ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ಪುರುಷರೊಂದಿಗೆ ಸರಿಸಮಾನರಾಗಿ ದುಡಿಯುತ್ತಿದ್ದಾರೆ. ದ್ವಿಚಕ್ರ ವಾಹನಗಳನ್ನು ಸಹ ಮಹಿಳೆಯರು ಪುರುಷರ ರೀತಿಯಲ್ಲಿಯೇ ಚಾಲನೆ ಮಾಡುತ್ತಾರೆ. ಕೆಲ ಮಹಿಳೆಯರು ಬುಲೆಟ್ ಸೇರಿದಂತೆ ಹಲವು ಬೈಕುಗಳನ್ನು ಚಾಲನೆ ಮಾಡುವುದನ್ನು ಕಾಣಬಹುದು.

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಮಹಿಳೆಯರು ದ್ವಿಚಕ್ರ ವಾಹನಗಳನ್ನು ಕೇವಲ ಮೋಜಿಗಾಗಿ ಮಾತ್ರ ಚಾಲನೆ ಮಾಡುವುದಿಲ್ಲ. ಬದಲಿಗೆ ತಮ್ಮ ಪ್ರಯಾಣಕ್ಕೆ ಬೇರೆಯವರನ್ನು ಅವಲಂಬಿಸುವುದು ತಪ್ಪಲಿ ಎಂಬ ಕಾರಣಕ್ಕೆ ಚಾಲನೆ ಮಾಡುತ್ತಾರೆ. ಕೆಲವು ಮಹಿಳೆಯರು ದ್ವಿಚಕ್ರ ವಾಹನ ಚಾಲನೆ ಗೊತ್ತಿಲ್ಲದೇ, ಬೇರೆ ಸಾರಿಗೆ ಸೌಲಭ್ಯಗಳಿಲ್ಲದ ಕಾರಣಕ್ಕೆ ಕೆಲಸಕ್ಕೆ ಹೋಗದೆ ಮನೆಯಲ್ಲಿ ಉಳಿಯುವಂತಾಗಿದೆ.

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಕೆಲಸಕ್ಕೆ ಹೋಗುವ ಮಹಿಳೆಯರಿಗೆ ವಾಹನ ಚಾಲನೆ ಗೊತ್ತಿಲ್ಲದಿದ್ದರೆ ಬೇರೆಯವರನ್ನು ಅವಲಂಬಿಸಬೇಕಾಗುತ್ತದೆ. ವಾಹನ ಚಾಲನೆ ಗೊತ್ತಿದ್ದರೆ ಅದರ ಅಗತ್ಯವಿರುವುದಿಲ್ಲ. ಮಹಿಳೆಯರು ಈಗ ಎಲ್ಲಾ ರೀತಿಯ ವಾಹನಗಳನ್ನು ಚಾಲನೆ ಮಾಡಬಲ್ಲರು.

MOSTREAD: ಬೀದಿ ನಾಯಿಯೇ ಈ ಶೋರೂಂನ ರಿಸೆಪ್ಶನಿಸ್ಟ್

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಪ್ರಪಂಚದ ಬಹುತೇಕ ಎಲ್ಲಾ ದೇಶಗಳಲ್ಲೂ ಮಹಿಳೆಯರಿಗೂ ಡ್ರೈವಿಂಗ್ ಲೈಸೆನ್ಸ್ ನೀಡಲಾಗುತ್ತದೆ. ಆದರೆ ಪಾಕಿಸ್ತಾನ ಮಾತ್ರ ಇನ್ನೂ ಶಿಲಾಯುಗದಲ್ಲಿರುವಂತಿದೆ. ಆ ದೇಶದಲ್ಲಿ ಬೈಕ್ ಚಲಾಯಿಸಲು ಡ್ರೈವಿಂಗ್ ಲೈಸೆನ್ಸ್ ಕೋರಿ ಅರ್ಜಿ ಸಲ್ಲಿಸಿದ್ದ ಮಹಿಳೆಗೆ ಹೊರಹೋಗು ಎಂದು ಹೇಳಿ ಓಡಿಸಲಾಗಿದೆ.

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಆಕೆ ಮಹಿಳೆ ಎಂಬುದು ಇದರ ಏಕೈಕ ಕಾರಣ. ಮಹಿಳೆಯರಿಗೆ ಬೈಕ್ ಚಾಲನೆ ಮಾಡಲು ಚಾಲನಾ ಪರವಾನಗಿಗಳನ್ನು ನೀಡುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಶಿರಿನ್ ಪೆರೋಶ್ಪುರ್ವಾಲ್ಲಾ ಎಂಬಾಕೆಯೇ ಲೈಸೆನ್ಸ್ ಕೇಳಿ ಅವಮಾನಿತಳಾದ ಮಹಿಳೆ. ಈ ಘಟನೆ ಪಾಕಿಸ್ತಾನದ ಕರಾಚಿಯಲ್ಲಿ ನಡೆದಿದೆ.

MOSTREAD: ಮದುವೆ ಉಂಗುರದ ಶೋಧಕ್ಕಾಗಿ ಚೆಲ್ಲಾಪಿಲ್ಲಿಯಾದ ಕಾರಿನ ಇಂಟಿರಿಯರ್

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಅವರು ಟ್ವಿಟರ್ ಮೂಲಕ ಈ ಮಾಹಿತಿಯನ್ನು ಹಂಚಿಕೊಳ್ಳುವ ಮೂಲಕ ಪಾಕಿಸ್ತಾನದಲ್ಲಿ ನಡೆಯುವ ಲಿಂಗ ತಾರತಮ್ಯವನ್ನು ಹೊರ ಜಗತ್ತಿಗೆ ತೋರಿಸಿದ್ದಾರೆ. ಅವರು ತಮ್ಮ ಟ್ವಿಟರ್ ಪೋಸ್ಟ್ ನಲ್ಲಿ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಟ್ಯಾಗ್ ಮಾಡಿದ್ದಾರೆ.

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಪಾಕಿಸ್ತಾನದಲ್ಲಿ ಮಹಿಳೆ ಬೈಕು ಸವಾರಿ ಮಾಡಬಹುದೇ? ಮಹಿಳೆಯರಿಗೆ ಬೈಕ್ ಚಾಲನೆ ಮಾಡಲು ಲೈಸೆನ್ಸ್ ನಿಡುವುದಿಲ್ಲವೆಂದು ನನಗೆ ಸಾರಿಗೆ ಕಚೇರಿಯಲ್ಲಿ ತಿಳಿಸಿದರು. ಇದು ಯಾವ ರೀತಿಯ ನಿಯಮ? ದಯವಿಟ್ಟು ಉತ್ತರಿಸಿ ಎಂದು ಅವರು ಕೇಳಿದ್ದಾರೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಅಧಿಕಾರಿಗಳಿಂದ ಅವಮಾನಗೊಂಡ ನಂತರ ಶಿರಿನ್ ಪೆರೋಶ್ಪುರ್ವಾಲ್ಲಾ ಅಲ್ಲಿಂದ ತೆರಲಿದ್ದಾರೆ. ಹೇಗಾದರೂ ಸರಿ ಡ್ರೈವಿಂಗ್ ಲೈಸೆನ್ಸ್ ಪಡೆಯಬೇಕೆಂದು ಮತ್ತೊಂದು ಕಚೇರಿಯಲ್ಲಿ ಕೆಲಸ ಮಾಡುವ ತನಗೆ ಪರಿಚಿತ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ.

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಆಗ ಮಹಿಳೆಯರಿಗೆ ಬೈಕ್ ಚಾಲನೆ ಮಾಡಲು ಲೈಸೆನ್ಸ್ ನೀಡುವುದಿಲ್ಲವೆಂದು ಶಿರಿನ್ ಪೆರೋಶ್ಪುರ್ವಾಲ್ಲಾ ತಿಳಿದುಕೊಂಡರು. ಅಧಿಕಾರಿಗಳಿಗೆ ಪ್ರೆಷರ್ ಹಾಕಿದರೆ ಮಾತ್ರವೇ ಬೈಕ್ ಚಾಲನೆಗೆ ಲೈಸೆನ್ಸ್ ಪಡೆಯಲು ಸಾಧ್ಯವೆಂದು ಅವರಿಗೆ ತಿಳಿದು ಬಂದಿದೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಟ್ವಿಟರ್‌ನಲ್ಲಿ ಅವರು ಮಾಡಿದ ಪೋಸ್ಟ್ ಪಾಕಿಸ್ತಾನದಲ್ಲಿ ವಿವಾದವನ್ನು ಎಬ್ಬಿಸಿತು. ಅವರು ಟ್ವಿಟರ್ ನಲ್ಲಿ ಪೋಸ್ಟ್ ಮಾಡಿದ ಎರಡು ದಿನಗಳ ನಂತರ ಸಾರಿಗೆ ಇಲಾಖೆ ಅಧಿಕಾರಿಗಳನ್ನು ಅವರನ್ನು ಸಂಪರ್ಕಿಸಿ ಅವರಿಗೆ ಡ್ರೈವಿಂಗ್ ಲೈಸೆನ್ಸ್ ನೀಡಿದ್ದಾರೆ.

ಮಹಿಳೆ ಎಂಬ ಕಾರಣಕ್ಕೆ ಡ್ರೈವಿಂಗ್ ಲೈಸೆನ್ಸ್ ನೀಡಲು ನಿರಾಕರಿಸಿದ ಪಾಕಿಸ್ತಾನದ ಅಧಿಕಾರಿಗಳು

ಈ ಬಗ್ಗೆ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿರುವ ಅವರು ನಾನು ಯಾವುದೇ ತೊಂದರೆಗಳಿಲ್ಲದೆ ಡ್ರೈವಿಂಗ್ ಲೈಸೆನ್ಸ್ ಪಡೆದಿದ್ದೇನೆ. ಈ ಸಮಸ್ಯೆಯನ್ನು ಬಗೆಹರಿಸಲು ಸಹಾಯ ಮಾಡಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದ್ದಾರೆ. ಈ ಆಧುನಿಕ ಕಾಲದಲ್ಲಿಯೂ ಪಾಕಿಸ್ತಾನದ ಮಹಿಳೆಯರು ಬೈಕ್ ಚಾಲನೆಗಾಗಿ ಡ್ರೈವಿಂಗ್ ಲೈಸೆನ್ಸ್ ಪಡೆಯಲು ಹೋರಾಡಬೇಕಾಗಿರುವುದು ಶೋಚನೀಯ ಸಂಗತಿ.

ಗಮನಿಸಿ: ಈ ಲೇಖನದಲ್ಲಿ ಸಾಂದರ್ಭಿಕ ಚಿತ್ರಗಳನ್ನು ಬಳಸಲಾಗಿದೆ.

Most Read Articles

Kannada
English summary
Pakistan woman denied bike driving license. Read in Kannada.
Story first published: Saturday, September 19, 2020, 15:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X