ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಭಾರತದಿಂದ ಪರಾರಿಯಾಗಿ ಸದ್ಯಕ್ಕೆ ಇಂಗ್ಲೆಂಡ್‍‍ನಲ್ಲಿರುವ ಉದ್ಯಮಿ ನೀರವ್ ಮೋದಿರವರ ಆಸ್ತಿಯನ್ನು ಸರ್ಕಾರವು ವಶಕ್ಕೆ ಪಡೆದಿದೆ. ಈ ಆಸ್ತಿಗಳನ್ನು ಹರಾಜು ಹಾಕಲು ಜಾರಿ ನಿರ್ದೇಶನಾಲಯವು ಮುಂದಾಗಿದೆ. ವಶಕ್ಕೆ ಪಡೆಯಲಾಗಿರುವ ವಸ್ತುಗಳನ್ನು ಫೆಬ್ರವರಿ 27ರಂದು ಸಾರ್ವಜನಿಕವಾಗಿ ಹರಾಜು ಹಾಕಲಾಗುವುದು.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಮಾರ್ಚ್ 3 ಹಾಗೂ 4ರಂದು ಈ ವಸ್ತುಗಳನ್ನು ಆನ್‍‍ಲೈನ್‍‍ನಲ್ಲಿ ಹರಾಜು ಹಾಕಲಾಗುವುದು. ಒಟ್ಟು 112 ವಸ್ತುಗಳನ್ನು ಹರಾಜು ಹಾಕಲಾಗುವುದು. ಈ ವಸ್ತುಗಳಲ್ಲಿ ಪೊರ್ಷೆ ಪನಾಮೆರಾ, ರೋಲ್ಸ್ ರಾಯ್ಸ್ ಘೋಸ್ಟ್ ಹಾಗೂ ಬೆಲೆ ಬಾಳುವ ಪೇಟಿಂಗ್‍‍ಗಳು ಸೇರಿವೆ.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಜಾರಿ ನಿರ್ದೇಶನಾಲಯವು ರೋಲ್ಸ್ ರಾಯ್ಸ್ ಘೋಸ್ಟ್ ಕಾರಿಗೆ ರೂ.1.5 ಕೋಟಿ ಮೂಲ ಬೆಲೆಯನ್ನು ಹಾಗೂ ಪೊರ್ಷೆ ಪನಾಮೆರಾ ಕಾರಿಗೆ ರೂ.60 ಲಕ್ಷ ಮೂಲ ಬೆಲೆಯನ್ನು ನಿಗದಿಪಡಿಸಿದೆ. ಈ ಕಾರಣಕ್ಕೆ ಈ ಹಿಂದೆ ನಿಗದಿಪಡಿಸಿದ್ದ ಹರಾಜಿನಲ್ಲಿ ಹೆಚ್ಚು ಜನರು ಪಾಲ್ಗೊಂಡಿರಲಿಲ್ಲ.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ವರದಿಗಳ ಪ್ರಕಾರ, ಘೋಸ್ಟ್ ಕಾರಿಗೆ ಹೊಸದಾಗಿ ರೂ.75 ಲಕ್ಷದಿಂದ ರೂ.95 ಲಕ್ಷದವರೆಗೆ ನಿಗದಿಪಡಿಸಲಾಗುವುದು. ಆದರೆ ಪೊರ್ಷೆ ಪನಾಮೆರಾ ಕಾರಿನ ಬೆಲೆಯನ್ನು ಕಡಿಮೆಗೊಳಿಸಿಲ್ಲ. ಜಾರಿ ನಿರ್ದೇಶನಾಲಯವು ಮರ್ಸಿಡಿಸ್ ಬೆಂಝ್ ಜಿ‍ಎಲ್ ಕ್ಲಾಸ್ ಕಾರ್ ಅನ್ನು ರೂ.37.8 ಲಕ್ಷಗಳಿಗೆ ಹರಾಜು ಹಾಕಿತ್ತು.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಕಡಿಮೆ ಬಿಡ್ ಹೊಂದಿರುವ ಕಾರಣಕ್ಕೆ ಜಾರಿ ನಿರ್ದೇಶನಾಲಯವು 7 ಕಾರುಗಳ ಹರಾಜಿಗೆ ಅನುಮತಿ ನೀಡಿಲ್ಲ. ಹೆಚ್ಚು ಹಣವನ್ನು ಪಡೆಯುವ ಕಾರಣಕ್ಕೆ ಹೆಚ್ಚು ಮೂಲ ದರವನ್ನು ನಿಗದಿಪಡಿಸಿದೆ. ಆದರೆ ಹೆಚ್ಚಿನ ಬೆಲೆಯ ಕಾರಣಕ್ಕೆ ಯಾರೂ ಖರೀದಿಸಲು ಮುಂದಾಗುತ್ತಿಲ್ಲ.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಇಡಿ ಎರಡು ವಿಭಿನ್ನ ಬಗೆಯ ರೋಲ್ಸ್ ರಾಯ್ಸ್ ಘೋಸ್ಟ್ ಕಾರುಗಳನ್ನು ನೀರವ್ ಮೋದಿಯವರಿಂದ ವಶಕ್ಕೆ ಪಡೆದಿದೆ. ಬಿಳಿ ಬಣ್ಣವನ್ನು ಹೊಂದಿದ್ದ ರೋಲ್ಸ್ ರಾಯ್ಸ್ ಘೋಸ್ಟ್ ಕಾರ್ ಅನ್ನು 2019ರ ಏಪ್ರಿಲ್‍‍ನಲ್ಲಿ ರೂ.1.33 ಕೋಟಿಗಳಿಗೆ ಹರಾಜು ಹಾಕಲಾಗಿತ್ತು. ಮೂಲ ಬೆಲೆಗಿಂತ ರೂ.10,000 ಹೆಚ್ಚು ಹಣವನ್ನು ಪಡೆದಿತ್ತು.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಕಳೆದ ಬಾರಿಯ ಹರಾಜಿನಲ್ಲಿ ಪೊರ್ಷೆ ಪನಾಮೆರಾ ಕಾರು ರೂ.54 ಲಕ್ಷಗಳಿಗೆ ಹಾಗೂ ಮರ್ಸಿಡಿಸ್ ಬೆಂಝ್ ಜಿ‍ಎಲ್ 350 ಕಾರು ರೂ.53.76 ಲಕ್ಷಗಳಿಗೆ ಹರಾಜಾಗಿದ್ದವು. ಈಗ ಮತ್ತೆ ಹರಾಜು ಹಾಕಲಾಗುತ್ತಿರುವ ರೋಲ್ಸ್ ರಾಯ್ಸ್ ಕಾರು 2010ರ ಮಾದರಿಯಾಗಿದೆ.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಈ ಕಾರು 24,000 ಕಿ.ಮೀಗಳನ್ನು ಕ್ರಮಿಸಿದೆ. ಉತ್ತಮ ಸ್ಥಿತಿಯಲ್ಲಿರುವ ಈ ಕಾರಿನ ಮೇಲೆ ಯಾವುದೇ ಸ್ಕ್ರಾಚ್‍‍ಗಳಾಗಲಿ, ಡೆಂಟ್‍‍ಗಳಾಗಲಿ ಇಲ್ಲ. ಬಿಳಿ ಬಣ್ಣದಲ್ಲಿರುವ ಪೊರ್ಷೆ ಪನಾಮೆರಾ ಕಾರು ಸಹ ಉತ್ತಮವಾದ ಸ್ಥಿತಿಯಲ್ಲಿದೆ.

ಆನ್‍‍ಲೈನ್‍‍ನಲ್ಲಿ ಹರಾಜಾಗಲಿವೆ ನೀರವ್ ಮೋದಿ ಕಾರುಗಳು..!

ಹರಾಜು ಪ್ರಕ್ರಿಯೆ ಮೂಲಕ ಇಡಿ ಮೆಹುಲ್ ಚೋಕ್ಸಿಗೆ ಸೇರಿದ ಬಿ‍ಎಂ‍‍ಡಬ್ಲ್ಯು ಕಾರ್ ಅನ್ನು ರೂ.11.75 ಲಕ್ಷಗಳಿಗೆ ಮಾರಾಟ ಮಾಡಿದೆ. ರೂ.10.5 ಲಕ್ಷ ಮೂಲ ಬೆಲೆಯನ್ನು ಹೊಂದಿದ್ದ ಟೊಯೊಟಾ ಇನೊವಾ ಕ್ರಿಸ್ಟಾವನ್ನು ರೂ.18.06 ಲಕ್ಷಗಳಿಗೆ ಮಾರಾಟ ಮಾಡಲಾಗಿತ್ತು.

Most Read Articles

Kannada
English summary
Nirav Modi cars to be auctioned. Read in Kannada.
Story first published: Saturday, February 22, 2020, 17:01 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X