ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ಇಂದಿನ ಯುವಜನತೆ ಇನ್​​​ಸ್ಟಾಗ್ರಾಂನಂತಹ ಸೋಶಿಯಲ್ ಮೀಡಿಯಾ ಆ್ಯಪ್‍ಗಳಲ್ಲಿ ಬ್ಯೂಸಿಯಾಗಿದ್ದರೆ. ಅದರಲ್ಲಿ ಟಿಕ್ ಟಾಕ್ ಬ್ಯಾನ್ ಬಳಿಕ ಬಂದ ಇನ್​​​ಸ್ಟಾಗ್ರಾಂ ರೀಲ್ಸ್ ನಲ್ಲಿ ವಿಡಿಯೋ ಮಾಡಿ ಹೆಚ್ಚು ಲೈಕ್ಸ್ ಮತ್ತು ಕಾಮೆಂಟ್ ಪಡೆದುಕೊಳ್ಳಬೇಕೆಂಬ ಆಸೆಗೆ ಬಿದ್ದು ಹಲವು ಅಪಾಯಕಾರಿ ವಿಡಿಯೋಗಳನ್ನು ಮಾಡುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ಇದೇ ರೀತಿ ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಬೈಕ್ ಸ್ಟಂಟ್ ಮಾಡುತ್ತಿದ್ದ ದೆಹಲಿಯ ಕೃಷ್ಣನಗರದ ನಿವಾಸಿ ಪುಷ್ಪೇಂದ್ರ ಸಿಂಗ್ ಅವರನ್ನು ನೋಯ್ಡಾ ಪೊಲೀಸರು ಬಂಧಿಸಿದ್ದಾರೆ. ಈ ಯುವಕನ ಸ್ಟಂಟ್ ವಿಡಿಯೋ ಸಾಮಾಜಿಕ ತಾಣಗಳಲ್ಲಿ ಸಖರ್ ವೈರಲ್ ಆಗಿತ್ತು. ಈ ಘಟನೆಯ ವಿಡಿಯೋವನ್ನು ಹಿಂದೂಸ್ತಾನ್ ಟೈಮ್ಸ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ನೋಯ್ಡಾ ಸೆಕ್ಟರ್ 62 ರಸ್ತೆಯಲ್ಲಿ ಬೈಕರ್ ಸ್ಟಂಟ್ ಮಾಡುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖರ್ ವೈರಲ್ ಆಗಿದೆ. ಇದರ ಕುರಿತು ಮಾಹಿತಿ ಬಂದ ಮರುದಿನದ ಸಂಜೆಯೇ ಪುಷ್ಪೇಂದ್ರ ಸಿಂಗ್ ಅವರನ್ನು ನೋಯ್ಡಾ ಪೊಲೀಸರು ಬಂಧಿಸದ್ದಾರೆ. ಅವರು ಸ್ಟಂಟ್ ಮಾಡಲು ಬಳಿಸಿದ ಕೆಟಿಎಂ ಡ್ಯೂಕ್ ಬೈಕ್ ಅನ್ನು ಕೂಡ ವಶಕ್ಕೆ ಪಡೆದುಕೊಂಡಿದ್ದಾರೆ.

MOST READ: ಹೊಸ ಹೀರೋ ಎಕ್ಸ್‌ಟ್ರಿಮ್ 160ಆರ್ 100 ಮಿಲಿಯನ್ ಎಡಿಷನ್ ಬಿಡುಗಡೆ

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ವೀಡಿಯೊದಲ್ಲಿ ಬೈಕರ್ ತನ್ನ ಕೆಟಿಎಂ ಬೈಕಿನ ಮುಂಭಾಗದ ಚಕ್ರವನ್ನು ಎತ್ತಿ ಕೆಲ ದೂರ ಸಾಗಿ ನಂತರ ಕೆಳಕ್ಕೆ ತರುತ್ತಾನೆ. ಮುಂಭಾಗದ ಬ್ರೇಕ್‌ಗಳನ್ನು ಬಳಸಿ ಹಿಂಬದಿ ಚಕ್ರವನ್ನು ಗಾಳಿಯಲ್ಲಿ ಎತ್ತುತ್ತಾನೆ. ನಂತರ ಅವನು ಬೈಕನ್ನು ಯುಟರ್ನ್ ತೆಗೆಯುತ್ತಾನೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ಬಳಿಕ ಅದೇ ಒನೇ ವೇ ರಾಂಗ್ ಸೈಡ್ ಮೂಲಕ ಬರುತ್ತಾನೆ. ಸಾರ್ವಜನಿಕ ರಸ್ತೆಗಳಲ್ಲಿ ಇಂತಹ ಸಾಹಸಗಳನ್ನು ಮಾಡುವ ಮೂಲಕ ಸವಾರನು ತನ್ನ ಜೀವವನ್ನು ಮತ್ತು ರಸ್ತೆಯನ್ನು ಬಳಸುವ ಇತರ ಜನರ ಜೀವನವನ್ನು ಅಪಾಯಕ್ಕೆ ದೂಡುತ್ತಿದ್ದನು.

MOST READ: ಕರೋನಾ ವೈರಸ್ ಬಗ್ಗೆ ಜನ ಜಾಗೃತಿ ಮೂಡಿಸಲು ಉಬರ್ ಜೊತೆಗೆ ಕೈಜೋಡಿಸಿದ ಪೊಲೀಸ್ ಇಲಾಖೆ

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ಸಾರ್ವಜನಿಕ ರಸ್ತೆಗಳಲ್ಲಿ ಸ್ಟಂಟ್ ಮಾಡುವುದು ಕಾನೂನುಬಾಹಿರ ಮತ್ತು ಅಪಾಯಕಾರಿ. ಇದು ಇತರ ವಾಹನ ಚಾಲಕರಿಗೆ ವಿಚಲಿತರಾಗುವಂತೆ ಮಾಡುತ್ತದೆ. ಇಂತಹ ಸಾಹಸಗಳು ಹೆಚ್ಚಾಗಿ ದುರಂತರದಲ್ಲಿ ಅಂತ್ಯವಾಗುತ್ತದೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ನಿಮಗ ಬೈಕ್ ಸ್ಟಂಟ್ ಮಾಡಲು ಅಷ್ಟು ಆಸಕ್ತಿ ಇದ್ದರೆ ಖಾಲಿಯಾದ ಜಾಗಗಳನ್ನು ಆಯ್ಕೆ ಮಾಡಬಹುದಾಗಿದೆ. ಬೇಕಾದ ಮುನ್ನೆಚ್ಚರಿಕೆಯನ್ನು ತೆಗೆದುಕೊಳ್ಳಿ. ಸ್ವಂತವಾಗಿ ಸ್ಟಂಟ್ ಮಾಡುವ ಮೊದಲು ನುರಿತ ತಜ್ಞರಿಂದ ಸಹಾಯ ಪಡೆಯಬೇಕು.

MOST READ: ಭಾರತದಲ್ಲಿ ಕೈಗೆಟುಕುವ ದರದಲ್ಲಿ ಸಿಗುವ ಸ್ಕೂಟರ್‌ಗಳಿವು

ಸಾವರ್ಜನಿಕ ರಸ್ತೆಯಲ್ಲಿ ಸ್ಟಂಟ್ ಮಾಡುವವರು ತಿಳಿದಿರಬೇಕು, ಇಂದು ಟೆಕ್ನಾಲಜಿಯು ತುಂಬಾ ಮುಂದುವರೆದಿದೆ. ದೇಶಾದ್ಯಂತ ಸಾರ್ವಜನಿಕ ರಸ್ತೆಗಳಲ್ಲಿ ಸಾಹಸದಲ್ಲಿ ತೊಡಗಿದ್ದ ಹಲವಾರು ಜನರನ್ನು ಪೊಲೀಸರು ಬಂಧಿಸುತ್ತಲೇ ಇದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ರಸ್ತೆಯಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾಗಳ ಸಹಾಯದಿಂದ ಪೊಲೀಸರು ನಿಯಮಗಳನ್ನು ಉಲ್ಲಂಘಿಸುವವರನ್ನು ಪತ್ತೆ ಹಚ್ಚುತ್ತಿದ್ದಾರೆ. ಸಂಚಾರಿ ಪೊಲೀಸರು ಸಿಸಿಟಿವಿಗಳ ಸಹಾಯದಿಂದ ಸ್ಟಂಟ್ ಮಾಡುವವರನ್ನು ಮಾತ್ರವಲ್ಲದೇ ಹೆಲ್ಮೆಟ್ ಇಲ್ಲದೇ ದ್ವಿಚಕ್ರ ವಾಹನ ಚಾಲನೆ ಮಾಡುವವರನ್ನು ಸಹ ಪತ್ತೆ ಹಚ್ಚಿ ದಂಡವನ್ನು ವಿಧಿಸುತ್ತಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಫೇಮಸ್ ಆಗಲು ಹೋಗಿ ಲಾಕ್ ಆದ ಕೆಟಿಎಂ ರೈಡರ್

ಇ ಚಲನ್ ಗಳನ್ನು ವಾಹನ ಮಾಲೀಕರಿಗೆ ಫೋಟೋ ಹಾಗೂ ವೀಡಿಯೊ ಸಾಕ್ಷ್ಯಗಳ ಸಮೇತ ಕಳುಹಿಸಲಾಗುತ್ತದೆ. ಈ ಕಾರಣಕ್ಕೆ ವಾಹನ ಸವಾರರು ರಸ್ತೆಯಲ್ಲಿ ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಂಚಾರ ನಿಯಮಗಳನ್ನು ಪಾಲಿಸುವುದು ಸೂಕ್ತ. ಸಂಚಾರಿ ಪೊಲೀಸರು ಇಲ್ಲದಿದ್ದರೂ ಸಹ ಸಿಸಿಟಿವಿ ಕ್ಯಾಮೆರಾಗಳು ವಾಹನ ಸವಾರರನ್ನು ಮೇಲ್ವಿಚಾರಣೆ ಮಾಡುತ್ತಿರುತ್ತವೆ ಎಂಬುದನ್ನು ವಾಹನ ಸವಾರರು ಅರಿತು ವಾಹನ ಚಾಲನೆ ಮಾಡುವುದು ಒಳಿತು.

Most Read Articles

Kannada
English summary
Noida Police Arrests Biker On KTM Duke For Stunting On Public Roads. Read In Kannada.
Story first published: Monday, April 12, 2021, 12:33 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X