ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ರಾಷ್ಟ್ರೀಯ ರಸ್ತೆ ಸುರಕ್ಷತಾ ಮಂಡಳಿಯ (ಎನ್‌ಆರ್‌ಎಸ್‌ಸಿ) ಇತ್ತೀಚಿನ ಸಭೆಯಲ್ಲಿ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿರವರು ರಸ್ತೆ ಅಪಘಾತಗಳಿಗೆ ಪ್ರಮುಖ ಕಾರಣವಾಗಿರುವ ಚಾಲನಾ ಆಯಾಸವನ್ನು ತಪ್ಪಿಸಲು ಲಾರಿ ಚಾಲಕರಿಗೆ ಕೆಲಸದ ಸಮಯವನ್ನು ನಿಗದಿ ಪಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಲಹೆ ನೀಡಿದ್ದಾರೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಈ ಬಗ್ಗೆ ಸ್ವತಃ ನಿತಿನ್ ಗಡ್ಕರಿರವರೇ ತಮ್ಮ ಟ್ವಿಟರ್ ಖಾತೆಯ ಮೂಲಕ ಮಾಹಿತಿ ನೀಡಿದ್ದಾರೆ. ಕಮರ್ಷಿಯಲ್ ವಾಹನಗಳಲ್ಲಿ ಚಾಲಕರ ನಿದ್ರೆಯನ್ನು ಪತ್ತೆ ಹಚ್ಚುವಪ್ರಮಾಣೀಕೃತ ಸೆನ್ಸಾರ್ ಗಳನ್ನು ವಾಹನ ತಯಾರಕ ಕಂಪನಿಗಳು ಒದಗಿಸುವ ಅಗತ್ಯತೆಯ ಬಗ್ಗೆ ಸಚಿವರು ಒತ್ತಿ ಹೇಳಿದ್ದಾರೆ. ಯುರೋಪಿಯನ್ ಗುಣಮಟ್ಟದ ಚಾಲಕ ನಿದ್ರೆ ಪತ್ತೆ ಸೆನ್ಸಾರ್ ಗಳನ್ನು ಕಮರ್ಷಿಯಲ್ ವಾಹನಗಳಲ್ಲಿ ಕಡ್ಡಾಯ ಫೀಚರ್ ಗಳಾಗಿ ಸೇರಿಸುವ ನೀತಿಯ ಬಗ್ಗೆ ಕೆಲಸ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ತಮ್ಮ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಎನ್‌ಆರ್‌ಎಸ್‌ಸಿಗೆ ನೇಮಕಗೊಂಡ ಹೊಸ ಸದಸ್ಯರ ಪರಿಚಯ ಸಭೆಯಲ್ಲಿ ಭಾಗವಹಿಸಿದ್ದ ನಿತಿನ್ ಗಡ್ಕರಿ ರವರು ಎಲ್ಲಾ ಸದಸ್ಯರಿಗೂ ರಸ್ತೆ ಸುರಕ್ಷತೆಯ ವಿವಿಧ ಪ್ರದೇಶಗಳಲ್ಲಿ ಕೆಲಸ ಮಾಡುವಂತೆ ಸೂಚಿಸಿದರು. ಸಚಿವರು ರಸ್ತೆ ಸಾರಿಗೆ ಸಚಿವಾಲಯದ ಅಧಿಕಾರಿಗಳಿಗೆ, ಎನ್‌ಆರ್‌ಎಸ್‌ಸಿ ಸದಸ್ಯರೊಂದಿಗೆ ಸಮನ್ವಯದಿಂದ ಕೆಲಸ ಮಾಡುವಂತೆ ಹಾಗೂ ಅವರ ಶಿಫಾರಸುಗಳನ್ನು ಆದ್ಯತೆಯ ಮೇರೆಗೆ ಜಾರಿಗೊಳಿಸುವಂತೆ ಸೂಚಿಸಿದರು.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಈ ಮೂಲಕ ಅತಿ ದೊಡ್ಡ ತಂಡವು ರಸ್ತೆ ಸುರಕ್ಷತಾ ಕಾರ್ಯದಲ್ಲಿ ತೊಡಗಿದೆ ಎಂದೇ ಹೇಳಬಹುದು. ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಈ ಕ್ರಮಗಳು ಖಂಡಿತವಾಗಿಯೂ ಅನೇಕ ಜನರ ಪ್ರಾಣ ಉಳಿಸಲು ನೆರವಾಗುತ್ತವೆ. ಜಿಲ್ಲಾ ರಸ್ತೆ ಸಮಿತಿ ಸಭೆಗಳು ಮುಂದುವರಿಯುವುದನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಪತ್ರಗಳನ್ನು ಪ್ರತಿ 2 ತಿಂಗಳಿಗೊಮ್ಮೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗುತ್ತದೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಈ ಪತ್ರಗಳ ಮೂಲಕವೇ ಸಚಿವರು ರಸ್ತೆ ಸುರಕ್ಷತೆಯನ್ನು ಸುಧಾರಿಸುವ ಕೆಲಸದ ಕುರಿತು ಮಾಹಿತಿ ಪಡೆಯಬಹುದು. ರಸ್ತೆ ಸುರಕ್ಷತೆ ಕ್ಷೇತ್ರದಲ್ಲಿ ಕೈಗೊಂಡಿರುವ ಎಲ್ಲಾ ಕಾರ್ಯಗಳ ಬಗ್ಗೆ ಜನರಿಗೆ ತಿಳಿಸಲು ಮಾಸಿಕ ನಿಯತ ಕಾಲಿಕಗಳನ್ನು ಪ್ರಕಟಿಸಲಾಗುತ್ತದೆ. ಇತ್ತೀಚೆಗೆ ನಡೆದ ಕೌನ್ಸಿಲ್ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಜುಲೈ 28 ರಂದು ಕೇಂದ್ರ ಸಾರಿಗೆ ಇಲಾಖೆಯು ಹೊಸ ಎನ್‌ಆರ್‌ಎಸ್‌ಸಿಯನ್ನು ಸ್ಥಾಪಿಸಿತು. ಈ ಮಂಡಳಿಯ ಸಭೆ ಸೆಪ್ಟೆಂಬರ್ 21 ರಂದು ನಡೆಯಿತು. ಕೌನ್ಸಿಲ್ ಸಭೆಯಲ್ಲಿ ಮಂಡಳಿಯ 13 ಅನಧಿಕೃತ ಸದಸ್ಯರು ಹಾಗೂ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಇಲಾಖೆಯ ಅಧಿಕಾರಿಗಳೊಂದಿಗೆ ನಿತಿನ್ ಗಡ್ಕರಿರವರು ಸಹ ಭಾಗವಹಿಸಿದ್ದರು.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಈ ಸಭೆಯಲ್ಲಿ ಮಾತನಾಡಿದ ಸಚಿವ ನಿತಿನ್ ಗಡ್ಕರಿ, ಗುಣಮಟ್ಟದ ರಸ್ತೆ ಹಾಗೂ ಎಲ್ಲ ರೀತಿಯ ವಾಹನಗಳಲ್ಲಿ ಸುರಕ್ಷತಾ ಸಲಕರಣೆಗಳ ಅಗತ್ಯತೆಯನ್ನು ಪುನರುಚ್ಚರಿಸಿದರು. ನಿತಿನ್ ಗಡ್ಕರಿರವರು ರಸ್ತೆಗಳ ಗುಣಮಟ್ಟ ಹಾಗೂ ವಾಹನಗಳ ಸುರಕ್ಷತಾ ಫೀಚರ್ ಗಳನ್ನು ಸುಧಾರಿಸುವ ಮೂಲಕ ಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ ಅಪಘಾತ ಪ್ರಕರಣಗಳ ಸಂಖ್ಯೆಯನ್ನು 50% ನಷ್ಟು ಕಡಿಮೆ ಮಾಡುವ ಗುರಿಯನ್ನು ಹೊಂದಿದ್ದಾರೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಇತ್ತೀಚೆಗಷ್ಟೇ 2020 ರಲ್ಲಿ ಭಾರತದಲ್ಲಿ ಸಂಭವಿಸಿದ ರಸ್ತೆ ಅಪಘಾತಗಳ ಅಂಕಿ ಅಂಶಗಳನ್ನು ಬಹಿರಂಗಪಡಿಸಲಾಗಿತ್ತು. ಈ ಅಂಕಿ ಅಂಶಗಳು ವಾಹನ ಸವಾರರನ್ನು ಬೆಚ್ಚಿ ಬೀಳಿಸುತ್ತವೆ. ಕರೋನಾ ವೈರಸ್ ಹರಡ ಬಾರದು ಎಂಬ ಕಾರಣಕ್ಕೆ ಕಳೆದ ವರ್ಷ ಮಾರ್ಚ್ ತಿಂಗಳಿನಿಂದ ಮೇ ತಿಂಗಳವರೆಗೆ ದೇಶಾದ್ಯಂತ ಸಂಪೂರ್ಣ ಲಾಕ್ ಡೌನ್ ಜಾರಿಗೊಳಿಸಲಾಗಿತ್ತು.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಲಾಕ್ ಡೌನ್ ಸಂದರ್ಭದಲ್ಲಿ ಈ ರಸ್ತೆಗಳು ನಿರ್ಜನವಾಗಿದ್ದವು. ಆದರೂ ಕಳೆದ ವರ್ಷ ಸುಮಾರು 1.20 ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂಬ ಸಂಗತಿ ಅಂಕಿ ಅಂಶಗಳಿಂದ ಬಹಿರಂಗವಾಗಿದೆ. ಕರ್ಫ್ಯೂ ಜಾರಿಯಲ್ಲಿದ್ದ ಸಂದರ್ಭದಲ್ಲಿಯೇ ಇತರ ಸಂದರ್ಭಗಳಿಗಿಂತ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸಿವೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಕೇಂದ್ರ ಸರ್ಕಾರವು ಅಧಿಕೃತವಾಗಿ ಬಿಡುಗಡೆಗೊಳಿಸಿರುವ ಈ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ ಭಾರತದಲ್ಲಿ ಪ್ರತಿ ದಿನ ಸರಾಸರಿ 328 ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ ಬರೋಬ್ಬರಿ 3.92 ಲಕ್ಷ ಜನರು ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋ ತಿಳಿಸಿದೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

ಈ ರಸ್ತೆ ಅಪಘಾತಗಳಿಗೆ ರಸ್ತೆಗಳು ಹಾಗೂ ವಾಹನಗಳ ಗುಣಮಟ್ಟ ಮಾತ್ರವಲ್ಲದೆ ವಾಹನ ಸವಾರರ ನಿರ್ಲಕ್ಷ್ಯವೂ ಕಾರಣವಾಗಿದೆ. ಕಳೆದ ವರ್ಷ ನಡೆದ ಒಟ್ಟು ರಸ್ತೆ ಅಪಘಾತಗಳಲ್ಲಿ ಹಿಟ್ ಅಂಡ್ ರನ್ ಪ್ರಕರಣಗಳ ಸಂಖ್ಯೆಯೇ 41,000 ಗಳಷ್ಟಿದೆ. ಅಂದರೆ ಪ್ರತಿ ದಿನ ಸರಾಸರಿ 112 ಹಿಟ್ ಅಂಡ್ ರನ್ ಪ್ರಕರಣಗಳು ಸಂಭವಿಸಿವೆ. ಈ ರಸ್ತೆ ಅಪಘಾತಗಳಲ್ಲಿ ಗಂಭೀರ ಗಾಯಗಳೊಂದಿಗೆ ಬದುಕುಳಿದವರ ಸಂಖ್ಯೆ 85,920 ಗಳಾಗಿದೆ.

ಲಾರಿ ಚಾಲಕರಿಗೆ ಕೆಲಸದ ಸಮಯ ನಿಗದಿ ಪಡಿಸುವಂತೆ ಸೂಚಿಸಿದ ಸಾರಿಗೆ ಸಚಿವ

2018 ಹಾಗೂ 2019 ರಲ್ಲಿ ಈ ಸಂಖ್ಯೆ 1 ಲಕ್ಷದ ಗಡಿ ದಾಟಿತ್ತು. ಕಳೆದ ವರ್ಷ ಅಜಾಗರೂಕತೆಯಿಂದ ರೈಲು ಹಳಿ ದಾಟಲು ಪ್ರಯತ್ನಿಸುತ್ತಿದ್ದ ವೇಳೆ 52 ಜನರು ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದರು. ಭಾರತದಲ್ಲಿ ಸಂಭವಿಸುವ ರಸ್ತೆ ಅಪಘಾತಗಳಿಗೆ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಪ್ರಮುಖ ಕಾರಣವೆಂದು ಹಲವು ಬಾರಿ ಸಾಬೀತಾಗಿದೆ.

Most Read Articles

Kannada
English summary
Nitin gadkari asks officials to fix working hours for truck drivers details
Story first published: Thursday, September 23, 2021, 14:34 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X