ಹೈ ಸೆಕ್ಯೂರಿಟಿ ನಂಬರ್ ಪ್ಲೇಟ್‍‍ ಆಯ್ಕೆ ಸಂಬಂಧ ಹೊಸ ಆದೇಶ

ದೆಹಲಿಯ ವಾಹನ ಮಾಲೀಕರು ಅಧಿಕೃತ ಡೀಲರ್‍‍ಗಳಿಂದ ಮಾತ್ರ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್ (ಎಚ್‌ಎಸ್‌ಆರ್‌ಪಿ) ಹಾಗೂ ಇಂಧನ ಗುಣಮಟ್ಟ ಆಧಾರಿತ ಹೊಲೊಗ್ರಾಮ್ ಸ್ಟಿಕ್ಕರ್‌ಗಳನ್ನು ಖರೀದಿಸಬೇಕೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ದೆಹಲಿ ಸಾರಿಗೆ ಇಲಾಖೆಯು, ಮೂಲ ಸಾಧನಗಳ ತಯಾರಕರ (ಒ‍ಇ‍‍ಎಂ) ಮೂಲಕ ಹೆಚ್‍ಎಸ್‍ಆರ್‍‍ಪಿ ಹಾಗೂ ಬಣ್ಣದ ಕೋಡೆಡ್ ಸ್ಟಿಕ್ಕರ್‍‍ಗಳನ್ನು ವಾಹನಗಳ ಡೀಲರ್‍‍ಗಳು ಪಡೆಯಬೇಕೆಂದು ಆದೇಶಿಸಿದೆ. ಡೀಲರ್‍‍ಗಳು ದೆಹಲಿಯಲ್ಲಿರುವ ಅಧಿಕೃತ ಒ‍ಇ‍ಎಂಗಳ ಮೂಲಕ ಮಾತ್ರ ಹೆಚ್‍ಎಸ್‍ಆರ್‍‍ಪಿ ಹಾಗೂ ಹೊಲೊಗ್ರಾಮ್ ಸ್ಟಿಕ್ಕರ್ ಪಡೆಯಬೇಕೆಂದು ಸಾರಿಗೆ ಇಲಾಖೆಯು ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ.

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

2019ರ ಏಪ್ರಿಲ್ 1ಕ್ಕೆ ಮೊದಲು ರಿಜಿಸ್ಟರ್ ಆದ ವಾಹನಗಳು ಎಚ್‌ಎಸ್‌ಆರ್‌ಪಿ ಹಾಗೂ ಹೊಲೊಗ್ರಾಮ್ ಆಧಾರಿತ ಸ್ಟಿಕ್ಕರ್‌ಗಳನ್ನು ಪಡೆಯಬೇಕಾಗುತ್ತದೆ. ಏಪ್ರಿಲ್ 1ರ ನಂತರ ರಿಜಿಸ್ಟರ್ ಆದ ಹೊಸ ವಾಹನಗಳು ಎಚ್‌ಎಸ್‌ಆರ್‌ಪಿ ಹಾಗೂ ಸ್ಟಿಕ್ಕರ್‌ಗಳನ್ನು ಹೊಂದಿರಲಿವೆ.

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ರಸ್ತೆ ಹಾಗೂ ಸಾರಿಗೆ ಸಚಿವಾಲಯದ ಪ್ರಕಾರ, ಡೀಸೆಲ್ ವಾಹನಗಳು ಆರೇಂಜ್ ಬಣ್ಣದ ಹಿನ್ನೆಲೆ ಹೊಂದಿರುವ ಹೊಲೊಗ್ರಾಂ ಸ್ಟಿಕ್ಕರ್ ಹೊಂದಬೇಕು. ಪೆಟ್ರೋಲ್ ಹಾಗೂ ಸಿ‍ಎನ್‍‍ಜಿ ವಾಹನಗಳು ತಿಳಿ ನೀಲಿ ಹಿನ್ನೆಲೆ ಹೊಂದಿರುವ ಸ್ಟಿಕ್ಕರ್‍‍ಗಳನ್ನು ಹೊಂದಬೇಕು.

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ಇತರ ವಾಹನಗಳು ಗ್ರೇ ಹಿನ್ನೆಲೆ ಹೊಂದಿರುವ ಸ್ಟಿಕ್ಕರ್‍‍ಗಳನ್ನು ಹೊಂದಿರಬೇಕು. ಹೊಲೊಗ್ರಾಮ್ ಸ್ಟಿಕ್ಕರ್ ಎನ್ನುವುದು ವಾಹನದ ವಿಂಡ್ ಷೀಲ್ಡ್ ಕೆಳಗಿನ ಎಡಭಾಗದಲ್ಲಿ ಸ್ಥಿರವಾಗಿರುವ ಮೂರನೇ ರಿಜಿಸ್ಟ್ರೇಷನ್ ಪ್ಲೇಟ್ ಆಗಿದೆ.

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ಇದು ವಾಹನದ ನೋಂದಣಿ ಸಂಖ್ಯೆ, ನೋಂದಣಿ ಪ್ರಾಧಿಕಾರ, ಲೇಸರ್ ಬ್ರಾಂಡ್ ಪಿನ್, ವಾಹನದ ಎಂಜಿನ್ ಮತ್ತು ಚಾಸಿಸ್ ಸಂಖ್ಯೆಗಳಂತಹ ವಿವರಗಳನ್ನು ಹೊಂದಿದೆ. ಎಚ್‌ಎಸ್‌ಆರ್‌ಪಿ ಪ್ಲೇಟ್‌ಗಳು ಕ್ರೋಮಿಯಂ ಆಧಾರಿತ ಹೊಲೊಗ್ರಾಂ ಆಗಿದೆ.

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ಇದನ್ನು ನಂಬರ್ ಪ್ಲೇಟ್‍‍ಗಳ ಟಾಪ್‍‍ನ ಎಡ ಮೂಲೆಯ ಮುಂಭಾಗ ಹಾಗೂ ಹಿಂಭಾಗದಲ್ಲಿ ಹಾಟ್ ಸ್ಟ್ಯಾಂಪಿಂಗ್ ಮೂಲಕ ಜೋಡಿಸಲಾಗುತ್ತದೆ. ಇದರ ಜೊತೆಗೆ ಲೇಸರ್-ಬ್ರ್ಯಾಂಡಿಂಗ್ ಹೊಂದಿರುವ 10 ಅಂಕೆಗಳ ಶಾಶ್ವತ ಗುರುತಿನ ಸಂಖ್ಯೆಯನ್ನು ಕೆಳಭಾಗದಲ್ಲಿರುವ ರಿಫ್ಲೆಕ್ಟಿವ್ ಶೀಟ್‍‍ಗಳ ರಿಜಿಸ್ಟ್ರೇಷನ್ ಪ್ಲೇಟಿನ ಎಡಭಾಗದಲ್ಲಿ ಅಳವಡಿಸಿರಲಾಗುತ್ತದೆ.

MOST READ: ಹಳೆ ವಾಹನವನ್ನು ಗುಜರಿಗೆ ಹಾಕುವ ಮಾಲೀಕರಿಗೆ ಆಫರ್

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ಈ ವರ್ಷದ ಆರಂಭದಲ್ಲಿ, ಕೇಂದ್ರ ಸಚಿವ ನಿತಿನ್ ಗಡ್ಕರಿರವರು ಸಂಸತ್ತಿನಲ್ಲಿ ಮಾತನಾಡಿ, ಏಪ್ರಿಲ್ 1ರ ನಂತರ ಎಲ್ಲಾ ವಾಹನ ತಯಾರಕರು ವಾಹನಗಳಲ್ಲಿ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‌ಗಳನ್ನು ನೀಡುವುದು ಕಡ್ಡಾಯ ಎಂದು ತಿಳಿಸಿದ್ದರು.

MOST READ: ವಾಹನ ಸವಾರರಿಗೆ ಸಿಹಿ ಸುದ್ದಿ ನೀಡಿದ ಸಚಿವ ನಿತಿನ್ ಗಡ್ಕರಿ ..!

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ನಂಬರ್ ಪ್ಲೇಟ್‍‍ಗಳು, ವಾಹನಗಳನ್ನು ಸುರಕ್ಷಿತವಾಗಿಸುವುದರ ಜೊತೆಗೆ ವಿಶಿಷ್ಟ ಗುರುತನ್ನು ನೀಡುತ್ತವೆ. ಈ ಹೊಸ ನಂಬರ್ ಪ್ಲೇಟ್ ಹಾಗೂ ಹೊಲೊಗ್ರಾಂಗಳು ವಾಹನಗಳನ್ನು ಸುಲಭವಾಗಿ ಗುರುತಿಸುತ್ತವೆ.

MOST READ: ಬೈಕ್ ಸವಾರನ ಪ್ರಾಣ ಉಳಿಸಿದ ಆಪಲ್ ವಾಚ್..!

ಎಚ್‌ಎಸ್‌ಆರ್‌ಪಿ ಸಂಬಂಧ ಹೊಸ ಆದೇಶ ಹೊರಡಿಸಿದ ಸರ್ಕಾರ

ಇದರಿಂದಾಗಿ ವಾಹನಕ್ಕೆ ಸಂಬಂಧಿಸಿದ ಮಾಹಿತಿಯನ್ನು ಎಲ್ಲಿಯಾದರೂ, ಯಾವುದೇ ಸಮಯದಲ್ಲಿಯಾದರೂ ತಿಳಿಯಲು ಸುಲಭವಾಗಲಿದೆ. ಈ ಸಂಖ್ಯೆಯ ಫಲಕಗಳು ಕ್ರೋಮಿಯಂ ಆಧಾರಿತವಾದ್ದರಿಂದ ಅವುಗಳನ್ನು ಹಾಳುಮಾಡಲು ಸಾಧ್ಯವಿಲ್ಲ.

Most Read Articles

Kannada
English summary
Only authorised vehicle dealers to issue high-security number plates, hologram stickers - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X