ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಸಂಚಾರಿ ನಿಯಮ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ. ಆದ್ರೆ ಸಂಚಾರಿ ನಿಯಮವನ್ನು ಪಾಲಿಸದ ಟ್ರಾಫಿಕ್ ಪೊಲೀಸರೊಬ್ಬರನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ಯತ್ನ ನಡೆದಿದ್ದು, ಹಲ್ಲೆಗೆ ಯತ್ನಿಸಿದ ಟ್ರಾಫಿಕ್ ಪೊಲೀಸಪ್ಪನ ಕ್ರಮಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ನಮ್ಮ ದೇಶದಲ್ಲಿ ಕಾನೂನು ಎಲ್ಲರಿಗೂ ಒಂದೇ ಎನ್ನುವ ಮಾತು ಎಲ್ಲಾ ಸಂದರ್ಭದಲ್ಲೂ ಬಳಕೆಯಾಗುತ್ತೆ ಎನ್ನುವುದನ್ನು ನಂಬಲು ಸಾಧ್ಯವೇ ಇಲ್ಲ. ಯಾಕೆಂದ್ರೆ ಆಳುವ ವರ್ಗ ಮತ್ತು ಅಧಿಕಾರಶಾಹಿ ವರ್ಗದವರ ದರ್ಪದ ಮುಂದೆ ಕೆಲವೊಮ್ಮೆ ನೀತಿ ನಿಯಮಗಳನ್ನು ಗಾಳಿ ತೂರಲಾಗುತ್ತೆ. ಇದಕ್ಕೆ ಉದಾಹಣೆ ಅಂದ್ರೆ ತಪ್ಪು ಮಾಡಿದ ಟ್ರಾಫಿಕ್ ಪೊಲೀಸರನ್ನು ಪ್ರಶ್ನಿಸಿದ ಯುವಕನ ಮೇಲೆ ಹಲ್ಲೆ ಯತ್ನಿಸಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಅಂದಹಾಗೆ ಈ ಘಟನೆ ನಡೆದಿರುವುದು ಬೆಂಗಳೂರಿನ ಯಲಹಂಕ ಠಾಣಾ ವ್ಯಾಪ್ತಿಯಲ್ಲಿ. ಮುಖ್ಯ ರಸ್ತೆಯೊಂದಲ್ಲಿ ಬೈಕ್ ತಪಾಸಣೆ ಮಾಡುತ್ತಿದ್ದ ಟ್ರಾಫಿಕ್ ಪೊಲೀಸರು ಯುವಕನೊಬ್ಬ ಬೈಕ್ ಹಿಡಿದಿದ್ದಾಗ ಈ ಘಟನೆ ನಡೆದಿದ್ದು, ಬೈಕ್ ತಡೆದ ಪೊಲೀಸರನ್ನು ಪ್ರಶ್ನೆ ಮಾಡುತ್ತಿದ್ದಾಗ ಹಲ್ಲೆ ಯತ್ನ ನಡೆಸಲಾಗಿದೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಬೈಕ್ ತಪಾಸಣೆ ವೇಳೆ ಯುವಕನ ಬೈಕ್ ನಂಬರ್ ಪ್ಲೇಟ್ ಸರಿಯಾಗಿಲ್ಲ ಎನ್ನುವ ಕಾರಣಕ್ಕೆ ರೂ.300 ದಂಡ ಪಾವತಿಸುವಂತೆ ಎಚ್ಚರಿಕೆ ನೀಡಿದ್ದ ಪೊಲೀಸರು ಬೈಕಿನ ಕೀ ಕಿತ್ತುಕೊಂಡಿದ್ದರು. ಈ ವೇಳೆ ದಂಡ ಕಟ್ಟಲು ವಿರೋಧಿಸಿದ ಯುವಕ ನಮಗೊಂದು ನ್ಯಾಯ ನಿಮಗೊಂದು ನ್ಯಾಯ ಯಾಕೆ ಅಂತಾ ಪ್ರಶ್ನಿಸಿದ್ದಾನೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಇದಕ್ಕೆ ಕಾರಣ, ಬೈಕ್ ತಪಾಸಣೆ ಮಾಡುತ್ತಿದ್ದ ಪೊಲೀಸರೊಬ್ಬರ ಬೈಕ್ ಸಹ ಸರಿಯಾದ ರೀತಿಯಲ್ಲಿ ನಂಬರ್ ಹೊಂದಿರಲಿಲ್ಲ. KA50 K1652 ನೊಂದಣಿ ಹೊಂದಿದ್ದ ಪೊಲೀಸರ ಬೈಕಿನಲ್ಲಿ ನಂಬರ್ ಸ್ಟಿಕರ್ ಕಿತ್ತುಹೋಗಿತ್ತು.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಈ ಬಗ್ಗೆ ಸ್ಥಳದಲ್ಲಿ ಸಿಂಗಲ್ ಸ್ಟಾರ್ ಇನ್‌ಸ್ಪೆಕ್ಟರ್ ಅವರನ್ನು ಪ್ರಶ್ನೆ ಮಾಡಿದ ಯುವಕ ನಮಗೆ ಮಾತ್ರ ಯಾಕೆ ದಂಡ ಅಂತಾ ಪ್ರಶ್ನಿಸಿದ್ದಾನೆ. ಇದಕ್ಕೆ ತಮ್ಮದೆ ರೀತಿಯಲ್ಲಿ ಸಮಾಜಾಷಿ ನೀಡಿದ ಇನ್‌ಸ್ಪೆಪ್ಟರ್ ಇದು ತಮ್ಮದಲ್ಲ ಇನ್ನೊಬ್ಬ ಟ್ರಾಫಿಕ್ ಪೊಲೀಸರದ್ದು ಅವರು ರೀಪೆರಿ ಮಾಡಿಸುತ್ತಾರೆ ನೀನು ದಂಡ ಕಟ್ಟು ಎಂದಿದ್ದಾರೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಯುವಕನ ಬೈಕ್ ಕೂಡಾ ಫ್ಯಾನ್ಸಿ ನಂಬರ್ ಹೊಂದಿದ್ದ ಹಿನ್ನೆಲೆಯಲ್ಲೇ ತಡೆಹಿಡಿದ್ದ ಟ್ರಾಫಿಕ್ ಪೊಲೀಸರು ಇದು ಸಂಚಾರಿ ನಿಯಮಕ್ಕೆ ವಿರುದ್ಧ ಎಂದಿದ್ದರು. ಆದ್ರೆ ರೀತಿ ಪೊಲೀಸ್ ಬೈಕ್ ಕೂಡಾ ಸರಿಯಾಗಿರದ ಕಾರಣಕ್ಕೆ ಯುವಕನು ಪ್ರಶ್ನೆ ಮಾಡಿದ್ದಾನೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಇಷ್ಟಕ್ಕೆ ಸಮ್ಮುನಾಗದ ಯುವಕನು ಬೈಕ್ ಮಾಲೀಕರಾಗಿದ್ದ ಇನ್ನೊಬ್ಬ ಟ್ರಾಫಿಕ್ ಪೊಲೀಸ್ ಬಳಿ ನಂಬರ್ ಪ್ಲೇಟ್ ವಿಚಾರವಾಗಿ ಮತ್ತೆ ಪ್ರಶ್ನೆ ಮಾಡಿದ್ದಾನೆ. ದಂಡ ಹಾಕುವ ಮುನ್ನ ನಿಮ್ಮ ಬೈಕ್ ಸರಿಯಾಗಿ ಇಟ್ಟುಕೊಂಡು ಬೇರೆಯವರಿಗೆ ದಂಡ ಹಾಕಿ ಎಂದಿದ್ದಾನೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಈ ವೇಳೆ ಯುವಕನ ಮಾತಿಗೆ ಗರಂ ಆದ ಪೊಲೀಸಪ್ಪ ಹಲ್ಲೆಗೆ ಯತ್ನಿಸಿದ್ದು, ಮಾತನಾಡುವ ಸಂದರ್ಭದಲ್ಲಿ ಹಲ್ಲೆಗೆ ಮುಂದಾಗಿದಲ್ಲದೇ ತನ್ನನ್ನು ಪ್ರಶ್ನೆ ಮಾಡಿದ್ರೆ ಜೈಲಿಗೆ ಕಳುಹಿಸುವುದಾಗಿ ಬೆದರಿಕೆ ಹಾಕುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಈ ಘಟನೆ ನಡೆದ ನಂತರ ಹಲ್ಲೆಗೆ ಯತ್ನಿಸಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್ ಮಾಡಿರುವ ಯುವಕ ನಡೆದ ಘಟನೆಯ ಕುರಿತು ಮಾಹಿತಿ ಹಂಚಿಕೊಂಡಿದ್ದಾನೆ. ಸಾವಿರಾರು ಜನ ಈ ಬಗ್ಗೆ ಕಮೆಂಟ್ ಮಾಡಿದ್ದು, ದರ್ಪ ಮೇರೆದ ಪೊಲೀಸ್ ವಿರುದ್ದ ಕ್ರಮ ಆಗ್ರಹಿಸುತ್ತಿದ್ದಾರೆ.

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಆದ್ರೆ ಈ ಕುರಿತು ಯಾವುದೇ ದೂರುಗಳು ದಾಖಲು ಆಗಿಲ್ಲವಾದರೂ ಸಾಮಾಜಿಕ ಜಾಣತಾಣಗಳಲ್ಲಿ ಆಕ್ಟಿವ್ ಆಗಿರುವ ಬೆಂಗಳೂರು ಟ್ರಾಫಿಕ್ ಪೊಲೀಸರು ವಿಡಿಯೋ ಕುರಿತು ಮಾಹಿತಿ ಕಲೆಹಾಕಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ ಎನ್ನಲಾಗಿದೆ.

MOST READ: ವಾಹನ ಸವಾರರೇ ಎಚ್ಚರ- ಪೆಟ್ರೋಲ್ ಬಂಕ್‌ಗಳಲ್ಲಿ ಹೇಗೆ ನಡೆಯುತ್ತೆ ನೋಡಿ ಹಗಲು ದರೋಡೆ..!

ಸಂಚಾರಿ ನಿಯಮ ಪಾಲಿಸದ ಟ್ರಾಫಿಕ್ ಪೊಲೀಸರಿಂದಲೇ ಯುವಕನ ಮೇಲೆ ದರ್ಪ..!

ಒಟ್ಟಿನಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರನ್ನು ತಡೆದು ದಂಡಹಾಕುವ ಪೊಲೀಸರೇ ಸರಿಯಾಗಿ ನಿಯಮ ಪಾಲನೆ ಮಾಡುತ್ತಿಲ್ಲ ಎನ್ನುವುದು ಈ ಹಿಂದೆಯೂ ಸಾಕಷ್ಟು ಪ್ರಕರಣಗಳಲ್ಲಿ ಸಾಬೀತಾಗಿದ್ದು, ಇನ್ನಾದ್ರೂ ಕೆಲವು ಪೊಲೀಸರು ದರ್ಪ ಪ್ರದರ್ಶನ ಮಾಡುವುದನ್ನು ಬಿಟ್ಟು ನಿಯಮ ಪಾಲಿಸಿ ಬೇರೆಯವರಿಗೂ ಆದರ್ಶವಾಗಬೇಕಿದೆ.

Most Read Articles

Kannada
English summary
Police Man Gets Physical When Asked About His Faulty Number Plate. Read in Kannada.
Story first published: Friday, January 11, 2019, 16:22 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X