ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

Carnival ಎಂಪಿವಿ Kia Motors ಕಂಪನಿಯ ಜನಪ್ರಿಯ ಕಾರು ಮಾದರಿಗಳಲ್ಲಿ ಒಂದಾಗಿದೆ. ಈ ಐಷಾರಾಮಿ ಎಂಪಿವಿ ಕಾರಿನಲ್ಲಿ ಕೇಂದ್ರ ಸಚಿವರೊಬ್ಬರು ಅತಿ ವೇಗವಾಗಿ ಚಲಿಸಿದ ಬಗ್ಗೆ ವರದಿಯಾಗಿದೆ. ದೇಶದ ರಾಜಧಾನಿ ದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ನಗರಗಳನ್ನು ಸಂಪರ್ಕಿಸಲು ಹೊಸ ಎಕ್ಸ್‌ಪ್ರೆಸ್‌ವೇ (ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ) ಅನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಎಲ್ಲಾ ನಿರ್ಮಾಣ ಕಾರ್ಯಗಳು ಪೂರ್ಣಗೊಂಡ ನಂತರ ಈ ಎಕ್ಸ್‌ಪ್ರೆಸ್‌ವೇ ಶೀಘ್ರದಲ್ಲಿಯೇ ಸಾರ್ವಜನಿಕರ ಬಳಕೆಗೆ ಬರಲಿದೆ. ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿ ಕೆಲಸಗಳನ್ನು ಆಗಾಗ ಪರಿಶೀಲಿಸಲಾಗುತ್ತಿದೆ. ಇತ್ತೀಚಿಗೆ ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವರಾದ ನಿತಿನ್ ಗಡ್ಕರಿ ರವರು ಈ ಎಕ್ಸ್‌ಪ್ರೆಸ್‌ವೇ ಕಾಮಗಾರಿಯನ್ನು ಪರಿಶೀಲಿಸಲು ತೆರಳಿದ್ದರು.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಈ ಕಾಮಗಾರಿ ಪರಿಶೀಲನೆಗೆ ಅವರು ತಮ್ಮ ಹೊಸ Kia Carnival ಎಂಪಿವಿಯಲ್ಲಿ ತೆರಳಿದ್ದರು. ಈ ಎಂಪಿವಿಯಲ್ಲಿ ಅವರು ಗಂಟೆಗೆ ಗರಿಷ್ಠ 170 ಕಿ.ಮೀ ವೇಗದಲ್ಲಿ ಚಲಿಸಿದ್ದಾರೆ. ಈ ಘಟನೆಯ ವೀಡಿಯೊವನ್ನು ಯೂಟ್ಯೂಬ್ ನಲ್ಲಿ ಅಪ್ ಲೋಡ್ ಮಾಡಲಾಗಿದೆ. ಸದ್ಯ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಕೇಂದ್ರ ಸಚಿವ ನಿತಿನ್ ಗಡ್ಕರಿ ರವರು ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಈ ಚಾನೆಲ್ ನಲ್ಲಿ ಅವರು ಅಡುಗೆ ಮಾಡುವ ವೀಡಿಯೊ ಹಾಗೂ ಇನ್ನಿತರ ವಿಶೇಷ ಸಂಗತಿಗಳನ್ನು ಅಪ್‌ಲೋಡ್ ಮಾಡುತ್ತಾರೆ. ಈ ಯೂಟ್ಯೂಬ್ ಚಾನೆಲ್ ಮೂಲಕ ಅವರು ರೂ. 4 ಲಕ್ಷ ಸಂಪಾದಿಸುತ್ತಿದ್ದಾರೆ. ಈಗ ವೈರಲ್ ಆಗಿರುವ ವೀಡಿಯೊವನ್ನು ಸಹ ಗಡ್ಕರಿರವರ ಯೂಟ್ಯೂಬ್ ಚಾನೆಲ್ ಗಾಗಿಯೇ ಚಿತ್ರೀಕರಿಸಲಾಗಿದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಕಾಮಗಾರಿ ವೀಕ್ಷಣೆ ವೇಳೆ ಅವರು Kia Carnival ಎಂಪಿವಿಯಲ್ಲಿ ಸಹ ಚಾಲಕನ ಸೀಟಿನಲ್ಲಿ ಕುಳಿತಿದ್ದರು. ಈ ವೀಡಿಯೊದಲ್ಲಿ ಹೆದ್ದಾರಿ ಕಾಮಗಾರಿ ಬಗ್ಗೆ ಅಧಿಕಾರಿಗಳೊಂದಿಗೆ ಮಾತುಕತೆ ಸಹ ನಡೆಸುತ್ತಾರೆ. ಹೊಸದಾಗಿ ಅಭಿವೃದ್ಧಿಪಡಿಸುತ್ತಿರುವ ಹೆದ್ದಾರಿ ವಿಮಾನವನ್ನು ಇಳಿಸುವಷ್ಟು ವಿಶಾಲವಾಗಿದೆ ಎಂದು ಅವರು ಹೇಳುತ್ತಾರೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ ನಂತರ ಅವರಿದ್ದ ಕಾರು ಯು ಟರ್ನ್ ತೆಗೆದುಕೊಂಡು ಅತಿ ವೇಗವಾಗಿ ಚಲಿಸಿದೆ. ಈಗ ನಿರ್ಮಾಣ ಹಂತದಲ್ಲಿರುವ ಈ ಹೆದ್ದಾರಿಯಲ್ಲಿ ವಾಹನಗಳ ಗರಿಷ್ಠ ವೇಗದ ಮಿತಿಯನ್ನು ಪ್ರತಿ ಗಂಟೆಗೆ 120 ಕಿ.ಮೀಗಳಿಗೆ ನಿಗದಿ ಪಡಿಸಲಾಗಿದೆ. ಆದರೆ ನಿತಿನ್ ಗಡ್ಕರಿಯವರು ಪ್ರಯಾಣಿಸುತ್ತಿದ್ದ ಕಾರು ಗಂಟೆಗೆ 170 ಕಿ.ಮೀ ವೇಗದಲ್ಲಿ ಚಲಿಸಿದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ:

ದೆಹಲಿ - ಮುಂಬೈ ಎಕ್ಸ್‌ಪ್ರೆಸ್‌ವೇ ಭಾರತದ ಅತಿ ಉದ್ದದ ಎಕ್ಸ್‌ಪ್ರೆಸ್‌ವೇ ಆಗಿದೆ. ಈ ಎಕ್ಸ್‌ಪ್ರೆಸ್‌ವೇ 1,380 ಕಿ.ಮೀ ದೂರವನ್ನು ಹೊಂದಿದೆ. ಈ ಎಕ್ಸ್‌ಪ್ರೆಸ್‌ವೇಯನ್ನು ರೂ. 98,000 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಈ ಎಕ್ಸ್‌ಪ್ರೆಸ್‌ವೇ ಎರಡು ದೊಡ್ಡ ನಗರಗಳ ನಡುವಿನ ದೀರ್ಘ ಪ್ರಯಾಣದ ಅವಧಿಯನ್ನು ಕಡಿಮೆ ಮಾಡಲಿದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಈ ಎಕ್ಸ್‌ಪ್ರೆಸ್‌ವೇಯನ್ನು ಪ್ರಯಾಣದ ಅವಧಿಯನ್ನು ಕಡಿಮೆ ಮಾಡುವ ಸಲುವಾಗಿಯೇ ವಿನ್ಯಾಸಗೊಳಿಸಲಾಗಿದೆ. ಈ ಎಕ್ಸ್‌ಪ್ರೆಸ್‌ವೇ ಪ್ರಯಾಣದ ಅವಧಿಯನ್ನು ಸುಮಾರು 12 ಗಂಟೆಗಳಷ್ಟು ಕಡಿಮೆ ಮಾಡುತ್ತದೆ ಎಂದು ಹೇಳಲಾಗಿದೆ. ಇದರಿಂದ ಪ್ರಯಾಣಿಕರು ಈ ಎರಡೂ ನಗರಗಳನ್ನು ಮೊದಲಿಗಿಂತ ಹಲವು ಪಟ್ಟು ವೇಗವಾಗಿ ತಲುಪಲು ಸಾಧ್ಯವಾಗುತ್ತದೆ. ಈಗ ಬಳಕೆಯಲ್ಲಿರುವ ರಸ್ತೆಯಲ್ಲಿ ಈ ನಗರಗಳ ನಡುವೆ ಪ್ರಯಾಣಿಸಲು 20 - 24 ಗಂಟೆ ಬೇಕಾಗುತ್ತದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

Kia Carnival ಎಂಪಿವಿ ಬಗ್ಗೆ:

Kia Carnival ಎಂಪಿವಿ ಒಂದು ಐಷಾರಾಮಿ ವಾಹನವಾಗಿದೆ. ಈ ಕಾರ್ ಅನ್ನು ಇತ್ತೀಚೆಗೆ ಜನಪ್ರಿಯ ಗಾಯಕರಾದ ಶಂಕರ್ ಮಹದೇವನ್ ಸಹ ಖರೀದಿಸಿದ್ದಾರೆ. ಈ ಕಾರಿನ ಬೆಲೆ ಎಕ್ಸ್ ಶೋರೂಂ ದರದಂತೆ ರೂ. 24.95 ಲಕ್ಷಗಳಿಂದ ರೂ. 33.95 ಲಕ್ಷಗಳಾಗುತ್ತದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

Kia Carnival ಎಂಪಿವಿಯನ್ನು ಪ್ರೀಮಿಯಂ, ಪ್ರೆಸ್ಟೀಜ್ ಹಾಗೂ ಲಿಮೋಸಿನ್ ಎಂಬ ಮೂರು ಮಾದರಿಗಳಲ್ಲಿ ಮಾರಾಟ ಮಾಡಲಾಗುತ್ತದೆ. Kia Carnival ಎಂಪಿವಿಯು ದೇಶಿಯ ಮಾರುಕಟ್ಟೆಯಲ್ಲಿ Innova Crysta, Toyota Vellfire ಹಾಗೂ Mercedes Benz V Class ಕಾರುಗಳಿಗೆ ಪೈಪೋಟಿ ನೀಡುತ್ತದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಈ ತಿಂಗಳ ಆರಂಭದಲ್ಲಿ ನಿತಿನ್ ಗಡ್ಕರಿ ಹಾಗೂ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ರವರು ರಾಜಸ್ಥಾನದ ಬಾರ್ಮೇರ್ ನಲ್ಲಿ ರಾಷ್ಟ್ರೀಯ ಹೆದ್ದಾರಿ -925 ರಲ್ಲಿ ಗಂಧವ್ ಭಾಸ್ಕರ್ ವಿಭಾಗದಲ್ಲಿ ತುರ್ತು ಲ್ಯಾಂಡಿಂಗ್ ಸ್ಟ್ರಿಪ್ ಅನ್ನು ಉದ್ಘಾಟಿಸಿದ್ದರು. ಭಾರತೀಯ ವಾಯುಪಡೆಯು ಸಿ -130 ಜೆ ಸೂಪರ್ ಹರ್ಕ್ಯುಲಸ್ ಟ್ರಾನ್ಸ್‌ಪೋರ್ಟ್ ಏರ್‌ಕ್ರಾಫ್ಟ್ ಈ ಹೊಸ ಮಾರ್ಗದಲ್ಲಿ ಇಳಿದ ಮೊದಲ ಸಾರಿಗೆ ವಿಮಾನವಾಗಿದೆ.

ರಾಷ್ಟ್ರೀಯ ಹೆದ್ದಾರಿಯಲ್ಲಿರುವ ತುರ್ತು ಲ್ಯಾಂಡಿಂಗ್ ಫೀಲ್ಡ್ (ಇಎಲ್‌ಎಫ್) ತುರ್ತು ಸಂದರ್ಭಗಳಲ್ಲಿ ಸಹಾಯಕ ಮಿಲಿಟರಿ ನೆಲೆಯಾಗಿ ಕಾರ್ಯನಿರ್ವಹಿಸುತ್ತದೆ. ಇದನ್ನು ಎನ್‌ಎಚ್ -925 ಎಯಲ್ಲಿರುವ ಸತ್ತ - ಗಂಧವ್ ಪ್ರದೇಶದ ನಡುವೆ 3 ಕಿ.ಮೀ ವಿಸ್ತೀರ್ಣದಲ್ಲಿ ನಿರ್ಮಿಸಲಾಗಿದೆ.

ಕಾಮಗಾರಿ ಹಂತದಲ್ಲಿರುವ ಎಕ್ಸ್‌ಪ್ರೆಸ್‌ವೇನಲ್ಲಿ 170 ಕಿ.ಮೀ ವೇಗದಲ್ಲಿ ಚಲಿಸಿದ ಸಾರಿಗೆ ಸಚಿವರ ಕಾರು

ಭಾರತದ ಹೆದ್ದಾರಿಗಳಲ್ಲಿ ಯುದ್ಧ ವಿಮಾನಗಳು ಇಳಿಯುತ್ತಿರುವುದು ಇದೇ ಮೊದಲಲ್ಲ. 2017ರಲ್ಲಿ ಭಾರತೀಯ ವಾಯುಪಡೆಯು ತುರ್ತು ಪರಿಸ್ಥಿತಿಗಳಲ್ಲಿ ಸಣ್ಣ ಯುದ್ಧ ವಿಮಾನಗಳನ್ನು ಇಳಿಸಲು ಹೆದ್ದಾರಿಗಳನ್ನು ಹೇಗೆ ಬಳಸಬಹುದು ಎಂಬುದನ್ನು ತೋರಿಸಲು ಆಗ್ರಾ - ಲಕ್ನೋ ಎಕ್ಸ್‌ಪ್ರೆಸ್‌ವೇಯಲ್ಲಿ ಯುದ್ಧ ವಿಮಾನ ಇಳಿಯುವಿಕೆಯನ್ನು ಪ್ರದರ್ಶಿಸಿತ್ತು.

Most Read Articles

Kannada
English summary
Nitin gadkari car touches 170 km speed mark in delhi mumbai expressway video details
Story first published: Saturday, September 18, 2021, 19:16 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X