ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

By Praveen Sannamani

ಭೂಲೋಕದ ಸ್ವರ್ಗ ಎಂದೇ ಜನಪ್ರಿಯವಾಗಿರುವ ದುಬೈ ನೋಡಲು ಎಷ್ಟು ಚಂದ ಕಾಣುತ್ತೊ ಅಲ್ಲಿನ ಕಾನೂನುಗಳು ಅಷ್ಟೇ ಕಠಿಣವಾಗಿವೇ ಅಂದ್ರೆ ನೀವು ನಂಬಲೇಬೇಕು. ದಿನಂಪ್ರತಿ ವಿದೇಶಿಗಳಿಂದ ಬರುವ ಸಾವಿರಾರು ಪ್ರವಾಸಿಗರ ಮೇಲೆ ಹದ್ದಿನ ಕಣ್ಣಿಡುವ ಅಲ್ಲಿನ ಪೊಲೀಸರು ಮೊನ್ನೆಯಷ್ಟೇ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಯಿಂದ ಭಾರೀ ಪ್ರಮಾಣದ ದಂಡ ವಸೂಲಿ ಮಾಡಿರುವ ಪ್ರಕರಣವೊಂದು ಭಾರೀ ಚರ್ಚೆಗೆ ಕಾರಣವಾಗಿದೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಪ್ರವಾಸಿಗರ ಸ್ವರ್ಗವಾಗಿರುವ ದುಬೈನಲ್ಲಿ ಕಣ್ಣು ಹಾಯಿಸಿದ ಕಡೆಗೆಲ್ಲಾ ಸೂಪರ್ ಕಾರುಗಳು ಕಾಣದೇ ಇರಲಾರವು. ಜೊತೆಗೆ ಅಲ್ಲಿನ ಪೊಲೀಸರ ಗಸ್ತು ವಾಹನಗಳು ಕೂಡಾ ಯಾವ ಶ್ರೀಮಂತಿಕೆಗೂ ಕಡಿಮೆ ಇಲ್ಲಾ. ಲಂಬೋರ್ಗಿನಿ, ಬುಗಾಟಿ ಕಾರುಗಳನ್ನ ಬಳಸುವ ಅಲ್ಲಿನ ಪೊಲೀಸರು, ಸಂಚಾರಿ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಲ್ಲದೇ ಭಾರೀ ಪ್ರಮಾಣದ ದಂಡವನ್ನು ವಸೂಲಿ ಮಾಡದೇ ಇರಲಾರರು.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಹೌದು, ಮೊನ್ನೆಯಷ್ಟೇ ಬ್ರಿಟಿಷ್ ಪ್ರಜೆಯೊಬ್ಬ ಪ್ರವಾಸಕ್ಕಾಗಿ ದುಬೈಗೆ ಬಂದಿದ್ದ. ಆದ್ರೆ ರಜಾ ಮಾಜಾ ಅನುಭವಿಸಲು ಬಂದಿದ್ದ ಆತ ಮಾಡಿದ ಒಂದು ತಪ್ಪಿನಿಂದಾಗಿ ಲಕ್ಷಾಂತರ ರೂಪಾಯಿ ದಂಡ ಪಾವತಿಸಿದ್ದಾನೆ. ಅಷ್ಟಕ್ಕೂ ಆತ ಮಾಡಿದ್ದು ಓವರ್ ಸ್ಪೀಡಿಂಗ್ ಅಷ್ಟೇ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಬಾಡಿಗೆಗೆ ಅಂತಾ ತೆಗೆದುಕೊಂಡಿದ್ದ ಲಂಬೋರ್ಗಿನಿ ಹುರ್‌ಕಾನ್ ಸೂಪರ್ ಕಾರಿನಲ್ಲಿ ದುಬೈನ ಪ್ರಮುಖ ರಸ್ತೆಗಳಲ್ಲಿ ಜಾಲಿ ರೈಡಿಂಗ್ ಮಾಡುತ್ತಿದ್ದ ಬ್ರಿಟಿಷ್ ಪ್ರಜೆಯು ಶೆಕ್ ಜಯೇದ್ ರಸ್ತೆಯಲ್ಲಿ ಗಂಟೆಗೆ 230 ಕಿ.ಮೀ ವೇಗದಲ್ಲಿ ಕಾರು ಚಾಲನೆ ಮಾಡಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಬೆಳಗಿನ ಜಾವ 2.30 ರಿಂದ 6.30ರ ಮಧ್ಯೆಯಲ್ಲಿ ಅತಿ ವೇಗವಾಗಿ ಕಾರು ಚಾಲನೆ ಮಾಡಿರುವ ಬ್ರಿಟಿಷ್ ಪ್ರಜೆಯು ಒಟ್ಟು 32 ಬಾರಿ ಅತಿ ವೇಗವಾಗಿ ಕಾರು ಚಾಲನೆ ಮಾಡುವ ಮೂಲಕ ಸಂಚಾರಿ ನಿಯಮ ಉಲ್ಲಂಘಿಸಿ ಪೊಲೀಸರ ಅತಿಥಿಯಾಗಿದ್ದಾನೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಕಾರು ಇನ್ನು ಚಾಲನೆಯಲ್ಲಿ ಇರುವಾಗಲೇ ಲಂಬೋರ್ಗಿನಿ ಕಾರನ್ನು ಬೆನ್ನಟ್ಟಿಕೊಂಡ ಬಂದ ದುಬೈ ಟ್ರಾಫಿಕ್ ಪೊಲೀಸರು, ಬ್ರಿಟಿಷ್ ಪ್ರಜೆಯನ್ನು ವಶಕ್ಕೆ ಪಡೆದುಕೊಂಡು ಬರೋಬ್ಬರಿ 30 ಲಕ್ಷ ದಂಡ ವಸೂಲಿ ಮಾಡಿದ್ದಾರೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಜೊತೆಗೆ ಕಾರು ಬಾಡಿಗೆಗೆ ಕೊಟ್ಟ ಕಾರು ಮಾಲೀಕನಿಗೂ ದಂಡ ವಿಧಿಸಿರುವ ಪೊಲೀಸರು, ದುಬೈ ನಗರದಲ್ಲಿನ ಸಂಚಾರಿ ನಿಯಮಗಳನ್ನು ಪ್ರವಾಸಿಗರಿಗೆ ಸ್ಪಷ್ಟವಾಗಿ ತಿಳಿ ಹೇಳಿಲ್ಲ ಎಂಬ ಕಾರಣಕ್ಕಾಗಿ ಕಾರು ಮಾಲೀಕನಿಗೂ ಲಕ್ಷಾಂತರ ರೂಪಾಯಿ ದಂಡ ವಿಧಿಸಿದ್ದಾರೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಇಲ್ಲಿ ಇನ್ನೊಂದು ಇಂಟ್ರಸ್ಟಿಂಗ್ ವಿಚಾರ ಅಂದ್ರೆ ಸಂಚಾರಿ ನಿಯಮ ಉಲ್ಲಂಘನೆಗಾಗಿ ವಿಧಿಸಿರುವ 30 ಲಕ್ಷ ದಂಡವನ್ನು ಸೂಪರ್ ಕಾರಿನ ಮಾಲೀಕನಿಂದಲೇ ವಸೂಲಿ ಮಾಡಲಾಗಿದ್ದು, ಕಾರು ಕೊಟ್ಟ ತಪ್ಪಿಗೆ ಬ್ರಿಟಿಷ್ ಪ್ರಜೆ ಕಟ್ಟಬೇಕಾದ ದಂಡವನ್ನು ಕಾರು ಮಾಲೀಕನೇ ಪಾವತಿಸಿದ್ದಾನೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ದಂಡ ಪಾವತಿಸಲು ಹೇಳಿದಾಗ ನನ್ನ ಬಳಿ ಅಷ್ಟು ಹಣ ಇಲ್ಲ ಎಂದ ಬ್ರಿಟಿಷ್ ಪ್ರಜೆ ನನ್ನ ದೇಶಕ್ಕೆ ಮರಳಿ ನಂತರವೇ ದಂಡ ಪಾವತಿ ಮಾಡುವುದಾಗಿ ಹೇಳಿದ್ದಾನೆ. ಇದಕ್ಕೆ ಒಪ್ಪದ ದುಬೈ ಪೊಲೀಸರು ಕಾರು ಬಾಡಿಗೆಗೆ ಕೊಟ್ಟ ಕಾರು ಮಾಲೀಕನಿಂದಲೇ ದಂಡ ವಸೂಲಿ ಮಾಡಿದಲ್ಲದೇ ತದನಂತರ ಬ್ರಿಟಿಷ್ ಪ್ರಜೆಯ ಪಾಸ್‌ಪೋರ್ಟ್ ಅನ್ನು ಕಾರು ಮಾಲೀಕನಿಗೆ ನೀಡಿ ಅವನಿಂದ ಹಣ ವಸೂಲಿ ಮಾಡಿಕೊಳ್ಳುವಂತೆ ಹೇಳಿಕಳುಹಿಸಿದ್ದಾರೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ಲಂಬೋರ್ಗಿನಿ ಕಾರು ಮಾಲೀಕನು ಸದ್ಯ ಬ್ರಿಟಿಷ್ ಪ್ರಜೆಯನ್ನು ದುಬೈನಿಂದ ಕಳುಹಿಸಲು ಆಗದೇ ಅವನನ್ನು ಇಟ್ಟುಕೊಳ್ಳಲು ಆಗದೇ ಪರದಾಟುವಂತಾಗಿದ್ದು, ಸದ್ಯ ಬ್ರಿಟಿಷ್ ದೂತಾವಾಸದ ಅಧಿಕಾರಿಗಳನ್ನು ಸಂಪರ್ಕಿಸಿ ಮನವಿ ಮಾಡಿರುವ ಕಾರು ಮಾಲೀಕನು ತಾನು ಪಾವತಿಸಿರುವ ಹಣವನ್ನು ಮರಳಿಸಿ ಬ್ರಿಟಿಷ್ ಪ್ರಜೆಯನ್ನು ಕರೆದುಕೊಂಡು ಹೋಗಿ ಎಂದಿದ್ದಾನಂತೆ.

ದುಬೈನಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ಬ್ರಿಟಿಷ್ ಪ್ರಜೆಗೆ ಬಿದ್ದ ದಂಡ ಎಷ್ಟು ಗೊತ್ತಾ?

ಒಟ್ಟಿನಲ್ಲಿ ದುಬೈನಲ್ಲಿ ಏನೇ ಮಾಡಿದ್ರು ಅದು ಕಾನೂನಿನ ಚೌಕಟ್ಟಿನಲ್ಲಿ ಮಾತ್ರ ಒಳ್ಳೆಯದು. ಇಲ್ಲವಾದ್ರೆ ಅಲ್ಲಿನ ಕಠಿಣ ಕಾನೂನು ಕ್ರಮಗಳಿಂದ ತಪ್ಪಿಸಿಕೊಂಡು ಹೊರಬರುವುದು ಅಷ್ಟು ಸುಲಭವಲ್ಲ ಎನ್ನುವುದು ಈಗಾಗಲೇ ಹಲವಾರು ಪ್ರಕರಣಗಳಲ್ಲಿ ಅದು ಸಾಬೀತಾಗಿದೆ.

Most Read Articles

Kannada
English summary
Dubai Police Fines British Tourist Rs 30 Lakh for Driving a Lamborghini Huracan Too Fast.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X