ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ- ಠಾಣೆಯಲ್ಲೇ ಅನಾಥವಾಗಿ ಬಿದ್ದ ರೂ. 3 ಕೋಟಿ ಕಾರು..!

ಈ ಹಿಂದೆ ನಕಲಿ ಕಾರ್ ಸೆಂಟರ್ ಸ್ಥಾಪಿಸಿ ಬಹುಕೋಟಿ ರುಪಾಯಿಗಳ ವಂಚನೆ ಮಾಡಿದ್ದ ಕಿಲಾಡಿಯೊಬ್ಬ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರಿಗೂ ಟೋಪಿ ಹಾಕಿದ್ದ ಪ್ರಕರಣ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಇದೀಗ ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಯನ್ನು ತೀವ್ರಗೊಳಿಸಲಾಗಿದ್ದು, ಕೊಹ್ಲಿಗೆ ಯಾಮಾರಿಸಿ ಖರೀದಿಸಲಾಗಿದ್ದ ಆಡಿ ಆರ್8 ಕಾರು ವಿ10 ಕಾರು ಇದೀಗ ಶೋಚನೀಯ ಸ್ಥಿತಿಯಲ್ಲಿದೆ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಹೌದು, ವಿರಾಟ್ ಕೊಹ್ಲಿ ಮೊದಲೇ ಆಡಿ ಇಂಡಿಯಾ ಸಂಸ್ಥೆಯ ಬ್ರಾಂಡ್ ಅಂಬಾಸಿಡರ್ ಆಗಿರುವುದರಿಂದ ಅವರ ಬಳಿ ಆಡಿ ಉತ್ಪಾದನೆಯ ಬಹುತೇಕ ಕಾರುಗಳ ಸಂಗ್ರಹವೇ ಇದ್ದು, 2015ರಲ್ಲಿ ಬರೋಬ್ಬರಿ ರೂ. 3 ಕೋಟಿ ಮೌಲ್ಯದ ಆರ್8 ವಿ10 ಮಾದರಿಯನ್ನು ತಮ್ಮ ಕಾರ್ ಕಲೆಕ್ಷನ್‌ನಲ್ಲಿ ಸೇರ್ಪಡೆಗೊಳಿಸಿದ್ದರು. ಆದ್ರೆ ನಕಲಿ ಕಾರ್ ಸೆಂಟರ್ ಮೂಲಕ ಬಹುಕೋಟಿ ವಂಚನೆ ಮಾಡುತ್ತಿದ್ದ ಸಾಗರ್ ಥಕ್ಕರ್ ಎಂಬಾತ ಕೊಹ್ಲಿ ಯಾಮಾರಿಸಿ ರೂ.3 ಕೋಟಿ ಕಾರನ್ನು ಕೇವಲ ರೂ.60 ಲಕ್ಷಕ್ಕೆ ಖರೀದಿಸಿದ್ದ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಮುಂಬೈ ಮೂಲದ ಉದ್ಯಮಿಯಾಗಿರುವ ಸಾಗರ್ ಥಕ್ಕರ್ ಕೊಹ್ಲಿಗೆ ಯಾಮಾರಿಸಿದ್ದಲ್ಲದೇ ದುಬಾರಿ ಕಾರನ್ನು ತನ್ನ ಪ್ರೇಯಿಸಿಗೆ ಗಿಫ್ಟ್ ಆಗಿ ನೀಡಿದ್ದ. ಆದ್ರೆ ಸಾಗರ್ ನಡೆಸುತ್ತಿದ್ದ ನಕಲಿ ಕಾಲ್ ಸೆಂಟರ್ ಕಳ್ಳಾಟ ಬಯಲಿಗೆ ಬರುತ್ತಿದ್ದಂತೆ ನಾಪತ್ತೆಯಾದವನು ಇದುವರೆಗೂ ಪತ್ತೆಯಾಗಿಲ್ಲ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಹೀಗಾಗಿ ಥಾಣೆ ಪೊಲೀಸರು ಸದ್ಯಕ್ಕೆ ಸಾಗರ್ ಥಕ್ಕರ್‌ಗೆ ಸಂಬಂಧಿಸಿದ ಎಲ್ಲಾ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡು ತನಿಖೆ ನಡೆಸುತ್ತಿದ್ದು, ತನಿಖೆ ವೇಳೆ ಸಾಗರ್ ಪ್ರೇಯಿಸಿಗೆ ಕೊಹ್ಲಿಯಿಂದ ದುಬಾರಿ ಕಾರನ್ನು ಖರೀದಿಸಿ ಉಡುಗೊರೆಯಾಗಿ ನೀಡಿದ್ದು ಪತ್ತೆಯಾಗಿತ್ತು.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಪ್ರಕರಣದ ವಿಚಾರಣೆ ಸಂಬಂಧ ಆಡಿ ಆರ್8 ವಿ10 ಐಷಾರಾಮಿ ಕಾರನ್ನು ವಶಕ್ಕೆ ಪಡೆದಿರುವ ಥಾಣೆ ಪೊಲೀಸರು ನಕಲಿ ಕಾರ್ ಸೆಂಟರ್ ವಂಚನೆ ಕುರಿತು ಪಿನ್ ಟು ಪಿನ್ ಮಾಹಿತಿ ಕಲೆಹಾಕುತ್ತಿದ್ದಾರೆ. ಆದ್ರೆ ಇಲ್ಲಿ ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಕೊಹ್ಲಿಯವರು ಕಾರು ಮಾರಾಟ ಮಾಡಿದ್ದರು ಕೂಡಾ ಕಾರಿನ ನೋಂದಣಿಯನ್ನು ಸಾಗರ್ ಹೆಸರಿಗೆ ವರ್ಗಾವಣೆ ಮಾಡಿರಲಿಲ್ಲ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಇದರಿಂದ ಆಡಿ ಕಾರು ಇದುವರೆಗೂ ಕೊಹ್ಲಿ ಹೆಸರಿನಲ್ಲೇ ಇದ್ದು, ಸಾಗರ್ ಮಾಡಿರುವ ಮೋಸದ ವ್ಯವಹಾರದಲ್ಲಿ ಕೊಹ್ಲಿ ಕೂಡಾ ಸಂಕಷ್ಟ ಎದುರಿಸಬೇಕಾದ ಪರಿಸ್ಥಿತಿ ಬಂದಿದೆ. ಹೀಗಾಗಿ ರೂ. 3 ಕೋಟಿ ಮೌಲ್ಯದ ಕಾರು ಅನಾಥವಾಗಿ ಥಾಣೆ ಪೊಲೀಸ್ ಠಾಣೆಯ ಎದರು ತುಕ್ಕುಹಿಡಿಯುತ್ತಿದೆ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಕಳೆದ 2 ವರ್ಷಗಳ ಹಿಂದಷ್ಟೇ ಇದೇ ಕಾರಿನ ಮೂಲಕ ಸಾಕಷ್ಟು ಸುದ್ದಿಯಾಗಿದ್ದ ಕೊಹ್ಲಿ ಮುಂಬೈ, ದೆಹಲಿ ಸೇರಿದಂತೆ ಹೋದ ಕಡೆಗೆಲ್ಲಾ ಇದೇ ಕಾರಿನಲ್ಲಿ ಜಾಲಿ ರೈಡ್ ಮಾಡಿ ಕಾರು ಪ್ರಿಯರಲ್ಲಿ ಸಖತ್ ಕ್ರೇಜ್ ಹುಟ್ಟುಹಾಕಿದ್ದರು. ಆದ್ರೆ ಅದೇ ಕಾರು ಇದೀಗ ಗುಜುರಿಗೆ ಸೇರುವ ಪರಿಸ್ಥಿತಿ ಬಂದಿದೆ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಇನ್ನು ಆಡಿ ಆರ್8 ಭಾರತದಲ್ಲಿ ವಿ8 ಹಾಗೂ ವಿ10 ಎಂಜಿನ್ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. ಈ ಪೈಕಿ ವಿ10 ಅತ್ಯಂತ ಶಕ್ತಿಶಾಲಿಯಾದ 5.2-ಲೀಟರ್ ಪೆಟ್ರೋಲ್ ಎಂಜಿನ್ ಪಡೆದುಕೊಂಡಿದ್ದು, 602-ಬಿಎಚ್‌ಪಿ ಮತ್ತು 560ಎನ್ಎಂ ಟಾರ್ಕ್ ಉತ್ಪಾದಿಸಬಲ್ಲದು.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಆಡಿ ಆರ್8 ವಿ10 ಸೂಪರ್ ಕಾರು ಕೇವಲ 3.5 ಸೆಕೆಂಡುಗಳಲ್ಲಿ 100 ಕೀ.ಮೀ ವೇಗವರ್ಧಿಸುವ ಸಾಮರ್ಥ್ಯ ಹೊಂದಿದೆ. ಹಾಗೆಯೇ ಪ್ರತಿ ಗಂಟೆಗೆ ಗರಿಷ್ಠ 317 ಕೀ.ಮೀ. ವೇಗದಲ್ಲಿ ಚಲಿಸಬಲ್ಲದು.

MOST READ: ನಿಮ್ಮ ವಾಹನಗಳ ಮೈಲೇಜ್ ಕಡಿತವಾಗುತ್ತಿರುವುದಕ್ಕೆ ಅಸಲಿ ಕಾರಣ ಏನು ಗೊತ್ತಾ?

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಆಡಿ ಆರ್8 ವಿ10 ಆವೃತ್ತಿಯ ಬೆಂಗಳೂರು ಆನ್ ರೋಡ್ ಬೆಲೆಯು ಬರೋಬ್ಬರಿ ರೂ.3.33 ಕೋಟಿ ರುಪಾಯಿಗಳಾಗಿದ್ದು, ಮುಂಭಾಗದಲ್ಲಿ ಪರಿಷ್ಕೃತ ಆಕ್ರಮಣಕಾರಿ ಗ್ರಿಲ್, ಎಲ್ ಇಡಿ ಬೆಳಕಿನ ಸೇವೆ ಹಾಗೂ ಸಂಸ್ಥೆಯ ವಿಶಿಷ್ಟ ಲೇಸರ್ ಲೈಟ್ ತಂತ್ರಜ್ಞಾನಗಳು ಈ ಕಾರಿನ ಪ್ರಮುಖ ಆಕರ್ಷಣೆಯಾಗಲಿದೆ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಇದಲ್ಲದೇ ಕ್ವಾಟ್ರೊ ಆಲ್ ವೀಲ್ ಚಾಲನಾ ವ್ಯವಸ್ಥೆಯ ಮುಖಾಂತರ ಎಲ್ಲ ನಾಲ್ಕು ಚಕ್ರಗಳಿಗೂ ಶಕ್ತಿ ರವಾನೆಯಾಗುವುದಲ್ಲದೇ 7 ಸ್ಪೀಡ್ ಎಸ್ ಟ್ರಾನಿಕ್ ಡ್ಯುಯಲ್ ಕ್ಲಚ್ ಗೇರ್ ಬಾಕ್ಸ್ ಜೋಡಣೆಯೊಂದಿಗೆ ಹಿಂಭಾಗದ ವಿನ್ಯಾಸದಲ್ಲೂ ಕ್ರೀಡಾ ಕಾರಿಗೆ ಸ್ಪೂರ್ತಿಯಾಗುವ ರೀತಿಯಲ್ಲಿ ಏರೋಡೈನಾಮಿಕ್ ವಿನ್ಯಾಸ, ಎಲ್‌ಇಡಿ ಟೈಲ್ ಲೈಟ್ ಪಡೆದುಕೊಂಡಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ಈ ಮೂಲಕ ಮರ್ಸಿಡಿಸ್ ಬೆಂಝ್ ಎಎಂಜಿ ಜಿಟಿಎಸ್, ಪೋರ್ಷೆ 911 ಟರ್ಬೊ ಹಾಗೂ ನಿಸ್ಸಾನ್ ಜಿಟಿಆರ್ ಮಾದರಿಗಳಿಗೆ ತೀವ್ರ ಪೈಪೋಟಿ ನೀಡುವ ಸೂಪರ್ ಕಾರು ಮಾದರಿಯಾಗಿದ್ದು, ರೇಸ್ ಟ್ರ್ಯಾಕ್‌ನಲ್ಲಿ ಈ ಕಾರಿಗೆ ತನ್ನದೇ ಆದ ಬೇಡಿಕೆಯನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

ವಿರಾಟ್ ಕೊಹ್ಲಿ ಬಳಿ ಆಡಿ ಆರ್8 ಹೊರತಾಗಿ ಎ8ಎಲ್ ಡಬ್ಲ್ಯು12 ಕ್ವಾಟ್ರೊ, ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿ, ಆಡಿ ಆರ್8 ವಿ10 ಹಾಗೂ ಆಡಿ ಕ್ಯೂ7 ಕಾರುಗಳ ಒಡೆಯರಾಗಿದ್ದು, ಈ ಪೈಕಿ ಆರ್8 ಎಲ್‌ಎಂಎಕ್ಸ್ ಸೀಮಿತ ಆವತ್ತಿಯು ಎಲ್ ಇಡಿ ಹಾಗೂ ಲೇಸರ್ ಹೈ ಬೀಮ್ ಲೈಟಿಂಗ್ ತಂತ್ರಜ್ಞಾನವನ್ನು ಒಳಗೊಂಡಿದೆ.

ಕೊಹ್ಲಿಗೆ ಟೋಪಿ ಹಾಕಿದ ಕಾಲ್ ಸೆಂಟರ್ ಕಿಲಾಡಿ

5.2 ಲೀಟರ್ ವಿ10 ಎಂಜಿನ್ ನಿಂದ ನಿಯಂತ್ರಿಸಲ್ಪಡುವ ಆಡಿ ಆರ್ ಎಲ್ ಎಂಎಕ್ಸ್ ಮಾದರಿಯು ಬರೋಬ್ಬರಿ 570-ಬಿಎಚ್‌ಪಿ ಉತ್ಪಾದಿಸುತ್ತದೆ. 7 ಸ್ಪೀಡ್ ಎಸ್ ಟ್ರಾನಿಕ್ ಗೇರ್ ಬಾಕ್ಸ್ ಸಹ ಇದರಲ್ಲಿರಲಿದ್ದು, ಆಲ್ ವೀಲ್ ಡ್ರೈವಿಂಗ್ ವ್ಯವಸ್ಥೆಯನ್ನು ಹೊಂದಿದೆ.

Source: Automobili ardent

Most Read Articles

Kannada
English summary
Once Virat Kohli Owned Audi R8 V10 Is Now In Rust And Dust Condition At Mumbai Police Station. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X