ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಭಾರತದಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಪ್ರಯಾಣ ಮಾಡುವವರು ಬಾಟಲ್‍‍ಗಳಲ್ಲಿ ಪೆಟ್ರೋಲ್ ಕೊಂಡೊಯ್ಯುವ ಅಭ್ಯಾಸವನ್ನು ಹೊಂದಿದ್ದಾರೆ. ದಾರಿ ಮಧ್ಯೆ ಪೆಟ್ರೋಲ್ ಖಾಲಿಯಾಗಿ ಗಾಡಿ ಕೈಕೊಟ್ಟರೆ ಇರಲಿ ಎಂಬುದು ಇದರ ಹಿಂದಿರುವ ಕಾರಣ.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಅದರಲ್ಲೂ ದ್ವಿಚಕ್ರ ವಾಹನ ಸವಾರರು ಈ ತಂತ್ರಕ್ಕೆ ಹೆಚ್ಚು ಮೊರೆ ಹೋಗುತ್ತಾರೆ. ಇದಕ್ಕೆ ಈಗ ಪೊಲೀಸರು ಕಡಿವಾಣ ಹಾಕಿದ್ದಾರೆ. ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡುವುದನ್ನು ಪೊಲೀಸರು ಬ್ಯಾನ್ ಮಾಡಿದ್ದಾರೆ.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಈ ಹಿನ್ನೆಲೆಯಲ್ಲಿ ಪೆಟ್ರೋಲ್ ಬಂಕ್‍‍ಗಳ ಮಾಲೀಕರಿಗೆ ಎಚ್ಚರಿಕೆಯನ್ನೂ ಸಹ ನೀಡಿದ್ದಾರೆ. ಅಂದ ಹಾಗೆ ಈ ಕ್ರಮ ಕೈಗೊಂಡಿರುವುದು ಮಹಾರಾಷ್ಟ್ರದ ನಾಸಿಕ್ ಪೊಲೀಸರು. ನಾಸಿಕ್‍‍ನ ಗ್ರಾಮೀಣ ಪೊಲೀಸರು ಅಲ್ಲಿನ ಪೆಟ್ರೋಲ್ ಬಂಕ್ ಮಾಲೀಕರ ಜೊತೆಗೆ ಸಭೆಯನ್ನು ಕರೆದಿದ್ದರು.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಈ ಸಭೆಯಲ್ಲಿ ನಾಸಿಕ್‍‍ನ ಗ್ರಾಮೀಣ ಭಾಗದ ನೂರಕ್ಕೂ ಹೆಚ್ಚು ಪೆಟ್ರೋಲ್ ಬಂಕ್ ಮಾಲೀಕರು ಭಾಗವಹಿಸಿದ್ದರು. ಇದರಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‍‍ಗಳನ್ನು ಬಾಟಲ್‍‍ಗಳಲ್ಲಿ ಮಾರಾಟ ಮಾಡದಂತೆ ಸೂಚಿಸಲಾಗಿದೆ.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಈ ಸೂಚನೆಯ ನಂತರವೂ ಬಾಟಲ್‍‍ಗಳಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಮಾರಾಟ ಮಾಡಿರುವುದು ಕಂಡು ಬಂದರೆ ಸಂಬಂಧಪಟ್ಟ ಪೆಟ್ರೋಲ್ ಬಂಕ್‍‍ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ತಿಳಿಸಿದ್ದಾರೆ.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ನಾಸಿಕ್ ಗ್ರಾಮೀಣದಲ್ಲಿ 350ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‍‍ಗಳಿವೆ. ಬಾಟಲ್‍‍ಗಳಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಮಾಡುವಂತಿಲ್ಲವೆಂಬ ನಿಯಮವಿದ್ದರೂ, ನಿಯಮ ಮೀರಿ ಮಾರಾಟ ಮಾಡಲಾಗುತ್ತಿದೆ.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಪೆಟ್ರೋಲ್ ಹಾಗೂ ಡೀಸೆಲ್‍‍ಗಳು ಸುಲಭವಾಗಿ ಬೆಂಕಿಗೆ ತುತ್ತಾಗುತ್ತವೆ. ಬಾಟಲ್‍‍ಗಳಲ್ಲಿ ಪೆಟ್ರೋಲ್ ಸಾಗಿಸುವುದು ತೀರಾ ಅಪಾಯಕಾರಿ. ಈ ಕಾರಣಕ್ಕೆ ಬಾಟಲ್‍‍ಗಳಲ್ಲಿ ಪೆಟ್ರೋಲ್, ಡೀಸೆಲ್ ಮಾರಾಟ ಮಾಡಬಾರದೆಂಬ ನಿಯಮಗಳಿವೆ.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಇತ್ತೀಚಿಗೆ ಮಹಾರಾಷ್ಟ್ರದಲ್ಲಿ ನಡೆದ ಘಟನೆಯೊಂದರಲ್ಲಿ ಬಾಟಲ್‍‍ನಲ್ಲಿ ಪೆಟ್ರೋಲ್ ಇಟ್ಟು ಕೊಂಡಿದ್ದ ಮಹಿಳೆಯೊಬ್ಬರು ಬೆಂಕಿಗೆ ಆಹುತಿಯಾಗಿದ್ದರು. ಈ ಕಾರಣಕ್ಕೆ ನಾಸಿಕ್ ಪೊಲೀಸರು ಈ ಕ್ರಮಕ್ಕೆ ಮುಂದಾಗಿದ್ದಾರೆ.

ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಮಾಡದಂತೆ ಕಡಿವಾಣ ಹಾಕಿದ ಪೊಲೀಸರು

ಇನ್ನು ಮುಂದೆ ಬಾಟಲ್‍‍ಗಳಲ್ಲಿ ಪೆಟ್ರೋಲ್ ಮಾರಾಟ ಕಾರಣ ದಾರಿ ಮಧ್ಯೆ ಬೈಕ್, ಸ್ಕೂಟರ್‍‍ಗಳು ಕೈಕೊಟ್ಟರೆ ಪೆಟ್ರೋಲ್ ಬಂಕ್‍‍ವರೆಗೆ ವಾಹನಗಳನ್ನು ತಳ್ಳಿಕೊಂಡು ಹೋಗುವುದು ಅನಿವಾರ್ಯವಾಗಲಿದೆ. ಆದ ಕಾರಣ ವಾಹನಗಳನ್ನು ಹೊರ ತೆಗೆಯುವ ಮೊದಲು ಪೆಟ್ರೋಲ್ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.

ಸೂಚನೆ: ಇಲ್ಲಿರುವ ಚಿತ್ರಗಳನ್ನು ರೆಫರೆನ್ಸ್ ಗಾಗಿ ಬಳಸಲಾಗಿದೆ.

Most Read Articles

Kannada
English summary
Police warn dealers against selling petrol diesel in bottles. Read in Kannada.
Story first published: Thursday, February 27, 2020, 17:50 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X