ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಇತ್ತೀಚಿನ ವರ್ಷಗಳಲ್ಲಿ ನಿರಂತರವಾಗಿ ಏರಿಕೆಯಾಗಿರುವ ಪೆಟ್ರೋಲ್ ಬೆಲೆಗಳಿಂದ ಹಿಡಿದು ನಿತ್ಯವಸರ ವಸ್ತುಗಳವರೆಗು ಪ್ರತಿಯೊಂದರ ಖರೀದಿಗೂ ಕರೆನ್ಸಿ ನೋಟುಗಳನ್ನು ಬಳಸುವುದು ಬಹು ತೊಂದರೆಯಾಗಿದೆ. ಸಣ್ಣ ಮುಖಬೆಲೆಯ ಕರೆನ್ಸಿ ನೋಟುಗಳು ಸಿಗದಿರುವುದು, ನಕಲಿ ನೋಟುಗಳ ಅಪಾಯ, ಹರಿದ/ಮಣ್ಣಾದ ನೋಟುಗಳಿಂದಾಗಿ ಪರದಾಡುವಂತಾಗಿದೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಆದರೆ ಇವೆಲ್ಲದರಿಂದಲೂ ಮುಕ್ತಿ ನೀಡಲು ಡಿಜಿಟಲ್ ಪಾವತಿಗಳು ಇದೀಗ ಬಹುಸಹಕಾರಿಯಾಗಿವೆ. ಆದರೆ ಈ ಪ್ರಕ್ರಿಯೆಯಲ್ಲಿ ಕೆಲವು ಕೆಲವು ದೋಷಗಳು ಇವೆ. ಪಾವತಿಗಳು ಸ್ಟ್ರಕ್ ಆಗುವುದು, ಖಾತೆ ಡೆಬಿಟ್ ಆದರೆ ಕ್ರೆಡಿಟ್ ಆಗದಿರುವುದು ಮತ್ತು ದುರ್ಬಲ ನೆಟ್‌ವರ್ಕ್ ಸಿಗ್ನಲ್‌ನಿಂದಾಗಿ ಇದರಲ್ಲೂ ಕೆಲವು ಸಮಸ್ಯೆಗಳಿವೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಮೊತ್ತವನ್ನು ಮ್ಯಾನುವಲ್ ಆಗಿ ನಮೂದಿಸಬೇಕಾದ ಸ್ಥಳಗಳಲ್ಲಿ, ದೋಷದ ಅಪಾಯ ಯಾವಾಗಲೂ ಇದ್ದೇ ಇದೆ. ಇದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಹೋಂಡಾ ಆಕ್ಟಿವಾ ಮಾಲೀಕರಿಗೆ ರೂ. 550 ರ ಬದಲಿಗೆ ರೂ. 55,000 ಶುಲ್ಕ ವಿಧಿಸಲಾಗಿದೆ. ಮಹಾರಾಷ್ಟ್ರದ ಥಾಣೆಯಲ್ಲಿರುವ ಶೆಲ್ ಇಂಧನ ಪಂಪ್‌ನಲ್ಲಿ ಈ ಘಟನೆ ಸಂಭವಿಸಿದೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಅದೃಷ್ಟವಶಾತ್ ವಿಷಯವನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದ್ದು, ಮಾಲೀಕರು ಅದೇ ದಿನ ಮರುಪಾವತಿಯನ್ನು ಪಡೆದಿದ್ದಾರೆ. ಇಂತಹ ಘಟನೆಗಳು ನಿಮಗೂ ಆಗಿರಬಹುದು, ಅದರಲ್ಲೂ ಬಾರ್, ಪೆಟ್ರೋಲ್ ಪಂಪ್, ಮಾಲ್‌ಗಳಲ್ಲಿ ನಮ್ಮ ಆತುರದಲ್ಲಿ ಪಾವತಿಯನ್ನು ನೋಡದೇ ಮಾಡಿಬಿಡುತ್ತೇವೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಆಗಿದ್ದಾದ್ರು ಏನು ?

ತನ್ನ ಹೋಂಡಾ ಆಕ್ಟೀವಾದ ಇಂಧನ ಟ್ಯಾಂಕ್ ಅನ್ನು ತುಂಬಿದ ನಂತರ, ಮಾಲೀಕರು ಇಂಧನ ಪಂಪ್ ಅಟೆಂಡೆಂಟ್ ತೋರಿಸಿದ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡಿ ಗೂಗಲ್ ಪೇ ಮೂಲಕ ಪಾವತಿ ಮಾಡಿದರು. ಪಾವತಿ ಮಾಡಿದ ನಂತರ, ಅವರು ತಮ್ಮ ಖಾತೆಯಿಂದ ಡೆಬಿಟ್ ಆದ ಮೊತ್ತವನ್ನು ನೋಡಿ ಆಶ್ಚರ್ಯಚಕಿತರಾಗಿದ್ದಾರೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಪಾವತಿ ಮೊತ್ತವು ಸುಮಾರು 550 ರೂ. ಆಗಬೇಕಿತ್ತು. ಆದರೆ, ಇಂಧನ ಪಂಪ್ ಅಟೆಂಡೆಂಟ್ ತಪ್ಪಾಗಿ 55,000 ರೂ.ಗಳಿಗೆ ಕ್ಯೂಆರ್ ಕೋಡ್ ಅನ್ನು ರಚಿಸಿದ್ದಾರೆ. ಇಂಧನ ಪಂಪ್‌ಗಳಲ್ಲಿನ ಅಟೆಂಡೆಂಟ್‌ಗಳು ಪ್ರತಿದಿನ ನೂರಾರು ಪಾವತಿಗಳನ್ನು ಮಾಡುವುದರಿಂದ ಇಂತಹ ಘಟನೆಗಳು ಸಾಮಾನ್ಯವಾಗಿಬಿಟ್ಟಿವೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಹೆಚ್ಚಿನ ಇಂಧನ ಕೇಂದ್ರಗಳಲ್ಲಿ ಹ್ಯಾಂಡ್ಹೆಲ್ಡ್ POS ಯಂತ್ರದಲ್ಲಿ ಮೊತ್ತವನ್ನು ಮ್ಯಾನುವಲ್ ಆಗಿ ನಮೂದಿಸಬೇಕು. ವಹಿವಾಟುಗಳ ಸಂಖ್ಯೆಯು ಸಾಕಷ್ಟು ಹೆಚ್ಚಿರುವುದರಿಂದ ಅಪಾಯವು ಯಾವಾಗಲೂ ಇರುತ್ತದೆ. ಇದಲ್ಲದೆ ಪಂಪ್ ಸಿಬ್ಬಂದಿ ಕೂಡ ಒತ್ತಡದಲ್ಲಿರುವುದರಿಂದ ನಿಖರವಾದ ಮೊತ್ತವನ್ನು ನಮೂದಿಸಿರುವುದನ್ನು ನಾವೂ ಕೂಡ ಖಚಿತಪಡಿಸಿಕೊಳ್ಳಬೇಕು.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಪಿಒಎಸ್ ಯಂತ್ರದಲ್ಲಿ ತಪ್ಪು ಮೊತ್ತವನ್ನು ನಮೂದಿಸುವುದು ಸರಿಯಾದ ತರಬೇತಿ ಮತ್ತು ಅರಿವಿನ ಕೊರತೆಯ ಕಾರಣದಿಂದಾಗಿರಬಹುದು. ಪಾವತಿ ಮಾಡಲು QR ಕೋಡ್ ಅನ್ನು ಪ್ರದರ್ಶಿಸುವ ಹೊಸ ಯಂತ್ರಗಳು ಹಳೆಯ ಆವೃತ್ತಿಗಳಿಗೆ ಹೋಲಿಸಿದರೆ ಬಳಸಲು ಸುಲಭವಾಗಿದೆ. ಹಳೆಯ ಪೀಳಿಗೆಯ POS ಯಂತ್ರಗಳ ಬಟನ್ ಕೀಗಳಿಗೆ ಹೋಲಿಸಿದರೆ, ಹೊಸ POS ಯಂತ್ರಗಳು ಕೆಪ್ಯಾಸಿಟಿವ್ ಟಚ್‌ಸ್ಕ್ರೀನ್‌ಗಳನ್ನು ಬಳಸಿಕೊಳ್ಳುತ್ತವೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಹೊಸ POS ಯಂತ್ರಗಳು ದೊಡ್ಡದಾದ ಮತ್ತು ಸ್ಪಷ್ಟವಾದ ಪ್ರದರ್ಶನಗಳನ್ನು ಹೊಂದಿವೆ. ಈ ಅಂಶಗಳ ಹೊರತಾಗಿಯೂ, ಆಕ್ಟಿವಾ ಮಾಲೀಕರಿಗೆ ಇನ್ನೂ ಹೆಚ್ಚಿನ ಶುಲ್ಕ ವಿಧಿಸಲಾಗಿದೆ. ಈ ದೋಷಕ್ಕೆ ನಿಖರವಾಗಿ ಕಾರಣವೇನು ಎಂಬುದು ಸ್ಪಷ್ಟವಾಗಿಲ್ಲ. ಹೊಸ POS ಯಂತ್ರಗಳು ಸ್ಮಾರ್ಟ್‌ಫೋನ್ ತರಹದ ಸ್ಪಷ್ಟತೆಯನ್ನು ನೀಡುವುದರಿಂದ, ಈ ಘಟನೆಯನ್ನು ಒತ್ತಡದ ದೋಷ ಎಂದೆನ್ನುವುದು ಕಷ್ಟ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಇಂಧನ ಪಂಪ್ ಮತ್ತು POS ಯಂತ್ರಗಳ ಏಕೀಕರಣ

ಇಂತಹ ಘಟನೆಗಳನ್ನು ತಪ್ಪಿಸಲು ಮ್ಯಾನುವಲ್ ಆಗಿ ಮೊತ್ತವನ್ನು ನಮೂದು ಮಾಡುವುದನ್ನು ತೆಗೆದುಹಾಕುವ ಅಗತ್ಯವಿದೆ. ಇಂಧನ ಪಂಪ್‌ಗಳನ್ನು POS ಯಂತ್ರಗಳಿಗೆ ವೈರ್‌ಲೆಸ್ ಆಗಿ ಸಂಪರ್ಕಿಸುವ ಅಗತ್ಯವಿದೆ, ಈ ಮೂಲಕ ಮೊತ್ತವು ಯಾವಾಗಲೂ ವಿತರಿಸಿದ ಇಂಧನದ ಮೌಲ್ಯಕ್ಕೆ ಸಮಾನವಾಗಿರುತ್ತದೆ.

ಆನ್‌ಲೈನ್ ಪೇಮೆಂಟ್ ಅವಾಂತರ: ಪೆಟ್ರೋಲ್ ಹಾಕಿಸಿಕೊಂಡು ರೂ. 55,000 ಪಾವತಿಸಿದ ವ್ಯಕ್ತಿ

ಇದೇ ರೀತಿಯದ್ದನ್ನು ಈಗಾಗಲೇ ವಿವಿಧ ಚಿಲ್ಲರೆ ಔಟ್‌ಲೆಟ್‌ಗಳಲ್ಲಿ ಅಳವಡಿಸಲಾಗಿದೆ, ಅಲ್ಲಿ ಪಿಒಎಸ್ ಯಂತ್ರಗಳು ಆಟೋಮ್ಯಾಟಿಕ್ ಆಗಿ ಬಿಲ್‌ನಿಂದ ಮೊತ್ತವನ್ನು ಪಡೆದುಕೊಳ್ಳುತ್ತವೆ. ಯಾವುದೇ ಮ್ಯಾನುವಲ್ ನಮೂದು ಒಳಗೊಂಡಿಲ್ಲದ ಕಾರಣ, ಕಡಿಮೆ ಅಥವಾ ಹೆಚ್ಚು ಶುಲ್ಕ ವಿಧಿಸುವ ಅಪಾಯವನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ.

ಡ್ರೈವ್‌ಸ್ಪಾರ್ಕ್ ಅಭಿಪ್ರಾಯ

ಪಾವತಿಗಾಗಿ QR ಕೋಡ್ ಅನ್ನು ಪ್ರದರ್ಶಿಸುವ ಪ್ರಸ್ತುತ-ಜನ್ POS ಯಂತ್ರಗಳು ಮೊತ್ತವನ್ನು ಹೆಚ್ಚು ಪ್ರಮುಖವಾಗಿ ಪ್ರದರ್ಶಿಸುವ ಮೂಲಕ ಸುಧಾರಿಸಬಹುದು. ಸದ್ಯಕ್ಕೆ QR ಕೋಡ್ ಹೆಚ್ಚಿನ ಜಾಗವನ್ನು ತೆಗೆದುಕೊಂಡು ಮೊತ್ತವನ್ನು ಸಣ್ಣದಾಗಿ ಮೂಲೆಯಲ್ಲಿ ಪ್ರದರ್ಶಿಸಲಾಗುತ್ತದೆ. ಮೊತ್ತವನ್ನು ಹೆಚ್ಚು ಸ್ಪಷ್ಟವಾಗಿ ಪ್ರದರ್ಶಿಸಿದರೆ, ಬಳಕೆದಾರರು ತಕ್ಷಣವೇ ತಪ್ಪು ನಮೂದನ್ನು ಗುರುತಿಸಬಹುದು.

Most Read Articles

Kannada
English summary
Online Payment Confusion person paid Rs 55000 for Petrol
Story first published: Friday, September 23, 2022, 19:17 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X