿಗೆ ತುಕ್ಕು ಹಿಡಿಯದಿರಲು ಕಾರಣಗಳಿವು

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಆದರೆ ಮಾರಾಟಗಾರ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವುದಿಲ್ಲ. ತರಕಾರಿ ಮಾರಾಟ ಮಾಡುತ್ತಿರುವ ವ್ಯಕ್ತಿ ರೈತನಾಗಿರ ಬಹುದು. ರೈತರು ಇಂತಹ ವಾಹನಗಳನ್ನು ಹೊಂದಿರುವುದು ದೊಡ್ಡ ಸಂಗತಿಯಲ್ಲ.

ಆದರೆ ಈ ಟೊಯೊಟಾ ಫಾರ್ಚೂನರ್ ವೈದ್ಯರಿಗೆ ಸೇರಿದೆ ಎಂಬುದು ವೀಡಿಯೊ ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯಿಂದ ತಿಳಿದು ಬಂದಿದೆ. ವೈದ್ಯರು ಈ ವ್ಯಕ್ತಿಗೆ ಕಾರು ಮಾರಾಟ ಮಾಡಿರುವ ಸಾಧ್ಯತೆಗಳೂ ಇವೆ.

MOST READ:ಜೀವದ ಹಂಗು ತೊರೆದು ಮಗುವಿನ ಪ್ರಾಣ ಉಳಿಸಿದ ರಿಯಲ್ ಹೀರೋಗೆ ಬೈಕ್ ಉಡುಗೊರೆ ನೀಡಿದ ಜಾವಾ ಕಂಪನಿ

ತರಕಾರಿ ಮಾರಾಟಕ್ಕೆ ಬಳಕೆಯಾಯ್ತು ಹೊಸ ಟೊಯೊಟಾ ಫಾರ್ಚೂನರ್ ಕಾರು

ಈ ವ್ಯಕ್ತಿ ಯಾವ ಕಾರಣಕ್ಕೆ ಟೊಯೊಟಾ ಫಾರ್ಚೂನರ್ ಕಾರು ಬಳಸಿ ತರಕಾರಿ ಮಾರಾಟ ಮಾಡಿದ ಎಂಬುದು ತಿಳಿದು ಬಂದಿಲ್ಲ. ಮಹಾರಾಷ್ಟ್ರದಲ್ಲಿ ಕೃಷಿಯಿಂದಲೇ ಲಕ್ಷಾಂತರ ರೂಪಾಯಿ ಆದಾಯ ಗಳಿಸುತ್ತಿರುವ ಹಲವಾರು ರೈತರಿದ್ದಾರೆ ಎಂಬುದು ಗಮನಾರ್ಹ.

Most Read Articles

Kannada
English summary
New Toyota Fortuner used for vegetables selling. Read in Kannada.
Story first published: Thursday, May 13, 2021, 20:36 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X