ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಕ್ಯಾಥೊಲಿಕ್ ಚರ್ಚಿನ ಮುಖ್ಯಸ್ಥರಾದ ಪೋಪ್ ಫ್ರಾನ್ಸಿಸ್ ರವರ ಬಳಕೆಗಾಗಿ ಹೊಸ ಕಾರನ್ನು ನೀಡಲಾಗಿದೆ. ಪೋಪ್ ಫ್ರಾನ್ಸಿಸ್ ವಿಶ್ವದ ಪ್ರಮುಖ ಧಾರ್ಮಿಕ ಮುಖಂಡರಲ್ಲಿ ಒಬ್ಬರು. ಅವರನ್ನು ಭೂಮಿಯ ಮೇಲಿನ ದೇವರ ಪ್ರತಿನಿಧಿ (ಮೆಸೆಂಜರ್) ಎಂದು ಪರಿಗಣಿಸಲಾಗುತ್ತದೆ.

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಪೋಪ್ ರವರು ವ್ಯಾಟಿಕನ್ ಸಿಟಿಯ ಸಾರ್ವಭೌಮರಾಗಿದ್ದಾರೆ. ವ್ಯಾಟಿಕನ್ ಸರ್ಕಾರವು ಪೋಪ್ ಫ್ರಾನ್ಸಿಸ್ ಅವರಿಗೆ ವಿಶ್ವ ನಾಯಕರಿಗೆ ನೀಡಲಾಗುವ ರಕ್ಷಣೆಯನ್ನು ನೀಡುತ್ತದೆ. ಈ ಕಾರಣಕ್ಕೆ ಅವರ ಸಂಚಾರಕ್ಕಾಗಿ ಹೆಚ್ಚಿನ ಭದ್ರತೆ ಹಾಗೂ ವಿಶೇಷ ಸಾಮರ್ಥ್ಯಗಳನ್ನು ಹೊಂದಿರುವ ಟೊಯೊಟಾ ಮಿರೈ ಕಾರನ್ನು ನೀಡಲಾಗಿದೆ.

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಪರಿಸರ ಸ್ನೇಹಿಯಾಗಿರುವ ಈ ಕಾರಿನಿಂದ ಪರಿಸರಕ್ಕೆ ಯಾವುದೇ ಹಾನಿಯಾಗುವುದಿಲ್ಲ. ಈ ಕಾರು ಹೈಡ್ರೋಜನ್ ಫ್ಯೂಯಲ್ ಸೆಲ್ ನಿಂದ ಚಾಲನೆಯಾಗುತ್ತದೆ. ಪೋಪ್ ಫ್ರಾನ್ಸಿಸ್ ರವರ ಆಯ್ಕೆಗೆ ಅನುಸಾರವಾಗಿ ಈ ಕಾರನ್ನು ಅವರಿಗೆ ನೀಡಲಾಗಿದೆ.

MOST READ:ರಿಕ್ಷಾ ಕಳೆದುಕೊಂಡವನಿಗೆ ಹೊಸ ರಿಕ್ಷಾ ಕೊಡಿಸಿದ ಆಪದ್ಭಾಂಧವ

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಈ ಕಾರನ್ನು ಜಪಾನ್‌ನ ಕ್ಯಾಥೊಲಿಕ್ ಆರ್ಚ್‌ಬಿಷಪ್‌ಗಳ ಗುಂಪು ಒದಗಿಸಿದೆ ಎಂದು ಹೇಳಲಾಗಿದೆ. ಟೊಯೊಟಾ ಮಿರೈ ಕಾರಿನಲ್ಲಿ ಪೋಪ್ ರವರ ಬಳಕೆಗೆ ತಕ್ಕಂತೆ ಹಲವಾರು ಬದಲಾವಣೆಗಳನ್ನು ಮಾಡಲಾಗಿದೆ.

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಕಾರಿನ ಹಿಂಭಾಗವನ್ನು ಸಂಪೂರ್ಣವಾಗಿ ರಿಡಿಸೈನ್ ಮಾಡಲಾಗಿದೆ. ಈ ಕಾರಿನ ಮುಂಭಾಗದಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಲಾಗಿಲ್ಲ. ಚಾಲಕನ ಹಾಗೂ ಸಹ-ಚಾಲಕನ ಸೀಟಿನಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ.

MOST READ:ಶೋಚನೀಯ ಸ್ಥಿತಿಯಲ್ಲಿವೆ ದುಬಾರಿ ಬೆಲೆಯ ಐಷಾರಾಮಿ ರೋಲ್ಸ್ ರಾಯ್ಸ್ ಕಾರುಗಳು

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಈ ಬದಲಾವಣೆಗಳಿಂದಾಗಿ ಟೊಯೊಟಾ ಮಿರೈ ಆಧುನಿಕ ರೂಪವನ್ನು ಪಡೆದಿದೆ. ಈ ಕಾರು ಸೀಟಿನ ಜೊತೆಗೆ ನಿಂತಿರುವ ವೇದಿಕೆಯನ್ನು ಹೊಂದಿದೆ. ಪೋಪ್ ರವರು ಈ ಸೀಟಿನ ಮೇಲೆ ಕುಳಿತುಕೊಳ್ಳಬಹುದು ಅಥವಾ ನಿಲ್ಲಬಹುದು.

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಇದಕ್ಕೆ ಲೆದರ್ ವ್ರಾಪರ್ ಹೊದಿಕೆಯನ್ನು ನೀಡಲಾಗಿದೆ. ಈ ಐಷಾರಾಮಿ ಆಸನದ ಹಿಂದೆ ಇನ್ನೂ ಎರಡು ಸೀಟುಗಳಿವೆ. ಪೋಪ್ ರವರ ಸಹಾಯಕರು ಹಾಗೂ ಅಂಗರಕ್ಷಕರ ಪ್ರಯಾಣಕ್ಕಾಗಿ ಈ ಸೀಟುಗಳನ್ನು ಒದಗಿಸಲಾಗಿದೆ.

MOSTREAD: ಇನ್ನು ಮುಂದೆ ಈ ನಗರಗಳಲ್ಲಿ ಡೀಸೆಲ್ ವಾಹನಗಳನ್ನು ಮಾರಾಟ ಮಾಡುವಂತಿಲ್ಲ

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಪೋಪ್ ರವರ ಸುರಕ್ಷತೆಗಾಗಿ ಈ ಕಾರಿನಲ್ಲಿ ಬುಲೆಟ್ ಪ್ರೂಫ್ ಗ್ಲಾಸ್ ಅಳವಡಿಸಲಾಗಿದೆ. ಈ ಎಲ್ಲಾ ಬದಲಾವಣೆಗಳು ಟೊಯೋಟಾ ಮಿರೈ ಹೈಡ್ರೋಜನ್ ಫ್ಯೂಯಲ್ ಸೆಲ್ ಕಾರನ್ನು ಆಧುನಿಕ ಕಾರನ್ನಾಗಿ ಮಾಡಿವೆ. ಈ ಬದಲಾವಣೆಗಳಿಂದಾಗಿ ಈ ಟೊಯೊಟಾ ಮಿರೈ ಕಾರಿನ ಗಾತ್ರದಲ್ಲೂ ಬದಲಾವಣೆಗಳಾಗಿವೆ.

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಬದಲಾವಣೆಗಳ ನಂತರ ಈ ಕಾರು 5.1 ಮೀಟರ್ ಉದ್ದ, 1.2 ಮೀಟರ್ ಎತ್ತರ ಹಾಗೂ 2.7 ಮೀಟರ್ ಗ್ರೌಂಡ್ ಕ್ಲಿಯರೆನ್ಸ್ ಹೊಂದಿದೆ. ಈ ಕಾರನ್ನು ಬಳಸುವ ಮೂಲಕ ಪೋಪ್ ಫ್ರಾನ್ಸಿಸ್ ಹವಾಮಾನ ಬದಲಾವಣೆಯ ವಿರುದ್ಧ ಮಾತನಾಡಿದ ವಿಶ್ವದ ಮೊದಲ ಧರ್ಮ ಗುರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

MOSTREAD: 13 ವರ್ಷಗಳಲ್ಲಿ 10 ಲಕ್ಷ ಕಿ.ಮೀ ಸಂಚರಿಸಿದ ಟೊಯೊಟಾ ಇನೋವಾ ಕಾರು

ಅತ್ಯಾಧುನಿಕ ಪರಿಸರ ಸ್ನೇಹಿ ಕಾರು ಪಡೆದ ಪೋಪ್ ಫ್ರಾನ್ಸಿಸ್

ಪೋಪ್ ಫ್ರಾನ್ಸಿಸ್ ಈ ಹಿಂದೆ ಟೊಯೊಟಾ ಲ್ಯಾಂಡ್ ಕ್ರೂಸರ್, ಮರ್ಸಿಡಿಸ್ ಬೆಂಝ್ ಜಿ-ವ್ಯಾಗನ್, ರೇಂಜ್ ರೋವರ್ ಸೇರಿದಂತೆ ಹಲವು ಕಾರುಗಳನ್ನು ಬಳಸಿದ್ದಾರೆ. ಇನ್ನು ಮುಂದೆ ಹೆಚ್ಚು ಸುರಕ್ಷಿತವಾದ, ಸೂಪರ್ ಸಾಮರ್ಥ್ಯವನ್ನು ಹೊಂದಿರುವ ಪರಿಸರ ಸ್ನೇಹಿ ಟೊಯೊಟಾ ಮಿರೈ ಕಾರನ್ನು ಬಳಸಲಿದ್ದಾರೆ.

Most Read Articles

Kannada
English summary
Pope Francis gets eco friendly Toyota Mirai car. Read in Kannada.
Story first published: Monday, October 19, 2020, 16:23 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X