ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಬಹು ಕೋಟಿ ಮೌಲ್ಯದ ಕಾರುಗಳನ್ನು ಹೊಂದಿರುವ ಸಿನಿಮಾ ತಾರೆಯರು ಸಾಮಾನ್ಯವಾಗಿ ತಮ್ಮ ಕಾರುಗಳನ್ನು ಚಾಲನೆ ಮಾಡುವುದಿಲ್ಲ. ಆದರೆ ಕೆಲವೇ ಕೆಲವು ಸೆಲೆಬ್ರಿಟಿಗಳು ಮಾತ್ರ ತಮ್ಮ ಕಾರುಗಳನ್ನು ತಾವೇ ಚಾಲನೆ ಮಾಡುತ್ತಾರೆ. ಅಂತಹವರಲ್ಲಿ ಕಾರ್ತಿಕ್ ಆರ್ಯನ್ ಸಹ ಒಬ್ಬರು. ಕಾರ್ತಿಕ್ ಆರ್ಯನ್ ಹಿಂದಿ ಚಿತ್ರರಂಗದ ಜನಪ್ರಿಯ ನಟರಲ್ಲಿ ಒಬ್ಬರು.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಬಯೋ ಟೆಕ್ನಾಲಜಿ ಎಂಜಿನಿಯರಿಂಗ್‌ ಪದವಿ ಪಡೆದ ನಂತರ ಅವರು ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟು ನಂತರ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. Urus, Lamborghini ಕಂಪನಿಯ ಜನಪ್ರಿಯ ಎಸ್‌ಯುವಿಗಳಲ್ಲಿ ಒಂದು. ಈ ಐಷಾರಾಮಿ ಎಸ್‌ಯುವಿಗೆ ವಿಶ್ವಾದ್ಯಂತ ಹೆಚ್ಚಿನ ಬೇಡಿಕೆಯಿದೆ. ಐಷಾರಾಮಿ ಫೀಚರ್ ಹಾಗೂ ಹೆಚ್ಚಿನ ಪರ್ಫಾಮೆನ್ಸ್ ಕಾರಣಕ್ಕೆ Urus ಜನಪ್ರಿಯತೆಯನ್ನು ಪಡೆದಿದೆ.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಈ ಕಾರಣಕ್ಕೆ Urus ಎಸ್‌ಯುವಿಯು ಉದ್ಯಮಿಗಳ ಹಾಗೂ ಸೆಲೆಬ್ರಿಟಿಗಳ ನೆಚ್ಚಿನ ಕಾರುಗಳಲ್ಲಿ ಒಂದಾಗಿದೆ. ಭಾರತದಲ್ಲಿ ಈ ಎಸ್‌ಯುವಿಯ ವಿತರಣೆ ಪಡೆಯಲು ಹಲವು ತಿಂಗಳು ಕಾಯಬೇಕು. ಕಾಯುವ ಅವಧಿಯನ್ನು ತಪ್ಪಿಸಲು ಕಾರ್ತಿಕ್ ಆರ್ಯನ್, ಹೆಚ್ಚುವರಿ ಹಣ ಪಾವತಿಸಿ Lamborghini Urus ಎಸ್‌ಯುವಿಯ ವಿತರಣೆ ಪಡೆಯುವ ಮೂಲಕ ಸುದ್ದಿಯಾಗಿದ್ದರು.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಕಾರ್ತಿಕ್ ಆರ್ಯನ್ ತಮ್ಮ ಹೊಸ ಚಿತ್ರದ ಚಿತ್ರೀಕರಣಕ್ಕಾಗಿ ಪಂಚಗಾನಿಯಲ್ಲಿದ್ದಾರೆ. ಅವರು ಕಾಡಿನಲ್ಲಿ ಸಾಗುವಾಗ ಹಾದಿ ತಪ್ಪಿ ಎಲ್ಲಿಗೆ ಹೋಗಬೇಕೆಂದು ತಿಳಿಯದೇ ಅಲ್ಲಿಯೇ ಇದ್ದ ಪೋಲಿಸ್ ಅಧಿಕಾರಿಯೊಬ್ಬರ ನೆರವು ಕೋರಿದ್ದಾರೆ. ಆ ಪೊಲೀಸ್ ಅಧಿಕಾರಿ ನೆರವು ನೀಡುವ ಮೊದಲು ಸೆಲ್ಫಿ ಕೇಳಿದ್ದಾರೆ. ಸ್ವತಃ ಕಾರ್ತಿಕ್ ಆರ್ಯನ್ ರವರೇ ಪೋಸ್ಟ್ ಮಾಡಿರುವ ಈ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಕಾರ್ತಿಕ್ ಆರ್ಯನ್ ಅಲ್ಲಿದ್ದ ಸಿಬ್ಬಂದಿಯೊಂದಿಗೆ ಸೆಲ್ಫಿಗೆ ಪೋಸ್ ನೀಡಿದ್ದಾರೆ. ನಂತರ ಪೊಲೀಸರು ಅವರಿಗೆ ಮಾರ್ಗದ ಬಗ್ಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಲಾಗಿದೆ. ಈ ಇಡೀ ಘಟನೆಯನ್ನು ಕಾರ್ತಿಕ್ ಆರ್ಯನ್ ತಮ್ಮ ಸಹಾಯಕನ ಮೂಲಕ ಚಿತ್ರೀಕರಿಸಿ ಅದನ್ನು ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಕಾರ್ತಿಕ್ ಆರ್ಯನ್ Lamborghini Urus ಎಸ್‌ಯುವಿಯ ವಿತರಣೆಯನ್ನು ಪಡೆಯಲು ರೂ. 50 ಲಕ್ಷ ಹೆಚ್ಚುವರಿಯಾಗಿ ಖರ್ಚು ಮಾಡಿದ್ದಾರೆ. ಈ ಎಸ್‌ಯುವಿಯ ಬೆಲೆ ಭಾರತದ ಎಕ್ಸ್ ಶೋರೂಂ ದರದಂತೆ ರೂ. 3.5 ಕೋಟಿಗಳಿಗಿಂತ ಹೆಚ್ಚು ಎಂಬುದು ಗಮನಾರ್ಹ. ಅಂತಹ ಐಷಾರಾಮಿ ಕಾರಿಗೆ ಅವರು ಹೆಚ್ಚುವರಿ ಹಣ ನೀಡಿದ್ದಾರೆ.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

Urus ಹೆಚ್ಚು ಮಾರಾಟವಾಗುವ Lamborghini ಕಂಪನಿಯ ಐಷಾರಾಮಿ ಎಸ್‌ಯುವಿ ಆಗಿದೆ. ಈ ಎಸ್‌ಯುವಿಯನ್ನು ಭಾರತದಲ್ಲಿ ಹಲವಾರು ಚಿತ್ರ ನಟರುಹಾಗೂ ಉದ್ಯಮಿಗಳು ಖರೀದಿಸಿದ್ದಾರೆ. Lamborghini ಕಂಪನಿಯು ಇತ್ತೀಚೆಗೆ ಭಾರತದಲ್ಲಿ ಈ ಎಸ್‌ಯುವಿಯ 300 ಯುನಿಟ್‌ಗಳನ್ನು ಮಾರಾಟ ಮಾಡಿ ಹೊಸ ದಾಖಲೆ ನಿರ್ಮಿಸಿದೆ.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಇದನ್ನು ಯಾವುದೇ ಐಷಾರಾಮಿ ಕಾರು ತಯಾರಕ ಕಂಪನಿ ಮಾಡದ ಸಾಧನೆಯೆಂದು ಪರಿಗಣಿಸಲಾಗಿದೆ. Urus ಎಸ್‌ಯುವಿಯನ್ನು ವಿಶ್ವದ ಅತಿ ವೇಗದ ಎಸ್‌ಯುವಿಗಳಲ್ಲಿ ಒಂದು ಎಂದು ಪರಿಗಣಿಸಲಾಗುತ್ತದೆ. ಈ ಎಸ್‌ಯುವಿಯಲ್ಲಿ 4.0 ಲೀಟರ್ ಟ್ವಿನ್ ಟರ್ಬೋಚಾರ್ಜ್ಡ್ ವಿ 8 ಪೆಟ್ರೋಲ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ ಗರಿಷ್ಠ 641 ಬಿ‌ಹೆಚ್‌ಪಿ ಪವರ್ ಹಾಗೂ 850 ಎನ್ಎಂ ಟಾರ್ಕ್ ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

Urus ಎಸ್‌ಯುವಿಯ ಗರಿಷ್ಠ ವೇಗ ಪ್ರತಿ ಗಂಟೆಗೆ 305 ಕಿ.ಮೀಗಳಾಗಿದೆ. Urus ಎಸ್‌ಯುವಿಯು ಕೇವಲ 3.6 ಸೆಕೆಂಡುಗಳಲ್ಲಿ 0 - 100 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ. ಇನ್ನು ಈ ಎಸ್‌ಯುವಿಯು 12.8 ಸೆಕೆಂಡುಗಳಲ್ಲಿ 0 - 200 ಕಿ.ಮೀ ವೇಗವನ್ನು ಆಕ್ಸಲರೇಟ್ ಮಾಡುತ್ತದೆ.

ನಟ ಕಾರ್ತಿಕ್ ಆರ್ಯನ್ Lamborghini Urus ಎಸ್‌ಯುವಿ ಮಾತ್ರವಲ್ಲದೇ ಹಲವಾರು ಐಷಾರಾಮಿ ಕಾರುಗಳನ್ನು ಹೊಂದಿದ್ದಾರೆ. ಅವರ ಬಳಿ BMW 5 Series ಹಾಗೂ Mini Cooper ನಂತಹ ಐಷಾರಾಮಿ ಕಾರುಗಳಿವೆ. ಅವರು Royal Enfield ಬೈಕ್ ಅನ್ನು ಸಹ ಹೊಂದಿದ್ದಾರೆ. ಕಾರ್ತಿಕ್ ಆರ್ಯನ್ ತಮ್ಮ ತಾಯಿಯಿಂದ Mini Cooper ಕಾರ್ ಅನ್ನು ಉಡುಗೊರೆಯಾಗಿ ಪಡೆದಿದ್ದಾರೆ ಎಂಬುದು ಗಮನಾರ್ಹ.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

ಪೊಲೀಸರು ಸೆಲೆಬ್ರಿಟಿಗಳ ಜೊತೆಗೆ ಸೆಲ್ಫಿಗೆ ಪೋಸ್ ನೀಡುತ್ತಿರುವುದು ಇದು ಮೊದಲ ಬಾರಿಯಲ್ಲ. ಈ ಹಿಂದೆಯೂ ಈ ರೀತಿಯ ಹಲವು ಘಟನೆಗಳು ವರದಿಯಾಗಿವೆ. ಇತ್ತೀಚಿಗಷ್ಟೇ ಮುಂಬೈನಲ್ಲಿರುವ ಸಮುದ್ರದ ಸೇತುವೆ ಮೇಲೆ ಸಾಗುತ್ತಿದ್ದ ಬಹು ಭಾಷಾ ನಟ ಸುನೀಲ್ ಶೆಟ್ಟಿರವರ ಕಾರ್ ಅನ್ನು ತಡೆದಿದ್ದ ಪೊಲೀಸರು ಅವರೊಂದಿಗೆ ಸೆಲ್ಫಿ ತೆಗೆಸಿ ಕೊಂಡಿದ್ದರು.

ನೆರವು ನೀಡುವ ಮುನ್ನ ನಟನೊಂದಿಗೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಪೊಲೀಸರು

Mercedes Benz G Wagon ಕಾರಿನ ಚಾಲಕ ಸ್ಥಾನದಲ್ಲಿದ್ದ ಸುನೀಲ್ ಶೆಟ್ಟಿರವರೊಂದಿಗೆ ಪೊಲೀಸರು ಒಬ್ಬರಾದ ನಂತರ ಒಬ್ಬರಂತೆ ಪೋಸ್ ನೀಡುತ್ತಿದ್ದ ವೀಡಿಯೊ ವೈರಲ್ ಆಗಿತ್ತು. ಪೊಲೀಸರು ಸೆಲೆಬ್ರಿಟಿಗಳೊಂದಿಗೆ ಸೆಲ್ಫಿಗೆ ಪೋಸ್ ನೀಡುವುದು ಸಮಂಜಸವೇ ಆಗಿದ್ದರೂ, ಅವರು ಚಲಿಸುವ ವಾಹನಗಳನ್ನು ತಡೆದು ಸೆಲ್ಫಿ ತೆಗೆದು ಕೊಳ್ಳುವ ವೇಳೆ ಅನಗತ್ಯ ಸಂಚಾರ ದಟ್ಟಣೆ ಉಂಟಾಗಿ ಸಾರ್ವಜನಿಕರಿಗೆ ಕಿರಿ ಕಿರಿಯಾಗುವುದು ಸುಳ್ಳಲ್ಲ.

Most Read Articles

Kannada
English summary
Policeman takes selfie before helping the actor video details
Story first published: Thursday, September 23, 2021, 19:13 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X