10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ನಿಸ್ಸಾನ್ ಮ್ಯಾಗ್ನೆಟ್ ಭಾರತದಲ್ಲಿ ಮಾರಾಟವಾಗುವ ಕಡಿಮೆ ಬೆಲೆಯ ಕಾರುಗಳಲ್ಲಿ ಒಂದಾಗಿದೆ. ಈ ಕಾರು ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತದೆ. ಕಡಿಮೆ ವೆಚ್ಚ ಹಾಗೂ ಕಡಿಮೆ ಮೆಂಟೆನೆನ್ಸ್ ಕಾರಣಕ್ಕೆ ಈ ಕಾರು ಹೆಚ್ಚು ಬೇಡಿಕೆಯನ್ನು ಹೊಂದಿದೆ.

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಮ್ಯಾಗ್ನೆಟ್ ಕಾರು ಗ್ರಾಹಕರಿಗೆ ಹಾಗೂ ಹೊಸ ಮ್ಯಾಗ್ನೆಟ್ ಕಾರು ಖರೀದಿಸಲು ಬಯಸುವವರಿಗೆ ಆಘಾತ ನೀಡುವಂತಹ ಘಟನೆಯೊಂದು ವರದಿಯಾಗಿದೆ. ಆಂಧ್ರಪ್ರದೇಶದ ಇಂದಿರಾ ಹರ್ಷ ವಿದೇಶದಲ್ಲಿ ನೆಲೆಸಿದ್ದರು. ಇತ್ತೀಚೆಗೆ ಅವರು ತಮ್ಮ ತವರಿಗೆ ಮರಳಿದ್ದಾರೆ.

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಅವರ ಮ್ಯಾಗ್ನೆಟ್ ಕಾರಿಗೆ ಎಪಿಎಸ್ಆರ್‌ಟಿ‌ಸಿ ಒಡೆತನದ ಸರ್ಕಾರಿ ಬಸ್ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ಅವರ ಮ್ಯಾಗ್ನೈಟ್ ಕಾರಿಗೆ ತೀವ್ರ ಪ್ರಮಾಣದ ಹಾನಿ ಸಂಭವಿಸಿದೆ. ಕಾರಿನ ಮುಂಭಾಗವು ತೀವ್ರವಾಗಿ ಹಾನಿಗೊಳಗಾಗಿತ್ತು.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಎಷ್ಟು ಪ್ರಮಾಣದಲ್ಲಿ ಹಾನಿಯಾಗಿತ್ತು ಎಂದರೆ ಇದು ಮ್ಯಾಗ್ನೆಟ್ ಕಾರು ಎಂದು ಗುರುತಿಸಲು ಸಾಧ್ಯವಾಗದಷ್ಟು ಹಾನಿಯಾಗಿತ್ತು. ಅಪಘಾತದಲ್ಲಿ ಗಂಭೀರ ಗಾಯಗಳಾದ ಕಾರಣಕ್ಕೆ ಇಂದಿರಾ ಹರ್ಷ ಅವರು ಕೆಲವು ದಿನಗಳವರೆಗೆ ಆಸ್ಪತ್ರೆಗೆ ದಾಖಲಾಗಿದ್ದರು.

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಇಂದಿರಾರವರು ಆಸ್ಪತ್ರೆಯಲ್ಲಿದ್ದ ವೇಳೆ ಅವರ ಸಹೋದರ ಕಾರನ್ನು ಸರ್ವೀಸ್ ಸೆಂಟರ್'ಗೆ ಕೊಂಡೊಯ್ದು ವಿಮೆ ಪಡೆಯುವ ಎಲ್ಲ ಕೆಲಸಗಳನ್ನು ನೋಡಿಕೊಂಡಿದ್ದಾರೆ. ಚೇತರಿಸಿಕೊಂಡ ಇಂದಿರಾ ಹರ್ಷ ಇತ್ತೀಚೆಗೆ ಮನೆಗೆ ಮರಳಿದ್ದಾರೆ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಆಗ ಸರ್ವೀಸ್ ಸೆಂಟರ್ ನೀಡಿದ ಬಿಲ್ ನೋಡಿ ಬೆಚ್ಚಿ ಬಿದ್ದಿದ್ದಾರೆ. ನಿಸ್ಸಾನ್ ಸರ್ವೀಸ್ ಸೆಂಟರ್ ರೂ.20,75,640ಗಳ ಬಿಲ್ ನೀಡಿದೆ. ಇಂದಿರಾ ಹರ್ಷ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಟರ್ಬೊ ಎಕ್ಸ್‌ವಿ ಪ್ರೀಮಿಯಂ ಸಿವಿಟಿ ಮಾದರಿಯನ್ನು ಬಳಸುತ್ತಿದ್ದಾರೆ.

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಈ ಕಾರು ರೂ.10 ಲಕ್ಷಗಳಿಗಿಂತ ಕಡಿಮೆ ಬೆಲೆಯನ್ನು ಹೊಂದಿದೆ. ಆದರೆ ಸರ್ವೀಸ್ ಸೆಂಟರ್ ಸುಮಾರು ರೂ.21 ಲಕ್ಷಗಳ ಬಿಲ್ ನೀಡಿದೆ. ಈ ಘಟನೆಯಿಂದಾಗಿ ಎಲ್ಲಾ ಮ್ಯಾಗ್ನೆಟ್ ಕಾರು ಗ್ರಾಹಕರು ಬೆಚ್ಚಿ ಬಿದ್ದಿರುವುದು ಸುಳ್ಳಲ್ಲ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ನಿರ್ವಹಣಾ ವೆಚ್ಚ ಕಡಿಮೆ ಎಂಬ ಕಾರಣಕ್ಕೆ ಸಾಕಷ್ಟು ಜನರು ನಿಸ್ಸಾನ್ ಮ್ಯಾಗ್ನೈಟ್ ಕಾರನ್ನು ಖರೀದಿಸುತ್ತಿದ್ದಾರೆ. ಈ ಪರಿಸ್ಥಿತಿಯಲ್ಲಿ ನಿಸ್ಸಾನ್ ಸರ್ವೀಸ್ ಸೆಂಟರ್ ಕಾರಿನ ಬೆಲೆಗಿಂತ 100%ನಷ್ಟು ಹೆಚ್ಚು ಬಿಲ್ ಮಾಡಿದೆ ಎಂದು ಇಂದಿರಾ ಹರ್ಷ ಹೇಳಿದರು.

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಈ ಬಿಲ್‌ನಲ್ಲಿ ಕಾರನ್ನು ಸರ್ವೀಸ್ ಸೆಂಟರ್'ಗೆ ಬಿಟ್ಟ ನಂತರದಿಂದ ರಿಪೇರಿ ಆಗುವವರೆಗೆ ಸುಮಾರು ರೂ.21 ಲಕ್ಷ ಖರ್ಚಾಗಿದೆ ಎಂದು ಹೇಳಲಾಗಿದೆ. ಕಂಪನಿಯು ಈ ಬಿಲ್'ನಲ್ಲಿ ಹಾನಿಗೊಳಗಾದ ಬಿಡಿಭಾಗಗಳ ಶುಲ್ಕ ಹಾಗೂ ಲೇಬರ್ ಚಾರ್ಜ್'ಗಳನ್ನು ಸಹ ಸೇರಿಸಿದೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಕಾರನ್ನು ಒಟ್ಟಾರೆಯಾಗಿ ರಿಪೇರಿ ಮಾಡಲು ಇಷ್ಟು ಮೊತ್ತದ ಬಿಲ್ ನೀಡಲಾಗಿದೆ. ಭಾರತದಲ್ಲಿ ನಿಸ್ಸಾನ್ ಮ್ಯಾಗ್ನೈಟ್ ಕಾರಿನ ಬೆಲೆ ರೂ.5.59 ಲಕ್ಷಗಳಿಂದ ರೂ.9.90 ಲಕ್ಷಗಳಾಗಿದೆ. ನಿಸ್ಸಾನ್ ಮ್ಯಾಗ್ನೈಟ್ ಕಾರಿನಲ್ಲಿ ಹಲವಾರು ಫೀಚರ್'ಗಳನ್ನು ಅಳವಡಿಸಲಾಗಿದೆ.

10 ಲಕ್ಷ ಬೆಲೆಯ ಕಾರಿಗೆ 20 ಲಕ್ಷದ ಬಿಲ್ ನೀಡಿದ ಸರ್ವೀಸ್ ಸೆಂಟರ್

ಈ ಸಬ್ ಕಾಂಪ್ಯಾಕ್ಟ್ ಎಸ್‌ಯುವಿಯು ನಯವಾದ ವಿನ್ಯಾಸ, ಹೈಟೆಕ್ ಫೀಚರ್ ಹಾಗೂ ಶಕ್ತಿಯುತ ಎಂಜಿನ್ ಅನ್ನು ಸಹ ಹೊಂದಿದೆ. ನಿಸ್ಸಾನ್ ಮ್ಯಾಗ್ನೆಟ್ ಕಾರು ಬುಕ್ಕಿಂಗ್'ನಲ್ಲಿ ಹೊಸ ದಾಖಲೆ ಬರೆದಿದೆ.

ಮೂಲ: ಟೀಂ ಬಿ‌ಹೆಚ್‌ಪಿ

Most Read Articles

Kannada
English summary
Nissan service center gives 21 lakh rupees bill for 10 lakh rupees car. Read in Kannada.
Story first published: Friday, April 23, 2021, 10:07 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X