ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ದೇಶದ ಜನಪ್ರಿಯ ಕಾರು ವಿನ್ಯಾಸ ಸಂಸ್ಥೆಯಾದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರು ವಂಚನೆ ಪ್ರಕರಣವೊಂದರಲ್ಲಿ ಬಂಧನವಾಗಿದ್ದು, ಮುಂಬೈ ಪೊಲೀಸರು ದಿಲೀಪ್ ಚಾಬ್ರಿಯಾ ಅವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ಐಷಾರಾಮಿ ಸೌಲಭ್ಯಗಳನ್ನು ಒಳಗೊಂಡ ಮಾಡಿಫೈ ವಾಹನಗಳನ್ನು ಮತ್ತು ಚಿತ್ರನಟರ ಕಾರವಾನ್ ವಾಹನಗಳನ್ನು ನಿರ್ಮಾಣ ಮಾಡುವಲ್ಲಿ ಸಾಕಷ್ಟು ಜನಪ್ರಿಯ ಹೊಂದಿರುವ ಡಿಸಿ ಡಿಸೈನ್ ಕಂಪನಿಯು ಕಾರು ವಿನ್ಯಾಸ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದೆ. ಮುಂಬೈನಲ್ಲಿ ಮುಖ್ಯ ಕಚೇರಿಯನ್ನು ಹೊಂದಿರುವ ಡಿಸಿ ಡಿಸೈನ್ ಕಂಪನಿಯ ಮೇಲೆ ವಂಚನೆ ಪ್ರಕರಣವು ದಾಖಲಾಗಿದ್ದು, ಅಧ್ಯಕ್ಷ ದಿಲೀಪ್ ಚಾಬ್ರಿಯಾ ಅವರನ್ನು ಬಂಧನ ಮಾಡಲಾಗಿದೆ.

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ಡಿಸಿ ಡಿಸೈನ್ ಕಂಪನಿಯು ತನ್ನದೇ ಆದ ಸ್ಪೋರ್ಟ್ಸ್ ಕಾರುಗಳನ್ನು ತಯಾರಿಸುವಲ್ಲಿ ಸಹ ತೊಡಗಿಸಿಕೊಂಡಿದ್ದು, ವಿಶ್ವ ದರ್ಜೆಯ ಕಾರುಗಳ ಗ್ರಾಹಕೀಕರಣ ಘಟಕಗಳನ್ನು ನಿರ್ವಹಿಸುತ್ತದೆ.

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ಕಂಪನಿಯ ಮೇಲಿನ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಡಿಸೈನ್‌ನ ಮಾಲೀಕ ದಿಲೀಪ್ ಚಾಬ್ರಿಯಾ ಅವರನ್ನು ಮುಂಬೈ ಅಪರಾಧ ತನಿಖಾ ವಿಭಾಗವು ಬಂಧನ ಮಾಡಿದ್ದು, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಮಾಹಿತಿಗಳು ದೊರೆತಿಲ್ಲ.

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ಮಾಹಿತಿಗಳ ಪ್ರಕಾರ ಡಿಸಿ ಡಿಸೈನ್‌ನ ಮಾಲೀಕ ದಿಲೀಪ್ ಚಾಬ್ರಿಯಾ ಮೇಲೆ ವಂಚನೆ ಮತ್ತು ವಂಚನೆಯಲ್ಲಿ ತೊಡಗಿದ್ದಕ್ಕಾಗಿ ಐಪಿಸಿ ಸೆಕ್ಷನ್ 420, 465, 467, 468, 471, 120 (ಬಿ) ಮತ್ತು 34ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ದುಬಾರಿ ಕಾರುಗಳನ್ನು ಸಹ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ.

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ಕಾರವಾನ್ ವಾಹನಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ಡಿಸಿ ಡಿಸೈನ್‌ ಕಂಪನಿಯ ವಿರುದ್ಧ ಪ್ರಕರಣ ದಾಖಲಾಗಿರುವ ಸಾಧ್ಯತೆಗಳಿದ್ದು, ಈ ಹಿಂದೆಯೂ ಕೂಡಾ ಇಂತಹದ್ದೆ ಪ್ರಕರಣಗಳಿಗೆ ಸಂಬಂಧಸಿದಂತೆ ಡಿಸಿ ಡಿಸೈನ್ ವಿರುದ್ಧ ಪ್ರಕರಣಗಳು ದಾಖಲಾಗಿದ್ದವು.

MOST READ: 2020ರ ಅವಧಿಯಲ್ಲಿ ಬಿಡುಗಡೆಯಾದ ಪ್ರಮುಖ ಹತ್ತು ಕಾರುಗಳಿವು..!

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

2013ರಲ್ಲಿ ಕ್ರಿಕೆಟಿಗ ದಿನೇಶ್ ಕಾರ್ತಿಕ್ ಕೂಡಾ ಡಿಸಿ ಡಿಸೈನ್ ಕಂಪನಿಯ ಡಿಸಿ ಅವಂತಿ ಸ್ಪೋರ್ಟ್ ಕಾರ್ ವಿತರಣೆಗೆ ಸಂಬಂಧಿದಂತೆ ಕಾರು ಕಂಪನಿಯ ವಿರುದ್ಧ ವಂಚನೆ ಪ್ರಕರಣವನ್ನು ದಾಖಲಿಸಿದ್ದರು.

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ಇದೀಗ ಮತ್ತೊಮ್ಮೆ ಡಿಸಿ ಡಿಸೈನ್ ವಿರುದ್ಧ ವಂಚನೆ ಪ್ರಕರಣ ಕೇಳಿ ಬಂದಿರುವುದು ಡಿಸಿ ಡಿಸೈನ್ ಕಂಪನಿಯ ಜನಪ್ರಿಯತೆಗೆ ಹೊಡೆತ ನೀಡುವ ಸಾಧ್ಯತೆಗಳಿದ್ದು, ಶೀಘ್ರದಲ್ಲೇ ವಂಚನೆ ಪ್ರಕರಣದಿಂದ ದಿಲೀಪ್ ಚಾಬ್ರಿಯಾ ಅವರು ಮುಕ್ತಗೊಳ್ಳುವುದಾಗಿ ಡಿಸಿ ಡಿಸೈನ್ ಕಂಪನಿಯ ಹಿರಿಯ ಅಧಿಕಾರಿಗಳು ಮಾಧ್ಯಮಗಳಿಗೆ ಪ್ರತಿಕ್ರಿಯೆಸಿದ್ದಾರೆ.

MOST READ: ರೂ. 1,300 ಕೋಟಿ ವೆಚ್ಚದಲ್ಲಿ ಐಷಾರಾಮಿ ಖಾಸಗಿ ಜೆಟ್ ಖರೀದಿಸಿದ ರ‍್ಯಾಪ್ ಸಿಂಗರ್

ವಂಚನೆ ಪ್ರಕರಣದಲ್ಲಿ ಜೈಲು ಸೇರಿದ ಡಿಸಿ ಡಿಸೈನ್ ಅಧ್ಯಕ್ಷ ದಿಲೀಪ್ ಚಾಬ್ರಿಯಾ

ಆದರೆ ಯಾವ ಕಂಪನಿ ವಿರುದ್ದದ ಪ್ರಕರಣದಲ್ಲಿ ದಿಲೀಪ್ ಚಾಬ್ರಿಯಾ ಅವರನ್ನು ಬಂಧನ ಮಾಡಲಾಗಿದೆ ಎನ್ನುವ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಕಾರವಾನ್ ವಾಹನಗಳ ಪೂರೈಕೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿರುವ ಸಾಧ್ಯತೆಗಳಿವೆ.

Most Read Articles

Kannada
English summary
Car Designer Dilip Chhabria Arrested By Mumbai Police. Read in Kannada.
Story first published: Tuesday, December 29, 2020, 13:19 [IST]
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X