ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಭಾರತದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಅಧಿಕವಾಗಿವೆ. ವಾಹನ ಸವಾರರು ಸಂಚಾರಿ ನಿಯಮಗಳನ್ನು ಉಲ್ಲಂಘಿಸುವುದೇ ಈ ಅಪಘಾತಗಳಿಗೆ ಪ್ರಮುಖ ಕಾರಣವಾಗಿದೆ. ರಸ್ತೆ ಅಪಘಾತಗಳನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಕಳೆದ ವರ್ಷ ನೂತನ ಸಂಚಾರಿ ನಿಯಮವನ್ನು ಜಾರಿಗೊಳಿಸಿದ್ದರು.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ನೂತನ ಸಂಚಾರಿ ನಿಯಮ ಜಾರಿಯಾದ ಬಳಿಕ ಭಾರೀ ಪ್ರಮಾಣದಲ್ಲಿ ದುಬಾರಿ ದಂಡವನ್ನು ವಿಧಿಸಿದ ಹಲವು ಪ್ರಕರಣಗಳು ವರದಿಯಾಗಿವೆ. ಇದರ ನಡುವೆ ಕೆಲವು ಕಡೆಗಳಲ್ಲಿ ಪೊಲೀಸರು ಮತ್ತು ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿದಾಗ ದಂಡ ವಿಧಿಸಿದ ಪ್ರಕರಣಗಳು ವರದಿಯಾಗಿವೆ. ಅದೇ ಮಾದರಿಯಲ್ಲಿ ಚಂಡೀಗಡದ ಪೊಲೀಸ್ ಉನ್ನತ ಅಧಿಕಾರಿಯ ವಾಹನವು ಸಂಚಾರಿ ನಿಯಮವನ್ನು ಉಲ್ಲಂಘಿಸಿದೆ.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ನೂತನ ಸಂಚಾರಿ ನಿಯಮ ಕೆಲವು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಕೆಲವು ರಾಜ್ಯಗಳು ಜಾರಿಗೊಳಿಸಿಲ್ಲ, ಇನ್ನೂ ಕೆಲವು ರಾಜ್ಯಗಳು ತಿದ್ದುಪಡಿ ನಡೆಸಿ ಜಾರಿಗೊಳಿಸಿದರು. ಅದರಂತೆ ಸರ್ಕಾರಿ ಅಧಿಕಾರಿಗಳು ಸಂಚಾರಿ ನಿಯಮವನ್ನು ಉಲ್ಲಂಘಿಸಿದರೆ ದುಪ್ಪಟು ದಂಡವನ್ನು ಪಾವತಿಸಬೇಕಾಗುತ್ತದೆ.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಪಂಜಾಬ್ ಪೊಲೀಸರ ವಿಶೇಷ ಘಟಕಕ್ಕೆ ಸೇರಿರುವ ಟೊಯೊಟಾ ಫಾರ್ಚೂನರ್ ವಾಹನ ಒಂದು ರೆಡ್ ಸಿಗ್ನಲ್ ಇದ್ದಾಗ ಜೀಬ್ರಾ ಕ್ರಾಸ್ ಮೀರಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದೆ. ಕಳೆದ ಶನಿವಾರ ಬೆಳೆಗ್ಗೆ 8.30ಕ್ಕೆ ಚಂಡೀಗಡದ ಹಲ್ಲೋಮಜ್ರಾ ಟ್ರಾಫಿಕ್ ಸಿಗ್ನಿಲ್ ಬಳಿ ಘಟನೆ ನಡೆದಿದೆ.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಪಂಜಾಬ್ ಪೊಲೀಸರಿಗೆ ಸೇರಿರುವ ಫಾರ್ಚೋನರ್ ವಾಹನವು ಸಂಚಾರಿ ನಿಯಮವನ್ನು ಉಲ್ಲಂಘಿಸಿರುವುದನ್ನು ಸಾರ್ವಜನಿಕರೊಬ್ಬರು ಫೋಟೋ ತೆಗೆದಿದ್ದಾರೆ. ನಂತರ ಆ ಪೋಟೋವನ್ನು ಚಂಡೀಗಡದ ಪೊಲೀಸರ ಟ್ವಿಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಎಚ್ಚೆತ್ತ ಸಂಚಾರಿ ಪೊಲೀಸರು ಚಿತ್ರವನ್ನು ಪರಿಶೀಲಿಸಿ ಕ್ರಮ ತೆಗೆದುಕೊಂಡಿದ್ದಾರೆ. ಸಂಚಾರಿ ನಿಯಮ ಉಲ್ಲಂಘಸಿದ ಟೊಯೊಟಾ ಫಾರ್ಚೂನರ್ ಎಸ್‍‍ಯುವಿಯು ವಿಶೇಷ ಸಂರಕ್ಷಣಾ ಘಟಕದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್(ಐಜಿಪಿ) ಅವರ ಹೆಸರಿನಲ್ಲಿ ನೋಂದಾಯಿಸಲಾಗಿದೆ.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಐಜಿ ಅವರು ಈ ವಾಹನವನ್ನು ವೈಯಕ್ತಿಕವಾಗಿ ಬಳಸುತ್ತಾರೆಯೇ ಅಥವಾ ಅದು ಬೆಂಗಾವಲಿನ ವಾಹನವೇ ಎಂದು ತಿಳಿದಿಲ್ಲ. ಹೆಚ್ಚಿನ ಪೋಲಿಸ್ ಇಲಾಖೆಗಳು ತಮ್ಮ ವಾಹನಗಳನ್ನು ತಂಡದ ಹಿರಿಯ ಅಧಿಕಾರಿಗಳ ಹೆಸರಿನ ಮೇಲೆ ನೋಂದಾಯಿಸಿಕೊಳ್ಳುತ್ತಾರೆ.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ರೆಡ್ ಸಿಗ್ನಲ್ ಇದ್ದಾಗ ಜೀಬ್ರಾ ಕಾಸ್ ಅನ್ನು ಮೀರಿ ವಾಹನವನ್ನು ನಿಲ್ಲಿಸಿರುವುದಕ್ಕೆ ರೂ.500ರಷ್ಟು ದಂಡವನ್ನು ಪಂಜಾಬ್ ಸಂಚಾರಿ ಪೊಲೀಸರು ವಿಧಿಸಿದ್ದಾರೆ. ಪಂಚಾಬ್ ಪೊಲೀಸರಿಗೆ ಸೇರಿರುವುದರಿಂದ ನೂತನ ಸಂಚಾರಿ ನಿಯಮದ ಪ್ರಕಾರ ದುಪ್ಪಟ್ಟು ದಂಡವನ್ನು ಪಾವತಿಸಬೇಕಾಗುತ್ತದೆ.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಆನ್‍‍ಲೈನ್ ದಾಖಲೆಯಲ್ಲಿ ರೂ.500ರಷ್ಟು ದಂಡದ ಚಲನ್ ಅನ್ನು ಸಂಚಾರಿ ಪೊಲೀಸರು ನೀಡಿದ್ದಾರೆ. ಆದರೆ ನೂತನ ಸಂಚಾರಿ ನಿಯಮದ ಪ್ರಕಾರ ಪೊಲೀಸರು ನಿಯಮವನ್ನು ಉಲ್ಲಂಘಿಸಿದರೆ ದುಪ್ಪಟು ದಂಡವನ್ನು ಪಾವತಿಸಬೇಕು.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ವಿಶ್ವದಲ್ಲಿ ಹೆಚ್ಚು ಅಪಘಾತಗಳು ಸಂಭವಿಸುವ ಸ್ಥಳಗಳಲ್ಲಿ ಭಾರತವು ಒಂದಾಗಿದೆ. ಭಾರತದ ರಸ್ತೆಗಳಲ್ಲಿ ಪ್ರತಿವರ್ಷವು ಅಪಘಾತದಲ್ಲಿ ಸಾವಿರಾರು ಜನರ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಇಂತಹ ಭೀಕರ ಅಪಘಾತಗಳನ್ನು ತಡೆಯುವ ಉದ್ದೇಶದಿಂದ ಹೊಸ ಮೋಟಾರು ಕಾಯ್ದೆಯನ್ನು ಜಾರಿಗೊಳಿಸಿದ್ದರು.

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಆದರೆ ತೀವ್ರ ಅಕ್ರೋಶ ವ್ಯಕ್ತವಾದ ಹಿನ್ನಲೆಯಲ್ಲಿ ಕೆಲವು ರಾಜ್ಯಗಳನ್ನು ಇದನ್ನು ಜಾರಿಗೊಳಿಸಿಲ್ಲ, ಇನ್ನೂ ಕೆಲವು ರಾಜ್ಯಗಳಲ್ಲಿ ತಿದ್ದುಪಡಿಗೊಳಿಸಿ ಜಾರಿಗೊಳಿಸಿದ್ದಾರೆ. ದಂಡದ ಪ್ರಮಾಣವು ಹೆಚ್ಚಾದರೂ ಸಂಚಾರಿ ನಿಯಮ ಉಲ್ಲಂಘನೆಯು ಕಡಿಮೆಯಾಗುತ್ತದೆ ಎಂಬುದನ್ನು ಅರಿಯಬೇಕು

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಐಜಿ ಕಾರಿಗೂ ಬಿತ್ತು ದುಬಾರಿ ದಂಡ

ಕಾನೂನು ಎಲ್ಲರಿಗೂ ಒಂದೇ. ಬಡವರು, ಶ್ರೀಮಂತರು ಅಥವಾ ಅಧಿಕಾರಿ ವರ್ಗ ಎನ್ನುವ ಬೇಧಭಾವ ಕಾನೂನಿನಲ್ಲಿಲ್ಲ ಅದನ್ನು ಪ್ರತಿಯೊಬ್ಬರು ಅರ್ಥಮಾಡಿಕೊಳ್ಳಬೇಕು. ಆದರೆ ಕಾನೂನು ಪಾಲಕರೇ ಕಾನೂನು ಉಲ್ಲಂಘಿಸುವುದು ವಿಪರ್ಯಾಸವಾಗಿದೆ.

Most Read Articles

Kannada
English summary
Police IG’s Toyota Fortuner fined DOUBLE for zebra crossing violation - Read in Kannada
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X