ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಪ್ರಪಂಚದಾದ್ಯಂತ ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸಿ ಸಂಚಾರ ಪೊಲೀಸರಿಂದ ತಪ್ಪಿಸಿಕೊಳ್ಳುವುದು ಸಾಮಾನ್ಯವಾಗಿದೆ. ಸಂಚಾರ ನಿಯಮಗಳನ್ನು ಉಲ್ಲಂಘಿಸುವ ವಾಹನ ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳುವ ಮೂಲಕ ತಮ್ಮ ಅಕ್ರಮ ಚಾಲನಾ ನಡವಳಿಕೆಯನ್ನು ಮರೆಮಾಡುತ್ತಾರೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಆದರೆ ಪೋಲೆಂಡ್ ದೇಶದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದು ತುಂಬಾ ಕಷ್ಟ. ಅಲ್ಲಿನ ಪೊಲೀಸರು ಹೆದ್ದಾರಿಗಳಲ್ಲಿ ತಂತ್ರಜ್ಞಾನದ ಸಹಾಯದಿಂದ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ಬಗ್ಗೆ ನಿಗಾ ವಹಿಸುತ್ತಾರೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಇದರಿಂದ ಪೋಲೆಂಡ್'ನಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಪೋಲೆಂಡ್ ಹೆದ್ದಾರಿಗಳಲ್ಲಿ ಸಂಚಾರಿ ಪೊಲೀಸರು ಅತ್ಯಾಧುನಿಕ ಡ್ರೋನ್‌ಗಳ ಮೂಲಕ ಸಂಚಾರ ಮೇಲ್ವಿಚಾರಣೆ ಮಾಡುತ್ತಾರೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಹೆದ್ದಾರಿಗಳ ಮೇಲೆ ಹಾರಾಟ ನಡೆಸುವ ಡ್ರೋನ್‌ಗಳು ದೂರದಿಂದಲೇ ಅತಿ ವೇಗದಲ್ಲಿ ಚಲಿಸುವ ವಾಹನಗಳನ್ನು ಪತ್ತೆ ಮಾಡುತ್ತವೆ. ನಂತರ ಈ ಡ್ರೋನ್‌ಗಳು ಆ ವಾಹನಗಳ ಲೈವ್ ವಿಡಿಯೋ ತುಣುಕನ್ನು ಹೆದ್ದಾರಿಯಲ್ಲಿರುವ ಟ್ರಾಫಿಕ್ ಕಂಟ್ರೋಲ್ ರೂಂಗೆ ಕಳುಹಿಸುತ್ತವೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ನಂತರ ಪೊಲೀಸರು ಆ ವಾಹನಗಳನ್ನು ಬ್ಯಾರಿಕೇಡ್‌ ಹಾಕುವ ಮೂಲಕ ನಿಲ್ಲಿಸುತ್ತಾರೆ. ಈ ಡ್ರೋನ್‌ಗಳ ಕಾರ್ಯಕ್ಕೆ ಸಂಬಂಧಿಸಿದ ವೀಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಈ ವೀಡಿಯೊದಲ್ಲಿ ಸಂಚಾರಿ ಪೊಲೀಸರು ನಿಧಾನವಾಗಿ ಚಲಿಸುವ ವಾಹನಗಳನ್ನು ತಪ್ಪಾದ ರೀತಿಯಲ್ಲಿ ಓವರ್ ಟೇಕ್ ಮಾಡುವ ವಾಹನಗಳನ್ನು ತಡೆಯುವುದನ್ನುಕಾಣಬಹುದು.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಡ್ರೋನ್ ಹೆದ್ದಾರಿಯ ಮೇಲೆ ಹಾರಾಡುತ್ತಾ ರಸ್ತೆಯ ವಾಹನಗಳ ಮೇಲೆ ನಿಗಾ ಇಡುತ್ತಿರುವುದನ್ನು ಈ ವೀಡಿಯೊದಲ್ಲಿ ಕಾಣಬಹುದು. ಈ ಡ್ರೋನ್ ಹೆದ್ದಾರಿಯಲ್ಲಿ ವೇಗವಾಗಿ ಚಲಿಸುವ ಹಾಗೂ ವಾಹನಗಳನ್ನು ತಪ್ಪಾದ ರೀತಿಯಲ್ಲಿ ಓವರ್ ಟೇಕ್ ಮಾಡುವ ವಾಹನಗಳ ವೀಡಿಯೊವನ್ನು ರೆಕಾರ್ಡ್ ಮಾಡುತ್ತದೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಪೊಲೀಸರು ವಾಹನ ಸವಾರರನ್ನು ಈ ಡ್ರೋನ್‌ಗಳ ಮೂಲಕ ಮೇಲ್ವಿಚಾರಣೆ ಮಾಡುತ್ತಿರುವ ಸಂಗತಿ ವಾಹನ ಸವಾರರಿಗೆ ತಿಳಿದಿಲ್ಲ. ಈ ವಾಹನಗಳನ್ನು ನಿಲ್ಲಿಸಲು ಹೆದ್ದಾರಿಯಲ್ಲಿ ಒಂದು ಕಂಟ್ರೋಲ್ ರೂಂ ತೆರೆಯಲಾಗಿದೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಕಂಟ್ರೋಲ್ ರೂಂನಿಂದ ಹೊರ ಬರುವ ಸಂಚಾರಿ ಪೊಲೀಸ್ ಅಧಿಕಾರಿಯೊಬ್ಬರು ವೇಗವಾಗಿ ಚಲಿಸುವ ವಾಹನವನ್ನು ತಡೆದು ನಿಲ್ಲಿಸುತ್ತಾರೆ. ಡ್ರೋನ್ ನೆರವಿನಿಂದಸಂಚಾರಿ ಪೊಲೀಸರು ಕಾರು ಹಾಗೂ ಬೈಕುಗಳನ್ನು ತಡೆಯುತ್ತಾರೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಡ್ರೋನ್‌ಗಳ ಮೂಲಕ ಸಂಚಾರವನ್ನು ಮೇಲ್ವಿಚಾರಣೆ ಮಾಡುವ ತಂತ್ರಜ್ಞಾನವು ಹೊಸದಲ್ಲ. ಪೋಲೆಂಡ್‌ ಹೊರತು ಪಡಿಸಿದರೆ ಇಂಗ್ಲೆಂಡ್ ಪೊಲೀಸರು ಸಹ ಡ್ರೋನ್‌ ನೆರವಿನಿಂದ ತಪ್ಪಾದ ದಾರಿಯಲ್ಲಿ ವಾಹನ ಚಾಲನೆ ಮಾಡುವವರ ವಿರುದ್ಧ ಕ್ರಮ ಕೈಗೊಳ್ಳುತ್ತಾರೆ.

ಅಮೆರಿಕಾದಲ್ಲಿ ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರನ್ನು ಹಿಡಿಯಲು ಹೆಲಿಕಾಪ್ಟರ್‌ಗಳ ಸಹಾಯವನ್ನು ತೆಗೆದುಕೊಳ್ಳಲಾಗುತ್ತದೆ. ಟ್ರಾಫಿಕ್ ಮಾನಿಟರಿಂಗ್ಡ್ರೋನ್‌ಗಳಲ್ಲಿ ಹೆಚ್ಚು ರೆಸಲ್ಯೂಶನ್ ಹೊಂದಿರುವ ಇನ್ಫ್ರಾರೆಡ್ ಕ್ಯಾಮರಾಗಳನ್ನು ಅಳವಡಿಸಲಾಗಿರುತ್ತದೆ.

ಡ್ರೋನ್‌ ಮೂಲಕ ಸಂಚಾರಿ ನಿಯಮ ಉಲ್ಲಂಘನೆಗಳನ್ನು ಪತ್ತೆ ಹಚ್ಚುತ್ತಾರೆ ಈ ದೇಶದ ಪೊಲೀಸರು

ಈ ಕ್ಯಾಮರಾಗಳು ರಾತ್ರಿ ವೇಳೆಯಲ್ಲಿಯೂ ಗುಣಮಟ್ಟದ ವೀಡಿಯೊವನ್ನು ರೆಕಾರ್ಡ್ ಮಾಡುತ್ತವೆ. ಆಸ್ಟ್ರೇಲಿಯಾದಲ್ಲಿ ಪೊಲೀಸರು ಇಂತಹ ಡ್ರೋನ್‌ಗಳನ್ನು ಅಕ್ರಮವಾಗಿ ಸ್ಟ್ರೀಟ್ ರೇಸ್ ಮಾಡುವವರ ವಿರುದ್ಧ ಹಾಗೂ ತಪ್ಪಿಸಿಕೊಂಡು ಓಡಿ ಹೋಗುವ ಅಪರಾಧಿಗಳನ್ನು ಪತ್ತೆ ಹಚ್ಚಲು ಬಳಸುತ್ತಾರೆ.

Most Read Articles

Kannada
English summary
Poland cops use drones to identify traffic violators. Read in Kannada.
Story first published: Tuesday, July 27, 2021, 18:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X