ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ದೇಶದಲ್ಲಿ ಮಾರ್ಚ್ 22 ರಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನಿರಂತರವಾಗಿ ಏರಿಕೆಯಾಗುತ್ತಿದೆ. ಇಂದು ದೇಶಾದ್ಯಂತ ಮತ್ತೊಮ್ಮೆ ಇಂಧನ ಬೆಲೆ ಏರಿಕೆಯಾಗಿದ್ದು, ಪೆಟ್ರೋಲಿಯಂ ಕಂಪನಿಗಳು ಬುಧವಾರ (ಏಪ್ರಿಲ್ 6) ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು 80-80 ಪೈಸೆಗಳಷ್ಟು ಹೆಚ್ಚಿಸಿವೆ. ಹೊಸ ಬೆಲೆ ಏರಿಕೆಯ ನಂತರ ಇಂದು ದೆಹಲಿಯಲ್ಲಿ ಪೆಟ್ರೋಲ್ ಲೀಟರ್‌ಗೆ 105.41 ರೂ. ಮತ್ತು ಡೀಸೆಲ್ 96.67 ರೂ. ಏರಿಕೆಯಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ 91 ಪೈಸೆ ಏರಿಕೆ ಹೊಂದಿ, 111.16 ರೂಪಾಯಿ ಆಗಿದೆ. ಇನ್ನು ಡಿಸಲ್ ಬೆಲೆಯು 85 ಪೈಸೆ ಏರಿಕೆಯಾಗಿದ್ದು, 94.86 ರೂ ಆಗಿದೆ. ಮುಂಬೈನಲ್ಲಿ ಪ್ರತಿ ಲೀಟರ್ ಪೆಟ್ರೋಲ್‌ಗೆ 84 ಪೈಸೆ ಮತ್ತು ಡೀಸಲ್ 85 ಪೈಸೆ ಏರಿಕೆಯಾಗಿ ಪೆಟ್ರೋಲ್ 120.51 ರೂ.ಗೆ ಮಾರಾಟವಾಗುತ್ತಿದ್ದು, ಡೀಸೆಲ್ 104.77 ರೂ.ಗೆ ಮಾರಾಟವಾಗುತ್ತಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ಚೆನ್ನೈನಲ್ಲಿ 85 ಪೈಸೆ ಹೆಚ್ಚಳದ ನಂತರ, ಪೆಟ್ರೋಲ್ ಲೀಟರ್‌ಗೆ 110.95 ರೂ. ಮತ್ತು ಡೀಸೆಲ್ ರೂ. 101.04 ಆಗಿದೆ. ಕೋಲ್ಕತ್ತಾದಲ್ಲಿ ಇಂಧನ ದರದಲ್ಲಿ 81 ಪೈಸೆ ಏರಿಕೆಯಾಗಿದ್ದು, ಲೀಟರ್ ಪೆಟ್ರೋಲ್ ಬೆಲೆ 115.12 ರೂ. ಮತ್ತು ಡೀಸೆಲ್ 99.83 ರೂ.ಆಗಿದೆ. ಮಾರ್ಚ್ 22ರ ನಂತರ ಸತತ 16 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಲಾಗಿದೆ. ಒಟ್ಟರೆ 16 ದಿನಗಳಲ್ಲಿ ಲೀಟರ್‌ಗೆ 10 ರೂ.ವರೆಗೆ ಏರಿಕೆಯಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಮಾರ್ಚ್ 22ರಂದು ಸುಮಾರು ನಾಲ್ಕೂವರೆ ತಿಂಗಳ ನಂತರ ಪೆಟ್ರೋಲ್‌ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಪೆಟ್ರೋಲ್‌, ಡೀಸೆಲ್ ದರ ಕಳೆದ 16 ದಿನಗಳಲ್ಲಿ ಒಂದೆರಡು ದಿನ ಮಾತ್ರ ಸ್ಥಿರವಾಗಿದ್ದು, ಉಳಿದ ದಿನಗಳಲ್ಲಿ ಏರಿಕೆ ಕಂಡಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ಸಿಎನ್‌ಜಿ ಬೆಲೆಯೂ ಏರಿಕೆ

ಬುಧವಾರ ಪೆಟ್ರೋಲ್ ಮತ್ತು ಡೀಸೆಲ್ ಜೊತೆಗೆ ಸಂಕುಚಿತ ನೈಸರ್ಗಿಕ ಅನಿಲದ (ಸಿಎನ್‌ಜಿ) ಬೆಲೆಯನ್ನು ಸಹ ಹೆಚ್ಚಿಸಲಾಗಿದೆ. ಸಿಎನ್‌ಜಿ ದರದಲ್ಲಿ 2.5 ರೂಪಾಯಿ ಏರಿಕೆಯಾದ ನಂತರ ದೆಹಲಿಯಲ್ಲಿ ಪ್ರತಿ ಕೆಜಿಗೆ 66.61 ರೂಪಾಯಿ ದರದಲ್ಲಿ ಸಿಎನ್‌ಜಿ ಮಾರಾಟವಾಗುತ್ತಿದೆ. ಅದೇ ಸಮಯದಲ್ಲಿ, ದೆಹಲಿಯ ಪಕ್ಕದ ನೋಯ್ಡಾ ಮತ್ತು ಗಾಜಿಯಾಬಾದ್‌ನಲ್ಲಿ ಕಳೆದ 48 ಗಂಟೆಗಳಲ್ಲಿ ಸಿಎನ್‌ಜಿ ಬೆಲೆಯನ್ನು 5 ರೂಪಾಯಿ ಹೆಚ್ಚಿಸಲಾಗಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ತೈಲ ಸಂಸ್ಕರಣಾ ಕಂಪನಿಗಳಾದ ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರತಿದಿನವೂ ಇಂಧನ ದರಗಳನ್ನು ಪರಿಷ್ಕರಿಸುತ್ತಿದೆ, ಅಂತರಾಷ್ಟ್ರೀಯ ಮಾರುಕಟ್ಟೆಗಳಲ್ಲಿನ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಳ್ಳುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯು ಪ್ರತಿದಿನ ಬೆಳಿಗ್ಗೆ 6 ರಿಂದ ಜಾರಿಗೆ ಬರುತ್ತದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ಭಾರತವು ತನ್ನ ತೈಲ ಅವಶ್ಯಕತೆಗಳನ್ನು ಪೂರೈಸಲು ಶೇ85 ಪೆಟ್ರೋಲಿಯಂ ಆಮದುಗಳ ಮೇಲೆ ಅವಲಂಬಿತವಾಗಿದೆ. ದೇಶೀಯ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರಗಳೊಂದಿಗೆ ಸಂಬಂಧ ಹೊಂದಿವೆ, ದೇಶೀಯ ದರಗಳಲ್ಲಿನ ಬದಲಾವಣೆಗಳು ಬದಲಾವಣೆಗೆ ಒಳಪಟ್ಟಿರುತ್ತವೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ಜಾಗತಿಕ ಬ್ರೆಂಟ್ ಕಚ್ಚಾ ತೈಲ ಬೆಲೆಯು ಪ್ರತಿ ಬ್ಯಾರೆಲ್ಗೆ 106.7 ಯುಎಸ್ ಡಾಲರ್‌ನಂತೆ ವ್ಯವಹಾರ ನಡೆಸುತ್ತಿದೆ. ಭಾರತದಲ್ಲಿ ಇಂಧನ ಆಮದು ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗೆ ರಾಜ್ಯಗಳಲ್ಲಿ ಅಬಕಾರಿ ಸುಂಕಗಳನ್ನು ಸೇರಿಸಲಾಗುತ್ತದೆ, ನಂತರ ಬೆಲೆ ದ್ವಿಗುಣಗೊಳ್ಳುತ್ತದೆ. ಈ ಮಾನದಂಡಗಳ ಆಧಾರದ ಮೇಲೆ, ತೈಲ ಕಂಪನಿಗಳು ಪ್ರತಿದಿನ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ನಿಗದಿಪಡಿಸುತ್ತವೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ಪ್ರತಿನಿತ್ಯ ಹೊಸ ದರಗಳು ಬೆಳಗ್ಗೆ 6 ಗಂಟೆಗೆ ನಿಗದಿಯಾಗುತ್ತವೆ. ಈ ಹಿಂದೆ ಕೇಂದ್ರ ಸರ್ಕಾರ ಹಾಗೂ ಕೆಲವು ರಾಜ್ಯಗಳು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸುಂಕವನ್ನು ಕಡಿತ ಮಾಡಿದ್ದವು, ಈಗ ಇಂಧನ ದರ ಏರಿಕೆಯ ನಡುವೆ ಮತ್ತೆ ಸೆಸ್ ಅನ್ನು ಇಳಿಕೆ ಮಾಡಬೇಕು ಎಂಬ ಆಗ್ರಹ ಕೇಳಿಬಂದಿದೆ.

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ 80 ಪೈಸೆ ಹೆಚ್ಚಳ: 16 ದಿನಗಳಲ್ಲಿ 10 ರೂ. ಏರಿಕೆ

ನಿಮ್ಮ ನಗರದಲ್ಲಿನ ಇಂಧನ ಬೆಲೆ ತಿಳಿಯಿರಿ

ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕಂಡುಹಿಡಿಯುವುದು ತುಂಬಾ ಸುಲಭ. ನಿಮ್ಮ ಸ್ಮಾರ್ಟ್‌ಫೋನ್‌ನಿಂದ ದೈನಂದಿನ ಇಂಧನ ಬೆಲೆಗಳನ್ನು ಸಹ ಪರಿಶೀಲಿಸಬಹುದು. ಇದಕ್ಕಾಗಿ ಇಂಡಿಯನ್ ಆಯಿಲ್ ಎಸ್ಎಂಎಸ್ ಸೇವೆಯ ಮೊಬೈಲ್ ಸಂಖ್ಯೆ 9224992249 ಗೆ SMS ಕಳುಹಿಸಬಹುದು. ಸಂದೇಶದ ಮೂಲಕ ಇತ್ತೀಚಿನ ದರವನ್ನು ಪಡೆಯಲು, ಟೆಕ್ಸ್ಟ್ ಬಾಕ್ಸ್‌ನಲ್ಲಿ RSP<�ಸ್ಪೇಸ್>ಪೆಟ್ರೋಲ್ ಪಂಪ್ ಡೀಲರ್ ಕೋಡ್ ಅನ್ನು ಟೈಪ್ ಮಾಡಿ. ಇಂಟರ್ನೆಟ್‌ನಲ್ಲಿ ನಿಮ್ಮ ಪ್ರದೇಶದ RSP ಕೋಡ್ ಅನ್ನು ನೀವು ಪರಿಶೀಲಿಸಬಹುದು. ಸಂದೇಶವನ್ನು ಕಳುಹಿಸಿದ ನಂತರ, ಪೆಟ್ರೋಲ್ ಮತ್ತು ಡೀಸೆಲ್ ಇತ್ತೀಚಿನ ದರದ ಬಗ್ಗೆ ನಿಮಗೆ ತಿಳಿಸಲಾಗುತ್ತದೆ.

Most Read Articles

Kannada
English summary
Petrol diesel cng price hike know latest price 6th april
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X