ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹೊಸ ವಾಹನಗಳನ್ನು ಖರೀದಿಸುವಾಗ ಬಹುತೇಕರು ಗ್ರಾಹಕರಿಗೆ ತಾವು ಖರೀದಿ ಮಾಡುವ ವಾಹನದಿಂದ ಗರಿಷ್ಠ ಮಟ್ಟದ ಮೈಲೇಜ್ ನೀರಿಕ್ಷಿಸುವುದು ಕಾಮನ್. ಆದ್ರೆ ಕನಿಷ್ಠ ಮಟ್ಟದ ಮೈಲೇಜ್ ಅನ್ನು ಸಹ ನೀಡದೇ ಇದ್ದರೆ ಹೇಗೆ ಹೇಳಿ? ಇಲ್ಲೂ ಕೂಡಾ ಅಂತದ್ದೇ ಒಂದು ಪ್ರಕರಣದಲ್ಲಿ ಕಂಪಾಸ್ ಎಸ್‌ಯುವಿ ಮಾಲೀಕನು ಸುಳ್ಳು ಮೈಲೇಜ್ ಮಾಹಿತಿ ನೀಡಿದ ಜೀಪ್ ಡೀಲರ್ಸ್ ವಿರುದ್ಧ ಕೇಸ್ ಜಡಿದಿದ್ದಾರೆ.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹೌದು, ಬೆಂಗಳೂರಿನ ಜೆಪಿ ನಗರದ ನಿವಾಸಿವಾದ ಶಶಿಕುಮಾರ್ ಆರ್ ಎನ್ನುವವರು ತಮ್ಮ ಮಗಳಿಗೆ ಗಿಫ್ಟ್ ನೀಡುವುದಕ್ಕಾಗಿ ದುಬಾರಿ ಬೆಲೆಯ ಜೀಪ್ ಕಂಪಾಸ್ ಎಸ‌ಯುವಿ ಖರೀದಿ ಮಾಡಿದ್ದರು. ಆದ್ರೆ ಹೊಸ ಕಾರು ಖರೀದಿ ಮಾಡಿದಾಗ ಇದ್ದ ಖುಷಿ ಕೆಲವೇ ದಿನಗಳಲ್ಲಿ ಮಾಯಾವಾಗಿದ್ದಲ್ಲದೇ ಆರ್ಥಿಕ ಸಂಕಷ್ಟಕ್ಕೆ ಸಿಲುಕುವಂತಹ ಪರಿಸ್ಥಿತಿ ಎದುರಾಗಿದೆ. ಕೆಟ್ಟ ಮೈಲೇಜ್ ನಿರ್ವಹಣೆಯಿಂದಾಗಿ ಕಾರಿನ ಇಎಂಐಗಿಂತಲೂ ಪೆಟ್ರೋಲ್‌ಗಾಗಿಯೇ ಹೆಚ್ಚು ಖರ್ಚು ಮಾಡಲಾಗಿದ್ದು, ಮೈಲೇಜ್ ವಿಚಾರಕ್ಕೆ ಇದೀಗ ಕಾನೂನು ಹೋರಾಟ ನಡೆಸುತ್ತಿದ್ದಾರೆ.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಕಳೆದ ವರ್ಷ ನವೆಂಬರ್‌ನಲ್ಲಿಯೇ ಶಶಿಕುಮಾರ್ ಅವರು ಸುಮಾರು ಯಶವಂತಪುರದಲ್ಲಿರುವ ಜೀಪ್ ಡೀಲರ್ಸ್ ಬಳಿ ರೂ.26.32 ಲಕ್ಷ ಪಾವತಿಸಿ ಕಂಪಾಸ್ ಲಿಮಿಟೆಡ್ ಬ್ಲ್ಯಾಕ್ ಎಡಿಷನ್(ಪೆಟ್ರೋಲ್ ಮಾದರಿ) ಖರೀದಿಸಿದ್ದರು.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹೊಸ ಕಾರು ಖರೀದಿಯ ವೇಳೆ ಪ್ರತಿ ಲೀಟರ್ ಪೆಟ್ರೋಲ್‌ಗೆ ಸರಾಸರಿ 16 ಕಿ.ಮಿ ಮೈಲೇಜ್ ಹಿಂದಿರುಗಿಸುವ ಬಗ್ಗೆ ಭರವಸೆ ನೀಡಲಾಗಿತ್ತು. ಈ ವೇಳೆ ಖುಷಿ-ಖುಷಿಯಾಗಿಯೇ ಕಾರು ಖರೀದಿ ಮಾಡಿದ್ದ ಶಶಿಕುಮಾರ್ ಅವರಿಗೆ ಕೆಲವೇ ದಿನಗಳಲ್ಲಿ ಕಾರಿನ ಅಸಲಿ ಬಣ್ಣ ಬಯಲಾಗಿದೆ.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಮೊದಮೊದಲು ಕಾರಿನ ಮೈಲೇಜ್ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳದಿದ್ದರೂ ಶಶಿಕುಮಾರ್ ಅವರಿಗೆ ತದನಂತರದ ದಿನಳಲ್ಲಿ ಕಾರಿನ ಇಎಂಐಗಿಂತ ಪೆಟ್ರೋಲ್ ಖರ್ಚು ನಿರ್ವಹಣೆ ಮಾಡುವುದೇ ಒಂದು ದೊಡ್ಡ ಸವಾಲಾಗಿ ಪರಿಣಮಿಸಿತು. ಈ ವೇಳೆ ಕಾರಿನ ಮೈಲೇಜ್ ಕುರಿತು ವೈಜ್ಞಾನಿಕವಾಗಿ ಪರೀಕ್ಷಿಸಿದಾಗ ಹೊಸ ಕಾರು ಪ್ರತಿ ಲೀಟರ್‌ಗೆ 16 ಕಿ.ಮೀ ಮೈಲೇಜ್ ಬದಲಾಗಿ ಕೇವಲ 5 ಕಿ.ಮೀ ಮೈಲೇಜ್ ನೀಡುತ್ತಿರುವ ಕಹಿಸತ್ಯ ಅರಿವಿಗೆ ಬಂದಿದೆ.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಡೀಲರ್ಸ್ ಹೇಳಿದ ಪ್ರಕಾರ ತಮ್ಮ ಕಾರು ಕನಿಷ್ಠ ಮಟ್ಟದ ಮೈಲೇಜ್ ಅನ್ನು ಸಹ ನೀಡಲು ಸಾಧ್ಯವಿಲ್ಲದಾಗ ಈ ಬಗ್ಗೆ ಡೀಲರ್ಸ್‌ಗೆ ಮಾಹಿತಿ ನೀಡಿದ್ದ ಶಶಿಕುಮಾರ್ ಅವರು ಮೈಲೇಜ್ ಸಮಸ್ಯೆಯನ್ನು ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದ್ದಲ್ಲದೇ ಜೀಪ್ ಸಂಸ್ಥೆಯ ಮುಖ್ಯಸ್ಥರ ಗಮನಕ್ಕೂ ತರಲಾಗಿತ್ತು.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಶಶಿಕುಮಾರ್ ಅವರ ಇ-ಮೇಲ್‌ಗಳಿಗೆ ಜೀಪ್ ಕಂಪಾಸ್ ಹಿರಿಯ ಅಧಿಕಾರಿಗಳಿಂದ ಪ್ರತ್ಯುತ್ತರ ಬಂದಿದ್ದರೂ ಡೀಲರ್ಸ್ ಮಟ್ಟದಲ್ಲಿ ಕಂಪಾಸ್ ಕಾರಿನ ಮೈಲೇಜ್ ಸಮಸ್ಯೆಯನ್ನು ಮಾತ್ರ ಇದುವರೆಗೂ ಬಗೆಹರಿಸಿಲ್ಲ. ಇದರಿಂದ ದಿನಂಪ್ರತಿ ರೂ.700ರಿಂದ 1 ಸಾವಿರದ ತನಕ ಪೆಟ್ರೋಲ್ ಖರ್ಚು ಭರಿಸಲಾಗುತ್ತಿದೆ.

MOST READ: ಕೇವಲ 40 ರೂಪಾಯಿ ಆಸೆಗೆ ಬರೋಬ್ಬರಿ 40 ಲಕ್ಷ ಕಳೆದುಕೊಂಡ ಹ್ಯುಂಡೈ ಕಾರು ಚಾಲಕ..!

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

1 ಸಾವಿರ ರೂಪಾಯಿ ಪೆಟ್ರೋಲ್‌ನಿಂದ 50-55 ಕಿ.ಮೀ ಸರಾಸರಿ ಮೈಲೇಜ್ ನೀಡುತ್ತಿದ್ದು, ಕಳೆದ ನವೆಂಬರ್‌ನಿಂದ ಇದುವರೆಗೆ ಕಾರಿಗೆ ಇಂಧನ ತುಂಬಿಸುವುಕ್ಕಾಗಿ ಲಕ್ಷ-ಲಕ್ಷ ಖರ್ಚು ಮಾಡಲಾಗಿದೆ. ಹೀಗಾಗಿ ಡೀಲರ್ಸ್ ವಿರುದ್ಧ ಕ್ರಮಕ್ಕೆ ಮುಂದಾಗಿರುವ ಶಶಿಕುಮಾರ್ ಅವರು ಜೆಪಿ ನಗರ ಠಾಣೆಯಲ್ಲಿ ವಂಚನೆ ಮತ್ತು ನಂಬಿಕೆ ದ್ರೋಹ ಕೇಸ್ ದಾಖಲಿಸಿ ಗ್ರಾಹಕ ನ್ಯಾಯಾಲದ ಮೊರೆ ಹೋಗಿದ್ದಾರೆ.

MOST READ: ಕಾರ್ ರೀಪೆರಿಗೆ 3 ಲಕ್ಷ ಕೇಳಿದ್ದ ಡೀಲರ್ಸ್ ಅಸಲಿಯತ್ತು ಬಯಲಾಗಿದ್ದು ಲೋಕಲ್ ಗ್ಯಾರೇಜ್‌ನಲ್ಲಿ..!

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ದೋಷಪೂರಿತ ಕಾರು ಮಾರಾಟ ಮಾಡಿರುವ ಡೀಲರ್ಸ್ ಜೊತೆಗೆ ಜೀಪ್ ಕಂಪನಿಯ ಹಿರಿಯ ಅಧಿಕಾರಿಗಳ ವಿರುದ್ಧವೂ ವಂಚನೆ ಪ್ರಕರಣ ದಾಖಲಾಗಿದ್ದು, ಈ ಕೂಡಲೇ ಸಮಸ್ಯೆ ಬಗೆಹರಿಸಬೇಕು ಇಲ್ಲವೇ ತಾಂತ್ರಿಕ ದೋಷವಿರುವ ಕಾರು ಬದಲಿಸಿ ಕೊಡಬೇಕೆಂಬ ಬೇಡಿಕೆಯಿಡಲಾಗಿದೆ.

MOST READ: ಹೊಸ ಕಾರು ವಿತರಣೆಯಲ್ಲಿ ವಿಳಂಬ- ಜೀಪ್ ಡೀಲರ್ಸ್‌ಗೆ ಬಿತ್ತು ರೂ. 50 ಸಾವಿರ ದಂಡ..!

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹೀಗಾಗಿ ಸದ್ಯ ಈ ಪ್ರಕರಣವು ಗ್ರಾಹಕರ ನ್ಯಾಯಾಲಯದ ಮೆಟ್ಟಲೇರಿದ್ದು, ಗ್ರಾಹಕರಿಗೆ ಸುಳ್ಳ ಮಾಹಿತಿ ನೀಡಿ ಮೋಸದ ವ್ಯಾಪಾರ ಮಾಡಿರುವ ಡೀಲರ್ಸ್ ವಿರುದ್ಧ ಕ್ರಮ ಜರಗಿಸುವ ಸಾಧ್ಯತೆಗಳಿವೆ. ಆದರೆ ಅದೇನೇ ಇರಲಿ ಲಕ್ಷ-ಲಕ್ಷ ಕೊಟ್ಟು ಹೊಸ ವಾಹನ ಖರೀದಿ ಮಾಡುವಾಗ ವಾಹನಕ್ಕೆ ಸಂಬಂಧಿಸಿದ ತಾಂತ್ರಿಕ ಮಾಹಿತಿಗಳನ್ನು ಗೊತ್ತಿದ್ದವರ ಬಳಿ ತಿಳಿದುಕೊಂಡು ಮುಂದುವರಿಯುವುದು ಒಳಿತು. ಇಲ್ಲವಾದ್ರೆ ಡೀಲರ್ಸ್ ಹೇಳುವ ಬಣ್ಣದ ಮಾತುಗಳಿಗೆ ಮರಳಾದ್ರೆ ಮೋಸವಾಗುವುದು ಪಕ್ಕಾ.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಇನ್ನು ಜೀಪ್ ಕಂಪಾಸ್ ಕಾರು ಬಿಡುಗಡೆಯಾದ ನಂತರ ಇದುವರೆಗೆ ಸುಮಾರು 85 ಸಾವಿರಕ್ಕೂ ಹೆಚ್ಚು ಕಾರುಗಳನ್ನು ಭಾರತದಲ್ಲಿ ಮಾರಾಟವಾಗಿದ್ದು, ಆನ್‌ರೋಡ್ ಬೆಲೆಗಳಿಗೆ ಅನುಗುಣವಾಗಿ ರೂ. 21.45 ಲಕ್ಷದಿಂದ ಟಾಪ್ ಎಂಡ್ ಮಾದರಿಯು ರೂ. 27.27 ಲಕ್ಷ ಬೆಲೆಯನ್ನು ಹೊಂದಿದೆ.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಎಸ್‌ಯುವಿ ಪ್ರಿಯರ ಬೇಡಿಕೆಯೆಂತೆ 2.0-ಲೀಟರ್ ಡೀಸೆಲ್ ಮತ್ತು 1.4-ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆಯನ್ನು ಹೊಂದಿರುವ ಜೀಪ್ ಕಂಪಾಸ್ ಕಾರುಗಳು ಪರ್ಫಾಮೆನ್ಸ್‌ನಲ್ಲಿ ಐಷಾರಾಮಿ ಕಾರುಗಳನ್ನೇ ಹಿಂದಿಕ್ಕುತ್ತಿದ್ದು, ಮೇಡ್ ಇನ್ ಇಂಡಿಯಾ ನಿರ್ಮಾಣದ ಮೊದಲ ಜೀಪ್ ಕಾರು ಎಂಬ ಹೆಗ್ಗಳಿಕೆಯೊಂದಿಗೆ ಮುಂದಿನ ಕೆಲವೇ ದಿನಗಳಲ್ಲಿ 1 ಲಕ್ಷ ಮಾರಾಟ ಗುರಿಯನ್ನು ತಲುಪುವ ನೀರಿಕ್ಷೆಯಲ್ಲಿದೆ.

ಸುಳ್ಳು ಮಾಹಿತಿಯಿಂದ ಪೆಟ್ರೋಲ್‌ಗೆ ಲಕ್ಷ ಲಕ್ಷ ಖರ್ಚು- ಡೀಲರ್ಸ್ ವಿರುದ್ಧ ಕೇಸ್ ಜಡಿದ ಜೀಪ್ ಕಂಪಾಸ್ ಮಾಲೀಕ..!

ಹೀಗಿರುವಾಗ ಕಂಪಾಸ್ ಕಾರು ಮಾರಾಟದಲ್ಲಿ ಗ್ರಾಹಕರಿಗೆ ಮೋಸವಾಗುತ್ತಿರುವುದು ಜೀಪ್ ಸಂಸ್ಥೆಯ ಮೇಲಿನ ನಂಬಿಕೆಯನ್ನೇ ಪ್ರಶ್ನಿಸುವಂತಹ ಪರಿಸ್ಥಿತಿ ಎದುರಾಗಿದ್ದು, ಗ್ರಾಹಕರು ಕೂಡಾ ಇಂತಹ ಪ್ರಕರಣಗಳ ಬಗ್ಗೆ ಮೌನವಹಿಸದೇ ಸುಳ್ಳು ಮಾಹಿತಿ ನೀಡುವ ಕಾರು ಸಂಸ್ಥೆಗಳ ವಿರುದ್ಧ ಕಾನೂನು ಹೋರಾಟದ ಮೂಲಕ ಕ್ರಮಕೈಗೊಳ್ಳಬೇಕು.

Most Read Articles

Kannada
Read more on ಜೀಪ್ jeep
English summary
Poor Mileage - Jeep Compass SUV Owner Files FIR. Read in Kannada.
Story first published: Thursday, September 12, 2019, 14:28 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Drivespark sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Drivespark website. However, you can change your cookie settings at any time. Learn more