ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಲ್ಯಾಂಡ್ ರೋವರ್ ಡಿಫೆಂಡರ್ (Land Rover Defender) ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಜನಪ್ರಿಯ ಎಸ್‍ಯುವಿಗಳಲ್ಲಿ ಒಂದಾಗಿದೆ, ಈ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿ ಅತ್ಯಾಧುನಿಕ ಫೀಚರ್ಸ್, ರಗಡ್ ಲುಕ್ ಮತ್ತು ಪ್ರಬಲ ಆಫ್-ರೋಡ್ ಸಾಮರ್ಥ್ಯಗಳಿಂದ ಹೆಚ್ಚು ಜನಪ್ರಿಯತೆ ಗಳಿಸಿದೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಹಳೆದ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‍ಯುವಿಗಳನ್ನು ಹಲವರು ಮಾಡಿಫೈ ಅಥವಾ ರಿಸ್ಟೋರ್ ಮಾಡಲು ಆಯ್ಕೆ ಮಾಡಿಕೊಳ್ಳುತ್ತಾರೆ. ಅದರಂತೆ ಇ.ಸಿ.ಡಿ. ಆಟೋಮೋಟಿವ್ ಡಿಸೈನ್ ಫ್ಲೋರಿಡಾ ಮೂಲದ ಕಾರ್ಯಾಗಾರವಾಗಿದ್ದು, ಅದು ಕ್ಲಾಸಿಕ್ ಲ್ಯಾಂಡ್ ರೋವರ್ ಡಿಫೆಂಡರ್ ಎಸ್‌ಯುವಿಗಳನ್ನು ರಿಸ್ಟೋರ್ ಮತ್ತು ಕಸ್ಟಮೈಸ್ ಮಾಡಲು ಪರಿಣತಿ ಹೊಂದಿದೆ. ಗ್ಯಾರೇಜ್ ಈ ಹಿಂದೆ ಹಲವಾರು ಸುಂದರವಾದ ಲ್ಯಾಂಡ್ ರೋವರ್‌ಗಳು ಮತ್ತು ರೇಂಜ್ ರೋವರ್‌ಗಳಲ್ಲಿ ಕೆಲಸ ಮಾಡಿದೆ ಮತ್ತು ಈಗ ಅದು ಎಲೆಕ್ಟ್ರಿಕ್ ಪವರ್‌ಟ್ರೇನ್ ಬಳಿಸಿ ವಾಹನಗಳನ್ನು ರಿಸ್ಟೋರ್ ಮಾಡುತ್ತಿದೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಇತ್ತೀಚೆಗೆ ಇ.ಸಿ.ಡಿ. ಎರಡು ಹಳೆಯ ತಲೆಮಾರಿನ ಲ್ಯಾಂಡ್ ರೋವರ್ 110 ಮಾದರಿಗಳನ್ನು ರಿಸ್ಟೋರ್ ಮಾಡಲಾಗಿದೆ. ಅವುಗಳನ್ನು ಇವಿಗಳಿಗೆ ಪರಿವರ್ತಿಸಿದೆ. 'ಪ್ರಾಜೆಕ್ಟ್ ಬ್ರಿಟನ್' ಮತ್ತು 'ಪ್ರಾಜೆಕ್ಟ್ ಮಾರ್ಫಿಯಸ್' ಎಂಬ ಹೆಸರಿನ ಈ ಕ್ಲಾಸಿಕ್ ಎಸ್‍ಯುವಿಗಳು ಟೆಸ್ಲಾ ಮೂಲದ ಎಲೆಕ್ಟ್ರಿಕ್ ಪವರ್‌ಟ್ರೇನ್‌ನಿಂದ ಚಾಲಿತವಾಗಿದ್ದು, ಇದು 450 ಪಿಎಸ್ ಸಿಂಗಲ್ ಎಲೆಕ್ಟ್ರಿಕ್ ಮೋಟಾರ್ ಮತ್ತು 100 kWh ಬ್ಯಾಟರಿ ಪ್ಯಾಕ್ ಅನ್ನು ಒಳಗೊಂಡಿವೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಎರಡು ಎಸ್‍ಯುವಿಗಳು ಕೇವಲ 5 ಸೆಕೆಂಡುಗಳಲ್ಲಿ 60 ಮೈಲ್ (ಸುಮಾರು 96.7 ಕಿ,ಮೀ) ವೇಗವನ್ನು ತಲುಪಬಹುದು ಕಾರ್ಯಾಗಾರದ ಪ್ರಕಾರ, 5-ಗಂಟೆಗಳ ಚಾರ್ಜ್‌ನ ನಂತರ ಅವುಗಳನ್ನು 220 ಮೈಲುಗಳಷ್ಟು (ಸುಮಾರು 350 ಕಿಮೀ) ಓಡಿಸಬಹುದು

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಪ್ರಾಜೆಕ್ಟ್ ಬ್ರಿಟನ್ ಮಾದರಿ ಡ್ಯುಯಲ್-ಟೋನ್ ಪೇಂಟ್ ಸ್ಕೀಮ್ ಅನ್ನು ಪಡೆಯುತ್ತದೆ. ಚಾಟನ್ ವೈಟ್ ರೂಫ್‌ನೊಂದಿಗೆ ಆರ್ಲ್ಸ್ ಬ್ಲೂ ಬಾಡಿ, ಎಸ್‍ಯುವಿ ಬಿಎಫ್ ಗುಡ್ರಿಚ್ ಟೈರ್‌ಗಳೊಂದಿಗೆ 18-ಇಂಚಿನ 1983 ಕಾನ್ ವೀಲ್ಸ್ ಅನ್ನು ಪಡೆಯುತ್ತದೆ. ಇದು ಕ್ಲಾಸಿಕ್ ಬಂಪರ್‌ಗಳನ್ನು ಸಹ ಪಡೆಯುತ್ತದೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಮುಂಭಾಗದಲ್ಲಿ ಸಂಯೋಜಿತ ಡಿಆರ್ಎಲ್ ಗಳನ್ನು ಹೊಂದಿದೆ. ಇತರ ಬಾಹ್ಯ ವೈಶಿಷ್ಟ್ಯಗಳಲ್ಲಿ ಮುಂಭಾಗದ ರೂಫ್ ರನ್ನರ್ ಮತ್ತು ಲ್ಯಾಡರ್, ಸ್ವಿಂಗ್ ಅವೇ ವೀಲ್ ಕ್ಯಾರಿಯರ್, ಹಿಂಭಾಗದ ಬಂಪರ್ ಸ್ಟೆಪ್, ಏರ್-ರೈಡ್ ಸಸ್ಪೆಂಕ್ಷನ್ ಮತ್ತು ಮುಂಭಾಗದ ಸನ್‌ರೂಫ್ ಸೇರಿವೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಇದರ ಒಳಭಾಗವು ವುಡ್ ಅಂಶದ ಬ್ಲ್ಯಾಕ್ ಮತ್ತು ಬೀಜ್ ಥೀಮ್ ಅನ್ನು ಹೊಂದಿದೆ. ಎಸ್‍ಯುವಿ ಹಿಟೆಡ್ ಮತ್ತು ಏರ್ ಸೀಟ್‌ಗಳು, ಇವಾಂಡರ್ ವುಡ್ ಸ್ಟೀರಿಂಗ್ ವೀಲ್, ಕಸ್ಟಮ್ ಇನ್ಸ್ ಟ್ರೂಮೆಂಟ್ ಕನ್ಸೋಲ್, ಆಲ್ಪೈನ್ ಫ್ಲೋಟಿಂಗ್ ಹ್ಯಾಲೊ ಇನ್ಫೋಟೈನ್‌ಮೆಂಟ್ ಟಚ್‌ಸ್ಕ್ರೀನ್ (ಬ್ಲೂಟೂತ್ ಜೊತೆಗೆ), ರಿಮೋಟ್ ಸ್ಟಾರ್ಟ್, ವೈಫೈ ಮತ್ತು ವೈರ್‌ಲೆಸ್ ಸ್ಮಾರ್ಟ್‌ಫೋನ್ ಚಾರ್ಜರ್‌ಗಳನ್ನು ಹೊಂದಿವೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಇದರೊಂದಿಗೆ ಯುಎಸ್‌ಬಿ ಪೋರ್ಟ್‌ಗಳು, ಪಾರ್ಕಿಂಗ್ ಸೆನ್ಸರ್‌ಗಳು, ರಿವರ್ಸ್ ಕ್ಯಾಮೆರಾ ಮತ್ತು ರಿಯರ್ ಎಸಿ ವೆಂಟ್‌ಗಳನ್ನು ಸಹ ಪಡೆಯುತ್ತದೆ. . ಆಡಿಯೊ ಸಿಸ್ಟಮ್ ಇನ್ಫಿನಿಟಿ ಕಪ್ಪಾ ಸ್ಪೀಕರ್‌ಗಳು ಮತ್ತು ಜೆಎಲ್ ಆಡಿಯೊ ಸಬ್ ವೂಫರ್‌ಗಳನ್ನು ಒಳಗೊಂಡಿದೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಪ್ರಾಜೆಕ್ಟ್ ಮಾರ್ಫಿಯಸ್ (ಚಿತ್ರಗಳನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ) ಆಲ್ಪೈನ್ ವೈಟ್ ರೂಫ್‌ನೊಂದಿಗೆ ಕೂಲ್ ಖಾಕಿ ಗ್ರೇ ಹೊರಭಾಗವನ್ನು ಹೊಂದಿದೆ. ಇದು ಬಿಎಫ್ ಗುಡ್ರಿಚ್ ಟೈರ್‌ಗಳೊಂದಿಗೆ 18-ಇಂಚಿನ ಹಾಕ್ ಓಸ್ಪ್ರೆ ವ್ಹೀಲ್ ಗಳನ್ನು ಸಹ ಪಡೆಯುತ್ತದೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಮುಂಭಾಗದ ಬಂಪರ್ ಸಂಯೋಜಿತ DRL ಗಳು ಮತ್ತು ವಿಂಚ್ ಅನ್ನು ಪಡೆಯುತ್ತದೆ ಮತ್ತು ಅಡ್ಡ ಹಂತಗಳನ್ನು ಇಲ್ಲಿ ಸೇರಿಸಲಾಗಿದೆ.ಇದು ಎಲ್‌ಇಡಿ ಹೆಡ್‌ಲೈಟ್‌ಗಳು, ಆಕ್ಸಿಲಿಯರಿ ಲೈಟ್‌ಗಳು, ಹಿಂಭಾಗದ ಬಂಪರ್ ಸ್ಟೆಪ್, ಸ್ವಿಂಗ್ ಅವೇ ವೀಲ್ ಕ್ಯಾರಿಯರ್, ಫ್ರಂಟ್ ರನ್ನರ್ ರೂಫ್ ರ್ಯಾಕ್ ಮತ್ತು ಲ್ಯಾಡರ್ ಇತ್ಯಾದಿಗಳನ್ನು ಸಹ ಪಡೆಯುತ್ತದೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಎಸ್‍ಯುವಿಯ ಒಳಭಾಗವು ಸುತ್ತಲೂ ಲೆದರ್ ಸುತ್ತುವಿಕೆ, ಹಿಟೆಡ್ ಸೀಟುಗಳು, ಇವಾಂಡರ್ ವುಡ್ ಸ್ಟೀರಿಂಗ್ ವೀಲ್ ಮತ್ತು ಕಸ್ಟಮ್ ಇನ್ಸ್ ಟ್ರೂಮೆಂಟ್ ಕ್ಲಸ್ಟರ್ ಅನ್ನು ಒಳಗೊಂಡಿದೆ. ಜಿಎಲ್ ಆಡಿಯೊ ಸ್ಪೀಕರ್‌ಗಳು ಮತ್ತು ಕೆನ್‌ವುಡ್ ಸಬ್‌ವೂಫರ್‌ಗಳೊಂದಿಗೆ ಜೋಡಿಸಲಾದ ಕೆನ್‌ವುಡ್ ಎಕ್ಸೆಲಾನ್ ಇನ್ಫೋಟೈನ್‌ಮೆಂಟ್ ಸಿಸ್ಟಮ್ (ಬ್ಲೂಟೂತ್ ಜೊತೆಗೆ) ಸೇರಿಸಲಾಗಿದೆ. ಬ್ಲೈಂಡ್‌ಸ್ಪಾಟ್ ಅಸಿಸ್ಟೆಂಟ್, ರಿವರ್ಸ್ ಕ್ಯಾಮೆರಾ, ರಿಯರ್ ಎಸಿ, ಯುಎಸ್‌ಬಿ ಪೋರ್ಟ್‌ಗಳು, ಏರ್-ರೈಡ್ ಸಸ್ಪೆಂಕ್ಷನ್ ಮತ್ತು ಸೀಮಿತ-ಸ್ಲಿಪ್ ಡಿಫರೆನ್ಷಿಯಲ್‌ಗಳನ್ನು ಸಹ ನೀಡಲಾಗುತ್ತದೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಇನ್ನು ಲ್ಯಾಂಡ್ ರೋವರ್ ಕಂಪನಿಯು ಹೊಸ ಡಿಫೆಂಡರ್ ಟ್ರೋಫಿ ಎಡಿಷನ್ ಅನ್ನು ಜಾಗತಿಕವಾಗಿ ಪರಿಚಯಿಸಿದ್ದರು. ಟ್ರೋಫಿ ಸೀರಿಸ್ ಮಾದರಿಗಳು ಪ್ರಬಲ ಆಫ್-ರೋಡ್ ಗಳಾಗಿವೆ. ಇದೀಗ ಲ್ಯಾಂಡ್ ರೋವರ್ ಡಿಫೆಂಡರ್ ಟ್ರೋಫಿ ಎಡಿಷನ್ ಆಫ್-ರೋಡ್ ಮಾದರಿಯಾಗಿದೆ. ಡಿಫೆಂಡರ್ ಟ್ರೋಫಿ ಎಡಿಷನ್ ಎಸ್‍ಯುವಿಯು ಮಾದರಿಯು ಸ್ಟ್ಯಾಂಡರ್ಡ್ ಡಿಫೆಂಡರ್ ಎಸ್‍ಯುವಿಗಿಂತ ಪವರ್ ಫುಲ್ ಮತ್ತು ಹೆಚ್ಚಿನ ಆಫ್-ರೋಡ್ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಹೊಸ ಲ್ಯಾಂಡ್ ರೋವರ್ ಡಿಫೆಂಡರ್ ಟ್ರೋಫಿ ಎಡಿಷನ್ ಮಾದರಿಯ ಬ್ಲ್ಯಾಕ್ ಮತ್ತು ಯೆಲ್ಲೋ ಬಣ್ಣಗಳ ಮಿಶ್ರಣವು ಡಿಫೆಂಡರ್ ವರ್ಕ್ಸ್ V8 ಟ್ರೋಫಿಯಿಂದ ಸ್ಫೂರ್ತಿ ಪಡೆದಿದೆ. ಹಳೆಯ ಲ್ಯಾಂಡ್ ರೋವರ್ ಲೋಗೋವನ್ನು ಡೋರುಗಳ ಮೇಲೆ ನೋಡುತ್ತೇವೆ.

ಟೆಸ್ಲಾ ಎಲೆಕ್ಟ್ರಿಕ್ ಪವರ್‌ಟ್ರೇನ್‌ನೊಂದಿಗೆ ರಿಸ್ಟೋರ್ ಆಗಿ ಮಿಂಚುತ್ತಿದೆ ಹಳೆಯ ಲ್ಯಾಂಡ್ ರೋವರ್ ಎಸ್‌ಯುವಿಗಳು

ಡಿಫೆಂಡರ್ ಟ್ರೋಫಿ ಆಫ್-ರೋಡಿಂಗ್‌ಗೆ ಸಂಬಂಧಿಸಿದಂತೆ, ಟ್ರೋಫಿ ಆವೃತ್ತಿಯು ಮುಂಭಾಗದ ಸ್ಕಿಡ್ ಪ್ಲೇಟ್, ನಿಯೋಜಿಸಬಹುದಾದ ಲ್ಯಾಂಡರ್ ನೊಂದಿಗೆ ರೂಫ್ ರ್ಯಾಕ್, ಮಣ್ಣಿನ ಫ್ಲಾಪ್‌ಗಳು ಮತ್ತು ಇಂಟಿಗ್ರೇಟೆಡ್ ಏರ್ ಕಂಪ್ರೆಸರ್ ಅನ್ನು ಸ್ಟ್ಯಾಂಡರ್ಡ್ ಆಗಿ ನೀಡಲಾಗಿತ್ತು.

Most Read Articles

Kannada
English summary
Old land rover suvs tranformed into evs with tesla electric powertrain details
Story first published: Friday, February 11, 2022, 15:30 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X