ನಿಯಮ ಉಲ್ಲಂಘಿಸಿ ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ದೇಶದ ಅನೇಕ ರಾಜ್ಯಗಳಲ್ಲಿ ಲಾಕ್‌ಡೌನ್‌ ಇನ್ನೂ ಸಹ ಜಾರಿಯಲ್ಲಿದೆ. ಈ ಕಾರಣಕ್ಕೆ ಕೆಲವರು ಮನೆಗಳಿಂದ ಹೊರ ಬರುತ್ತಿಲ್ಲ. ಆದರೆ ಕೆಲವರು ವಿನಾಕಾರಣ ಮನೆಗಳಿಂದ ಹೊರ ಬರುತ್ತಿದ್ದಾರೆ.

ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ಮನೆಗಳಿಂದ ಹೊರ ಬರುವುದು ಮಾತ್ರವಲ್ಲದೇ, ಲಾಕ್‌ಡೌನ್‌ ನಿಯಮಗಳನ್ನು ಸಹ ಉಲ್ಲಂಘಿಸುತ್ತಿದ್ದಾರೆ. ಇಷ್ಟು ಸಾಲದೆಂಬಂತೆ ನಿಯಮಗಳನ್ನು ಉಲ್ಲಂಘಿಸುವ ವೀಡಿಯೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ ಲೋಡ್ ಮಾಡುತ್ತಿದ್ದಾರೆ. ಆದರೆ ಕೆಲವೊಮ್ಮೆ ಆ ವೀಡಿಯೊಗಳೇ ಅವರಿಗೆ ತಿರುಗುಬಾಣವಾಗುತ್ತಿವೆ.

ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ಹೆಲ್ಮೆಟ್ ಇಲ್ಲದೆ ಮಾಡಿಫೈಗೊಳಿಸಿದ ಬೈಕ್ ಚಾಲನೆ ಮಾಡುತ್ತಿದ್ದ ಬಾಲಕಿಯ ವಿರುದ್ಧ ಕೇರಳದ ಸಾರಿಗೆ ಇಲಾಖೆ ಕ್ರಮ ಕೈಗೊಂಡಿದೆ. ಈ ವೀಡಿಯೊ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವೀಡಿಯೊ ವೀಕ್ಷಿಸಿದ ಪೊಲೀಸರು ಬಾಲಕಿಯ ವಿರುದ್ಧ ಕ್ರಮ ಕೈಗೊಂಡಿದ್ದಾರೆ.

MOSTREAD: ನ್ಯಾನೋ ಕಾರಿಗೆ ಗುದ್ದಿ ಅಪ್ಪಚ್ಚಿಯಾದ ಹೋಂಡಾ ಸಿಟಿ ಕಾರು

ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ಪೊಲೀಸರು ಬಾಲಕಿಯ ಮನೆಗೆ ಹೋಗಿ ರೂ.20,500ಗಳ ದಂಡ ವಿಧಿಸಿದ್ದಾರೆ. ಜೊತೆಗೆ ಬಾಲಕಿಯ ಲೈಸೆನ್ಸ್ ಅನ್ನು ಅಮಾನತುಗೊಳಿಸುವಂತೆ ಶಿಫಾರಸು ಮಾಡಿದ್ದಾರೆ. ಪೊಲೀಸರ ತನಿಖೆಯ ವೇಳೆ ಆ ಬಾಲಕಿ ಸ್ಕೂಟರ್ ಚಾಲನೆ ಮಾಡಲು ಲೈಸೆನ್ಸ್ ಹೊಂದಿರುವುದು ಪತ್ತೆಯಾಗಿದೆ. ಇದರನ್ವಯ ಆಕೆ ಗೇರ್ ಹೊಂದಿರುವ ದ್ವಿಚಕ್ರ ವಾಹನವನ್ನು ಚಾಲನೆ ಮಾಡುವಂತಿಲ್ಲ.

ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ಗೇರ್ ಹೊಂದಿರುವ ದ್ವಿಚಕ್ರ ವಾಹನ ಚಾಲನೆ ಮಾಡಿದ ಕಾರಣಕ್ಕೆ ರೂ.10,000, ಬೈಕ್ ಮಾಡಿಫಿಕೇಶನ್ ಗಾಗಿ ರೂ.10,000 ಹಾಗೂ ಹೆಲ್ಮೆಟ್‌ ಇಲ್ಲದೆ ಬೈಕ್‌ ಸವಾರಿ ಮಾಡಿದ ಕಾರಣಕ್ಕೆ ರೂ.500 ಒಟ್ಟು ರೂ.20,500 ದಂಡ ವಿಧಿಸಲಾಗಿದೆ.

MOSTREAD: ಟೊಯೊಟಾ ಇನೋವಾ ಕ್ರಿಸ್ಟಾ ಕಾರಿನ ರೂಫ್ ಸೀಳಿದ ಬಂಡೆ

ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ಸಾಮಾಜಿಕ ಜಾಲತಾಣಗಳಲ್ಲಿರುವ ವೀಡಿಯೊದಲ್ಲಿ ಬಾಲಕಿಯು ಹೆಲ್ಮೆಟ್ ಇಲ್ಲದೆ ಬೈಕ್ ಚಾಲನೆ ಮಾಡುತ್ತಿದ್ದಾಳೆ. ಜೊತೆಗೆ ಮತ್ತೊಂದು ಬೈಕ್ ಚಾಲಕನೊಂದಿಗೆ ಸ್ಟಂಟ್ ಗಳನ್ನು ಸಹ ಮಾಡಿದ್ದಾಳೆ. ಸಾರ್ವಜನಿಕರು ಈ ವೀಡಿಯೊವನ್ನು ಪೊಲೀಸರ ಗಮನಕ್ಕೆ ತಂದಿದ್ದಾರೆ.

ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ಈ ವೀಡಿಯೊ ಗಮನಿಸಿದ ಪೊಲೀಸರು ತನಿಖೆ ಆರಂಭಿಸಿ ಬಾಲಕಿಯನ್ನು ಪತ್ತೆಹಚ್ಚಿದ್ದಾರೆ. ನಂತರ ಆಕೆಯ ಮನೆಗೆ ಹೋಗಿ ದಂಡ ವಿಧಿಸಿದ್ದಾರೆ. ಈ ವೀಡಿಯೊದಲ್ಲಿ, ಬಾಲಕಿಯು ಹಳದಿ ಬಣ್ಣದ ಯಮಹಾ ಬೈಕ್ ಚಾಲನೆ ಮಾಡಿದ್ದಾಳೆ.

MOSTREAD: ಇನ್ನು ಮುಂದೆ ಈ ಬಣ್ಣದ ಕಾರುಗಳ ನೋಂದಣಿ ಕಾನೂನುಬದ್ದ

ಬೈಕ್ ಚಾಲನೆ ಮಾಡಿದ ಬಾಲಕಿಗೆ ಬಿತ್ತು ಭಾರೀ ದಂಡ

ಕೆಲವು ವಾರಗಳ ಹಿಂದೆ, ಬೆಂಗಳೂರಿನ ನಿವಾಸಿಯೊಬ್ಬರು ಬೆಂಗಳೂರಿನ ಹೊಸೂರು ರಸ್ತೆಯಲ್ಲಿ 300 ಕಿ.ಮೀ ವೇಗದಲ್ಲಿ ಬೈಕು ಸವಾರಿ ಮಾಡುತ್ತಿದ್ದ ವೀಡಿಯೊವನ್ನು ಅಪ್ ಲೋಡ್ ಮಾಡಿದ್ದರು. ಈ ವೀಡಿಯೊ ವೈರಲ್ ಆಗುತ್ತಿದ್ದಂತೆ ಪೊಲೀಸರು ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಂಡಿದ್ದರು.

Most Read Articles

Kannada
English summary
Police imposes huge fine on girl for driving without helmet. Read in Kannada.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X