ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಮೈಸೂರು - ಚೆನ್ನೈ ನಡುವೆ ಬೆಂಗಳೂರು ಮೂಲಕ ಸಾಗುವ ಹೈ ಸ್ಪೀಡ್ ಬುಲೆಟ್ ರೈಲಿನ ಯೋಜನೆಯ ಅನುಷ್ಟಾನದ ಬಗ್ಗೆ ಹಲವಾರು ವರ್ಷಗಳಿಂದ ಮಾತುಗಳು ಕೇಳಿ ಬರುತ್ತಿವೆ. ಈಗ ಈ ಯೋಜನೆಯನ್ನು ತ್ವರಿತವಾಗಿ ಕೈಗೆತ್ತಿಕೊಳ್ಳಲಾಗಿದೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಭಾರತದ ಮೊದಲ ಬುಲೆಟ್ ರೈಲು ಯೋಜನೆಯಾದ ಅಹಮದಾಬಾದ್ ಹಾಗೂ ಮುಂಬೈ ನಡುವಿನ ಯೋಜನೆಯು ಹಲವಾರು ಅಡೆತಡೆಗಳನ್ನು ಎದುರಿಸುತ್ತಿದೆ. ಹಲವು ವಿದೇಶಿ ಕಾರ್ಪೊರೇಷನ್‍‍ಗಳು ಹಾಗೂ ರೈಲ್ವೆ ಇಂಜಿನಿಯರ್‍‍ಗಳ ತಂಡವು ಭಾರತದ ಐದು ವಿವಿಧ ಮಾರ್ಗಗಳಲ್ಲಿ ಬುಲೆಟ್ ರೈಲುಗಳ ಯೋಜನೆಯನ್ನು ಜಾರಿಗೊಳಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಈ ಹಿನ್ನೆಲೆಯಲ್ಲಿ ನ್ಯಾಶನಲ್ ಹೈ ಸ್ಪೀಡ್ ರೈಲು ಕಾರ್ಪೊರೇಷನ್ ಆಯ್ದ ಐದು ನಗರಗಳಲ್ಲಿ 300 ಕಿ.ಮೀ ವೇಗದಲ್ಲಿ ಚಲಿಸುವ ರೈಲುಗಳನ್ನು ಓಡಿಸಲು ಚಿಂತನೆ ನಡೆಸಿದೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಈ ನಗರಗಳಲ್ಲಿ 886 ಕಿ.ಮೀ ಉದ್ದದ ದೆಹಲಿ - ಅಹಮದಾಬಾದ್ ಮಾರ್ಗ, 753 ಕಿ.ಮೀ ಉದ್ದದ ಮುಂಬೈ - ನಾಗ್ಪುರ್ ಮಾರ್ಗ, 459 ಕಿ.ಮೀ ಉದ್ದದ ದೆಹಲಿ - ಅಮೃತ್‍‍ಸರ ಮಾರ್ಗ, ಮುಂಬೈ - ಹೈದರಾಬಾದ್ ನಡುವಿನ 711 ಕಿ.ಮೀ ಹಾಗೂ ಚೆನ್ನೈ - ಮೈಸೂರು ನಡುವಿನ 435 ಕಿ.ಮೀ ಉದ್ದದ ಮಾರ್ಗಗಳು ಸೇರಿವೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ನ್ಯಾಷನಲ್ ಹೈ ಸ್ಪೀಡ್ ರೈಲು ಪ್ರಾಧಿಕಾರವು ಇವುಗಳಲ್ಲಿ ಮೊದಲಿಗೆ ಚೆನ್ನೈ - ಮೈಸೂರು ನಡುವಿನ ಮಾರ್ಗದ ಹೈ ಸ್ಪೀಡ್ ರೈಲಿನ ವಿನ್ಯಾಸಕ್ಕಾಗಿ ಟೆಂಡರ್ ನೋಟಿಫಿಕೇಶನ್ ಹೊರಡಿಸಿದೆ. ಈ ಮಾರ್ಗದ ಟೆಂಡರ್ ಪ್ರಕ್ರಿಯೆಯು ಈ ತಿಂಗಳ ಕೊನೆಗೆ ಮುಕ್ತಾಯಗೊಳ್ಳುವ ಸಾಧ್ಯತೆಗಳಿವೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಬುಲೆಟ್ ರೈಲಿನ ಸಾಧ್ಯತೆಗಳನ್ನು ಅಂತಿಮಗೊಳಿಸುವ ಮುನ್ನ ಈಗಿರುವ ರೈಲ್ವೆ ಲೈನ್, ಈ ಮಾರ್ಗದಲ್ಲಿ ಬರುವ ಬ್ರಿಡ್ಜ್, ಅರಣ್ಯ ಹಾಗೂ ಭೌಗೋಳಿಕ ಸ್ಥಿತಿಯನ್ನು ಪರಿಗಣಿಸಲಾಗುವುದು. ಇವುಗಳನ್ನು ಟೆಂಡರಿಗೆ ಅರ್ಜಿ ಸಲ್ಲಿಸುವ ಕಂಪನಿಯು ಸಲ್ಲಿಸಲಿದೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಇವುಗಳನ್ನು ನೋಡಿದರೆ, ಹೈ ಸ್ಪೀಡ್ ಬುಲೆಟ್ ರೈಲುಗಳ ಕಾಮಗಾರಿಯು ಶೀಘ್ರದಲ್ಲಿಯೇ ಆರಂಭವಾಗುವ ಸಾಧ್ಯತೆಗಳಿವೆ. ರೈಲು ಪ್ರಯಾಣಿಕರು ಈ ಯೋಜನೆಯನ್ನು ಕೇಂದ್ರ ಸರ್ಕಾರವು ವಹಿಸಿಕೊಂಡು ವೇಗವಾಗಿ ಪೂರ್ಣಗೊಳಿಸಲಿ ಎಂಬ ನಿರೀಕ್ಷೆಯನ್ನು ಹೊಂದಿದ್ದಾರೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಮೈಸೂರು - ಬೆಂಗಳೂರು - ಚೆನ್ನೈ ಮಾರ್ಗವು ದಕ್ಷಿಣ ಭಾರತದ ಪ್ರಮುಖ ರೈಲು ಮಾರ್ಗಗಳಲ್ಲಿ ಒಂದಾಗಿದೆ. ಈ ಮಾರ್ಗವನ್ನು ಹೆಚ್ಚು ಬಳಸುವ ಜನರು ಈ ಬುಲೆಟ್ ರೈಲು ಶೀಘ್ರದಲ್ಲಿ ಆರಂಭವಾಗಲಿ ಎಂದು ಕಾತುರದಿಂದ ಕಾಯುತ್ತಿದ್ದಾರೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಮೈಸೂರು - ಬೆಂಗಳೂರು - ಚೆನ್ನೈ ಮಾರ್ಗದಲ್ಲಿ ಬುಲೆಟ್ ರೈಲು ಪ್ರತಿ ಗಂಟೆಗೆ 300 ಕಿ.ಮೀ ವೇಗದಲ್ಲಿ ಸಾಗಿದರೆ, ಮೈಸೂರಿನಿಂದ ಚೆನ್ನೈಯನ್ನು ಕೇವಲ ಎರಡು ಗಂಟೆಗಳಲ್ಲಿ ತಲುಪಲಿದೆ. ಇದರಿಂದಾಗಿ ಲಕ್ಷಾಂತರ ಜನರಿಗೆ ಪ್ರಯೋಜನವಾಗಲಿದೆ.

ಶೀಘ್ರದಲ್ಲೇ ಅನುಷ್ಟಾನಗೊಳ್ಳಲಿದೆ ಮೈಸೂರು - ಚೆನ್ನೈ ಹೈಸ್ಪೀಡ್ ರೈಲು ಯೋಜನೆ

ಇದರ ಜೊತೆಗೆ ಈ ಯೋಜನೆಯು ನಿಜವಾಗಿಯೂ ಅನುಷ್ಟಾನವಾಗಲಿದೆಯೇ ಎಂಬ ಸಂದೇಹವು ಸಹ ಜನರನ್ನು ಕಾಡುತ್ತಿದೆ. ಅಹಮದಾಬಾದ್ - ಮುಂಬೈ ನಡುವಿನ ಬುಲೆಟ್ ರೈಲು ಯೋಜನೆಯು ಕುಂಟುತ್ತಾ ಸಾಗುತ್ತಿದೆ. ಇದರ ಬದಲು ಟ್ರೇನ್ 18ನಂತಹ ಆಧುನಿಕ ರೈಲುಗಳನ್ನು ಓಡಿಸುವುದು ಒಳ್ಳೆಯದು ಎಂಬುದು ಜನರ ಅಭಿಪ್ರಾಯ.

Most Read Articles

Kannada
English summary
NHSRC invites bid to design Chennai Bengaluru Mysore high speed rail line. Read in Kannada.
Story first published: Saturday, February 15, 2020, 17:40 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X