ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಕರೋನಾ ವೈರಸ್ ಎರಡನೇ ಅಲೆ ಭಾರತದಲ್ಲಿ ವೇಗವಾಗಿ ಹರಡುತ್ತಿದೆ. ಈ ಅಲೆ ಕೆಲವು ರಾಜ್ಯಗಳಲ್ಲಿ ಅತಿ ಸೂಕ್ಷ್ಮವಾಗಿದೆ. ಸೋಂಕಿತರ ಸಂಖ್ಯೆ ಹೆಚ್ಚಾದಂತೆ ಆಸ್ಪತ್ರೆಗಳಲ್ಲಿ ಬೆಡ್ ಕೊರತೆ ಎದುರಾಗಿದೆ.

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಈ ಎರಡನೇ ಅಲೆಯಲ್ಲಿ ಸೋಂಕಿತರು ಉಸಿರಾಟದ ತೊಂದರೆ ಅನುಭವಿಸುತ್ತಿದ್ದಾರೆ. ಪ್ರತಿ ನಿತ್ಯ 4 ಲಕ್ಷ ಸೋಂಕಿತ ಪ್ರಕರಣಗಳ ಸಂಖ್ಯೆ ವರದಿಯಾಗುತ್ತಿರುವುದರಿಂದ ದೇಶಾದ್ಯಂತ ಐಸಿಯು ಹಾಗೂ ಆಕ್ಸಿಜನ್'ಗಳಿಗೆ ಆಕ್ಸಿಜನ್ ಕೊರತೆ ಎದುರಾಗಿದೆ. ಸಕಾಲಕ್ಕೆ ಆಕ್ಸಿಜನ್ ಸಿಗದ ಕಾರಣಕ್ಕೆ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ.

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಆಕ್ಸಿಜನ್ ಕೊರತೆ ನೀಗಿಸಲು ಕೇಂದ್ರ ಸರ್ಕಾರ ಸಾಕಷ್ಟು ಶ್ರಮಿಸುತ್ತಿದೆ. ಕೇಂದ್ರ ಸರ್ಕಾರದ ಜೊತೆಗೆ ಕೈ ಜೋಡಿಸಿರುವ ಹಲವು ವಾಹನ ತಯಾರಕ ಕಂಪನಿಗಳು ಆಕ್ಸಿಜನ್ ಕೊರತೆಯನ್ನು ನೀಗಿಸಲು ತಮ್ಮ ಉತ್ಪಾದನಾ ಘಟಕಗಳಲ್ಲಿ ಆಕ್ಸಿಜನ್ ಉತ್ಪಾದಿಸುತ್ತಿವೆ.

MOST READ:ವಿಮಾನಗಳು ಹಾರಾಟ ನಡೆಸುವಾಗ, ಲ್ಯಾಂಡಿಂಗ್ ಆಗುವಾಗ ಉಂಟಾಗುವ ಶಬ್ದಗಳಿವು

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಜನರು ಆಕ್ಸಿಜನ್ ಕೊರತೆಯಿಂದಾಗಿ ಮೃತಪಡುವುದನ್ನು ತಪ್ಪಿಸಲು, ಸರ್ಕಾರ ಹಾಗೂ ಕಂಪನಿಗಳು ತಮ್ಮ ಕೈಲಾದಷ್ಟು ನೆರವು ನೀಡುತ್ತಿವೆ. ಈಗ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು (ಎನ್‌ಹೆಚ್‌ಎಐ) ಆಕ್ಸಿಜನ್ ಸಾಗಿಸುವ ಎಲ್ಲಾ ಟ್ಯಾಂಕರ್'ಗಳು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಪಾವತಿಸದೇ ಸಂಚರಿಸಬಹುದು ಎಂದು ಘೋಷಿಸಿದೆ.

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಆಕ್ಸಿಜನ್ ಸಾಗಿಸಲು ಯಾವುದೇ ವಿಳಂಬವಾಗದೇ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ತಲುಪಿಸುವ ಉದ್ದೇಶದಿಂದ ಎನ್‌ಹೆಚ್‌ಎಐ ಈ ನಿರ್ಧಾರ ಕೈಗೊಂಡಿದೆ. ಈ ಮೂಲಕ ಎನ್‌ಹೆಚ್‌ಎಐ ಮೆಡಿಕಲ್ ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಫ್ರೀ ಯೋಜನೆಯನ್ನು ಪ್ರಕಟಿಸಿದೆ.

MOST READ:ಪ್ರವಾಸದ ಹುಚ್ಚಿಗಾಗಿ ವಾಹನ ಕದಿಯುತ್ತಿದ್ದ ಎಂಜಿನಿಯರಿಂಗ್ ಪದವೀಧರ ಕೊನೆಗೂ ಲಾಕ್

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಮೆಡಿಕಲ್ ಆಕ್ಸಿಜನ್ ಟ್ಯಾಂಕರ್ ಸಾಗಿಸುವ ಟ್ಯಾಂಕರ್'ಗಳನ್ನು ಜೀವ ಉಳಿಸುವ ಆಂಬ್ಯುಲೆನ್ಸ್‌ಗಳಿಗೆ ಹೋಲಿಸುವ ಮೂಲಕ ಈ ವಿನಾಯಿತಿ ಘೋಷಿಸಲಾಗಿದೆ. ಇದರಿಂದಾಗಿ ಮೆಡಿಕಲ್ ಆಕ್ಸಿಜನ್ ಹೊತ್ತು ಸಾಗುವ ಟ್ಯಾಂಕರ್'ಗಳು ಯಾವುದೇ ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ಗಳಲ್ಲಿ ಟೋಲ್ ಪಾವತಿಸುವ ಅಗತ್ಯವಿಲ್ಲ.

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಈ ವಿನಾಯಿತಿಯು ಮುಂದಿನ ಎರಡು ತಿಂಗಳು ಅಥವಾ ಅಧಿಕೃತ ಪ್ರಕಟಣೆ ಬರುವವರೆಗೆ ಜಾರಿಯಲ್ಲಿರಲಿದೆ ಎಂದು ಎನ್‌ಹೆಚ್‌ಎಐ ಹೇಳಿದೆ. ಎನ್‌ಹೆಚ್‌ಎಐನ ಈ ಕ್ರಮಕ್ಕೆ ಸಾರ್ವಜನಿಕರು ಮೆಚ್ಚುಗೆ ಸೂಚಿಸಿದ್ದಾರೆ.

MOST READ:ಭಾರತದಲ್ಲಿ ಹೆಚ್ಚು ಕಾರು ಮಾರಾಟವಾಗುವ ಹತ್ತು ಪ್ರಮುಖ ನಗರಗಳಿವು

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಮೆಡಿಕಲ್ ಆಕ್ಸಿಜನ್'ಗಳನ್ನು ಸಾಗಿಸುವ ಟ್ಯಾಂಕರ್'ಗಳ ಚಾಲಕರಿಗೂ ಜನ ಮೆಚ್ಚುಗೆ ವ್ಯಕ್ತವಾಗಿದೆ. ಕರೋನಾ ವೈರಸ್ ಮೊದಲ ಅಲೆಯಲ್ಲಿ ವೆಂಟಿಲೇಟರ್‌ಗಳಿಗೆ ಹೆಚ್ಚು ಬೇಡಿಕೆ ಉಂಟಾಗಿತ್ತು.

ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಿದ ಎನ್‌ಹೆಚ್‌ಎಐ

ಆದರೆ ಎರಡನೇ ಅಲೆಯಲ್ಲಿ ಸೋಂಕಿತರಿಗೆ ಉಸಿರಾಟದ ತೊಂದರೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಆಕ್ಸಿಜನ್'ಗೆ ಹೆಚ್ಚು ಬೇಡಿಕೆ ಉಂಟಾಗಿದೆ. ಆಕ್ಸಿಜನ್ ಹೊತ್ತೊಯ್ಯುತ್ತಿದ್ದ ವಾಹನಗಳು ಕೆಲವೊಮ್ಮೆ ಟೋಲ್ ಪ್ಲಾಜಾಗಳಲ್ಲಿ ಹೆಚ್ಚು ಹೊತ್ತು ಕಾಯಬೇಕಾಗುತ್ತಿತ್ತು. ಈ ಕಾರಣಕ್ಕೆ ಆಕ್ಸಿಜನ್ ಸಾಗಿಸುವ ಟ್ಯಾಂಕರ್'ಗಳಿಗೆ ಟೋಲ್ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ.

Most Read Articles

Kannada
English summary
NHAI gives toll fee exemption for tankers carrying medical oxygen. Read in Kannada.
Story first published: Tuesday, May 11, 2021, 16:20 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X