ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ದೇಶಾದ್ಯಂತವಿರುವ ಎಲ್ಲಾ ಟೋಲ್ ಪ್ಲಾಜಾಗಳ ಮೂಲಕ ಹಾದು ಹೋಗಲು ಫಾಸ್ಟ್‌ಟ್ಯಾಗ್ ಕಡ್ಡಾಯಗೊಳಿಸಲಾಗಿದೆ. ಇದರಿಂದಾಗಿ ಟೋಲ್ ಪ್ಲಾಜಾಗಳಲ್ಲಿ ಹಲವು ಸಮಸ್ಯೆಗಳು ಎದುರಾಗಿವೆ. ಮುಖ್ಯವಾಗಿ ಟೋಲ್ ಪ್ಲಾಜಾಗಳಲ್ಲಿ ವಾಹನಗಳ ಉದ್ದನೆಯ ಸಾಲುಗಳು ಕಂಡು ಬರುತ್ತಿವೆ.

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಫಾಸ್ಟ್‌ಟ್ಯಾಗ್ ಪರಿಚಯಿಸಿದ ಮುಖ್ಯ ಉದ್ದೇಶವೆಂದರೆ ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಸಾಲುಗಟ್ಟಿ ನಿಲ್ಲುವುದನ್ನು ತಡೆಗಟ್ಟುವುದು. ಆದರೆ ಈಗಿನ ಪರಿಸ್ಥಿತಿ ಇದಕ್ಕೆ ತದ್ವಿರುದ್ಧವಾಗಿದೆ. ಕೆಲವು ಟೋಲ್ ಪ್ಲಾಜಾಗಳಲ್ಲಿ ವಾಹನಗಳು ಅರ್ಧ ಗಂಟೆಗಳವರೆ ಕಾಯಬೇಕಾಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ.

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಕೆಲವು ಟೋಲ್ ಪ್ಲಾಜಾಗಳಲ್ಲಿರುವ ಸೆನ್ಸಾರ್'ಗಳಿಗೆ ಫಾಸ್ಟ್‌ಟ್ಯಾಗ್'ಗಳನ್ನು ಸ್ಕ್ಯಾನ್ ಮಾಡಲು ಸಾಧ್ಯವಾಗುತ್ತಿಲ್ಲ. ಇದರಿಂದಾಗಿ ವಾಹನ ಸವಾರರು ಟೋಲ್ ಪ್ಲಾಜಾಗಳಲ್ಲಿ ಕಾಯುವುದು ಅನಿವಾರ್ಯವಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಈ ಸಮಸ್ಯೆಯನ್ನು ಪರಿಹರಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಹೊಸ ಯೋಜನೆಯನ್ನು ಜಾರಿಗೆ ತಂದಿದೆ ಎಂದು ವರದಿಯಾಗಿದೆ. ಈ ಹೊಸ ಯೋಜನೆಯಡಿ ಟೋಲ್ ಪ್ಲಾಜಾಗಳ ಪ್ರತಿ ಲೇನ್‌ನಲ್ಲಿ ವಿಭಿನ್ನ ಬಣ್ಣದ ಗೆರೆಗಳನ್ನು ಹಾಕಲಾಗುತ್ತದೆ.

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಈ ಗೆರೆಗಳನ್ನು ಟೋಲ್ ಪ್ಲಾಜಾಗಳಿಂದ ಕೆಲವು ದೂರದಲ್ಲಿ ಎಳೆಯಲಾಗುತ್ತದೆ. ಕ್ಯೂನಲ್ಲಿ ನಿಂತಿರುವ ವಾಹನಗಳು ಈ ಗೆರೆಗಳನ್ನು ಮುಟ್ಟಿದರೆ, ಟೋಲ್ ಗೇಟ್ ಆಪರೇಟರ್ ತಕ್ಷಣವೇ ಆ ಲೇನ್'ನಲ್ಲಿರುವ ಟೋಲ್ ಗೇಟ್ ತೆರೆಯಬೇಕಾಗುತ್ತದೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಈ ಮೂಲಕ ಆ ಲೇನ್‌ನಲ್ಲಿ ನಿಲ್ಲಿಸಿರುವ ವಾಹನಗಳಿಗೆ ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡಬೇಕಾಗುತ್ತದೆ. ಈ ಬಗ್ಗೆ ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಟಿಸಿದೆ. ಸದ್ಯಕ್ಕೆ ಈ ಯೋಜನೆಯು ಸಮಾಲೋಚನಾ ಮಟ್ಟದಲ್ಲಿದೆ.

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಈ ಯೋಜನೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೊಸ ಯೋಜನೆಯಡಿ ಎಳೆಯುವ ರೇಖೆಗಳು ಒಂದು ಟೋಲ್ ಪ್ಲಾಜಾದಿಂದ ಮತ್ತೊಂದು ಟೋಲ್ ಪ್ಲಾಜಾಕ್ಕೆ ಬೇರೆ ಬೇರೆಯಾಗಿರುತ್ತವೆ ಎಂದು ಹೇಳಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಟೋಲ್ ಪ್ಲಾಜಾಗಳಿಂದ ಎಷ್ಟು ದೂರದಲ್ಲಿ ಈ ಗೆರೆಗಳನ್ನು ಎಳೆಯಲಾಗುತ್ತದೆ ಎಂಬುದನ್ನು ವಿವಿಧ ಅಂಶಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಇವುಗಳಲ್ಲಿ ಸಂಬಂಧಪಟ್ಟ ಟೋಲ್ ಪ್ಲಾಜಾದಲ್ಲಿ ಎಷ್ಟು ಲೇನ್‌ಗಳಿವೆ ಎಂಬ ಅಂಶವು ಸಹ ಮುಖ್ಯವಾಗುತ್ತದೆ.

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಈ ಹೊಸ ಯೋಜನೆಯಿಂದಾಗಿ ವಾಹನ ಸವಾರರು ಅನಗತ್ಯವಾಗಿ ಕಾಯುವುದು ತಪ್ಪುವ ನಿರೀಕ್ಷೆಗಳಿವೆ. ಟೋಲ್ ಪ್ಲಾಜಾಗಳಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲು ಈ ಯೋಜನೆ ನೆರವಾಗುತ್ತದೆ. ಆದರೆ ಈ ಹೊಸ ಯೋಜನೆ ಯಾವಾಗ ಜಾರಿಗೆ ಬರಲಿದೆ ಎಂಬುದು ದೃಢ ಪಟ್ಟಿಲ್ಲ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಟೋಲ್ ಪ್ಲಾಜಾಗಳಲ್ಲಿ ಗಂಟೆಗಟ್ಟಲೇ ಕಾಯುವ ವಾಹನ ಸವಾರರಿಗೆ ನೆರವಾಗಲಿದೆ ಎನ್‌ಹೆಚ್‌ಎಐನ ಈ ಹೊಸ ಯೋಜನೆ

ಟೋಲ್ ಪ್ಲಾಜಾಗಳಲ್ಲಿರುವ ಸ್ಕ್ಯಾನರ್'ಗಳು ಫಾಸ್ಟ್‌ಟ್ಯಾಗ್'ಗಳನ್ನು ಸ್ಕ್ಯಾನ್ ಮಾಡಲು ವಿಫಲವಾದರೆ ವಾಹನಗಳು ಉಚಿತವಾಗಿ ಮುಂದೆ ಸಾಗಲು ಅನುವು ಮಾಡಿಕೊಡುವಂತೆ ಟೋಲ್ ಪ್ಲಾಜಾ ಆಪರೇಟರ್'ಗಳಿಗೆ ಕಟ್ಟುನಿಟ್ಟಾಗಿ ಸೂಚನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಹೊಸ ಯೋಜನೆಯು ಟೋಲ್ ಪ್ಲಾಜಾಗಳಲ್ಲಿ ಉಂಟಾಗುತ್ತಿರುವ ವಾಹನ ದಟ್ಟಣೆಯನ್ನು ಕಡಿಮೆ ಮಾಡಲಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

Most Read Articles

Kannada
English summary
NHAI to introduce new plan to reduce congestion at toll plazas. Read in Kannada.
Story first published: Thursday, February 25, 2021, 10:05 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X