ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಜನರ ಖರೀದಿಸುವ ಸಾಮರ್ಥ್ಯ ಹೆಚ್ಚಿದಂತೆಲ್ಲಾ ಬೆಲೆ ಬಾಳುವ ಸೂಪರ್ ಕಾರುಗಳನ್ನು ಖರೀದಿಸುವುದು ಸಹ ಹೆಚ್ಚಾಗುತ್ತಿದೆ. ಇದರಿಂದಾಗಿ ಐಷಾರಾಮಿ ಕಾರು ತಯಾರಕ ಕಂಪನಿಗಳು ತಮ್ಮ ಸೂಪರ್ ಕಾರುಗಳನ್ನು ದೇಶಿಯ ಮಾರುಕಟ್ಟೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬಿಡುಗಡೆಗೊಳಿಸುತ್ತಿವೆ.

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಕೆಲವು ತಿಂಗಳುಗಳ ಹಿಂದೆ ಬಿಡುಗಡೆಯಾದ ಲ್ಯಾಂಬೊರ್ಗಿನಿ ಉರುಸ್ ಐಷಾರಾಮಿ ಎಸ್‍‍ಯುವಿ ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುತ್ತಿದೆ. ಪೊಲೀಸರು ಈ ರೀತಿಯ ದುಬಾರಿ ಬೆಲೆಯ ಐಷಾರಾಮಿ ಕಾರುಗಳ ಮೇಲೆ ಕಣ್ಣಿಟ್ಟಿರುತ್ತಾರೆ.

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಈ ಹಿಂದೆ ಭಾರತದ ಹಲವೆಡೆ ಹೈ ಎಂಡ್‍‍ನ ಐಷಾರಾಮಿ ಕಾರುಗಳನ್ನು ತಪಾಸಣೆ ಮಾಡಿ, ದಾಖಲೆಗಳಿಲ್ಲದ ಕಾರಣಕ್ಕೆ ಭಾರೀ ಪ್ರಮಾಣದ ದಂಡವನ್ನು ವಿಧಿಸಿ ಆ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ಈಗ ಇಂತಹುದೇ ಘಟನೆಯೊಂದು ಬೆಂಗಳೂರಿನಲ್ಲಿ ನಡೆದಿದೆ.

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಬೆಂಗಳೂರು ಪೊಲೀಸರು ಸೂಕ್ತ ದಾಖಲೆಗಳಿಲ್ಲದೇ ಸಂಚರಿಸುತ್ತಿದ್ದ ಮೂರು ಲ್ಯಾಂಬೊರ್ಗಿನಿ ಕಾರುಗಳನ್ನು ವಶಕ್ಕೆ ಪಡೆದಿದ್ದಾರೆ. ಈ ಘಟನೆಯು ಬೆಂಗಳೂರಿನ ಅತ್ತಿಬೆಲೆಯಲ್ಲಿ ನಡೆದಿದೆ. ಡೀಲರ್‍‍ಶಿಪ್‍‍ವೊಂದಕ್ಕೆ ಸೇರಿದ್ದು, ಎನ್ನಲಾದ ಮೂರು ಹೊಸ ಲ್ಯಾಂಬೊರ್ಗಿನಿ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ವರದಿಗಳ ಪ್ರಕಾರ ಈ ಸೂಪರ್‍‍‍ಕಾರುಗಳು ಹೊಯ್ಸಳ ಲ್ಯಾಂಬೊರ್ಗಿನಿಗೆ ಸೇರಿದ್ದವಾಗಿವೆ. ಪೊಲೀಸರು ತಪಾಸಣೆ ನಡೆಸುವ ವೇಳೆ ಈ ಕಾರುಗಳನ್ನು ಪರಿಶೀಲಿಸಿದ್ದಾರೆ. ಪರಿಶೀಲನೆಯ ವೇಳೆ ಈ ಮೂರೂ ಕಾರುಗಳು ರಸ್ತೆ ತೆರಿಗೆಯನ್ನು ಪಾವತಿ ಮಾಡದಿರುವುದು ಕಂಡು ಬಂದಿದೆ. ತಕ್ಷಣವೇ ಈ ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಅಪ್‍‍ಲೋಡ್ ಮಾಡಲಾಗಿರುವ ವೀಡಿಯೊದಲ್ಲಿ ಈ ಕಾರುಗಳು ತಾತ್ಕಾಲಿಕ ರಿಜಿಸ್ಟ್ರೇಷನ್ ನಂಬರ್‍‍ಗಳನ್ನು ಹೊಂದಿರುವುದನ್ನು ಕಾಣಬಹುದು. ಈ ಕಾರುಗಳನ್ನು ಗ್ರಾಹಕರಿಗೆ ಮಾರಾಟ ಮಾಡಲಾಗಿದೆಯೇ ಇಲ್ಲವೇ ಅಥವಾ ಡೀಲರ್‍‍ಗಳ ಕಾರುಗಳೇ ಎಂಬುದು ತಿಳಿದು ಬಂದಿಲ್ಲ.

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ತಾತ್ಕಾಲಿಕ ರಿಜಿಸ್ಟ್ರೇಷನ್ ನಂಬರ್‍‍‍ಗಳಿಂದ ಎಲ್ಲಾ ಮೂರು ಕಾರುಗಳು ಬಹುತೇಕ ಹೊಸದಾಗಿವೆ ಎಂಬುದನ್ನು ಕಾಣಬಹುದು. ಈ ಕಾರುಗಳಲ್ಲಿ ಲ್ಯಾಂಬೊರ್ಗಿನಿ ಹುರಾಕನ್ ಸಹ ಇದ್ದು, ಆ ಕಾರ್ ಅನ್ನು ಉಳಿದ ಎರಡು ಕಾರುಗಳಾದ ಲ್ಯಾಂಬೊರ್ಗಿನಿ ಉರುಸ್ ಎಸ್‍‍ಯುವಿಗಳ ಜೊತೆಗೆ ವಶಕ್ಕೆ ಪಡೆಯಲಾಗಿದೆ.

MOST READ: ಬಡ ದೇಶದ ರಾಜನಿಗೆ 15 ಮಡದಿಯರು, 19 ದುಬಾರಿ ಕಾರುಗಳು..!

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಈ ಕಾರುಗಳಲ್ಲಿರುವ ಸ್ಟಿಕ್ಕರ್‌ಗಳಿಂದ, ಈ ಕಾರುಗಳು ಬೆಂಗಳೂರಿನವರಿಗೆ ಸೇರಿದ್ದವು ಎಂದು ಕಂಡು ಬರುತ್ತದೆ. ಆ ಸ್ಟಿಕ್ಕರಿನ ಮೇಲೆ ಬೆಂಗಳೂರು - ಊಟಿ ಡ್ರೈವ್ ಫಾರ್ ಲ್ಯಾಂಬೊರ್ಗಿನಿ ಜಿರೊ ಎಂದಿದೆ. ಈ ಡ್ರೈವ್‍‍ನಲ್ಲಿ ದೇಶದ ಹಲವೆಡೆಯಿಂದ ಬಂದಿದ್ದ ಲ್ಯಾಂಬೊರ್ಗಿನಿ ಕಾರುಗಳ ಮಾಲೀಕರು ಭಾಗವಹಿಸಿದ್ದರು.

MOST READ: ಖರೀದಿಸಿದ ಬೈಕ್ ಪಡೆಯಲು ಕಾನೂನು ಹೋರಾಟ ಮಾಡಿದ ಉದ್ಯಮಿ

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಈ ಕಾರುಗಳನ್ನು ಆರ್‌ಟಿಒ ವಶದಿಂದ ವಾಪಸ್ ಪಡೆಯಲು ಈ ಸೂಪರ್‍ ಕಾರುಗಳ ಮಾಲೀಕರು ಎಷ್ಟು ತೆರಿಗೆಯನ್ನು ಪಾವತಿಸಬೇಕೆಂದು ತಿಳಿದು ಬಂದಿಲ್ಲ. ಸದ್ಯಕ್ಕೆ ಈ ಎಲ್ಲಾ ಮೂರು ಕಾರುಗಳನ್ನು ಆರ್‌ಟಿಒ ಕಚೇರಿಯಲ್ಲಿ ನಿಲ್ಲಿಸಲಾಗಿದೆ. ರಸ್ತೆ ತೆರಿಗೆ ಪಾವತಿಸದ ಐಷಾರಾಮಿ ಕಾರುಗಳನ್ನು ವಶಪಡಿಸಿಕೊಳ್ಳುತ್ತಿರುವುದು ಇದೇ ಮೊದಲ ಬಾರಿಯಲ್ಲ.

MOST READ: ಹುಡುಗಿಯರಿಗೆ ಗೇರ್ ಬದಲಿಸಲು ಬಿಟ್ಟು ಡಿ‍ಎಲ್ ಕಳೆದುಕೊಂಡ ಡ್ರೈವರ್..!

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ರಸ್ತೆ ತೆರಿಗೆಯನ್ನು ಲಕ್ಷಾಂತರ ರೂಪಾಯಿಗಳಲ್ಲಿ ಪಾವತಿಸಬೇಕಾಗುತ್ತದೆ. ಗಮನಿಸಬೇಕಾದ ಸಂಗತಿಯೆಂದರೆ ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ಪ್ರಮಾಣದ ರಸ್ತೆ ತೆರಿಗೆಯನ್ನು ವಿಧಿಸುತ್ತದೆ. ಈ ಹಿಂದೆ ಆರ್‌ಟಿಒ ಹಾಗೂ ಪೊಲೀಸ್ ಅಧಿಕಾರಿಗಳು ಕರ್ನಾಟಕದಲ್ಲಿ ರಿಜಿಸ್ಟರ್ ಆಗದ ವಾಹನಗಳ ವಿರುದ್ಧ ಅಭಿಯಾನ ನಡೆಸಿದ್ದರು.

ಕಡಿಮೆ ತೆರಿಗೆ ಪಾವತಿಸಲು ಬೇರೆ ರಾಜ್ಯಗಳಲ್ಲಿ ಐಷಾರಾಮಿ ಕಾರುಗಳನ್ನು ರಿಜಿಸ್ಟರ್ ಮಾಡಿಸಿ, ನಂತರ ಕರ್ನಾಟಕದಲ್ಲಿ ಬಳಸುತ್ತಾರೆ. ಈಗ ವಶಕ್ಕೆ ಪಡೆಯಲಾಗಿರುವ ಲ್ಯಾಂಬೊರ್ಗಿನಿ ಹುರಾಕನ್ ಕಾರಿನ ಆನ್‍‍ರೋಡ್ ಬೆಲೆಯು ಕಡಿಮೆ ಎಂದರೂ ರೂ.4.7 ಕೋಟಿಗಳಾಗುತ್ತದೆ.

ಸೂಪರ್ ಕಾರುಗಳನ್ನು ವಶಕ್ಕೆ ಪಡೆದ ಬೆಂಗಳೂರು ಪೊಲೀಸರು

ಲ್ಯಾಂಬೊರ್ಗಿನಿ ಉರುಸ್ ಎಸ್‌ಯುವಿಯ ಆನ್‍‍‍ರೋಡ್ ಬೆಲೆ ರೂ.3.7 ಕೋಟಿಗಳಾಗುತ್ತದೆ. ಈ ಮೂರು ಕಾರುಗಳ ಒಟ್ಟು ಬೆಲೆ ಸುಮಾರು ರೂ.12 ಕೋಟಿಗಳಾಗುತ್ತದೆ. ಈ ಕಾರ್ಯಾಚರಣೆಯು ಇತ್ತೀಚಿನ ದಿನಗಳಲ್ಲಿ ಆರ್‌ಟಿಒ ನಡೆಸಿದ ಅತಿ ದೊಡ್ಡ ಕಾರ್ಯಾಚರಣೆಯಾಗಿದೆ.

Most Read Articles

Kannada
English summary
Police seized lamborghini supercars - Read in Kannada
Story first published: Wednesday, December 4, 2019, 12:48 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X